Tuesday, October 28, 2025
Tuesday, October 28, 2025

ಅತ್ತ ನದಿ ಇತ್ತ ಶರಧಿ!

ಈ ರೆಸಾರ್ಟ್‌ ಬರೀ ನೋಡಿ ಅನುಭವಿಸುವುದಕ್ಕಷ್ಟೇ ಅಲ್ಲ. ಇಲ್ಲಿ ಇತಿಹಾಸ ಹಲವಾರು ಮಜಲುಗಳನ್ನು ದಾಟಿದೆ. ಇಲ್ಲಿನ ಸದಾಶಿವಗಡ ಕೋಟೆಯನ್ನು ಸೋಂದಾ ಮನೆತನದ ರಾಜರು ಕಟ್ಟಿಸಿದ್ದರು. ಮುಂದೆ ಶಿವಾಜಿ ಮಹರಾಜ ಈ ಕೋಟೆಯನ್ನು ಗೆದ್ದು ತನ್ನ ಕೆಲವು ಸಮಯವನ್ನೂ ಕಳೆದಿದ್ದ. 18ನೇ ಶತಮಾನದಲ್ಲಿ ಕಟ್ಟಿಸಿದ ಈ ಕೋಟೆ ಇಲ್ಲಿಯವರೆಗೂ ಹಲವಾರು ವಿಚಾರಗಳನ್ನು ನೋಡಿ, ಈಗ ಜಂಗಲ್‌ ಲಾಡ್ಜ್‌ಸ್‌ ಮತ್ತು ರೆಸಾರ್ಟ್ಸ್‌ನವರಿಂದ ಹಲವಾರು ಸಾಮಾನ್ಯ ಜನರಿಗೆ ಅಲ್ಲಿ ವಾಸ್ತವ್ಯ ಹೂಡುವ ಹಾಗೆ ಮಾಡಿದ್ದಾರೆ.

ದೇವಬಾಗ್‌ ಬೀಚ್‌ ರೆಸಾರ್ಟ್‌ ಬಗ್ಗೆ ನಿಮಗೆ ಗೊತ್ತಿತಿರಬಹುದು. ಆದರೆ ಅದರ ಸಮೀಪದಲ್ಲೇ ಅಂದರೆ 5ಕಿಮೀ ದೂರದಲ್ಲಿ ಮತ್ತೊಂದು ರೆಸಾರ್ಟ್‌ ಪರಿಚಯಿಸುತ್ತಿದ್ದೇವೆ. ಅದರ ಹೆಸರು ಸದಾಶಿವಗಡ ಸೀ ವ್ಯೂ ರೆಸಾರ್ಟ್‌!

ಇವೆರಡು ರೆಸಾರ್ಟ್‌ಗಳು ಅಕ್ಕ ಪಕ್ಕದಲ್ಲಿದ್ದರೂ, ಇವೆರಡೂ ರೆಸಾರ್ಟ್‌ಗಳನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿದ್ದರೂ ಈ ಎರಡೂ ರೆಸಾರ್ಟ್‌ಗಳ ಸಿಬ್ಬಂದಿವರ್ಗ ಬೇರೆ. ಥೀಮ್‌ ಬೇರೆ, ವೈಬ್ಸ್‌ ಬೇರೆ, ನೋಡುವ ನೋಟಗಳೂ ಬೇರೆ ಬೇರೆ. ಆ ರೆಸಾರ್ಟ್‌ ಬರೀ ಸಮುದ್ರದ ಮುಂದೆಯಿದ್ದರೆ, ಇದು ಸಮುದ್ರ ಮತ್ತು ನದಿ ಎರಡೂ ಕಾಣಿಸುವ ಸ್ಥಳದಲ್ಲಿದೆ. ವಿಶೇಷವೆಂದರೆ ಇದು ಇರುವುದು ಸದಾಶಿವಗಡ ಕೋಟೆಯಲ್ಲಿ.

ಸದಾಶಿವಗಡ ರೆಸಾರ್ಟ್‌ ಬಗ್ಗೆ ತಿಳಿಯಬೇಕಾ?

