Saturday, January 10, 2026
Saturday, January 10, 2026

ಕ್ಯಾತದೇವರ ಗುಡಿಯ ನೋಡಿರಣ್ಣ: ಜೆಎಲ್‌ಆರ್‌ನಲ್ಲಿ ಉಳಿಯಿರಣ್ಣ

ಮೈಸೂರು ಅಂದ್ರೆ ಅದು ಹಲವಾರು ಪ್ರವಾಸಿ ಕ್ಷೇತ್ರಗಳ ಸಾಗರ. ರಾಜ್ಯದ ಸಂಸ್ಕೃತಿಯನ್ನು ಬಿತ್ತರಿಸುವ ನಗರ. ಜ್ಞಾನ ವಿಜ್ಞಾನಕ್ಕೆ ಕೊಡುಗೆ ನೀಡಿದ ವಿದ್ಯಾ ಕಾಶಿ. ಎಲ್ಲ ಕ್ಷೇತ್ರದಲ್ಲೂ ಸಾಧಕರನ್ನು ಕೊಟ್ಟ ಜಿಲ್ಲೆ. ವಿಚಾರಧಾರೆ, ವೈಚಾರಿಕ ಮನೋಭಾವವನ್ನು ಕೊಟ್ಟ ಭೂಮಿ. ಅರಮನೆ ನಗರಿ. ರಾಜ ಮಹಾರಾಜರು ವಾಸಿಸುವ ನಗರ, ಹಲವಾರು ನಟ ನಟಿಯರನ್ನು ಕೊಡುಗೆಯಾಗಿ ನೀಡಿದ ಜಾಗ. ಮೈಸೂರಿಗೆ ಏನು ಕಮ್ಮಿ ಇದೆ ಹೇಳಿ? ಎಲ್ಲ ಕ್ಷೇತ್ರದಲ್ಲೂ ಮೈಸೂರಿನ ಛಾಪು ಇದೆ. ಮೈಸೂರು ಪಾಕ್‌ನಿಂದ ಮೈಸೂರು ಮಸಾಲಾ ದೋಸೆ, ಬಿರ್ಯಾನಿವರೆಗೂ, ಕಾಡಿನಿಂದ ಹಿಡಿದು ಅರಮನೆಯವರೆಗೂ ಏನಿಲ್ಲ ಅಂತ ನೀವೇ ಹೇಳಿ.

ಕರ್ನಾಟಕ ತಾನು ಕರ್ನಾಟಕ ಅನ್ನೋದನ್ನು ಮರೆತು ಕಾಶ್ಮೀರ ಆಗಿ ಕೂತಿದೆ. ಎಷ್ಟು ರಗ್ಗುಗಳನ್ನು ಹೊದ್ದು ಮಲಗಿದರೂ ಚಳಿ ಬಿಡ್ತಾ ಇಲ್ಲ. ವಿಂಟರ್‌ ಟೂರಿಸಂ ಬಗ್ಗೆ ಕಳೆದ ವಾರದ ಪ್ರವಾಸಿ ಪ್ರಪಂಚದಲ್ಲಿ ಓದಿದ್ದೀರಿ. ಓದಿ ಸುಮ್ಮನಿರೋಕೆ ಬಿಡ್ತೀವಾ? ಪ್ರವಾಸಿ ಪ್ರಪಂಚ ಅಂದರೆ, ಬರೀ ಪ್ರವಾಸಕ್ಕೆ ಹೋಗಿ ಬಂದವರು ಬರೆಯುವ ವೇದಿಕೆಯಲ್ಲ. ಇದು ಜನ ಪ್ರವಾಸ ಹೋಗುವಂತೆ ಉತ್ತೇಜಿಸುವ ವೇದಿಕೆಯೂ ಹೌದು. ಪ್ರವಾಸಿ ಲೇಖನ ಓದಿ ಕೂತರೆ ಏನು ಮಜ? ಸುತ್ತಬೇಕು, ಸ್ಥಳಗಳನ್ನು ನೋಡಬೇಕು. ಕರ್ನಾಟಕ ರಾಜ್ಯದಲ್ಲಿ ಎಷ್ಟೆಲ್ಲ ಪ್ರೇಕ್ಷಣೀಯ ಸ್ಥಳಗಳಿವೆ. ಹೋದಲ್ಲೆಲ್ಲ ಹೊಸತನ, ಹೋದಲ್ಲೆಲ್ಲ ಇತಿಹಾಸ. ಕಣ್ಣು ಓಡಾಡಿದಲ್ಲೆಲ್ಲ ಪ್ರಕೃತಿ ಸೌಂದರ್ಯ. ಈ ಬಾರಿಯ ಚಳಿಗೆ ಇಡೀ ಕರ್ನಾಟಕ ಕೊಡಗಿನಂತೆ ಆಗಿಬಿಟ್ಟಿದೆ. ಕೊಡಗು ತಣ್ಣಗಿದ್ದಾಗ ಮೈಸೂರಿಗೆ ತಂಪು ತಟ್ಟದೇ ಇರುತ್ತಾ? ಈಗ ಮೈಸೂರು ಸಹ ತಣ್ಣಗೆ ಕೊರೆಯುತ್ತಿದೆ. ಮೈಸೂರು ಈ ಚಳಿಗಾಲದಲ್ಲಿ ಇನ್ನಿಲ್ಲದ ಸೊಬಗು ತುಂಬಿಕೊಂಡು ಬಿನ್ನಾಣ ತೋರುತ್ತಿದೆ.

