ʻಫುರ್ರ್....ʼ ಎಂದು ಹಾರಿ ಇಂದಿರಾನಗರಕ್ಕೆ ಬನ್ನಿ
ನಾನು ಫುಡೀ..ಆದರೆ ಪಕ್ಕಾ ವೆಜಿಟೇರಿಯನ್. ಹಾಗಂತ ನಿತ್ಯವೂ ಅದೇ ನಾರ್ಮಲ್ ಫುಡ್ ಟೇಸ್ಟ್ ಮಾಡಿ ಬೇಸರವಾಗಿದೆ..ಏನಾದರೂ ಸ್ಪೆಷಲ್ ಬೇಕು, ಸ್ಟೀರಿಯೋಟೈಪ್ ಬ್ರೇಕ್ ಮಾಡಿ, ಮಾಡರ್ನ್ ವೆಜ್ ಡಿಶ್‌ಗಳನ್ನು ನೀಡುವಂತಿದ್ದರೆ ಅದೆಷ್ಟು ಚೆನ್ನಾಗಿರುತ್ತದೆ ಅಲ್ವಾ ಎಂದು ನೀವು ಯೋಚಿಸುತ್ತಿದ್ದೀರಾ? ಹಾಗಾದರೆ ಇಂದಿರಾನಗರದ ʻಫುರ್ರ್ʼ, ತನ್ನ ಸಿಗ್ನೇಚರ್ ಡಿಶ್‌ಗಳ ಮೂಲಕವೇ ನಿಮ್ಮ ಹಸಿವೆಯನ್ನು ತಣಿಸಲಿದೆ.
ಫುರ್ರ್, ವಿಭಿನ್ನವಾದ ಹೆಸರಿನ ಮೂಲಕವೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುವ ಈ ರೆಸ್ಟೋರೆಂಟ್, ಕೆಲವೇ ತಿಂಗಳುಗಳಲ್ಲಿ ಆಹಾರಪ್ರಿಯರ ಮನಕ್ಕೆ ಕನ್ನ ಹಾಕಿಬಿಟ್ಟಿತ್ತು. ಇಲ್ಲಿ ಸಿಗುವುದೆಲ್ಲವೂ ಪಕ್ಕಾ ವೆಜಿಟೇರಿಯನ್ ಡಿಶ್‌ಗಳು, ಆದರೆ ಎಲ್ಲ ಹೊಟೇಲ್, ರೆಸ್ಟೋರೆಂಟ್‌ಗಳ ಆಹಾರಕ್ಕಿಂತ ಪೂರ್ತಿ ಭಿನ್ನವೆಂಬಂತೆ ಸಿದ್ಧವಾಗುವ ಇಲ್ಲಿನ ಆಹಾರಪದಾರ್ಥಗಳಂತೂ ಎಂಥವರ ಬಾಯಲ್ಲೂ ನೀರು ತರಿಸುತ್ತದೆ.
ಕೊರೋನಾ ಕಾಲ ಕಳೆದು 2020ರಲ್ಲಿ ಜಯನಗರದಲ್ಲಿ ʻಫುರ್ರ್ʼ ರೆಸ್ಟೋರೆಂಟ್ ಪ್ರಾರಂಭವಾಗಿತ್ತು. ಆಶಿಶ್ ಹಾಗೂ ರಾಹುಲ್ ಲುನಾವತ್ ಎಂಬ ಇಬ್ಬರು ಆಹಾರ ಪ್ರಿಯರೇ ಈ ರೆಸ್ಟೋರೆಂಟ್ ನಿರ್ಮಾಣದ ಹಿಂದಿನ ಶಕ್ತಿ. ಬೆಂಗಳೂರಿನ ಸಸ್ಯಾಹಾರಿಗಳಿಗೆ ರುಚಿಕರ, ಆರೋಗ್ಯಕರವಷ್ಟೇ ಅಲ್ಲದೆ ದೇಶ ವಿದೇಶಗಳ ವಿಭಿನ್ನ ಖಾದ್ಯಗಳ ರುಚಿಯನ್ನು ಸವಿಯಲು ನೀಡಬೇಕೆಂಬ ಉದ್ದೇಶದೊಂದಿಗೆ ಪ್ರಾರಂಭಿಸಿದ ಈ ರೆಸ್ಟೋರೆಂಟ್ ಬಲು ಬೇಗನೆ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ. ʻಫುರ್ರ್ʼ ಆಹಾರಕ್ಕೆ ಮನಸೋತ ಬೆಂಗಳೂರಿಗರಿಗಾಗಿಯೇ ಇತ್ತೀಚೆಗಷ್ಟೇ ಇಂದಿರಾನಗರದಲ್ಲಿ ಎರಡನೆಯ ಶಾಖೆಯನ್ನು ತೆರೆಯಲಾಗಿದೆ.

