Saturday, July 26, 2025
Saturday, July 26, 2025

ಶಿವಮೊಗ್ಗದ ಗಾಲ್ಫ್‌ ಕನಸಿನ ರೂವಾರಿ ಉದ್ಯಮ ಲೋಕದ ದಿಗ್ಗಜ ಕಿಮ್ಮನೆ ಜಯರಾಂ

ಕಿಮ್ಮನೆ ಜಯರಾಂ ಅವರನ್ನು ಒಂದು ಪದದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಯಶಸ್ವಿ ಉದ್ಯಮಿ ಅನ್ನುವುದೋ, ಯಶಸ್ವಿ ಕೃಷಿಕ ಎನ್ನುವುದೋ, ದೂರದೃಷ್ಟಿಯ ನಾಯಕ ಎನ್ನುವುದೋ ಅಥವಾ ಅದ್ಭುತ ಸಮಾಜ ಸೇವಕರು ಎನ್ನುವುದೋ ಅಥವಾ ಇವೆಲ್ಲದರ ಸಂಕಲನ ಎನ್ನುವುದೋ..ಎಂದು ಅವರ ಜೀವನಗಾಥೆ ನೋಡಿದಾಗ ಅನಿಸದೇ ಇರದು.

ಬೆಂಗಳೂರಿನಂಥ ಕಾಸ್ಮೋಪಾಲಿಟನ್ ಸಿಟಿಗಳಿಗೆ ಮಾತ್ರವೇ ಗಾಲ್ಫ್ ಎಂಬ ಕ್ರೀಡೆ ಸೀಮಿತವಾಗಬೇಕಾ? ಶಿವಮೊಗ್ಗದಲ್ಲೊಂದು ಗಾಲ್ಫ್ ಅಂಗಣ ಯಾಕಿರಬಾರದು? ಇಂಥದ್ದೊಂದು ಬೃಹತ್ ಆಲೋಚನೆ ಬರುವುದೇ ಅಚ್ಚರಿ. ಅಂಥ ಆಲೋಚನೆ ಮತ್ತು ಕನಸನ್ನು ಸಾಕಾರಗೊಳಿಸುವುದು ಅಚ್ಚರಿಗಳಲ್ಲೊಂದು ಅಚ್ಚರಿ. ಸಾಹಸಿ ಮನಸ್ಸು, ದೂರದೃಷ್ಟಿತ್ವ, ಅಪರಿಮಿತ ಜೀವನೋತ್ಸಾಹ ಇದ್ದವರಿಂದ ಮಾತ್ರವೇ ಇಂಥ ಯೋಚನೆಗಳು ಯೋಜನೆಗಳಾಗಿ ಬದಲಾಗೋಕೆ ಸಾಧ್ಯ. ಅಂಥ ಒಂದು ಅಪರೂಪದ ಅದ್ಭುತ ವ್ಯಕ್ತಿತ್ವವೇ ಕಿಮ್ಮನೆ ಜಯರಾಂ.

ಶಿವಮೊಗ್ಗದಂಥ ಶಿವಮೊಗ್ಗದಲ್ಲಿ ಅರವತ್ತೈದು ಎಕರೆ ಜಾಗದಲ್ಲಿ ಕಿಮ್ಮನೆ ಲಕ್ಸುರಿ ಗಾಲ್ಫ್ ರೆಸಾರ್ಟ್ ಎಂಬ ಹಸಿರು ಸ್ವರ್ಗ ನಿರ್ಮಿಸೋದು ಸಾಮಾನ್ಯ ಸಾಹಸವಲ್ಲ. ಇಂದಿಗೆ ಮಲೆನಾಡಿನ ಮನೆಮಾತಾಗಿರುವ ಕಿಮ್ಮನೆ ರೆಸಾರ್ಟ್ ನ ರೂವಾರಿ ಜಯರಾಂ ಅವರ ಬದುಕಿನ ಜರ್ನಿ ನೋಡಿದವರಿಗೆ ಈ ಸಾಧನೆ ಅಚ್ಚರಿ ಅನಿಸುವುದಿಲ್ಲ. ಯಾಕಂದ್ರೆ ಅವರು ಹೆಜ್ಜೆ ಹೆಜ್ಜೆಯಲ್ಲೂ ಉದ್ಯಮ ಕ್ರಾಂತಿಯನ್ನೇ ಮಾಡಿದವರು.