ಈ ರೆಸಾರ್ಟ್‌ ಕಾಳಿ ನದಿ ಮತ್ತು ಅರೇಬಿಯನ್ ಸಮುದ್ರದ ಸಂಗಮದ ಮೇಲೆ, ಇತಿಹಾಸದ ಹಲವು ಮಜಲುಗಳನ್ನು ಹೊತ್ತು. ತನ್ನ ದಾರಿ, ಮೆಟ್ಟಿಲು ಕಮಾನುಗಳಲ್ಲಿ ಶತಮಾನಗಳಿಂದ ಸೂರ್ಯನ ಕಿರಣಗಳನ್ನು ಅರಗಿಸಿಕೊಳ್ಳುತ್ತ. ದಿನದಿಂದ ದಿನಕ್ಕೆ-ಒಬ್ಬರಿಂದ ಮತ್ತೊಬ್ಬರಿಗೆ ಪರಿಚಯವಾಗುತ್ತಲೇ ಬರುತ್ತಿರುವ ಸ್ಥಳ. ಸದಾಶಿವಗಡ ಎಂದೂ ಮರೆಯಲಾಗದಂಥ ಅನುಭವ ನೀಡುತ್ತದೆ. ಇಲ್ಲಿನ ಸೀ ವ್ಯೂ ರೆಸಾರ್ಟ್ ನೈಸರ್ಗಿಕ ಸೌಂದರ್ಯದ ಜತೆಗೆ ಹಳ್ಳಿಗಾಡಿನ ಸೌಕರ್ಯಗಳನ್ನು ಹೊಂದಿರುವ ಜಂಗಲ್ ಲಾಡ್ಜಸ್ & ರೆಸಾರ್ಟ್ಸ್ (ಜೆಎಲ್ಆರ್)ನ ಆಸ್ತಿ.

sadashivgad resort  3

ಗೋವಾದ ಅಣ್ತಮ್ಮನಂತಿರುವ ಕಾರವಾರದಲ್ಲಿರುವ ಈ ರೆಸಾರ್ಟ್‌ ಪ್ರಕೃತಿಯ ನಡುವೆ ಸಮುದ್ರದ ಹತ್ತಿರದಲ್ಲಿದೆ. ಗೋವಾ ಕೂಡ ತುಂಬಾ ದೂರವೇನಿಲ್ಲ. ಇಂಥ ರೆಸಾರ್ಟ್‌ನಲ್ಲಿ ತಂಗಿದಾಗ ಮೊದಲು ಮರೆಯುವುದು ನಮ್ಮ ಫೋನ್‌ಗಳನ್ನು. ಅದಾದ ಮೇಲೆ ಕೆಲಸದಲ್ಲಿ ಬರುವ ಟೆನ್ಷನ್‌ಗಳು, ಯಾವುದೇ ಬೇಜಾರು ಹೀಗೆ ನಮ್‌ ಟಾಕ್ಸಿಕ್‌ ಭಾವನೆಗಳನ್ನೆಲ್ಲ ಮರೆತು, ಮನಸ್ಸಿನಲ್ಲಿ ಸುಂದರ ಅನುಭೂತಿಯನ್ನು ಹೊತ್ತು. ಒಳ್ಳೆ ಸಮಯವನ್ನು ಕಳೆಯಬಹುದು. ಅದರ ಜತೆಗೆ ಬೆಳಗ್ಗೆ ನಾವು ಏಳಲು ಪ್ರತಿದಿನದ ಅಲಾರ್ಮ್‌ ಬೇಕಿಲ್ಲ, ಸೂರ್ಯ ಉದಯಿಸುವ ವೇಳೆ ಕೋಗಿಲೆ, ಖಗಗಳ ಗಾನ. ನದಿಯ ಅಲೆಗಳ ಕಂಪಿನ ಶಬ್ದ, ಆಗ ತಾನೆ ತನ್ನ ದಿನವನ್ನು ಶುರುಮಾಡಲು ಭೂಮಿಗೆ ಬಂದ ಸೂರ್ಯ ಎಲ್ಲರೂ ಸೇರಿ ನಿಮ್ಮ ಸಿಹಿ ಕನಸಿಗೆ ಡಿಸ್ಟರ್ಬ್‌ ಮಾಡುತ್ತಾರೆ ಅಂದುಕೊಳ್ಳಬೇಡಿ. ನಿಮ್ಮನ್ನು ಎಚ್ಚರಗೊಳಿಸಿ ಕನಸಿನಲ್ಲೂ ಸಿಗದ ಸೊಬಗನ್ನು ತೋರಿಸಲು ಸಿದ್ಧಗೊಳಿಸುತ್ತಾರೆ.