ಇದನ್ನೂ ಓದಿ: ಜೆಎಲ್‌ಆರ್‌ನವರ ಕಬಿನಿ ರಿವರ್‌ ಲಾಡ್ಜ್‌ ಬಗ್ಗೆ ಎಷ್ಟು ಗೊತ್ತು?

ಮೈಸೂರು ಅಂದ್ರೆ ಅದು ಹಲವಾರು ಪ್ರವಾಸಿ ಕ್ಷೇತ್ರಗಳ ಸಾಗರ. ರಾಜ್ಯದ ಸಂಸ್ಕೃತಿಯನ್ನು ಬಿತ್ತರಿಸುವ ನಗರ. ಜ್ಞಾನ ವಿಜ್ಞಾನಕ್ಕೆ ಕೊಡುಗೆ ನೀಡಿದ ವಿದ್ಯಾ ಕಾಶಿ. ಎಲ್ಲ ಕ್ಷೇತ್ರದಲ್ಲೂ ಸಾಧಕರನ್ನು ಕೊಟ್ಟ ಜಿಲ್ಲೆ. ವಿಚಾರಧಾರೆ, ವೈಚಾರಿಕ ಮನೋಭಾವವನ್ನು ಕೊಟ್ಟ ಭೂಮಿ. ಅರಮನೆ ನಗರಿ. ರಾಜ ಮಹಾರಾಜರು ವಾಸಿಸುವ ನಗರ, ಹಲವಾರು ನಟ ನಟಿಯರನ್ನು ಕೊಡುಗೆಯಾಗಿ ನೀಡಿದ ಜಾಗ. ಮೈಸೂರಿಗೆ ಏನು ಕಮ್ಮಿ ಇದೆ ಹೇಳಿ? ಎಲ್ಲ ಕ್ಷೇತ್ರದಲ್ಲೂ ಮೈಸೂರಿನ ಛಾಪು ಇದೆ. ಮೈಸೂರು ಪಾಕ್‌ನಿಂದ ಮೈಸೂರು ಮಸಾಲಾ ದೋಸೆ, ಬಿರ್ಯಾನಿವರೆಗೂ, ಕಾಡಿನಿಂದ ಹಿಡಿದು ಅರಮನೆಯವರೆಗೂ ಏನಿಲ್ಲ ಅಂತ ನೀವೇ ಹೇಳಿ. ಮೈಸೂರು ನಗರದ ಆಸುಪಾಸಿನಲ್ಲಿ ಪಯಣ ಮ್ಯೂಸಿಯಂನಿಂದ ಹಿಡಿದು ಮೈಸೂರು ಮೈಸೂರಿನ ಹಲವಾರು ಅರಮನೆಗಳು, ಕಾಲೇಜುಗಳು, ಹೊಟೇಲ್ ಗಳು ರೆಸ್ಟೋರೆಂಟ್‌ಗಳು ಹಾಗೆ ಪಟ್ಟಿ ಮಾಡುತ್ತಾ ಹೋದರೆ ಪ್ರತಿಸ್ಥಳವೂ ಪ್ರವಾಸಿ ಸ್ಥಳವೇ. ಸಾಂಸ್ಕೃತಿಕ ನಗರಿ, ಪ್ರವಾಸಿ ಸ್ವರ್ಗ, ಹೀಗೆಲ್ಲ ಮೈಸೂರನ್ನು ವರ್ಣಿಸುವುದು ಕೇವಲ ಬಾಯಿ ಮಾತಿಗಂತೂ ಅಲ್ಲ. ಅಲ್ಲವೇ?

