Wednesday, October 29, 2025
Wednesday, October 29, 2025

ಹಳೆಮನೆಗೆ ಬನ್ನಿ ಮಣ್ಣಿನ ಮಕ್ಕಳಾಗಿ...!

ವೀಕೆಂಡ್‌ ಬಂದರೆ ರಿಲ್ಯಾಕ್ಸ್‌ ಆಗುವುದಕ್ಕೆ ಹೊಟೇಲ್‌, ರೆಸ್ಟೋರೆಂಟ್‌, ಪಬ್‌, ಪಾರ್ಟಿ ಅಂತ ಸುತ್ತಾಡುವ ಅಭ್ಯಾಸ ಮಾಡಿಕೊಂಡಿದ್ದೀರಾ? ಆದರೆ ಇದಕ್ಕೆ ಹೊರತಾಗಿ ಆರೋಗ್ಯಕರವಾದ ಇನ್ನೊಂದಷ್ಟು ತಾಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ನಿಸರ್ಗದೊಂದಿಗಿನ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಇಂಥ ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ನೀವು ಭೇಟಿ ನೀಡಲೇಬೇಕು.

ಹಚ್ಚ ಹಸಿರಿನ ವಾತಾವರಣದ ನಡುವೆ ನಿರ್ಮಾಣಗೊಂಡಿರುವ ಹಂಚಿನ ಹೊದಿಕೆಯ ಹಳೆಯ ಮನೆ, ಮಣ್ಣಿನ ಕೊಠಡಿಗಳು, ಹಳೆ ಶೈಲಿಯ ಮರದ ಬಾಗಿಲು-ಕಿಟಕಿಗಳು, ಚೌಕಾಕಾರ ಪಡಸಾಲೆ, ಒಳಾಂಗಣ.. ಪಕ್ಕಾ ಮಲೆನಾಡು ಶೈಲಿಯ ಮನೆ.. ಹೊತ್ತು ಹೊತ್ತಿಗೆ ಸಿಗುವ ಮಲೆನಾಡು ಹಾಗೂ ಕರಾವಳಿ ಶೈಲಿಯ ಬಗೆಬಗೆಯ ಆಹಾರ ಪದಾರ್ಥಗಳು..ಆಹಾ ..ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಅನುಭವ..ಇಂಥ ಅನುಭವ ಪಡೆಯಬೇಕೆಂದುಕೊಂಡರೆ ಸುಳ್ಯ ಸಮೀಪದ ಹಳೆಮನೆ ಎಸ್ಟೇಟ್‌ಗೆ ಭೇಟಿ ನೀಡಲೇಬೇಕು.

ಟ್ರೆಕ್ಕಿಂಗ್‌ ಗೆ ರಾಣಿಪುರಂ ಪೀಕ್‌

ಇಂಥ ಪರಿಸರದ ನಡುವೆ ಟ್ರೆಕ್ಕಿಂಗ್‌ ಹೋಗುವ ಅವಕಾಶ ಸಿಕ್ಕಿದರೆ ಹೇಗೆ ಅಂತ ಯೋಚಿಸುವ ಮುನ್ನ ಅವರೇ ನಿಮ್ಮನ್ನು ಅಣಿಗೊಳಿಸಿ ಸಮೀಪದಲ್ಲೇ ಇರುವ ರಾಣಿಪುರಂ ಪೀಕ್‌ ಗೆ ಕರೆದೊಯ್ಯುತ್ತಾರೆ. ಮಂಜಿನ ನಡುವೆ ರಾಣಿಪುರಂ ಪರಿಸರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಖುಷಿ ಅನುಭವಿಸಿಯೇ ತಿಳಿಯಬೇಕು.

halemane

ಗ್ಯಾಂಗ್‌ ಜತೆ ಆಟವಾಡುವುದಕ್ಕೆ ಮಡ್‌ ಗೇಮ್ಸ್‌

ಈಗಿನ್ನೂ ಮಳೆಗಾಲ ಸಂಪೂರ್ಣವಾಗಿ ಮುಗಿದಿಲ್ಲ. ಆಗಾಗ ಮಳೆ ಹಾಗೂ ಮಂಜಿನ ವಾತಾವರಣ ಹಳೆಮನೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಅದೆಲ್ಲದಕ್ಕೂ ಹೆಚ್ಚಾಗಿ ಹಳೆಮನೆಗೆ ಬರುವ ಅತಿಥಿಗಳಿಗಾಗಿ ಮಡ್‌ ಗೇಮ್ಸ್‌ ಎಂಬ ವಿಶೇಷ ಆಯ್ಕೆಯನ್ನು ನೀಡಿರುವುದು ಬಹು ಬೇಡಿಕೆಯನ್ನು ಪಡೆದುಕೊಂಡಿದೆ. ಕೆಸರಿನ ಗದ್ದೆಯಲ್ಲಿ ಮನಬಂದಂತೆ ಕುಣಿದಾಡುವುದು, ಟಗ್‌ ಆಫ್‌ ವಾರ್‌ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಭ್ರಮ ವಿಶೇಷವೇ ಸರಿ.