kimmane jayaram

ಹೌದು.. ಕಿಮ್ಮನೆ ಜಯರಾಂ ಅವರನ್ನು ಒಂದು ಪದದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಯಶಸ್ವಿ ಉದ್ಯಮಿ ಅನ್ನುವುದೋ, ಯಶಸ್ವಿ ಕೃಷಿಕ ಎನ್ನುವುದೋ, ದೂರದೃಷ್ಟಿಯ ನಾಯಕ ಎನ್ನುವುದೋ ಅಥವಾ ಅದ್ಭುತ ಸಮಾಜ ಸೇವಕರು ಎನ್ನುವುದೋ ಅಥವಾ ಇವೆಲ್ಲದರ ಸಂಕಲನ ಎನ್ನುವುದೋ..ಎಂದು ಅವರ ಜೀವನಗಾಥೆ ನೋಡಿದಾಗ ಅನಿಸದೇ ಇರದು. ಉದ್ಯಮ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪು ಒಂದೆರಡಲ್ಲ. ಇಂದು ಕೆಟಿಜಿ ಗ್ರೂಪ್ ಆಫ್ ಕಂಪನೀಸ್ ರಾಜ್ಯದ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ ಅಂದರೆ ಅದರ ರೂವಾರಿ ಒಬ್ಬರೇ.. ಅದು ಕಿಮ್ಮನೆ ಜಯರಾಮ್.

ಆಕರ್ಷಕ ವ್ಯಕ್ತಿತ್ವದ ಜಯರಾಂ ಅವರದು ಅರವತ್ತರ ಹರಯದಲ್ಲಿಯೂ ಯುವಕರನ್ನು ನಾಚಿಸುವ ಜೀವನೋತ್ಸಾಹ. ಬಾಲಿವುಡ್ ನಟರನ್ನು ಮೀರಿಸುವ ಸ್ಟೈಲಿಶ್ ಲುಕ್ಕಿನ ಕಿಮ್ಮನೆ ಜಯರಾಮ್ ಮೊದಲ ನೋಟದಲ್ಲೇ ಎದುರಿನವರಲ್ಲಿ ಸ್ಪೂರ್ತಿ ತುಂಬಬಲ್ಲ ವ್ಯಕ್ತಿತ್ವ. ಅವರ ಸಾಧನೆಯೂ ಅವರ ವ್ಯಕ್ತಿತ್ವದಷ್ಟೇ ವರ್ಣರಂಜಿತ.

ಕಿಮ್ಮನೆ ಅಂದ್ರೆ ಸುಮ್ಮನೆ ಅಲ್ಲ

ಕಾಫಿ, ಅಡಿಕೆ ಕೃಷಿ, ವ್ಯಾಪಾರ ವಹಿವಾಟು, ರಿಯಲ್ ಎಸ್ಟೇಟ್ ಉದ್ಯಮ, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಿಕ್ಷಣ, ಸಾಫ್ಟ್ ವೇರ್ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಕಿಮ್ಮನೆ ಜಯರಾಮ್ ಅವರು ವಿಶೇಷ ಛಾಪು ಮೂಡಿಸಿದವರು. ಹೀಗಾಗಿ ಕಿಮ್ಮನೆ ಅಂದ್ರೆ ಸುಮ್ಮನೆ ಅಲ್ಲ!