ಈ ರೆಸಾರ್ಟ್‌ ಬರೀ ನೋಡಿ ಅನುಭವಿಸುವುದಕ್ಕಷ್ಟೇ ಅಲ್ಲ. ಇಲ್ಲಿ ಇತಿಹಾಸ ಹಲವಾರು ಮಜಲುಗಳನ್ನು ದಾಟಿದೆ. ಇಲ್ಲಿನ ಸದಾಶಿವಗಡ ಕೋಟೆಯನ್ನು ಸೋಂದಾ ಮನೆತನದ ರಾಜರು ಕಟ್ಟಿಸಿದ್ದರು. ಮುಂದೆ ಶಿವಾಜಿ ಮಹರಾಜ ಈ ಕೋಟೆಯನ್ನು ಗೆದ್ದು ತನ್ನ ಕೆಲವು ಸಮಯವನ್ನೂ ಕಳೆದಿದ್ದ. 18ನೇ ಶತಮಾನದಲ್ಲಿ ಕಟ್ಟಿಸಿದ ಈ ಕೋಟೆ ಇಲ್ಲಿಯವರೆಗೂ ಹಲವಾರು ವಿಚಾರಗಳನ್ನು ನೋಡಿ, ಈಗ ಜಂಗಲ್‌ ಲಾಡ್ಜ್‌ಸ್‌ ಮತ್ತು ರೆಸಾರ್ಟ್ಸ್‌ನವರಿಂದ ಹಲವಾರು ಸಾಮಾನ್ಯ ಜನರಿಗೆ ಅಲ್ಲಿ ವಾಸ್ತವ್ಯ ಹೂಡುವ ಹಾಗೆ ಮಾಡಿದ್ದಾರೆ.

ಇಲ್ಲಿನ ಕೊಠಡಿಗಳ ಬಗ್ಗೆ ಜಾಸ್ತಿ ಮಾತನಾಡೋದೇ ಬೇಡ. ಈ ರೆಸಾರ್ಟ್‌ ಇರುವುದು ಕೋಟೆಯಲ್ಲಾದರೂ, ಎಲ್ಲ ಸವಲತ್ತುಗಳನ್ನು ಹೊಂದಿದೆ. ಇಲ್ಲಿರುವ ಕೊಠಡಿಗಳು ಕೆಲವು ನದಿಯ ಕಡೆಗೆ ಮುಖ ಮಾಡಿದ್ದರೆ, ಇನ್ನು ಕೆಲವು ಸಮುದ್ರದೆಡೆಗೆ ಮುಖ ಮಾಡಿವೆ. ಬೆಳಗ್ಗೆ ಎದ್ದು ನೋಡಿದಾಗ ನೀರಿನ ಮೇಲಿನ ಸೂರ್ಯನ ಕಿರಣಗಳನ್ನು ಮೈ ಮೇಲೆ ಹೊತ್ತು ಕಿಟಕಿಯ ಮೂಲಕ ಸೂರ್ಯನ ತಾಪವನ್ನು ಸೂಸುವುದು ನಿಮ್ಮ ಮೊದಲ ಅನುಭೂತಿ. ನೀವೇನಾದರೂ ಪ್ರಯಾಣದ ಬಗ್ಗೆ ಜಾಸ್ತಿ ಪ್ರೀತಿಹೊಂದಿದ್ದರೆ, ಫೊಟೋಗ್ರಫರ್‌ ಆಗಿದ್ದರೆ ನಿಮ್ಮ ಕ್ಯಾಮೆರಾದ ಮೆಮೊರಿಕಾರ್ಡ್‌ ಇಲ್ಲಿನ ಫೊಟೋಗಳಿಂದಲೇ ತುಂಬಿ ತುಳುಕುತ್ತದೆ. ಕಿಟಕಿಯ ಹೊರಗೆ ಹಣುಕಿ ಹಾಕಿದಾಗ ಸಮುದ್ರದ ಮೇಲೆ ಇರುವೆಗಳಂತೆ ಕಾಣುವ ದೋಣಿಗಳು, ಒಂದೊಳ್ಳೆ ನೋಟ ಸಿಗುತ್ತದೆ.