ಅಂದಹಾಗೆ ಮೈಸೂರಿನ ಸುತ್ತಮುತ್ತ ಬೆಟ್ಟಗಳಿಗೂ ಕೊರತೆ ಇಲ್ಲ. ನಾಡದೇವಿ ಚಾಮುಂಡಿಯೂ ಬೆಟ್ಟದಲ್ಲೇ ನೆಲೆಸಿದ್ದಾಳೆ. ಅದೇ ರೀತಿ ಮೈಸೂರಿಗೆ ಹತ್ತಿರದಲ್ಲಿ ಇನ್ನೊಂದು ಬೆಟ್ಟವೂ ಇದೆ. ಅದು ಬಿಳಿಗಿರಿ ರಂಗನ ಬೆಟ್ಟ. ಲೆಕ್ಕದಲ್ಲಿ ಅದು ಚಾಮರಾಜ ನಗರದ ವ್ಯಾಪ್ತಿ. ಆದರೆ ಇರುವುದು ಮಾತ್ರ ಮೈಸೂರಿನ ಪಕ್ಕದಲ್ಲೇ. ಇಷ್ಟುದ್ದ ಹೆಸರಿನ ಬಿಳಿಗಿರಿರಂಗನ ಬೆಟ್ಟಕ್ಕೆ ಚಿಕ್ಕದಾಗಿ ಸ್ಟೈಲಿಶ್ ಆಗಿ ಬಿಆರ್‌ ಹಿಲ್ಸ್‌ ಎಂದೂ ಕರೆಯಲಾಗುತ್ತದೆ. ಬಿಳಿಗಿರಿ ರಂಗನ ಬೆಟ್ಟ ಅಂದರೆ ರಂಗನಾಥ ಸ್ವಾಮಿಯ ದೇವಾಲಯ ಇರುವ ಬಿಳಿಯ ಬೆಟ್ಟ ಅಂತರ್ಥ.

ಬಿಆರ್ ಹಿಲ್ಸ್ ಒಂದು ವಿಶಿಷ್ಟ ಪರಿಸರದಿಂದ ಕೂಡಿದೆ. ವೆಸ್ಟರ್ನ್‌ ಘಾಟ್‌ ಪರ್ವತದ ಭಾಗವಾಗಿರುವ ಈ ಬೆಟ್ಟವು ಹಲವಾರು ಪ್ರಾಣಿ ಪಕ್ಷಿಗಳ ವಾಸಸ್ಥಾನವೂ ಆಗಿದೆ. ಅದರ ಜತೆಗೆ ಇಲ್ಲಿ ಹಲವಾರು ರೀತಿಯ ಸಸ್ಯ ಮರಗಳೂ ಸೇರಿ, ಅದ್ಭುತ ಜೀವವೈವಿಧ್ಯದ ಪರಿಸರ ತಾಣ ಸೃಷ್ಟಿಯಾಗಿದೆ. ಬಿಆರ್ ಹಿಲ್ಸ್ ವನ್ಯಜೀವಿ ಅಭಯಾರಣ್ಯವು ನೀಲಗಿರಿ ಜೀವಗೋಳ ಮೀಸಲು ಪ್ರದೇಶವನ್ನು ರೂಪಿಸುವ ಸಂರಕ್ಷಿತ ಪ್ರದೇಶಗಳ ಜಾಲದ ಭಾಗವಾಗಿದೆ ಮತ್ತು ಇದು ಕಬಿನಿ ಮತ್ತು ಬಂಡೀಪುರದಂಥ ಪ್ರಸಿದ್ಧ ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿದೆ. ಇದು 1974ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿ ಮಾನ್ಯವಾಯಿತು. 2011 ರಿಂದ ಇದು ಅಧಿಕೃತ ಹುಲಿ ಮೀಸಲು ಪ್ರದೇಶವಾಗಿದೆ.