ತಮ್ಮ ಉದ್ಯಮಶೀಲತೆಯಿಂದ ಶಿವಮೊಗ್ಗದಂಥ ಜಿಲ್ಲಾ ಕೇಂದ್ರಗಳಿಗೂ ಪ್ರವಾಸೋದ್ಯಮವೂ ಸೇರಿದಂತೆ ವಿವಿಧ ರಂಗಗಳಲ್ಲಿ ಉನ್ನತ ಸ್ಥಾನ ಸಿಗುವಂತೆ ಮಾಡಿದ ಗಾರುಡಿಗರು ಇವರು. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇವರು ಹಿಂಜರಿಯುವುದಿಲ್ಲ ಎಂಬುದಕ್ಕೆ ಗಾಲ್ಫ್ ರೆಸಾರ್ಟ್ ಗೆ ಭಾರೀ ಬಂಡವಾಳ ಹೂಡಿರುವುದೇ ಸಾಕ್ಷಿ.

kimmane

ಹಾಗಂತ ಇವರು ಏಕಾಏಕಿ ಗಾಲ್ಫ್ ರೆಸಾರ್ಟ್ ಪ್ರಾರಂಭಿಸಲಿಲ್ಲ. ಅದರ ಹಿಂದೆ ಭಾರಿ ಅಧ್ಯಯನವಿದೆ. ಹೌದು. ಶಿವಮೊಗ್ಗದಲ್ಲಿ ಗಾಲ್ಫ್ ರೆಸಾರ್ಟ್ ಪ್ರಾರಂಭಿಸುವುದಕ್ಕೂ ಮುಂಚೆ ದೇಶ ವಿದೇಶಗಳಿಗೆ ತೆರಳಿ ಪ್ರವಾಸೋದ್ಯಮವನ್ನು ಅರ್ಥ ಮಾಡಿಕೊಂಡು ಬಂದಿದ್ದಾರೆ. ಇದರ ಫಲಶ್ರತಿಯಾಗಿ ಪ್ರಾರಂಭವಾಗಿದ್ದು ಕಿಮ್ಮನೆ ಗಾಲ್ಫ್ ರೆಸಾರ್ಟ್. ಗಾಲ್ಫ್ ರೆಸಾರ್ಟ್ ಇಂದಿಗೆ ಸುಮಾರು 300ಕ್ಕೂ ಹೆಚ್ಚು ಮಂದಿಗೆ ನೇರ ಉದ್ಯೋಗ ಮತ್ತು 500 ಕುಟುಂಬಗಳಿಗೆ ಪರೋಕ್ಷ ಉದ್ಯೋಗಾವಕಾಶ ನೀಡಿರುವುದು ಸಣ್ಣ ವಿಷಯ ಅಲ್ಲವೇ ಅಲ್ಲ.

ಏನೇ ಮಾಡಿದರೂ ಭೂಮಿ ಮೇಲಿನ ಪ್ರೀತಿ, ಕೃಷಿ ಮೇಲಿನ ಮಮಕಾರ ಕಿಮ್ಮನೆಯವರಿಂದ ದೂರವಾಗುವುದಿಲ್ಲ. ಅವರ ಎಲ್ಲ ಸಾಧನೆಗಳು ಭೂಮಿಯಲ್ಲೇ ಬೇರೂರಿ ಆಕಾಶಕ್ಕೆ ಚಿಮ್ಮುವ ಸಾಧನೆಗಳು.ಅಡಿಕೆ ಕೃಷಿ ಇದ್ದಿರಬಹುದು, ರಿಯಲ್ ಎಸ್ಟೇಟ್ ಇದ್ದಿರಬಹುದು, ಗಾಲ್ಫ್ ವಿಲೇಜ್ ಇದ್ದಿರಬಹುದು. ಎಲ್ಲವೂ ನೆಲದಿಂದ ಎದ್ದಿರುವ ಕನಸುಗಳು. ಜತೆಗೆ ತಮಗೆ ಜನ್ಮ ಕೊಟ್ಟ ಸ್ಥಳದಲ್ಲೇ ಸಾಧಿಸಬೇಕು, ಆ ನೆಲಕ್ಕೆ ಮರಳಿ ಕೊಡಬೇಕು ಎಂಬ ಅವರ ಕನಸು ನಿಜಕ್ಕೂ ಉದಾತ್ತವಾದುದು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 300 ಎಕರೆ ವಿಸ್ತೀರ್ಣದ ಕಾಫಿ ತೋಟವನ್ನು ಹೊಂದಿರುವ ಜಯರಾಂ, ಮನಸು ಮಾಡಿದ್ದರೆ ಶಿವಮೊಗ್ಗದ ಈ ಜಾಗದಲ್ಲೂ ತೋಟವೋ ಸೈಟುಗಳೋ ಮಾಡಬಹುದಿತ್ತು. ಆದರೆ ಶಿವಮೊಗ್ಗದಲ್ಲಿ ಗಾಲ್ಫ್ ತರಬೇಕೆಂದು ಕನಸು ಕಂಡ ಅವರು ಅರವತ್ತೈದು ಎಕರೆ ವಿಸ್ತೀರ್ಣದಲ್ಲಿ 9-ಹೋಲ್ ಗಳ ಗಾಲ್ಫ್ ಕೋರ್ಸ್ ಮತ್ತು 30 ಕೊಠಡಿಗಳ ರೆಸಾರ್ಟ್‌ ಮಾಡಿದರು. ಇಂದಿಗೆ ಅದು ಇಡೀ ಶಿವಮೊಗ್ಗ ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ಪ್ರವಾಸಿಗಳಿಗೆ ಪ್ರಮುಖ ಆಕರ್ಷಣೆ.

