Monday, December 8, 2025
Monday, December 8, 2025

ಸಕ್ರೆಬೈಲ್‌ಲ್ಲಿ ಆನೆಯ ಹಿಂಡು!

ಸಕ್ರೆಬೈಲ್‌ಗೆ ಬರುವ ಪ್ರವಾಸಿರಿಗೆ, ವನ್ಯಜೀವಿಗಳನ್ನು ಇಷ್ಟಪಡುವವರಿಗೆ, ಅಥವಾ ಎಲ್ಲವೂ ಬೋರ್‌ ಆಗಿ, ಸ್ವಲ್ಪ ಬದಲಾವಣೆ ಬೇಕೆಂದು ಬರುವವರಿಗೆ, ಜೆಎಲ್‌ಆರ್‌ ತನ್ನ ಬಾಗಿಲನ್ನು ಸದಾ ತೆರೆದಿರುತ್ತದೆ. ಈ ಕ್ಯಾಂಪ್‌ನಲ್ಲಿ ನಾವಷ್ಟೇ ಸ್ನಾನ ಮಾಡುವುದಲ್ಲ ಆನೆಗಳಿಗೂ ಮಾಡಿಸಬಹುದು. ಆನೆಗಳ ಜತೆ ಸಂಭಾಷಣೆ ಮಾಡಬಹುದು, ಅವುಗಳನ್ನು ಹತ್ತಿರದಿಂದ ನೋಡುತ್ತ ನಿಲ್ಲಬಹುದು. ಅದರ ಆಶೀರ್ವಾದ ಪಡೆಯುವುದಂತೂ ಬೇರೆಯದ್ದೇ ಮಜಾ. ಈ ಜೆಎಲ್‌ಆರ್‌ ಶಿಬಿರ ಪ್ರವಾಸಿಗರಿಗೆ, ಕುಟುಂಬದ ಜತೆಸಮಯ ಕಳೆಯಲು ಹೋಗುವವರಿಗೆ, ಆರಾಮವಾಗ ಶಾಂತವಾಗಿ ಸಮಯ ಕಳೆಯುವವರಿಗೆಲ್ಲ ತುಂಬಾ ಫೇಮಸ್‌ ಆಗಿದೆ.