ಬಿಳಿಗಿರಿ ರಂಗನ ಬೆಟ್ಟ ಸುಂದರವಾಗಿಯೂ, ಒಂದೇ ಗುಕ್ಕಿಗೆ ಸಿಗದಷ್ಟು ಗಾಢವಾಗಿಯೂ ಇದೆ. ಈ ನಿಗೂಢ ಬಿಆರ್ ಬೆಟ್ಟಗಳು ಕಾಡಿನ ಬಗ್ಗೆ ಆಳವಾದ ಪ್ರೀತಿ ಹೊಂದಿರುವವರಿಗೆ, ಪಕ್ಷಿಗಳ ಹಾಡು ಮತ್ತು ಮರಗಳ ನಡುವೆ ದಿನ ಕಳೆಯಲು ಇಷ್ಟಪಡುವವರಿಗೆ, ತಮ್ಮನ್ನು ತಾವೇ ಮರೆತು ನಿಸರ್ಗವನ್ನು ಧೇನಿಸುವವರಿಗೆ ಪ್ರಶಸ್ತ ಸ್ಥಳವೂ ಹೌದು.

ಹಾಗೆ ನೋಡುತ್ತಾ ಹೋದರೆ, ಒಂದು ಸಮಯದಲ್ಲಿ ನಾವಿರುವ ನಾಡೆಲ್ಲ ಕಾಡಾಗಿತ್ತು. ಆದರೆ, ನಾಡಿನಲ್ಲಿ ವಾಸಿಸುತ್ತ ನಾವುಗಳು ಕಾಡಿನಲ್ಲಿ ವಾಸಿಸುವುದು ಹೇಗೆ ಎಂಬುದನ್ನು ಮರೆತಿದ್ದೇವೆ. ಗೊತ್ತಿರದ ಕಾಡಲ್ಲಿ ಹೋಗಿ ಅಲ್ಲಿ ಸಿಕ್ಕಿದ್ದನ್ನೆಲ್ಲ ತಿಂದು ಬದುಕಲು ನಾವು ಬಿಯರ್‌ ಗ್ರಿಲ್ಸ್‌ ಅಂತೂ ಅಲ್ಲ. ನಾವು ಕಾಡಿಗೆ ಹೋದರೂ ನಾಡಿನಲ್ಲಿ ಬೇಕಾಗುವ ಎಲ್ಲ ಫೆಸಿಲಿಟೀಸ್‌ ಬೇಕು. ಸಮಯ ಕಳೆಯಲು, ವಾಸಿಸಲು ಸ್ಥಳ, ಹೊಟ್ಟೆಗೆ ಟೈಂ ಟೈಂ ಊಟ, ಕಾಡಿನ ಮತ್ತಷ್ಟು ನಿಗೂಢಗಳ ಬಗ್ಗೆ ಬಿಚ್ಚಿಡಲು ಕಾಡಿನ ಬಗ್ಗೆ ತಿಳಿದುಕೊಂಡ ಜನ, ನೀರು ಟೀ-ಕಾಫೀ ಪಾನೀಯಗಳು, ಹೀಗೆ ಪಟ್ಟಿ ಮಾಡುತ್ತ ಹೋದರೆ ಬೆಳೆಯುತ್ತಾ ಹೋಗುತ್ತೆ. ನಮ್ಮ ದಿನ ನಿತ್ಯದ ಬೇಕುಗಳನ್ನೆಲ್ಲ ಪೂರೈಸಿ, ನಮಗೆ ಸುರಕ್ಷತೆಯನ್ನೂ ಕೊಟ್ಟು, ಕಾಡಿನಲ್ಲಿ ಸುತ್ತಾಡಿಸಲು ನಮಗೆ ಯಾರಾದರೂ ಬೇಕಲ್ವಾ?