ಇಪ್ಪತ್ತೈದು ವರ್ಷಗಳ ಪಯಣ

ಜಯರಾಂ ಅವರು 2000 ರಿಂದ 2008ರವರೆಗೆ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕೊಮಾಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಏಂಜಲ್ ಇನ್ವೆಸ್ಟರ್ ಆಗಿ, ಕಂಪನಿಯ ಆರಂಭದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ರಾಯಲ್ ನಂದಿ ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ.

ಸಾಮಾಜಿಕ ಕೊಡುಗೆಯಲ್ಲಿ ಕೈಮುಂದು

ಶಿಕ್ಷಣ ಕ್ಷೇತ್ರದಲ್ಲಿ ಜಯರಾಂ ಅವರ ಕೊಡುಗೆ ಗಮನಾರ್ಹವಾಗಿದೆ. ಶ್ರೀ ಔರಬಿಂದೋ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿಯಾಗಿ, ಶಿವಮೊಗ್ಗದ ಜ್ಞಾನ ದೀಪ ಶಾಲೆಯನ್ನು ನಿರ್ವಹಿಸುತ್ತಿದ್ದಾರೆ. ಇದರ ಮೂಲಕ ಶಿಕ್ಷಣದ ಮೂಲಕ ಸಮಾಜದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ದಕ್ಷಿಣ ಭಾರತದ ಝೋನಲ್ ಬೋರ್ಡ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

kimmane 1

ಇನ್ನು ಜಯರಾಂ ಅವರದ್ದು ಆಡು ಮುಟ್ಟದ ಸೊಪ್ಪಿಲ್ಲ ಎಂಬಂಥ ವ್ಯಕ್ತಿತ್ವ. ಅವರ ಸದಸ್ಯತ್ವ ಇಲ್ಲದ ಸಂಸ್ಥೆಗಳೇ ಇಲ್ಲವೇನೋ ಎಂಬಷ್ಟು ಜನಪ್ರಿಯತೆ ಅವರದು. ಜಯರಾಂ ಅವರು ಬೆಂಗಳೂರು ಟರ್ಫ್ ಕ್ಲಬ್ (BTC), ಬೆಂಗಳೂರು ಗಾಲ್ಫ್ ಕ್ಲಬ್ (BGC), ಮತ್ತು ದಿ ಬೆಂಗಳೂರು ಕ್ಲಬ್‌ನಂತಹ ಗಣ್ಯ ಸಂಸ್ಥೆಗಳ ಪ್ರತಿಷ್ಠಿತ ಸದಸ್ಯರಾಗಿದ್ದಾರೆ. ಇದರಿಂದ ಅವರ ಸಾಮಾಜಿಕ ಮತ್ತು ವೃತ್ತಿಪರ ಜಾಲ ಕೂಡ ವಿಸ್ತಾರವಾಗಿದೆ.