ಆನೆ ಅಂದ್ರೆ,ಎಲ್ಲರಿಗೂ ಪ್ರೀತಿ. ಜಾತ್ರೆ, ಹಬ್ಬದ ಕಾರ್ಯಕ್ರಮ, ರ್ಯಾಲಿ ಏನೇ ಇರಲಿ ಅಲ್ಲಿ ಆನೆ ಇದ್ದರೆ ಅಲ್ಲಿನ ಸಂಭ್ರಮ ಮತ್ತಷ್ಟು ಹೆಚ್ಚಾಗುತ್ತೆ. ದಸರಾವಂತೂ ಆನೆಗಳಿಂದಲೇ ಫೇಮಸ್‌. ಊರಲ್ಲಿ ಜಾತ್ರೆ ಜರುಗಿದಾಗ ಅಲ್ಲಿ, ಆನೆ ಇತ್ತು ಅಂದ್ರೆ, ಅದರ ಸುತ್ತ ನಿಲ್ಲುವವರ ಸಂಖ್ಯೆಯೂ ಹಾಗೇ, ಹೆಚ್ಚಿರುತ್ತೆ. ಆನೆ ಸೊಂಡಿಲಲ್ಲಿ ಸ್ವಲ್ಪ ಹಣ ಇಟ್ಟು, ಅದೇ ಸೊಂಡಿಲಿನಿಂದ ಆಶೀರ್ವಾದ ಮಾಡಿಸಿಕೊಳ್ಳುವುದು ಇದೆಲ್ಲ ವಯಸ್ಸಿನ ಯಾವುದೇ ಭೇದಭಾವವಿಲ್ಲದೇ ನಡೆಯುತ್ತಿರುತ್ತದೆ. ಆನೆಗೆ ದೊಡ್ಡ ಸೊಂಡಿಲು, ದೊಡ್ಡ ದೊಡ್ಡ ಕಿವಿ, ಒಂದಂತಸ್ತು ಮನೆಗಿಂತ ದೊಡ್ಡದಾದ ದೇಹವಿದ್ದರೂ ಮನುಷ್ಯ ನಾದವನು ಆನೆಗಳನ್ನು ಇಷ್ಟ ಪಡುತ್ತಾನೆ. ಮಕ್ಕಳೂ ಆನೆ ಮೇಲೆ ಕೂತು ಸವಾರಿ ಮಾಡಲು ಇಷ್ಟಪಡುತ್ತವೆ. ಆನೆ ಕಾಡಲ್ಲಿದ್ದಾಗ ಮಾತ್ರ ಜನ ನೋಡಿ ಹೆದರಬಹುದು. ಆದರೆ, ಅದೇ ಆನೆ ನಾಡಿನಲ್ಲಿ ಮಾವುತನ ಜತೆಗಿದ್ದರೆ? ಯಾವುದೋ ದೊಡ್ಡ ಮೆರವಣಿಗೆಯಲ್ಲಿ ಅತ್ತಿಂದಿತ್ತ ವಾಲಾಡುತ್ತ, ಗಾಂಭೀರ್ಯದಿಂದ ನಡೆಯುತ್ತಾ, ಆಗಾಗ ಸೊಂಡಿಲನ್ನು ಎತ್ತಿ ಘೀಳಿಡುವುದು, ಪಟಾಕಿ ಹಚ್ಚಿದಾಗ ಹೆದರುವುದು ಎಲ್ಲ ನೋಡಿರುತ್ತೀರಿ. ಹೆಣ್ಣುಮಕ್ಕಳು ಸೊಂಟವನ್ನು ಆ ಕಡೆ ಈ ಕಡೆ ಮಾಡುತ್ತ ನಡೆದರೆ ಅವರನ್ನು ಗಜಗಾಮಿನಿ ಎಂದು ಕರೆಯುತ್ತಾರೆ. ಅದೇ ಒಬ್ಬ ತುಂಬಾ ಗಂಭೀರವಾಗಿರುವವರನ್ನು ನೋಡಿ ಗಜಗಾಂಭೀರ್ಯ ಎಂದು ಕರೆಯುತ್ತಾರೆ. ಅದೇ ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಗಜಾನನನನ್ನು ಪೂಜಿಸುತ್ತೇವೆ. ಹಾಗೆ ಶುಕ್ರವಾರ ಗಜಲಕ್ಷ್ಮಿಯನ್ನು ಪೂಜಿಸುತ್ತೇವೆ. ವ್ಯತ್ಯಾಸ ತೋರಿಸಲು ಅಜ ಗಜ ಎನ್ನುತ್ತೇವೆ. ಭೀಮನಿಗೆ 10 ಸಾವಿರ ಗಜ ಬಲ ಇರುತ್ತಂತೆ. ಮಹಿಳೆಯರು ಉಟ್ಟುಕೊಳ್ಳುವ ಸೀರೆಯನ್ನು ಗಜಗಳಲ್ಲಿ ಅಳೆಯುತ್ತೇವೆ. ಹೀಗೆ ಆನೆಗಳ ಮೇಲೆ ನಮ್ಮ ಆಬ್ಸೆಶನ್‌ ಯಾವತ್ತೂ ಕಡಿಮೆಯಾಗಿಲ್ಲ. ಆಗ ಪುರಾಣದಲ್ಲೂ ಅಷ್ಟೇ, ಶಿವ ಗಣೇಶನ ಮುಖವನ್ನು ಕತ್ತರಿಸಿದ್ದಾಗ ಬೇರೆ ಪ್ರಾಣಿ ಮುಖ ಸಿಗದೆ ಆನೆಯ ಮುಖವನ್ನೇ ಅಂಟಿಸುತ್ತಾರೆ. ಇಂದ್ರನೂ ಬೇರೆ ಯಾವ ಪ್ರಾಣಿ ಸಿಗದೆ ಆನೆಯನ್ನೇ ತನ್ನ ವಾಹನವನ್ನು ಮಾಡಿಕೊಳ್ಳುತ್ತಾನೆ. ಉಫ್‌! ಆನೆಗಳ ಬಗ್ಗೆ ಎಷ್ಟೆಲ್ಲ ಕತೆಗಳಿವೆ ಶಭಾಷ್‌!

