Monday, December 8, 2025
Monday, December 8, 2025

ಕೆಎಸ್‌ಟಿಡಿಸಿ ಸಾರಥಿ ಹೊರಟಿದೆ ದಾರಿಬಿಡಿ...

ಒಂದೇ ಸೂರಿನಡಿ ವಿಶೇಷ ಪ್ಯಾಕೇಜ್‌ನೊಂದಿಗೆ ಎರಡು ದಿನಗಳ ಪ್ರವಾಸವನ್ನು ಕೆಎಸ್‌ಟಿಡಿಸಿ ಆಯೋಜಿಸಿದೆ. ರಾಜಧಾನಿ ಬೆಂಗಳೂರಿನಿಂದ ಹೊರಡುವ ಕೆಎಸ್‌ಟಿಡಿಸಿ ರಾಜರಥ ಮೈಸೂರು, ಶ್ರವಣಬೆಳಗೊಳ, ಬೇಲೂರು ಮತ್ತು ಹಳೇಬೀಡು ತಲುಪುತ್ತದೆ.

ನಮಗಿರುವುದು ಕೆಲವು ದಿನಗಳ ಬಿಡುವು, ಇರುವ ಅಷ್ಟು ಸಮಯವನ್ನಾದರೂ ನಾವು ಈ ನೆಲ-ಜಲ ನೋಡಲು ಮತ್ತು ನುಡಿಗಳನ್ನು ಅರಿಯಲು, ಆದಷ್ಟು ತಿಳಿಯಲು ವಿನಿಯೋಗಿಸಬೇಕು. ಲೋಕೋ ಭಿನ್ನ ರುಚಿ ಎನ್ನುತ್ತಾರೆ, ನಾನದನ್ನು ತಿಂದು ತಿರುಗಿಯೇ ನೋಡಬೇಕು ಎನ್ನುವವರಿಗೆ ಕೆಎಸ್‌ಟಿಡಿಸಿ ಸುಂದರ ಅವಕಾಶ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಪ್ರವಾಸೋದ್ಯಮದ ಜಾಡಿನಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸಲು ಹಾತೊರೆಯುತ್ತಿದೆ. ನಿಮ್ಮ ಆಯವ್ಯಯದ ಭಾರ ಕಡಿಮೆ ಮಾಡುವ ಮತ್ತು ಕೈಗೆಟುಕುವ ದರದ ಪ್ಯಾಕೇಜ್‌ಗಳನ್ನು ನೀಡಿದೆ. ಪ್ರಬುದ್ಧ ಪಯಣಿಗನಾಗಿ ನೀವು ತಿರುಗಲು, ತಿಳಿಯಲು, ಅನುಭವಗಳನ್ನು ಕಲೆಹಾಕಲು ಕೆಎಸ್‌ಟಿಡಿಸಿ ನಿಮ್ಮ ಸಂಗಾತಿಯಾಗಿರಲಿ. ಬಾವಿಯೊಳಗಿನ ಕಪ್ಪೆಯಾಗದೆ, ಬಾಂದಳದ ಹಕ್ಕಿಯಂತೆ ಸ್ವತಂತ್ರವಾಗಿ ಓಡಾಡಿ. ಸಾಕಷ್ಟು ಸುತ್ತಾಡಿ, ನಗರ ಜೀವನ ನಿಮ್ಮ ಮನಸನ್ನು ಒತ್ತಡಕ್ಕೆ ದೂಡಿರುತ್ತದೆ. ವಿಶ್ರಾಂತಿಗೆ ವಿಹಾರ ಅಗತ್ಯ. ತಿಲ್ಲಾನ ಹಾಡುವ ನದಿ, ತಂಪೆರೆಯುವ ಮಲೆನಾಡು, ಜೋಶ್‌ ನೀಡುವ ಜಲಪಾತಗಳು, ಕಾನನದ ನಡುವೆ ತುಸುದೂರ ನಡೆದಾಡಿ ಒಂದೆರಡು ದಿನ ಕಳೆದು ಬನ್ನಿ. ಮನಸಿನ ಆಯಾಸ ಮರೆಸುವ ಇಂಥ ಪ್ರವಾಸಕ್ಕೆ, ಮನಮೋಹಿಸುವ ತಾಣಗಳನ್ನು ಹುಡುಕಿ ಸುತ್ತಾಡಿಸಿ, ಸುವ್ಯಸ್ಥಿತ ವಾಸ್ತವ್ಯ ನೀಡುವ ಮೂಲಕ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದ್ದು, ಇದು ನಮ್ಮದೇ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಗರಿ ತಂದುಕೊಟ್ಟಿದೆ. ರಾಜ್ಯದಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ, ಪ್ರವಾಸದ ನಕ್ಷೆ ನೀಡಿದ್ದಾನೆ ಎಂದರೆ ಕೇಳಬೇಕೆ. ಆ ತಾಣದ ತನ್ಮಯತೆಯನ್ನು ನಿಮಗೆ ಕಟ್ಟಿಕೊಡುತ್ತದೆ. ಇದರಿಂದ ನೀವು ಅಲ್ಲಿನ ಜನಮನ, ಇತಿಹಾಸ, ಆಚರಣೆ, ಊಟೋಪಚಾರ, ತಾಣದ ವಿಶೇಷಗಳನ್ನು ಸುಲಭವಾಗಿ ಅರಿವಿಗೆ ತಂದುಕೊಳ್ಳಬಹುದು.