ಉದ್ಯೋಗದಾತ ಕಿಮ್ಮನೆ

ಕೆಟಿಜಿ ಗ್ರೂಪ್‌ನ ಮೂಲಕ ಜಯರಾಂ ಅವರು 300 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಮತ್ತು 500 ಕ್ಕೂ ಹೆಚ್ಚು ಕುಟುಂಬಗಳಿಗೆ ಪರೋಕ್ಷ ಉದ್ಯೋಗವನ್ನು ಒದಗಿಸಿದ್ದಾರೆ. ಐನೂರಕ್ಕೂ ಹೆಚ್ಚು ಕುಟುಂಬಗಳು ಇಂದಿಗೂ ಜಯರಾಂ ಅವರನ್ನು ಧನ್ಯತೆಯಿಂದ ನೆನೆಯುತ್ತಿದೆ. ಸಮಾಜದ ಆರ್ಥಿಕ ಸಬಲೀಕರಣಕ್ಕೆ ಇದಕ್ಕಿಂತ ಇನ್ನೇನು ಕೊಡುಗೆ ಬೇಕು ಹೇಳಿ.

ಒಟ್ಟಾರೆಯಾಗಿ ಹೇಳುವುದಾದರೆ, ಕಿಮ್ಮನೆ ಜಯರಾಂ ಅವರ ಈ ಸಾಧನೆಯ ಪಯಣವು ಯುವ ಉದ್ಯಮಿಗಳಿಗೆ ಮತ್ತು ಸಮಾಜಕ್ಕೆ ಸ್ಫೂರ್ತಿಯಾಗಿದೆ. ಅವರ ದೂರದೃಷ್ಟಿ, ಸಮಾಜದ ಕಡೆಗಿನ ಬದ್ಧತೆ ಮತ್ತು ಉದ್ಯಮದಲ್ಲಿ ತೋರಿದ ಶ್ರೇಷ್ಠತೆಯು ಅವರನ್ನು ಒಬ್ಬ ಅನನ್ಯ ವ್ಯಕ್ತಿತ್ವವನ್ನಾಗಿಸಿದೆ.

ಇದು ಗಾಲ್ಫ್ ಟೂರಿಸಂ!

ಎಕೋ ಟೂರಿಸಂ, ಅಡ್ವೆಂಚರ್ ಟೂರಿಸಂ, ಹೆಲ್ತ್ ಟೂರಿಸಂ, ಟೆಂಪುಲ್ ಟೂರಿಸಂ...ಹೀಗೆ ಪ್ರವಾಸೋದ್ಯಮದಲ್ಲಿ ವಿವಿಧ ಬಗೆ. ಈಗ ಮತ್ತೊಂದು ಹೊಸ ಟ್ರೆಂಡ್ ಶುರುವಾಗಿದೆ. ಅದು ಗಾಲ್ಫ್ ಟೂರಿಸಂ.

ಪ್ರವಾಸವೂ ಆಗಬೇಕು, ರಿಲ್ಯಾಕ್ಸ್ ಕೂಡಾ ಆಗಬೇಕು, ಮೈ ಮನಸ್ಸುಗಳಿಗೆ ಚೇತೋಹಾರಿ ಆಟವೂ ಬೇಕು... ಹೀಗೆ ಹಲವು ರುಚಿ ಅಭಿರುಚಿಗಳಿಗೆ ಒಂದು ಹೊಸ ಮಾರ್ಗ ಈ ಗಾಲ್ಫ್ ಟೂರಿಸಂ. ನಿಮಗೆ ಗಾಲ್ಫ್ ಟೂರಿಸಂನ ಅಪ್ಪಟ ಅನುಭವ ಬೇಕು ಎಂದರೆ ಶಿವಮೊಗ್ಗದ ಕಿಮ್ಮನೆ ಲಕ್ಸುರಿ ಗಾಲ್ಫ್ ರೆಸಾರ್ಟಿಗೆ ಭೇಟಿ ನೀಡಲೇಬೇಕು.