ಆನೆಗಳ ಬಗ್ಗೆ ಮಾತು ಯಾಕೆಂದರೆ, ಕರ್ನಾಟಕದಲ್ಲಿ ಆನೆಗಳಿಗೆಂದೇ ಪ್ರಖ್ಯಾತವಾದ ಸ್ಥಳವಿದೆ. ಅದರ ಹೆಸ್ರು ಸಕ್ರೆಬೈಲ್‌ ಆನೆಗಳ ಶಿಬಿರ ಅಂತ. ಸಕ್ಕರೆ ಸಾಮಾನ್ಯವಾಗಿ ಇರುವೆಗಳ ಬಯಲು, ಅದೇ ಈ ಸಕ್ರೆಬೈಲ್‌ ಇಲ್ಲಿ ಆನೆಗಳ ಬಯಲು. ಈ ಮೇಲೆ ಆನೆಗಳ ವರ್ಣನೆ ಇದೆಯಲ್ವ, ಅದಕ್ಕಿಂತ ಜಾಸ್ತಿ ವರ್ಣನೆ ಮಾಡಬಹುದಾದ ವಿಚಾರಗಳು ಈ ಸಕ್ರೆಬೈಲ್‌ ಆನೆ ಶಿಬಿರದಲ್ಲಿ ಸಿಗುತ್ತದೆ. ತುಂಗಭದ್ರಾ ನದಿಯ ತಟದಲ್ಲಿನ ಬಯಲಲ್ಲಿರುವ ಈ ಶಿಬಿರ ಹಲವಾರು ಆನೆಗಳ ಆಟ, ಪಾಠ, ಊಟ ವಸತಿಗಳಿಗೆ ʼಶಾಲೆʼಯಾಗಿದೆ. ಬೆಳ್‌ಬೆಳಗ್ಗೆ ತುಂಗಭದ್ರಾ ನದಿ ತಟದಲ್ಲಿ ಆನೆಗಳೆಲ್ಲ ಆಟವಾಡುತ್ತ, ಸೊಂಡಿಲಿನಿಂದ ನೀರನ್ನು ಚಿಮುಕಿಸಿಕೊಳ್ಳುತ್ತ, ಅದರ ಮಾವುತರು ಆನೆಗಳ ಮೈಯುಜ್ಜುತ್ತಾ, ಸಣ್ಣ ಸಣ್ಣ ಆನೆಮರಿಗಳು ಅದರ ತಾಯಿಯನ್ನು ಬೆಂಬಿಡದೆ ಪೀಡಿಸುತ್ತಾ ಇರುವ ದೃಶ್ಯಗಳು ಕಾಮನ್‌. ಸ್ನಾನ ಆದ ನಂತರ ಚಿಕ್ಕಮಕ್ಕಳ ಥರ, ಆನೆಯನ್ನು ಒಣಗಿಸಿ, ಅದರ ಕೂದಲುಗಳನ್ನು ಬಾಚಿ, ಪೌಡರ್‌ ಥರ ಬಣ್ಣವನ್ನು ಹಚ್ಚಿ, ಅವುಗಳ ತಿಂಡಿಗೆ ಸಿದ್ಧಮಾಡುತ್ತಾರೆ. ಅವುಗಳು ಊಟಮಾಡುವುದನ್ನೂ ನೀವು ನೋಡಬಹುದು. ನಿಮಗೆ ಗೊತ್ತಾ? ಆನೆಗಳಿಗೆ ತುಂಬಾ ಸಮೀಪದಲ್ಲಿ ನಿಂತು ಊಟ ಮಾಡಿಸಬಹುದು. ಆನೆ ಹಿಂಡುಗಳಲ್ಲಿ ನೀವು ಒಬ್ಬರಾಗಬಹುದು.

Untitled design (41)

ಸಕ್ರೆಬೈಲ್‌ ಆನೆ ಶಿಬಿರ ಶಿವಮೊಗ್ಗ ನಗರದಿಂದ 14 ಕಿಮೀ ದೂರವಿದ್ದು, ಆನೆಗಳ ಸಂರಕ್ಷಣೆಯ ಇತಿಹಾಸವನ್ನೇ ಹೊಂದಿದೆ. ಕರ್ನಾಟಕ ಅರಣ್ಯ ಇಲಾಖೆಯಿಂದ ಶುರುವಾದ ಈ ಶಿಬಿರ ಋಜ್ಯದ ಆನೆಗಳಿಗೆ ಟ್ರೇನಿಂಗ್‌ ಮಾಡುವಲ್ಲಿ ಅತಿ ದೊಡ್ಡ ಶಿಬಿರವೂ ಹೌದು. ಈ ಶಿಬಿರದಲ್ಲಿ ಕರ್ನಾಟಕದಾದ್ಯಂತ ಆನೆಗಳ ಬಿಡಾರವಿದ್ದು, ಅದಕ್ಕೆ ಯಾವುದಾದರೂ ರೋಗವಿದ್ದರೆ, ಅದರ ಉಪಚಾರ ಮಾಡುತ್ತಾರೆ. ಅದಕ್ಕೆ ಪೋಷಣೆಯಾಗಿಲ್ಲವೆಂದರೆ ಅದನ್ನೂ ನೋಡಿಕೊಳ್ಳುತ್ತಾರೆ. ಯಾವುದಾದರೂ ಆನೆ ಮಾತುಕೇಳಲಿಲ್ಲವೆಂದರೆ, ಮದ ಏರುವ ಹಾಗೇನಾದರೂ ಮಾಡುತ್ತಿದ್ದರೆ? ಇಲ್ಲಿನ ಮಾವುತರು ಅದನ್ನು ಸರಿಮಾಡುತ್ತಾರೆ. ಇಂಥ ಕಾರಣಗಳಿಂದಲೇ ಸಕ್ರೆಬೈಲ್‌ ಪ್ರಾಣಿಗಳನ್ನು ಇಷ್ಟ ಪಡುವವರಿಗೆ ಕಾಡನ್ನು ಇಷ್ಟಪಡುವವರಿಗೆ ಇಷ್ಟವಾಗುತ್ತಿದೆ.