ಸೂಪರ್ ಆಂಬಿಯೆನ್ಸ್
ಈ ರೆಸ್ಟೋರೆಂಟ್ ಒಳಗೆ ಬರುತ್ತಲೇ ವೆಲ್‌ಕಮ್ ಮಾಡುವ ವೈಬ್ರೆಂಟ್, ಕಲರ್‌ಫುಲ್ ಹಾಗೂ ಫುಲ್ ಆಪ್ ಲೈಫ್ ಆಂಬಿಯನ್ಸ್ ಊಟಕ್ಕೂ ಮುನ್ನವೇ ಮನಸನ್ನು ಹಗುರವಾಗಿಸುತ್ತದೆ. ವಿಭಿನ್ನವಾದ ಸೀಟಿಂಗ್ ವ್ಯವಸ್ಥೆಯ ಜತೆಗೆ ಕಣ್ಣಿಗೆ ಹಬ್ಬವನ್ನು ನೀಡುವ ಕೇನ್ ಲೈಟ್ಸ್, ವಾಲ್ ಸ್ಟಿಕ್ಕರಿಂಗ್, ಮುದ್ದು ಮುದ್ದಾಗ ಹಕ್ಕಿಗಳ ಗೊಂಬೆಗಳು ಎಲ್ಲವೂ ಕಣ್ಮನ ತಣಿಸುತ್ತವೆ.
ವಿಭಿನ್ನವಾಗಿದೆ ಮೆನು
ಇಲ್ಲಿನ ಮೆನುವಿನಲ್ಲಿ 150ಕ್ಕೂ ಹೆಚ್ಚು ಬಗೆಯ ಡಿಶ್‌ಗಳನ್ನು ಪರಿಚಯಿಸಲಾಗಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ವೆಲ್‌ಕಮ್ ಡ್ರಿಂಕ್ ಎಗ್ ಆಮೂಸ್ ಬೂಷ್ ಇಲ್ಲಿನ ಪ್ರಮುಖ ಆಕರ್ಷಣೆ. ಸ್ಟಾರ್ಟರ್ಸ್ ಲಿಸ್ಟ್‌ನಲ್ಲಿರುವ ಪಾಲಕ್ ಪಟ್ಟಾ ಚಾಟ್, ಕೊಕೋನಟ್ ಫಿಟ್ಟರ್ಸ್, ಟರ್ನಿಪ್ ಕೇಕ್, ಆಂಧ್ರ ಬ್ರೋಕ್ಲಿಗಂತೂ ಸಾಕಷ್ಟು ಬೇಡಿಕೆಯಿದೆ. ಮೇನ್ ಕೋರ್ಸ್‌ನಲ್ಲಿ ಥಾಯ್ ಕರಿ ವಿತ್ ಜಾಸ್ಮಿನ್ ರೈಸ್, ಲೀಫು ಫ್ರೈಡ್ ರೈಸ್ ಹೀಗೆ ಆಹಾರ ಪ್ರಿಯರಿಗೆ ಆಯ್ಕೆಗಳು ಹಲವು. ಥಂಡರ್ ಕೊಕೋನಟ್ ಫ್ರಿಟರ್ಸ್, ಗ್ವಾಕಮೋಲಿ ಚಾಟ್, ಟರ್ನಿಪ್ ಕೇಕ್, ಇನ್ಸ್ಟಾಗ್ರಾಮೇಬಲ್ ಡೆಸರ್ಟ್‌ಗಳಾದ ಬ್ಲ್ಯಾಕ್ ಕಾರ್ನ್ ನಾಚೋಸ್ ವಿತ್ ಗ್ವಾಕಮೋಲಿ, ಮಿಕ್ಸ್ ವೆಜ್ ಬಾವೋ, ಗ್ಲಾಸ್ ನೂಡಲ್ಸ್ ಸಾಲಡ್, ಝೋಲ್ ಮೋಮೋಸ್, ಫೆನಿನೆಸ್ ರಬ್ಡಿ, ಐಕಾನಿಕ್ ಫುರ್ ರುಚಿ ನೋಡಿದರಂತೂ ಮತ್ತೆ ಮತ್ತೆ ಅದನ್ನೇ ತಿನ್ನಬೇಕೆನಿಸದೆ ಇರದು.