ನೇಚರ್‌ ನಡುವೆ ಕ್ಯಾಂಪಿಂಗ್‌

ಹಳೆಮನೆಯಲ್ಲಿ ನಿಮ್ಮ ರಜಾದಿನಗಳನ್ನು ಕಳೆಯುವುದಕ್ಕೆ ನೀವು ಬುಕಿಂಗ್‌ ಮಾಡಿಕೊಂಡರೆ ಬೆಂಗಳೂರಿನಿಂದ ಪಿಕ್‌ ಆಂಡ್‌ ಡ್ರಾಪ್‌ ಸೌಲಭ್ಯವನ್ನೂ ನೀಡುತ್ತಾರೆ. 2 ದಿನಗಳ ಕಾಲ ಅನ್‌ ಲಿಮಿಡೆಟ್‌ ಫನ್‌, ಟ್ರೆಕ್ಕಿಂಗ್‌, ಜನ ಜಂಗುಳಿಯಿಲ್ಲದೇ ಜಲಪಾತದ ನಡುವೆ ಮೈಯೊಡ್ಡಿ ನಿಲ್ಲುವ ಖುಷಿ ಬೆಂಗಳೂರಿನ ನಗರ ಜೀವನವನ್ನೇ ಮರೆಯುವಂತೆ ಮಾಡುತ್ತದೆ. ಅದರಲ್ಲೂ ವೀಕ್‌ ಡೇಸ್‌ ನಲ್ಲಿ ನೀವು ಬುಕಿಂಗ್‌ ಮಾಡಿಕೊಂಡರೆ 10% ರಿಯಾಯಿತಿಯೂ ನಿಮಗೆ ಲಭ್ಯವಾಗುತ್ತದೆ. 8ಕ್ಕೂ ಹೆಚ್ಚು ಮಂದಿ ಜತೆಗೆ ಬುಕಿಂಗ್‌ ಮಾಡಿಕೊಂಡರೆ ಗ್ರಾಹಕರಿಗೆ ಭಾರೀ ರಿಯಾಯಿತಿಯನ್ನೇ ಹಳೆಮನೆ ನೀಡುತ್ತದೆ. ವ್ಯಕ್ತಿಗೆ 4500 ರು. ನೀಡಿ ಬುಕಿಂಗ್‌ ಮಾಡಿಕೊಂಡರೆ ಊಟ, ವಸತಿ ಸೇರಿದಂತೆ ಎಲ್ಲ ಸೌಕರ್ಯಗಳೂ ಒಳಗೊಂಡಿರುತ್ತದೆ.

halemane estate

ಪ್ಯಾಕೇಜ್‌ನಲ್ಲಿ ಇರುವುದಿಷ್ಟು…

ಟೆಂಟ್‌ ಸ್ಟೇ

5 ಹೊತ್ತು ರುಚಿಕರ ದೇಸೀ ಆಹಾರ

ರಾಣಿಪುರಂ ಟ್ರೆಕ್ಕಿಂಗ್‌

ಆಫ್‌ ರೋಡಿಂಗ್‌

ಮಡ್‌ ಗೇಮ್ಸ್‌

ಇಂಡೋರ್‌ - ಔಟ್‌ ಡೋರ್‌ ಗೇಮ್ಸ್‌

ಮಿನಿ ಪೂಲ್‌

ಎಸ್ಟೇಟ್‌ ವಾಕ್‌

ಇರುವುದೆಲ್ಲಿ ?

ಬೆಂಗಳೂರಿನಿಂದ ಸುಳ್ಯ – 302 ಕಿಮೀ

ಸುಳ್ಯದಿಂದ ತೊಡಿಕ್ಕಾನದ ಹಳೆಮನೆ ಎಸ್ಟೇಟ್‌ 17ಕಿಮೀ

ಸಂಪರ್ಕಿಸಿ:

9480342136, 9663958099

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