ಇಷ್ಟೆಲ್ಲ ಇದ್ದ ಈ ಜಾಗದಲ್ಲಿ ಜೆಎಲ್‌ಆರ್‌ ಇಲ್ಲ ಅಂತ ಹೇಳೋಕಾಗುತ್ತಾ? ಇದೆ! ಸಕ್ರೆಬೈಲ್‌ಗೆ ಬರುವ ಪ್ರವಾಸಿರಿಗೆ, ವನ್ಯಜೀವಿಗಳನ್ನು ಇಷ್ಟಪಡುವವರಿಗೆ, ಅಥವಾ ಎಲ್ಲವೂ ಬೋರ್‌ ಆಗಿ, ಸ್ವಲ್ಪ ಬದಲಾವಣೆ ಬೇಕೆಂದು ಬರುವವರಿಗೆ, ಜೆಎಲ್‌ಆರ್‌ ತನ್ನ ಬಾಗಿಲನ್ನು ಸದಾ ತೆರೆದಿರುತ್ತದೆ. ಈ ಕ್ಯಾಂಪ್‌ನಲ್ಲಿ ನಾವಷ್ಟೇ ಸ್ನಾನ ಮಾಡುವುದಲ್ಲ ಆನೆಗಳಿಗೂ ಮಾಡಿಸಬಹುದು. ಆನೆಗಳ ಜತೆ ಸಂಭಾಷಣೆ ಮಾಡಬಹುದು, ಅವುಗಳನ್ನು ಹತ್ತಿರದಿಂದ ನೋಡುತ್ತ ನಿಲ್ಲಬಹುದು. ಅದರ ಆಶೀರ್ವಾದ ಪಡೆಯುವುದಂತೂ ಬೇರೆಯದ್ದೇ ಮಜಾ. ಈ ಜೆಎಲ್‌ಆರ್‌ ಶಿಬಿರ ಪ್ರವಾಸಿಗರಿಗೆ, ಕುಟುಂಬದ ಜತೆಸಮಯ ಕಳೆಯಲು ಹೋಗುವವರಿಗೆ, ಆರಾಮವಾಗ ಶಾಂತವಾಗಿ ಸಮಯ ಕಳೆಯುವವರಿಗೆಲ್ಲ ತುಂಬಾ ಫೇಮಸ್‌ ಆಗಿದೆ. ನೀವು ಈ ಶಿಬಿರಕ್ಕೆ ಭೇಟಿನೀಡಿದ ತಕ್ಷಣ ಒಳ್ಳೆಯ ವೆಲ್‌ಕಮ್‌ ಡ್ರಿಂಕ್‌ ಕೊಡುತ್ತಾರೆ. ಅದಾದ ಮೇಲೆ ಚೆಕ್‌ಇನ್‌ ಆಗಿ, ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೇನೆಂದರೆ, ಸ್ಟಾಫ್‌ಗಳ ಆತಿಥ್ಯ. ಬಾಯಿ ರುಚಿಯನ್ನು ಹೆಚ್ಚಿಸುವ ಊಟ ಮಾಡಿದಮೇಲೆ ಸ್ವಲ್ಪ ವಿಶ್ರಾಂತಿ ಮಾಡಿ, ಇಲ್ಲೇ ಸಮೀಪದಲ್ಲಿರುವ ಶೆಟ್ಟಿಹಳ್ಳಿ ವನ್ಯಜೀವಿ ಶಿಬಿರಕ್ಕೆ ವಾಕಿಂಗ್‌ ಹೋಗಬಹುದು. ಈ ಕ್ಯಾಂಪ್‌ ಹಸಿರು ಕಾಡಿನ ಮಧ್ಯದಲ್ಲಿ ಇರುವುದರಿಂದ ಒಳ್ಳೊಳ್ಳೆ ಬ್ರೆತ್‌ಟೇಕಿಂಗ್‌ ಸೀನರಿಗಳು ಕಾಣುತ್ತದೆ. ಇಲ್ಲಿ ಪಕ್ಷಿವೀಕ್ಷಣೆಗೆ, ಪರಿಸರ ನಡಿಗೆಗೆ, ನಿಮ್ಮ ಪ್ರೀತಿ ಪಾತ್ರರ ಜತೆಗೆ ನಿಸರ್ಗದಲ್ಲಿ ಸಮಯ ಕಳೆಯಲು ಇಲ್ಲಿಗೆ ಹೋಗಬಹುದು. ಅದರ ಮರುದಿನ ಆನೆ ಶಿಬಿರಕ್ಕೆ ಪಯಣ.