ಗಾಲ್ಫ್ ಶ್ರೀಮಂತರ ದುಬಾರಿ ಆಟ. ಹಿಂದೆ ಇದು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಶಿವಮೊಗ್ಗದಂಥ ಜಿಲ್ಲಾ ಕೇಂದ್ರದಲ್ಲೂ ಗಾಲ್ಫ್ ರೆಸಾರ್ಟನ್ನು ಅದ್ದೂರಿಯಾಗಿ ಪ್ರಾರಂಭಿಸಿ, ಯಶಸ್ವಿಯಾಗಿ ನಡೆಸುತ್ತಿರುವ ಸಾಹಸ ಕಿಮ್ಮನೆ ಜಯರಾಮ್ ಅವರದ್ದು.

ಹಿಂದೆ ಕ್ಲಬ್ಬುಗಳ ರೀತಿಯಲ್ಲಿ ಗಾಲ್ಫ್ ಕೋರ್ಸ್ ಸಿದ್ಧಪಡಿಸಲಾಗುತ್ತಿತ್ತು. ಈ ಕ್ಲಬ್ಬುಗಳಿಗೆ ಸದಸ್ಯರಾದವರಿಗೆ ಮಾತ್ರ ಅಲ್ಲಿ ಪ್ರವೇಶಕ್ಕೆ ಅವಕಾಶ ಸಿಗುತ್ತಿತ್ತು, ಆದರೆ ಕಿಮ್ಮನೆ ಜಯರಾಮ್ ಅವರು ಹೊಸ ಸ್ವರೂಪದ ಗಾಲ್ಫ್ ರೆಸಾರ್ಟ್ ನಿರ್ಮಿಸಿ, ಗಾಲ್ಫ್ ಕ್ರೀಡಾ ಪ್ರೇಮಿಗಳ ಜೊತೆಗೆ ಇತರ ಪ್ರವಾಸಿಗರಿಗೂ ತಮ್ಮ ಈ ರೆಸಾರ್ಟಿನಲ್ಲಿ ಆಹಾರ ವಿಹಾರ ವಸತಿಗೆ ಅನುಪಮ ಅವಕಾಶ ಕಲ್ಪಿಸಿರುವುದು ವಿಶೇಷ.

ಸುಮಾರು ನೂರು ಎಕರೆಯಷ್ಟು ವಿಶಾಲ ಸುಂದರ ಹಸಿರು ಪ್ರದೇಶ. ಗಿಡ ಮರ, ಹೂ ಗೊಂಚಲುಗಳ ತಪ್ಪಲು. ಇಂಥ ಆಕರ್ಷಣೀಯ ತಾಣದಲ್ಲಿ ಹುಣ್ಣಿಮೆಯಲ್ಲಿ ತುಂಬಿದ ಚೆಂದದ ಚಂದ್ರನ ತುಂಡೊಂದು ಬಿದ್ದಂತೆ, ಹಾಲ್ಬೇಳದಿಂಗಳು ಸೂಸುವ ತಂಪು ಇಂಪಿನಂತೆ, ಶಿವಮೊಗ್ಗದ ಪಕ್ಕದಲ್ಲಿ ಈ ವಿಲಾಸಿ ಕಿಮ್ಮನೆ ರೆಸಾರ್ಟ್ ಗಮನ ಸೆಳೆಯುತ್ತಿದೆ.