ಮಾಕ್‌ಟೇಲ್ ಬಾರ್
ಮಾಕ್‌ಟೇಲ್ಸ್ ಪ್ರಿಯರಿಗಂತೂ ಇದು ಬೆಸ್ಟ್ ಪ್ಲೇಸ್. ಯಾಕೆಂದರೆ ಹಿಂದೆಂದೂ ನೀವು ಟೇಸ್ಟ್ ಮಾಡಿರದಂಥ ವಿಭಿನ್ನ ರುಚಿಯ ಮಾಕ್‌ಟೇಲ್ಸ್ ಲಭ್ಯವಿದ್ದು, ಯಾವುದನ್ನು ಟೇಸ್ಟ್ ಮಾಡಬೇಕೆಂಬ ಗೊಂದಲವಾಗುವುದಂತೂ ಪಕ್ಕಾ. ರಿಫ್ರೆಶಿಂಗ್ ಮಾಕ್ ಟೇಲ್ಸ್ ಲಿಸ್ಟ್ ನೋಡಿ ಬೆರಗಾಗುತ್ತೀರಿ.
ಬುಕಿಂಗ್ ಬಲು ಸುಲಭ
ʻಫುರ್ರ್ʼ ರೆಸ್ಟೋರೆಂಟ್‌ನಲ್ಲಿ ವೆರೈಟಿ ಆಹಾರವನ್ನು ಸವಿಯಬೇಕೆನ್ನುವವರು ನೇರವಾಗಿ ಇಲ್ಲಿಗೆ ಬರಲು ಅವಕಾಶವಿಲ್ಲ. ವೆಬ್‌ಸೈಟ್ ಮೂಲಕ ಮುಂಗಡವಾಗಿ ಬುಕಿಂಗ್ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಸ್ವಿಗ್ಗೀ ಅಥವಾ ಝೊಮೆಟೋ ಮೂಲಕವೂ ಟೇಬಲ್ ಬುಕಿಂಗ್ ಮಾಡಿಕೊಳ್ಳಬಹುದು. ಆದರೆ ನಿಮ್ಮ ಮನೆ ಬಾಗಿಲಿಗೆ ಇಲ್ಲಿನ ಆಹಾರವನ್ನು ತರಿಸಿಕೊಳ್ಳುವ ಆಸೆ ನಿಮಗಿದ್ದರೆ ಅದು ಸಾಧ್ಯವೇ ಇಲ್ಲ.

ಕೊರೋನಾ ಕಾಲದ ನಂತರ ಮುಂದೇನು ಅಂತ ಯೋಚಿಸಿದಾಗ ಢಾಬಾ ಕಾನ್ಸೆಪ್ಟ್‌ನಲ್ಲಿ ರೆಸ್ಟೋರೆಂಟ್ ನಿರ್ಮಿಸಿದರೆ ಹೇಗೆ ಎಂಬ ಯೋಚನೆ ಹುಟ್ಟಿಕೊಂಡಿತು. ಅದರಂತೆ 2020ರಲ್ಲಿ ಜಯನಗರದಲ್ಲಿ ʻಫುರ್ರ್ʼ ಎಂಬ ಹೆಸರಿನ ಈ ರೆಸ್ಟೋರೆಂಟ್ ಪ್ರಾರಂಭಿಸಿದೆವು. ಯೋಚನೆ ಮಾಡಿರುವುದಕ್ಕಿಂತಲೂ ಚೆನ್ನಾಗಿಯೇ ಜಯನಗರದಲ್ಲಿ ಈ ವೆಜ್ ರೆಸ್ಟೋರೆಂಟ್ ಬೇಡಿಕೆ ಪಡೆದುಕೊಂಡಿದೆ. ಈಗ ಇಂದಿರಾನಗರದಲ್ಲೂ ʻಫುರ್ರ್ʼ ಫುಡ್‌ಗಾಗಿ ಬರುವ ಆಹಾರಪ್ರಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.