ಇಲ್ಲಿ ಮಾಡುವ ಚಟುವಟಿಕೆಗಳು

ಪಕ್ಷಿ ವೀಕ್ಷಣೆ: ಈ ಶಿಬಿರ ಹಲವಾರು ಪ್ರಭೇದದ ಪಕ್ಷಿಗಳನ್ನು ಆಕರ್ಷಿಸುವುದರಿಂದ ಇದು, ಪಕ್ಷಿ ವೀಕ್ಷಕರಿಗೆ ಒಂದು ರೀತಿಯ ಸ್ವರ್ಗ.

ಪರಿಸರ ನಡಿಗೆ: ಈ ಶಿಬಿರದಲ್ಲಿ ಬರೀ ಆನೆಯನ್ನು ವೀಕ್ಷಿಸುವುದಷ್ಟೇ ಅಲ್ಲ, ಜೆಎಲ್‌ಆರ್‌ನಿಂದ ಇಲ್ಲಿನ ಶೆಟ್ಟಿಹಳ್ಳಿ ಅರಣ್ಯಕ್ಕೆ ಟ್ರೆಕ್ಕಿಂಗ್‌ ಹೋಗಬಹುದು. ಅತಿಥಿಗಳು ಹಸಿರು ಹೊದಿಕೆಯಲ್ಲಿರುವ ವನ್ಯಜೀವಿಗಳನ್ನು ವೀಕ್ಷಿಸಿ, ಇಲ್ಲಿನ ಸಸ್ಯ ಮತ್ತು ಪ್ರಾಣಿ ಜಗತ್ತಿನ ಬಗ್ಗೆ ತಿಳಿಯಬಹುದು. ಹೋದಲ್ಲೆಲ್ಲ ನಿಸರ್ಗದ ಸೌಂದರ್ಯವನ್ನು ಅನುಭವಿಸುತ್ತ, ಫೊಟೋ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾ. ನಿಮ್ಮ ಮೆಮೊರಿ ಚಿಪ್‌, ಮತ್ತು ನಿಮ್‌ ಮಿದುಳಿನ ಮೆಮೊರಿಯನ್ನು ತುಂಬಿಸಿಕೊಂಡು ಹೋಗಬಹುದು.

ಆನೆಗಳ ಸ್ನಾನ: ಆನೆಗಳು ಸ್ನಾನ ಮಾಡುವುದೆಂದರೆ, ಚಿಕ್ಕಮಕ್ಕಳು ಸ್ನಾನ ಮಾಡಿದಂತೆ. ಇಂಥ ಸ್ನಾನವನ್ನು ಸಮೀಪದಲ್ಲೇ ನಿಂತು ನೋಡಬಹುದು. ಗಾಜನೂರು ಆಣೆಕಟ್ಟಿನ ಹಿನ್ನೀರಿನಲ್ಲಿ ಆನೆಗಳು ಸ್ನಾನ ಮಾಡುತ್ತಿರುತ್ತದೆ. ಇಲ್ಲಿ ಸ್ನಾನದಲ್ಲಿ ಆನೆಗಳಿಗೆ ಸ್ಕ್ರಬ್‌ ಮಾಡುವುದು, ನೀರಿನಿಂದ ಮೈ ತೊಳೆಯುವುದು ಮಾಡಬೇಕು. ಆ ಅನುಭವ ಅಮೂಲ್ಯ.

ವನ್ಯಜೀವಿ ಚಿತ್ರ ವೀಕ್ಷಣೆ: ಇಲ್ಲಿನ ಅತಿಥಿಗಳ ಜತೆ ಸೇರಿ ವನ್ಯಜೀವಿ ಚಿತ್ರ ವೀಕ್ಷಿಸಬಹುದು. ಇದು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ನಿಮ್ಮ ಜ್ಞಾನವನ್ನು ವೃದ್ಧಿಸುತ್ತದೆ.

ಫೈರ್‌ಕ್ಯಾಂಪ್‌: ರಾತ್ರಿ ಸಮಯದಲ್ಲಿ ಎಲ್ಲ ಅತಿಥಿಗಳು ಸುತ್ತ ಕುಳಿತು ಹರಟೆ ಹೊಡೆಯಬಹುದು.