ಒಂದೇ ಸೂರಿನಡಿ ನಾಲ್ಕಾರು ಪ್ರವಾಸ

ಮೈಸೂರು ಸಾಂಸ್ಕೃತಿಕ ನಗರಿ. ಪಾರಂಪರಿಕ ನಗರಿಯೂ ಹೌದು. ಮೈಸೂರಿನಲ್ಲಿ ಏನಿದೆ ಎಂಬುದಕ್ಕಿಂತ ಏನೆನಿಲ್ಲ ಎಂದು ಕೇಳುವುದು ಸೂಕ್ತ. ಅಲ್ಲಿನ ಪ್ರತಿ ಪ್ರವಾಸಿ ತಾಣಗಳು ವೈವಿಧ್ಯಮಯ ಆಕರ್ಷಣೆಗಳನ್ನು ನೀಡುತ್ತವೆ. ಹಲವು ವರ್ಷಗಳಿಂದ ಮೈಸೂರು ನಗರವು ತನ್ನ ವೈಭವದಿಂದ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತಿದೆ. ಬೇಲೂರು ಮತ್ತು ಹಳೇಬೀಡು ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೇವಾಲಯಗಳಾಗಿವೆ. ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಹಿಂದೂ ದೇವಾಲಯ ಕಲೆಗೆ ಜೀವಂತ ಸಾಕ್ಷಿ. ಅವು ತಮ್ಮ ಕೆತ್ತನೆಗಳು ಮತ್ತು ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇನ್ನು ಶ್ರವಣಬೆಳಗೊಳವು ಜೈನ ದೇವಾಲಯಗಳ ಸಂಗ್ರಹಕ್ಕೆ ಖ್ಯಾತಿಪಡೆದಿದೆ. ಈ ತಾಣದಲ್ಲಿರುವ ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆ ಜೈನರಿಗೆ ಮಹತ್ವದ ಯಾತ್ರಾ ಸ್ಥಳವಾಗಿದೆ . ಒಂದೇ ಸೂರಿನಡಿ ವಿಶೇಷ ಪ್ಯಾಕೇಜ್‌ನೊಂದಿಗೆ ಎರಡು ದಿನಗಳ ಪ್ರವಾಸವನ್ನು ಕೆಎಸ್‌ಟಿಡಿಸಿ ಆಯೋಜಿಸಿದೆ. ರಾಜಧಾನಿ ಬೆಂಗಳೂರಿನಿಂದ ಹೊರಡುವ ಕೆಎಸ್‌ಟಿಡಿಸಿ ರಾಜರಥ ಮೈಸೂರು, ಶ್ರವಣಬೆಳಗೊಳ, ಬೇಲೂರು ಮತ್ತು ಹಳೇಬೀಡು ತಲುಪುತ್ತದೆ.