ಅಂಥ ಒಬ್ಬ ಫ್ರೆಂಡ್ ಫಿಲಾಸಫರ್ ಗೈಡ್ ನ ಹುಡುಕಾಟಕ್ಕೆ ಉತ್ತರವಾಗಿ ಸಿಗುವುದೇ ಜೆಎಲ್‌ಆರ್‌ ಕೆ.ಗುಡಿ ವೈಲ್ಡರ್‌ನೆಸ್‌ ಕ್ಯಾಂಪ್‌.

ಕ್ಯಾತದೇವರ ಗುಡಿ ಶಿಬಿರವು ಪ್ರಕೃತಿಯೊಂದಿಗೆ ಹತ್ತಿರವಾಗಲು ಮತ್ತು ವೈಯಕ್ತಿಕವಾಗಿ ಬೆರೆಯಲು ನಿಮಗೆ ಅವಕಾಶವನ್ನು ಮಾಡಿಕೊಡುತ್ತದೆ. ಹೆಸರೇ ಸೂಚಿಸುವಂತೆ, ಶಿಬಿರದಿಂದ ನೀವು ನಿರೀಕ್ಷಿಸಬಹುದಾದ ಎಲ್ಲ ಚಟುವಟಿಕೆ, ಸಾಹಸಮಯ ದಿನಚರಿಯೂ ಇಲ್ಲಿದೆ. ಇಲ್ಲಿ ಸಾಹಸದ ಜತೆ ಕಾಡಿನ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಬಿಆರ್ಎಲ್ ವನ್ಯಜೀವಿ ಅಭಯಾರಣ್ಯವು ಅದರ ಹೆಸರಿಗೆ ತಕ್ಕಂತೆ ವನ್ಯ ಜೀವಿ ಆಗರ ಮತ್ತು ವನ್ಯಜೀವಿಗಳು ಸ್ಪಾಟ್ ಆಗುವುದು ಇಲ್ಲಿನ ಪ್ರಮುಖ ಆಕರ್ಷಣೆ. ಇದು ಆನೆ, ಗೌರ್, ಹುಲಿ ಮತ್ತು ಚಿರತೆಗಳ ವಾಸಸ್ಥಾನ.

ಈ ಕಾಡುಗಳು 250 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಂದ ತುಂಬಿವೆ. ಅವುಗಳಲ್ಲಿ ವೆಲ್ವೆಟ್-ಫ್ರಂಟೆಡ್ ನಥಾಚ್, ಗೋಲ್ಡ್-ಫ್ರಂಟೆಡ್ ಕ್ಲೋರೊಪ್ಸಿಸ್, ಬ್ಲಾಸಮ್-ಹೆಡೆಡ್ ಪ್ಯಾರಕೀಟ್ ಮತ್ತು ಮಲಬಾರ್ ವಿಸ್ಲಿಂಗ್ ಥ್ರಷ್ ಸೇರಿವೆ. ಆದ್ದರಿಂದ ನೀವು ಈ ಸ್ಥಳಕ್ಕೆ ಎಷ್ಟು ಬಾರಿ ಭೇಟಿ ನೀಡಿದರೂ, ಅದು ಕಡಿಮೆಯೇ. ಆದರೂ ಕಾಡನ್ನು ಆದಷ್ಟು ತೋರಿಸಲು, ಅದರ ಬಗ್ಗೆ ತಿಳಿಸಲು, ಕಾಡಿನ ತಜ್ಞರೊಂದಿಗೆ ಜೀಪ್ನಲ್ಲಿ ಸವಾರಿ ಮಾಡಬಹುದು. ಇಲ್ಲಿ ನಾವು ಜೀಪಿನಲ್ಲಿ ಎರಡು ಬಾರಿ ಕಾಡಿಗೆ ಹೋಗಬಹುದು. ಒಮ್ಮೆ ಮುಂಜಾನೆ ಮತ್ತು ಒಮ್ಮೆ ಸಂಜೆ. ಬಿ.ಆರ್. ಹಿಲ್ಸ್ ಅನ್ನು ಕಾಲ್ನಡಿಗೆಯಲ್ಲಿಯೂ ಅನ್ವೇಷಿಸಬಹುದು.