- ರಾಹುಲ್ ಲುನಾವತ್, ಸಹ ಸಂಸ್ಥಾಪಕ, ಫುರ್ರ್
ಬೆಂಗಳೂರಿನಲ್ಲಿ ನಾನ್ ವೆಜ್ ಹೊಟೇಲ್‌ಗಳ ಸಂಖ್ಯೆ ಲೆಕ್ಕವಿಲ್ಲವೆನ್ನುವಷ್ಟಿದೆ. ಆದರೆ ಗುಣಮಟ್ಟದ ವೆಜ್ ರೆಸ್ಟೋರೆಂಟ್‌ಗಳಿಗಾಗಿ ಜನ ಹುಡುಕಾಡುತ್ತಿದ್ದು. ಈ ಅವಕಾಶವನ್ನು ಉಪಯೋಗಿಸಿಕೊಂಡು ʻಫುರ್ರ್ʼ ರೆಸ್ಟೋರೆಂಟ್ ಹುಟ್ಟುಹಾಕಿದೆವು. ಇದರ ಹೆಸರಿನ ವಿಚಾರ ಬಂದಾಗ ಸ್ವಲ್ಪ ಗೊಂದಲವಿತ್ತು. ನಾವು ಶಾರುಖ್ ಖಾನ್ ಅಭಿಮಾನಿಯಾಗಿರುವುದರಿಂದ ಆ ಸಂದರ್ಭದಲ್ಲಿ ಒಮ್ಮೆ ʻ ಜಬ್ ಹ್ಯಾರಿ ಮೆಟ್ ಸೇಜಲ್ʼ ಸಿನಿಮಾ ನೋಡಿದ್ದೆವು. ಅದರಲ್ಲಿರುವ ಹಾಡು ಫುರ್ರ್. ಈ ಶಬ್ದ ಬಹಳ ಆಪ್ತವೆನಿಸಿತು. ಅದಕ್ಕೆ ಪ್ರತ್ಯೇಕವೆಂಬಂತೆ ಅರ್ಥವಿಲ್ಲದಿದ್ದರೂ, ಹಾರುವುದು, ಎತ್ತರಕ್ಕೆ ಕೊಂಡೊಯ್ಯುವುದು ಎಂಬುದಾಗಿ ಅರ್ಥೈಸಿಕೊಳ್ಳಬಹುದು. ಹೀಗೆ ಅಂದಾಜಿಸಿಕೊಂಡು ರೆಸ್ಟೋರೆಂಟ್‌ಗೆ ಅದೇ ಹೆಸರನ್ನು ನಾಮಕರಣ ಮಾಡಿದೆವು.
ಆಶಿಶ್, ಸಹ ಸಂಸ್ಥಾಪಕ, ಫುರ್ರ್

ಸಂಪರ್ಕಿಸಿ:
ಫುರ್ರ್ - ಜಯನಗರ
40, 22ನೇ ಅಡ್ಡರಸ್ತೆ, ಜಯನಗರ 3ನೇ ಬ್ಲಾಕ್, ಬೆಂಗಳೂರು, ಕರ್ನಾಟಕ - 560011
ದೂ: 096329 01384
ಫುರ್ರ್ - ಇಂದಿರಾನಗರ
614-615, 12ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಎಚ್ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು, ಕರ್ನಾಟಕ - 560008
ದೂ: 087916 10206