ವಾಸ್ತವ್ಯ

ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡುವವರು ಆರಾಮದಾಯಕವಾದ ಕಾಟೇಜ್‌ಗಳು ಮತ್ತು ಸುಸಜ್ಜಿತ ಟೆಂಟ್‌ಗಳು ಸೇರಿದಂತೆ ವಿವಿಧ ವಸತಿ ಆಯ್ಕೆಗಳಿವೆ. ಕೊಠಡಿಗಳು ಸ್ವಚ್ಛ ಮತ್ತು ಹಲವಾರು ಸೌಕರ್ಯಗಳಿಂದ ತುಂಬಿವೆ. ಶಿಬಿರವು ಆರಾಮದಾಯಕ ಮತ್ತು ಪರಿಸರ ಸ್ನೇಹಿ ವಸತಿ ಆಯ್ಕೆಗಳನ್ನು ಒದಗಿಸುತ್ತದೆ, ಇದು ನೈಸರ್ಗಿಕ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸರಾಗವಾಗಿ ಬೆರೆಯುತ್ತದೆ. ಈ ವಿಶಿಷ್ಟ ವಸತಿಗಳಲ್ಲಿ ಉಳಿಯುವುದರಿಂದ ಅಗತ್ಯ ಸೌಲಭ್ಯಗಳನ್ನು ಆನಂದಿಸುತ್ತಾ ಅರಣ್ಯದ ನಡುವೆ ವಾಸಿಸುವ ಮೋಡಿಯನ್ನು ಅನುಭವಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಈ ಸ್ಥಳವನ್ನು ಆದ್ಯತೆಯನ್ನಾಗಿ ಮಾಡುವುದು ನಿಮ್ಮನ್ನು ನೋಡಿಕೊಳ್ಳುವ ಸಹಾಯಕ ಸಿಬ್ಬಂದಿ. ಶಿಬಿರದ ಸಿಬ್ಬಂದಿಯನ್ನು ಅವರ ಆತ್ಮೀಯ ಆತಿಥ್ಯ ಮತ್ತು ಗಮನ ನೀಡುವ ಸೇವೆಗಾಗಿ ಹೆಚ್ಚಾಗಿ ಪ್ರಶಂಸಿಸಲಾಗುತ್ತದೆ, ಅತಿಥಿಗಳು ತಮ್ಮ ವಾಸ್ತವ್ಯದ ಉದ್ದಕ್ಕೂ ಸ್ವಾಗತ ಮತ್ತು ಕಾಳಜಿಯನ್ನು ಅನುಭವಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಉಪಾಹಾರ, ಊಟ ಮತ್ತು ಭೋಜನವನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಆಹಾರವು ಸರಳವಾದರೂ ರುಚಿಕರವಾಗಿದೆ, ಹೆಚ್ಚಾಗಿ ಸ್ಥಳೀಯ ಪಾಕಪದ್ಧತಿಯನ್ನು ಒಳಗೊಂಡಿರುತ್ತದೆ. ಊಟವನ್ನು ವಿಶಿಷ್ಟವಾದ JLR ಬಫೆ ಶೈಲಿಯಲ್ಲಿ ನೀಡಲಾಗುತ್ತದೆ. ಅವರ ವಸತಿಯು ಅದರ ಪರಿಸರ ಸ್ನೇಹಿ ವಿನ್ಯಾಸ ಮತ್ತು ನೈಸರ್ಗಿಕ ಸುತ್ತಮುತ್ತಲಿನೊಂದಿಗೆ ಏಕೀಕರಣಕ್ಕಾಗಿ ಹೆಚ್ಚಾಗಿ ಪ್ರಶಂಸಿಸಲಾಗುತ್ತದೆ. ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದ್ದರೂ ಒದಗಿಸಲಾದ ಆರಾಮದಾಯಕ ಸೌಲಭ್ಯಗಳನ್ನು ಸಂದರ್ಶಕರು ಮೆಚ್ಚುತ್ತಾರೆ.

Untitled design (40)

ಸೀಸನ್‌

ಈ ಶಿಬಿರವು ವರ್ಷಪೂರ್ತಿ ತೆರೆದಿರುತ್ತದೆ ಮತ್ತು ಯಾವುದೇ ಸಮಯ ಭೇಟಿ ನೀಡಲು ಉತ್ತಮ ಸಮಯ. ಆದಾಗ್ಯೂ, ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭದ ತಿಂಗಳುಗಳು, ಇದು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ ನಡುವೆ ಬರುತ್ತದೆ. ಈ ಸಮಯದಲ್ಲಿ, ಹವಾಮಾನವು ಆಹ್ಲಾದಕರವಾಗಿರುತ್ತದೆ,