ಇಕೋ ಫ್ರೆಂಡ್ಲಿ ಕೊಠಡಿಗಳಿದ್ದು, ಸ್ವಚ್ಛ ಮತ್ತು ಸುಂದರವಾಗಿರುವ ವಾತಾವರಣವನ್ನು ಹೊಂದಿದೆ. ಸ್ನೇಹಪರ ಸಿಬ್ಬಂದಿಗಳು, ಒಳ್ಳೆಯ ಆಹಾರಗಳೆಲ್ಲ ಸೇರಿ ಪ್ರಕೃತಿಯ ನಡುವೆ ಐಷಾರಾಮಿ ಜೀವನವನ್ನು ಅನುಭವಿಸಬಹುದು.

ಇಲ್ಲಿಯ ದಿನಚರಿ ಅಥವಾ ಇಲ್ಲಿ ಕಳೆಯುವ ಒಂದು ದಿನ, ಜೀವನದಲ್ಲಿ ಮರೆಯಲಾಗದ ನೆನಪನ್ನು ನೀಡುತ್ತದೆ. ಡಾಲ್ಫಿನ್-ಸ್ಪಾಟಿಂಗ್ ಸಫಾರಿಗಳು, ಕಾಳಿ ನದಿಯಲ್ಲಿ ಕಯಾಕಿಂಗ್, ಮತ್ತು ಮ್ಯಾಂಗ್ರೋವ್ ಮರಗಳ ನಡುವೆ ಹೋಗುವ ಪ್ರಕೃತಿ ನಡಿಗೆಗಳು. ಇನ್ನೂ ಇದರ ಜತೆಗೆ ದೇವ್‌ಬಾಗ್‌ ರೆಸಾರ್ಟ್‌ಗೆ ಹೋಗಿ ಅಲ್ಲಿಯೂ ಕಾಲ ಕಳೀಬಹುದು. ಈ ರೆಸಾರ್ಟ್‌ನಲ್ಲಿ ಬನಾನಾ ರೈಡ್‌, ಕಯಾಕಿಂಗ್, ಸ್ಪೀಡ್ ಬೋಟ್ ಸವಾರಿಗಳು, ಜೆಟ್ ಸ್ಕೀ ಸವಾರಿಗಳು, ಸ್ನಾರ್ಕ್ಲಿಂಗ್, ಬಂಪ್ ರೈಡ್‌ಗಳು ನಿಮ್ಮ ವಾಸ್ತವ್ಯವನ್ನು ಚಟುವಟಿಕೆಯುಕ್ತವಾಗಿ ಮಾಡುತ್ತದೆ.

sadashivgad resort 1

ಗೋಲ್‌ಘರ್‌ನ ಊಟ ಚೆಂದ

ಎಲ್ಲಿಗೆ ಹೋದರೂ, ಎಲ್ಲೇ ವಾಸ್ತವ್ಯ ಹೂಡಿದರೂ ಊಟ ಇಲ್ಲದೆ ಪ್ರವಾಸ ಮುಗಿಯುವುದೇ ಇಲ್ಲ. ಇಲ್ಲಿನ ಆಹಾರ ಸರಳ, ಸ್ಥಳೀಯವಾಗಿ ಸಾಂದರ್ಭಿಕವಾಗಿ ಇರುತ್ತದೆ. ಒಂದೊಳ್ಳೆ ಉಪಾಹಾರವಾದರೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕಾಗಿ, ನಿಮ್ಮನ್ನು ಬೀಚ್‌ಸೈಡ್ ಬಫೆಗೆ ಹೋಗಬಹುದು.