Untitled design (16)

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್ ಟಿ ಡಿ ಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್ ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್ ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್ ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್ ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಮೈಸೂರು - ಶ್ರವಣಬೆಳಗೊಳ - ಬೇಲೂರು ಮತ್ತು ಹಳೇಬೀಡು

ದಿನ-1

ಬೆಳಗ್ಗೆ 6.30 ಯಶವಂತಪುರ ಕೆಎಸ್‌ಟಿಡಿಸಿ ಕೌಂಟರ್‌ನಿಂದ ಹೊರಡಲಾಗುತ್ತದೆ.

ಬೆಳಗ್ಗೆ 8.30 - 9.00 ದಾರಿ ಮಧ್ಯೆ ಉಪಾಹಾರ

ಬೆಳಗ್ಗೆ 10.30 -11.00 ಶ್ರೀರಂಗಪಟ್ಟಣ -ಟಿಪ್ಪು ದರಿಯಾ ದೌಲತ್ ಭೇಟಿ

ಬೆಳಗ್ಗೆ 11.15 -11.45 ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ

ಮಧ್ಯಾಹ್ನ 12.15 - 12.30 ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ

ಮಧ್ಯಾಹ್ನ 1.00 - 2.00 ಹೊಯ್ಸಳ ಹೊಟೇಲ್‌ ಮಯೂರದಲ್ಲಿ ಊಟ.

ಮಧ್ಯಾಹ್ನ 2.30 - 3.30 ಮೈಸೂರು ಅರಮನೆಗೆ ಭೇಟಿ

ಮಧ್ಯಾಹ್ನ 3.45 – 4.45 ಮೈಸೂರು ಮೃಗಾಲಯಕ್ಕೆ ಭೇಟಿ

ಸಂಜೆ 4.45 - 5.30 ಚಾಮುಂಡಿ ಬೆಟ್ಟ, ಶ್ರೀ ಚಾಮುಂಡೇಶ್ವರಿ ದರ್ಶನ

ಸಂಜೆ 5.30 -6.30 ಬೃಂದಾವನ ಉದ್ಯಾನ ಕೆಆರ್‌ಎಸ್‌ಗೆ ಭೇಟಿ. ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿ ವಾಸ್ತವ್ಯ

ದಿನ-2

ಬೆಳಗ್ಗೆ 7.00 ಉಪಾಹಾರದ ನಂತರ ಕೆಆರ್‌ಎಸ್‌ ಮಯೂರದಿಂದ ಹೊರಡುವುದು

ಬೆಳಗ್ಗೆ 8.30 -10.00 ಶ್ರವಣಬೆಳಗೊಳ

ಮಧ್ಯಾಹ್ನ 12.00 ಗಂಟೆಗೆ- ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ಭೇಟಿ

ಮಧ್ಯಾಹ್ನ 1.30 – 02.00 ಹೊಟೇಲ್ ಮಯೂರ ವೇಲಾಪುರಿಯಲ್ಲಿ ಊಟ

ಮಧ್ಯಾಹ್ನ 2.30 – 3.30 ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಕ್ಕೆ ಭೇಟಿ

ಮಧ್ಯಾಹ್ನ 3.45 – 4.15 ಬೆಳವಡಿ ವೀರನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ

ರಾತ್ರಿ 8.30 ಬೆಂಗಳೂರಿನ ಕೆಎಸ್‌ಟಿಡಿಸಿ ಕಚೇರಿ ಕಡೆಗೆ ಬಸ್‌ ಹೊರಡುತ್ತದೆ.

Untitled design (15)