ಪ್ಯಾಕೇಜ್‌ಗಳು

ಮರದ ಕಾಟೇಜ್ ಪ್ಯಾಕೇಜ್

ಟೆಂಟ್‌ ಪ್ಯಾಕೇಜ್‌ಗಳು

ಡಾರ್ಮಿಟರಿ ಪ್ಯಾಕೇಜ್‌

ಈ ಪ್ಯಾಕೇಜ್‌ನಲ್ಲಿ ಸ್ನಾನಗೃಹದೊಂದಿಗೆ ವಾಸ್ತವ್ಯ, ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ, ಸಕ್ರೆಬೈಲ್ ಶಿಬಿರದಲ್ಲಿ ಆನೆಗಳ ಸಂವಹನ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯಕ್ಕೆ ಚಾರಣ/ಪರಿಸರ ನಡಿಗೆ, ಇತರ ಸೌಲಭ್ಯಗಳಲ್ಲಿ ಬಿಸಿನೀರಿನ ಸೌಲಭ್ಯಗಳು, ಆಸನ ಪ್ರದೇಶ, ಬಾಲ್ಕನಿ ಮತ್ತು ಕಾಫಿ ತಯಾರಕ ಸೇರಿವೆ.

ದಿನಚರಿ

ದಿನ 1:

1:00 pm - ಚೆಕ್-ಇನ್, ಸೆಟ್ಲ್ ಡೌನ್ ಮತ್ತು ಫ್ರೆಶ್ ಅಪ್: ಶಿಬಿರಕ್ಕೆ ಆಗಮಿಸಿದ ನಂತರ, ಅತಿಥಿಗಳು ಚೆಕ್ ಇನ್ ಮಾಡಲಾಗುತ್ತದೆ ಮತ್ತು ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಅವರ ವಸತಿ ಸೌಕರ್ಯ ಮತ್ತು ಫ್ರೆಶ್ ಅಪ್ ಮಾಡಲು ಸಮಯವನ್ನು ನೀಡಲಾಗುತ್ತದೆ.

1:30 pm - 2:30 pm – ಗೋಲ್ ಘರ್‌ನಲ್ಲಿ ಊಟ: ಶಿಬಿರದೊಳಗಿನ ಊಟದ ಪ್ರದೇಶವಾದ ಗೋಲ್ ಘರ್‌ನಲ್ಲಿ ರುಚಿಕರವಾದ ಊಟವನ್ನು ಆನಂದಿಸಲು ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.

4:00 pm - 6:00 pm - ಪ್ರಕೃತಿ ನಡಿಗೆ/ಆನೆ ವೀಕ್ಷಣೆ/ಪಕ್ಷಿ ವೀಕ್ಷಣೆ: ಈ ಸಮಯದಲ್ಲಿ, ಶಿಬಿರದ ಪ್ರಕೃತಿಶಾಸ್ತ್ರಜ್ಞರು ಸಂದರ್ಶಕರನ್ನು ಪ್ರಕೃತಿ ನಡಿಗೆ, ಆನೆ ಇರುವ ಸ್ಥಳಕ್ಕೆ ಮತ್ತು ಪಕ್ಷಿ ವೀಕ್ಷಣೆ ವಿಹಾರಕ್ಕೆ ಕರೆದೊಯ್ಯುತ್ತಾರೆ. ಪ್ರಕೃತಿಶಾಸ್ತ್ರಜ್ಞರು ಕಾಡು, ಅದರ ನಿವಾಸಿಗಳು ಮತ್ತು ಅಲ್ಲಿ ವಾಸಿಸುವ ವಿವಿಧ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳುತ್ತಾರೆ.

6:30pm - 7:30pm - ವನ್ಯಜೀವಿ ಚಲನಚಿತ್ರ ಪ್ರದರ್ಶನ: ಅತಿಥಿಗಳು ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನು ಆನಂದಿಸಬಹುದು, ಅಲ್ಲಿ ವೈವಿಧ್ಯಮಯ ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರಗಳು ಅಥವಾ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

7:30 - 8:30 pm- ಫೈರ್‌ಕ್ಯಾಂಪ್‌: ಅತಿಥಿಗಳಿಗಾಗಿ ಫೈರ್‌ಕ್ಯಾಂಪ್‌ ಮಾಡುತ್ತಾರೆ. ಇಲ್ಲಿಗೆ ಬಂದ ಅತಿಥಿಗಳು ಇದರ ಸುತ್ತ ಕೂತು ಹರಟಬಹುದು, ವಿಶ್ರಾಂತಿ ಪಡೆಯಬಹುದು ಮತ್ತು ಬೇರೆ ಅತಿಥಿಗಳು ಮತ್ತು ಶಿಬಿರದ ಸಿಬ್ಬಂದಿಯೊಂದಿಗೆ ಮಾತನಾಡಬಹುದು. ಕಾಡಿನ ಬಗ್ಗೆ ಮತ್ತು ದಿನದ ಚಟುವಟಿಕೆಗಳ ಬಗ್ಗೆ ಕಥೆಗಳು, ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಇದು ಉತ್ತಮ ಸಮಯ.