ಆರಾಮವಾದ ಸಂಜೆ

ಇಲ್ಲಿ ನೀವು ಕ್ಯಾಂಪ್‌ಫೈರ್‌ ಮಾಡಬಹುದು. ಆಡಿಯೋ-ವಿಶುವಲ್ ಕೋಣೆಯಲ್ಲಿ ವನ್ಯಜೀವಿ ಚಲನಚಿತ್ರವನ್ನು ವೀಕ್ಷಿಸಬಹುದು ಮತ್ತು ವಿಶ್ರಾಂತಿ ಪಡೆಯಬಹುದು. ಗೋಲ್ ಘರ್‌ನಲ್ಲಿ ವಿಶಿಷ್ಟವಾದ JLR-ಶೈಲಿಯಲ್ಲಿ ಭೋಜನವನ್ನು ನೀಡಲಾಗುತ್ತದೆ. ಸ್ಲಾತ್ ಕರಡಿಗಳು, ಕಾಡು ನಾಯಿಗಳು, ಬೊಗಳುವ ಜಿಂಕೆ, ಚುಕ್ಕೆ ಜಿಂಕೆ, ಕಾಡುಹಂದಿಗಳು, ಮಲಬಾರ್ ದೈತ್ಯ ಅಳಿಲುಗಳು ಮತ್ತು ಕಾಡು ಪ್ರಾಣಿಗಳ ಸಮೂಹವು ನಿಮ್ಮನ್ನು ಇಲ್ಲಿಂದ ಹೋಗಲು ಬಿಡುವುದೇ ಇಲ್ಲ.

ಹಾಗೇ ಮತ್ತೊಂದು ಮಾತು. ಇಲ್ಲಿ ಬಿಯರ್‌ ಅಥವಾ ವಿಸ್ಕಿ ಹೀರುತ್ತಾ ರಾತ್ರಿಯನ್ನು ಕಳೆಯಬಹುದು ಅಂತ ಮಾತ್ರ ಅಂದುಕೊಳ್ಳಬೇಡಿ. ಏಕೆಂದರೆ, ಈ ಶಿಬಿರವು ಹುಲಿ ಅಭಯಾರಣ್ಯದ ಸಮೀಪದಲ್ಲಿ ಇರುವುದರಿಂದ, ಕ್ಯಾಂಪಸ್‌ನಲ್ಲಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಸೀಸನ್

ಕ್ಯಾತದೇವರಾಯ ಗುಡಿ ವನ್ಯಜೀವಿ ಶಿಬಿರಕ್ಕೆ ಭೇಟಿ ನೀಡಲು ಎಲ್ಲ ಸಮಯವೂ ಸೂಕ್ತವೇ. 1800 ಅಡಿಗಳಿಂದ 6000 ಅಡಿ ಎತ್ತರದಲ್ಲಿರುವ ಈ ಅಭಯಾರಣ್ಯವು ವರ್ಷವಿಡೀ ಆಹ್ಲಾದಕರ ಹವಾಮಾನವನ್ನು ಹೊಂದಿರುತ್ತದೆ. ಋತುವಿನ ಯಾವುದೇ ಸಮಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸಬಹುದಾಗಿದೆ. ಆದ್ದರಿಂದಲೇ ಶಿಬಿರವು ವರ್ಷವಿಡೀ ತೆರೆದಿರುತ್ತದೆ.

ಜೆಎಲ್‌ಆರ್‌ ದಿನಚರಿ

ದಿನ 1

ಮಧ್ಯಾಹ್ನ 1:00 - ಚೆಕ್ ಇನ್ ಮಾಡಿ, ಕುಳಿತು ಫ್ರೆಶ್ ಅಪ್ ಆಗಿ.