golf tourism

ಇದು ಭೂ ಲೋಕದ ಸ್ವರ್ಗದಂತೆ. ಕಾರಣ ಇಲ್ಲಿ ಏನುಂಟು ಏನಿಲ್ಲ? ಇಲ್ಲಿಯ ತಂಗಾಳಿಯ ಪರಿಸರದಲ್ಲಿ ಮೈ ಮನಗಳಿಗೆ ಮುದ ಕೊಡುವ ಐಷಾರಾಮಿ ಕಾಟೇಜುಗಳು, ಮೀನಿನಂತೆ ಈಜಲು ಸುಂದರ ಈಜು ಕೊಳಗಳು, ದೇಶ ವಿದೇಶಗಳ ಆಹಾರ ನೀಡುವ ರೆಸ್ಟರೆಂಟು, ವ್ಯಾಯಾಮಕ್ಕೆ ಸ್ಪಾ, ಜಿಮ್, ವಿರಾಮಕ್ಕೆ ಗಾಲ್ಫ್ ಆಟ, ಮೋಜಿಗೆ ಸೈಕಲ್ ತುಳಿತ, ಹವ್ಯಾಸಕ್ಕೆ ಪಕ್ಷಿ ವೀಕ್ಷಣೆ, ಮನರಂಜನೆಗೆ ಸಿನಿಮಾ ಥಿಯೇಟರ್ ರೀತಿಯ ಬಿಗ್ ಸ್ಕ್ರೀನುಗಳು, ಓದುವವರಿಗೆ ಪುಸ್ತಕಗಳು, ಕ್ರಿಕೆಟ್, ಬ್ಯಾಡ್ಮಿಂಟನ್ ವಾಲಿಬಾಲ್ ಆಡುವುದಕ್ಕೆ, ಓಡುವುದಕ್ಕೆ ವಾಕಿಂಗ್ ಮಾಡುವುದಕ್ಕೆ ಮೈದಾನಗಳು, ಹುಲ್ಲುಗಾವಲುಗಳು .... ಹೀಗೆ ಒಂದೇ ಎರಡೇ.

ಸಹ್ಯಾದ್ರಿಯ ಸೆರಗಿನಲ್ಲಿ ಹೀಗೆ ಪ್ರವಾಸಿಗರಿಂದ ಸೈ ಎನ್ನಿಸಿಕೊಂಡು, ಗಾಲ್ಫ್ ಪ್ರಿಯರಿಂದ ಜೈ ಎನ್ನಿಸಿಕೊಂಡಿರುವ, ಒಂಬತ್ತು ಕುಳಿಗಳ, ನಡುನಡುವೆ ನೀರಿನ ಚಿಲುಮೆಗಳ, ಮೆತ್ತಗಿನ ಹಸಿರು ಹುಲ್ಲು ಹಾಸಿನ ವಿಶೇಷ ವಿನ್ಯಾಸದ ಈ ಗಾಲ್ಫ್ ರೆಸಾರ್ಟಿನಲ್ಲಿ ತಂಪು ನೊರೆನೊರೆ ಬಿಯರನ್ನು ಹೀರುತ್ತಾ ಗಾಲ್ಫ್ ಆಡುವುದು, ಗಾಲ್ಫ್ ಬಾಲ್ ಹಿಂದೆ ಓಡುವುದು ಅನಿರ್ವಚನೀಯ ಅನುಭವ.

ಪಾರ್ಟಿ, ಮದುವೆ, ಸಭೆ ಸಮಾರಂಭ, ಸ್ನೇಹಕೂಟಗಳನ್ನೂ ಇಲ್ಲಿ ದಿಲ್ದಾರಾಗಿ ವ್ಯವಸ್ಥೆ ಮಾಡಲು ಸಕಲ ಸೌಲಭ್ಯಗಳುಂಟು.

ಕಿಮ್ಮನೆ ಗಾಲ್ಫ್ ರೆಸಾರ್ಟಿನ ಸಮೀಪವೇ ಜೋಗ ಜಲಪಾತ, ಆಗುಂಬೆ ಘಾಟ್, ಸಿಂಹ ಮತ್ತು ಹುಲಿ ಧಾಮ, ಕೆಳದಿ, ಇಕ್ಕೇರಿಯಂಥ ಐತಿಹಾಸಿಕ ಪ್ರದೇಶಗಳು, ಭದ್ರಾ ವನ್ಯಧಾಮ, ಕೊಡಚಾದ್ರಿ, ಕೊಲ್ಲೂರು, ಶೃಂಗೇರಿ ಮುಂತಾದ ಯಾತ್ರಾ ಸ್ಥಳಗಳೂ ಇರುವುದರಿಂದ ಕಿಮ್ಮನೆಗೆ ಬರುವ ಪ್ರವಾಸಿಗರಿಗೆ ಮತ್ತಷ್ಟು ಅನುಕೂಲ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