8:30 - 9:30pm ಊಟ ಮತ್ತು ಕಾಡಿನ ಕಥೆಗಳು: ಗೋಲ್ ಘರ್ ನಲ್ಲಿ ಊಟ ಮಾಡುವಾಗ, ಅತಿಥಿಗಳು ಇತರ ಅತಿಥಿಗಳು ಮತ್ತು ಸಿಬ್ಬಂದಿಯೊಂದಿಗೆ ಕಾಡಿನಲ್ಲಿ ತಮ್ಮ ಅನುಭವಗಳ ಕಥೆಗಳನ್ನು ಹೇಳುತ್ತ ಮತ್ತು ಸುಖ ದುಖ ಮಾತನಾಡುತ್ತ ಸಮಯ ಕಳೆಯಬಹುದು.

ದಿನ 2:

6:00 - 6:15 AM- ಎಚ್ಚರ/ಚಹಾ/ಕಾಫಿ: ಅತಿಥಿಗಳನ್ನು ಬೆಳಗ್ಗೆ ಬೇಗನೆ ಎಬ್ಬಿಸಲಾಗುತ್ತದೆ ಮತ್ತು ಅವರ ದಿನವನ್ನು ಪ್ರಾರಂಭಿಸಲು ಚಹಾ ಅಥವಾ ಕಾಫಿಯನ್ನು ನೀಡಲಾಗುತ್ತದೆ.

6:30 - 9:30 AM- ಶೆಟ್ಟಿಹಳ್ಳಿ ವನ್ಯಜೀವಿ ಮತ್ತು ಆನೆಗಳ ಜತೆ ಚಾರಣ: ಈ ಸಮಯದಲ್ಲಿ, ಪ್ರವಾಸಿಗರು ಶೆಟ್ಟಿಹಳ್ಳಿ ವನ್ಯಜೀವಿ ಪ್ರದೇಶದಲ್ಲಿ ಚಾರಣ ಕೈಗೊಳ್ಳುತ್ತಾರೆ. ಇದು ನೈಸರ್ಗಿಕ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸಲು, ವನ್ಯಜೀವಿಗಳನ್ನು ವೀಕ್ಷಿಸಲು ಮತ್ತು ಆನೆಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನೋಡಬಹುದು. ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಒಳನೋಟಗಳು ಮತ್ತು ಮಾಹಿತಿಯನ್ನು ಒದಗಿಸುವ ಪ್ರಕೃತಿತಜ್ಞರು ಚಾರಣದೊಂದಿಗೆ ಇರುತ್ತಾರೆ. ಆನೆಗಳೊಂದಿಗೆ ಸಂವಹನ ನಡೆಸಲು ಮತ್ತು ಅವುಗಳ ಸ್ನಾನದ ಅವಧಿಯನ್ನು ಆನಂದಿಸಲು ನಂತರ ಆನೆ ಶಿಬಿರಕ್ಕೆ ಭೇಟಿ ನೀಡಿ.

9:30 - 10:15 AM- ಉಪಹಾರ: ಅತಿಥಿಗಳಿಗೆ ಹೃತ್ಪೂರ್ವಕ ಉಪಹಾರವನ್ನು ನೀಡಲಾಗುತ್ತದೆ, ಇದು ಅವರ ಶಕ್ತಿಯನ್ನು ತುಂಬಲು ಮತ್ತು ರುಚಿಕರವಾದ ಊಟವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.

10:30 AM- ಚೆಕ್ಔಟ್: ಉಪಾಹಾರದ ನಂತರ, ಅತಿಥಿಗಳು ತಮ್ಮ ಚೆಕ್ಔಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಮಯ.

ಸಂಪರ್ಕ

ಸಕ್ರೆಬೈಲ್ ಆನೆ ಶಿಬಿರ, ಸಕ್ರೆಬೈಲ್, ಗಾಜನೂರು

ಶಿವಮೊಗ್ಗ- 577202

ಮ್ಯಾನೇಜರ್: ಕೆ.ಎಂ. ಪ್ರವೀಣ್ ಕುಮಾರ್

ಬುಕಿಂಗ್ ವಿಚಾರಣೆ ಮತ್ತು ಸಂಪರ್ಕ ಸಂಖ್ಯೆ:: 9480887180

ಇಮೇಲ್ ಐಡಿ: info@junglelodges.com

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!