ಮಧ್ಯಾಹ್ನ 1:30 - ಮಧ್ಯಾಹ್ನ 2:30

ಗೋಲ್ ಘರ್ ನಲ್ಲಿ ಭರ್ಜರಿ ಊಟ ಸವಿಯಿರಿ.

ಮಧ್ಯಾಹ್ನ 3:45

ಗೋಲ್ ಘರ್‌ನಲ್ಲಿ ಚಹಾ/ಕಾಫಿ ಸವಿಯುತ್ತಾ ಉದ್ಯಾನವನದೊಳಗೆ ಸವಾರಿ ಮಾಡಲು ಸಿದ್ಧರಾಗಿ.

ಸಂಜೆ 4:00 - ಸಂಜೆ 6:30

ಕಾಡಿನ ತಜ್ಞರು ನಿಮ್ಮನ್ನು ಬಿಆರ್‌ಟಿ ವನ್ಯಜೀವಿ ಅಭಯಾರಣ್ಯಕ್ಕೆ ಜೀಪ್ ಸವಾರಿಯಲ್ಲಿ ಕರೆದೊಯ್ಯುತ್ತಾರೆ, ಅಲ್ಲಿ ಅವರು ತಮ್ಮ ಅನುಭವಗಳು ಮತ್ತು ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ತೋರಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ.

ಸಂಜೆ 6:30

ಗೋಲ್ ಘರ್‌ನಲ್ಲಿ ಚಹಾ/ಕಾಫಿ ನೀಡಲಾಗುತ್ತದೆ.

ಸಂಜೆ 7:30 - ರಾತ್ರಿ 8:15

ಸಭಾಂಗಣದಲ್ಲಿ ವನ್ಯಜೀವಿಗಳ ಚಲನಚಿತ್ರವನ್ನು ವೀಕ್ಷಿಸಿ.

ರಾತ್ರಿ 8:30 - ರಾತ್ರಿ 9:30

ಕ್ಯಾಂಪ್‌ಫೈರ್‌ನ ಮುಂದೆ ಗೋಲ್‌ಘರ್‌ ನಲ್ಲಿ ಅತ್ಯದ್ಭುತ ಊಟ ಇತರ ಅತಿಥಿಗಳು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ವಿನಿಮಯ ಮಾಡಿಕೊಳ್ಳಿ.

ದಿನ 2

ಬೆಳಗ್ಗೆ 6:00 - ಟೀ/ಕಾಫಿ.

ಬೆಳಗ್ಗೆ 6:15 - 8:45

ಇಲ್ಲಿನ ಕಾಡಿನ ತಜ್ಞರು ನಿಮ್ಮನ್ನು ಬಿಆರ್‌ಟಿ ವನ್ಯಜೀವಿ ಅಭಯಾರಣ್ಯಕ್ಕೆ ಜೀಪ್ ಸವಾರಿಯಲ್ಲಿ ಕರೆದೊಯ್ಯುತ್ತಾರೆ, ಅಲ್ಲಿ ಅವರು ತಮ್ಮ ಅನುಭವಗಳು ಮತ್ತು ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾರೆ.

ಬೆಳಗ್ಗೆ 8:45 - 9:45

ಗೋಲ್ ಘರ್‌ನಲ್ಲಿ ಉಪಾಹಾರ.

ಬೆಳಿಗ್ಗೆ 10:30 -

ಚೆಕ್‌ಔಟ್.

ಸಂಪರ್ಕ

ಕೆ.ಗುಡಿ ವೈಲ್ಡರ್ನೆಸ್ ಕ್ಯಾಂಪ್, PO ಕ್ಯಾತದೇವರಾಯನ ಗುಡಿ, ಚಾಮರಾಜನಗರ

ಮೈಸೂರು ಸುತ್ತಮುತ್ತ - 571 313

ವ್ಯವಸ್ಥಾಪಕ: ಮಂಜುನಾಥ್

ಸಂಪರ್ಕ ಸಂಖ್ಯೆ: 9449599790

ಲ್ಯಾಂಡ್-ಲೈನ್: 9449597877/ 08226-29101000008226-2910

ಹೋಗೋದು ಹೇಗೆ?