ಶಾಂತಲಾ ಮಯೂರದಲ್ಲಿ ಆತಿಥ್ಯ

ಕನ್ನಡದ ಕಲಿಪುರುಷನ ಹೆಸರನ್ನೇ ತಾನು ಇಟ್ಟುಕೊಂಡು, ಆತಿಥ್ಯ ಕ್ಷೇತ್ರದ ಹೆಗ್ಗುರುತಾಗಿ ಮಯೂರ ಹೊಟೇಲ್‌ಗಳು ಗುರುತಿಸಿಕೊಂಡಿವೆ.ಇವುಗಳನ್ನು ಕರ್ನಾಟಕದ ರಾಜ್ಯದಾದ್ಯಂತ ಕಾಣಬಹುದು. ಈ ಹೊಟೇಲ್‌ಗಳು ಆತಿಥ್ಯ ಮತ್ತು ಊಟೋಪಚಾರಕ್ಕೆ ದೇಶ ವಿದೇಶಗಳಲ್ಲೂ ಹೆಸರು ಮಾಡಿವೆ. ರಾಜ್ಯದ ಸುಂದರ ಅರಣ್ಯಧಾಮಗಳು, ಐತಿಹಾಸಿಕ ಪುಣ್ಯ ಸ್ಥಳಗಳು, ಪ್ರವಾಸಿ ತಾಣಗಳು, ವಿಶ್ವ ಪರಂಪರೆಯ ತಾಣಗಳಲ್ಲೂ ಈ ಮಯೂರ ನೆಲೆಸಿದೆ. ಅಲ್ಲೆಲ್ಲ ಅತಿಥಿಯಾಗಿ ಬರುವ ಜನರು ಮಯೂರವನ್ನು ಮೆಚ್ಚಿಕೊಂಡಿದ್ದಾರೆ.

ಹಳೇಬೀಡಿನ ಗಮ್ಮತ್ತು ಹಲವರಿಗೆ ಗೊತ್ತೇ ಇದೆ. ಹಳೇಬೀಡು ಪುರಾತನ ದೇವಾಲಯ, ಶಿಲ್ಪಕಲೆ ಮತ್ತು ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಬೇಲೂರು ಮತ್ತು ಹಳೇಬೀಡು ಅವಳಿ ಜಾಗಗಳು. ಅಲ್ಲಿಗೆ ಹೋದವರು ಇಲ್ಲಿಗೆ ಬರಲೇಬೇಕು. ಇಲ್ಲಿಗೆ ಬಂದವರು ಅಲ್ಲಿಗೆ ಹೋಗಲೇಬೇಕು. ಆ ಥರದ ಆನಂದದಾಯಕ ಅನುಭವವನ್ನು ಈ ತಾಣಗಳು ನೀಡುತ್ತವೆ. ಇನ್ನು ಪ್ರವಾಸಿಗರು ಬೇಲೂರು ಮತ್ತು ಹಳೇಬೀಡಿನಲ್ಲಿ ಅಡ್ಡಾಡಿದ ನಂತರ ಹಳೇಬೀಡಿನಲ್ಲಿರುವ ಶಾಂತಲಾ ಮಯೂರ ಹೊಟೇಲ್‌ ನಲ್ಲಿ ಉಳಿದುಕೊಳ್ಳಬಹದು. ಹೊಟೇಲ್‌ ಶಾಂತಲಾ ಮಯೂರ ಕುಟುಂಬ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ಅತ್ತ ಪ್ರವಾಸ ಹೋದಾಗ ಉಳಿದುಕೊಳ್ಳಲು ಈ ಹೊಟೇಲ್‌ ಸೂಕ್ತವಾಗಿದೆ. ಹೋಟೆಲ್‌ನಲ್ಲಿರುವ ಕೊಠಡಿಗಳು ಆರಾಮದಾಯಕ ಮತ್ತು ಕೈಗೆಟುಕುವ ದರದಲ್ಲಿವೆ. ಅತಿಥಿಗಳು ವಿವಿಧ ರೀತಿಯ ಅಡುಗೆಗಳನ್ನು ಇಲ್ಲಿ ಆಸ್ವಾದಿಸಬಹುದು. ಅದನ್ನು ರುಚಿಕಟ್ಟಾಗಿ ಮಾಡಿ ನೀಡಲು ಇಲ್ಲಿ ಸುಸಜ್ಜಿತ ಮತ್ತು ಸ್ವಚ್ಛ ರೆಸ್ಟೋರೆಂಟ್‌ ಸದಾ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ. ಆತಿಥ್ಯದಲ್ಲಿ ಮಯೂರ ಪ್ರವಾಸ ಪ್ರಿಯರಿಗೆ ಚಿರಪರಿಚಿತವಾಗಿದ್ದು, ಆತ್ಮೀಯ ಮತ್ತು ಸ್ನೇಹಪರ ಸಿಬ್ಬಂದಿಗಳು ನಗುಮೊಗದಲ್ಲೆ ನಿಮ್ಮನ್ನು ಸತ್ಕರಿಸುತ್ತಾರೆ. ಮರಳಿ ಬರುವಾಗ ಅವರನ್ನು ನೀವು ಮರೆಯುವುದೇ ಕಷ್ಟವಾದೀತು. ಅಷ್ಟು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ. ಆ ಸಮಯದಲ್ಲಿ ನಿಮಗೆ ಮನೆಯ ಅನುಭವವಾಗುವುದಂತೂ ಖಾಯಂ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರ ಹೊಟೇಲ್‌ ಇದ್ದೇ ಇದೆ. ಆತಿಥ್ಯ ಕ್ಷೇತ್ರ ಎಂದ ಕೂಡಲೇ ಮಯೂರ ಹೆಸರು ನೆನಪಾಗಿಯೇ ಆಗುತ್ತದೆ. ಅಷ್ಟರಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಊರಿನ ಗುರುತು ಪರಿಚಯವಿಲ್ಲದ ಪ್ರವಾಸಿಗರ ಆಯ್ಕೆಯೂ ಮಯೂರವೇ ಆಗಿರುತ್ತದೆ. ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗರೂ ಮಯೂರ ಆಯ್ಕೆಯಾಗಲಿ.

Untitled design (17)

ವಿಶೇಷತೆ

ಮಯೂರ ಶಾಂತಲಾ ಹೊಟೇಲ್‌ ಕೂಡ ಪ್ರವಾಸಿ ತಾಣವಾಗಿ ಎಲ್ಲರ ಗಮನಸೆಳೆದಿದೆ. ಈ ಜಾಗ ಜಗತ್ತಿನಾದ್ಯಂತ ಪ್ರವಾಸಿಗರನ್ನು ಭವ್ಯವಾದ ಹೊಯ್ಸಳೇಶ್ವರ ದೇವಾಲಯಕ್ಕೆ ಸಾಕ್ಷಿಯಾಗಿಸುತ್ತದೆ. ಈ ದೇವಾಲಯವು ಶಿವನಿಗೆ ಅರ್ಪಿತವಾಗಿದ್ದು, ಕೊಳಗಳು, ನದಿ ಮತ್ತು ಮಂಟಪಗಳಿಂದ ಆವೃತವಾಗಿದೆ. ದೇವಾಲಯದ ಗೋಡೆಯ ಮೇಲಿನ ಸಾವಿರ ಆಕೃತಿಗಳ ಕೆತ್ತನೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳಾಗಿವೆ. ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯವು ಸಂಕೀರ್ಣದೊಳಗಿದೆ. ಅದರ ಹೊಳಪುಳ್ಳ ಕಂಬಗಳನ್ನು ಹೊಂದಿರುವ ಪಾರ್ಶ್ವನಾಥ ಬಸದಿ ಹತ್ತಿರದಲ್ಲಿದೆ. ಹೊಟೇಲ್ ಮಯೂರ ಶಾಂತಲಾ ಹಳೇಬೀಡು ದೇವಾಲಯದ ಪಕ್ಕದಲ್ಲೇ ಇದ್ದು ಹಿಂದೂ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ಇದು ಸೂಕ್ತವಾಗಿದೆ. ಹೊಟೇಲ್ ಸಾಕಷ್ಟು ವಿಶಾಲವಾಗಿದ್ದು, 3 ಎಸಿ ಡಬಲ್ ಬೆಡ್ ರೂಮ್‌ಗಳು ಮತ್ತು 1 ನಾಲ್ಕು ಬೆಡ್ ರೂಮ್‌ಗಳನ್ನು ಹೊಂದಿದೆ. ಬಗೆ ಬಗೆಯ ತಿಂಡಿ, ತಿನಿಸು ಮತ್ತು ಊಟ ತಯಾರಿಸಿ ಬಡಿಸುತ್ತಾರೆ.

ಸಂಪರ್ಕ:
ಶ್ರೀ ಶ್ರೇಯಸ್

8970654600

ಹಳೇಬೀಡು, ಹಾಸನ-573 121

halebeedu@karnatakaholidays.net

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!