ವಿಮಾನದ ಮೂಲಕ

ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಬೆಂಗಳೂರಿನಿಂದ ಇದು ಸುಮಾರು 180 ಕಿಲೋಮೀಟರ್ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ನೀವು ಶಿಬಿರಕ್ಕೆ ಟ್ಯಾಕ್ಸಿ ಅಥವಾ ಬಸ್‌ನಲ್ಲಿ ಬರಬಹುದು. ಪ್ರಯಾಣವು ಸುಮಾರು 4-5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ದಾರಿಯುದ್ದಕ್ಕೂ ಸುಂದರವಾದ ಪ್ರಕೃತಿ ವೀಕ್ಷಣೆ ಮಾಡುತ್ತಾ ಗಮ್ಯವನ್ನು ತಲುಪಬಹುದು.

ರೈಲಿನ ಮೂಲಕ

ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ, ಹತ್ತಿರದ ರೈಲು ನಿಲ್ದಾಣ ಮೈಸೂರು ಜಂಕ್ಷನ್. ಇದು ಕೆ ಗುಡಿಯಿಂದ ಸುಮಾರು 85 ಕಿಲೋಮೀಟರ್ ದೂರದಲ್ಲಿದೆ. ಮೈಸೂರಿನಿಂದ ನೀವು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು ಅಥವಾ ಸ್ಥಳೀಯ ಬಸ್ ಮೂಲಕ ಸುಮಾರು 2-3 ಗಂಟೆಗಳಲ್ಲಿ ಶಿಬಿರವನ್ನು ತಲುಪಬಹುದು.

ಬಸ್ ಮೂಲಕ

ಬಸ್ ಪ್ರಯಾಣವನ್ನು ಇಷ್ಟಪಡುವವರಿಗೆ, ಬೆಂಗಳೂರು ಮತ್ತು ಮೈಸೂರಿನಂಥ ಪ್ರಮುಖ ನಗರಗಳಿಂದ ಹತ್ತಿರದ ಪಟ್ಟಣಗಳಿಗೆ ನಿಯಮಿತ ಸೇವೆಗಳಿವೆ. ನೀವು ಹತ್ತಿರದ ಬಸ್ ನಿಲ್ದಾಣವನ್ನು ತಲುಪಿದ ನಂತರ, ನೀವು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಅಥವಾ ಸ್ಥಳೀಯ ಸಾರಿಗೆಯನ್ನು ಬಳಸಿಕೊಂಡು ಕೆ ಗುಡಿ ವೈಲ್ಡರ್ನೆಸ್ ಕ್ಯಾಂಪ್ ತಲುಪಬಹುದು. ಬೆಂಗಳೂರಿನಿಂದ ದೂರ ಸುಮಾರು 180 ಕಿಲೋಮೀಟರ್ , ಮೈಸೂರು ಕೇವಲ 85 ಕಿಲೋಮೀಟರ್ ದೂರದಲ್ಲಿದೆ.

ಪ್ಯಾಕೇಜ್‌ಗಳು

ಲಾಗ್‌ ಹಟ್‌ ಪ್ಯಾಕೇಜ್‌

ಟೆಂಟ್‌ ಪ್ಯಾಕೇಜ್‌

ಬಿಳಿಗಿರಿ ಪ್ಯಾಕೇಜ್‌

ಮಹಾರಾಜ ಪ್ಯಾಕೇಜ್‌

ಪ್ಯಾಕೇಜ್‌ನಲ್ಲಿ:

ಆಯ್ದ ವಸತಿ ಸ್ಥಳ, ವಾಸ್ತವ್ಯ, ಮಧ್ಯಾಹ್ನ ಊಟ, ಭೋಜನ ಮತ್ತು ಉಪಾಹಾರ, ಬಿಆರ್‌ಟಿ ವನ್ಯಜೀವಿ ಅಭಯಾರಣ್ಯಕ್ಕೆ ಜೀಪ್ ಸಫಾರಿ, ಮಾರ್ಗದರ್ಶಿ ಪ್ರಕೃತಿ ನಡಿಗೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..