ರೆಸಾರ್ಟ್‌ನ ಆಚೆಗೆ, ಅಂದರೆ ಕಾರವಾರ ಪಟ್ಟಣಕ್ಕೂ ಒಂದು ವಿಜಯಯಾತ್ರೆಯನ್ನು ಮಾಡಿ, ರವೀಂದ್ರನಾಥ ಟ್ಯಾಗೋರ್ ಬೀಚ್‌ಗೆ ಭೇಟಿ ನೀಡಿ. ಟ್ಯಾಗೋರ್‌ ಅವರು ಈ ಬೀಚ್‌ನಲ್ಲಿ ಸಮಯ ಕಳೆದ ಮೇಲೆ ತಮ್ಮ ಮೊದಲ ನಾಟಕವನ್ನು ಬರೆದರು.

ಐಎನ್‌ಎಸ್ ಚಾಪಲ್ ಯುದ್ಧನೌಕೆ ವಸ್ತುಸಂಗ್ರಹಾಲಯದಲ್ಲಿ ನೌಕಾ ಇತಿಹಾಸವನ್ನು ಅನ್ವೇಷಿಸಿ. ಒಂದು ಕಾಲದಲ್ಲಿ ಪ್ರದೇಶದ ಕಾರ್ಯತಂತ್ರದ ಕಡಲ ವ್ಯಾಪಾರ ಮಾರ್ಗಗಳ ಮೇಲೆ ನಿಗಾ ಇಟ್ಟಿದ್ದ ಕೋಟೆಯ ಪರಂಪರೆಯನ್ನು ಇತಿಹಾಸ ಪ್ರಿಯರು ತಿಳಿದುಕೊಳ್ಳಬಹುದು.

ಸೀಸನ್‌:

ಕಾರವಾರವು ಅಕ್ಟೋಬರ್‌ನಿಂದ ಮೇ ವರೆಗೆ ಅತ್ಯಂತ ಸುಂದರವಾಗಿರುತ್ತದೆ. ಬೇಸಗೆಯು ಜಲ ಕ್ರೀಡೆಗಳಿಗೆ ಅತ್ಯುತ್ತಮ ಸಮಯ. ಇದು ಈ ರೆಸಾರ್ಟ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕರಾವಳಿಯಲ್ಲಿ ಡಾಲ್ಫಿನ್‌ಗಳು ಹೆಚ್ಚಾಗಿ ಕಂಡುಬರುತ್ತವೆ ಮತ್ತು ಮೀನು ಮತ್ತು ಹವಳಗಳು ಎಂದಿಗಿಂತಲೂ ಹೆಚ್ಚು ರೋಮಾಂಚಕವಾಗಿರುತ್ತವೆ.

ಇಲ್ಲಿನ ದಿನಚರಿ

ದಿನ 1

1:00 pm

ಚೆಕ್ ಇನ್ ಮಾಡಿ, ಕುಳಿತು ಫ್ರೆಶ್ ಅಪ್ ಆಗಿ.

1:15 pm

ದೇವಬಾಗ್ ಬೀಚ್ ರೆಸಾರ್ಟ್‌ಗೆ ಭೇಟಿ ನೀಡಿ.

1:30 pm - 3:00 pm

ದೇವಬಾಗ್ ಬೀಚ್ ರೆಸಾರ್ಟ್‌ನಲ್ಲಿ ಊಟದ ಬಫೆ (ಸಮುದ್ರ ಆಹಾರ ಸೇರಿದಂತೆ).

3:00 pm - 4:30 pm

ಟೀ ಮತ್ತು ಕಾಫಿಯೊಂದಿಗೆ ಬೀಚ್‌ನಲ್ಲಿ ಸಮಯ. ಜೆಟ್ ಸ್ಕೀಯಿಂಗ್, ಬನಾನಾ ಬೋಟ್, ಬಂಪಿ ರೈಡ್, ಕಯಾಕಿಂಗ್ ಮತ್ತು ಪ್ಯಾರಾ ಮೋಟಾರ್ ಮತ್ತು ಹ್ಯಾಂಗ್ ಗ್ಲೈಡಿಂಗ್‌ನಂತಹ ಏರೋ ಸ್ಪೋರ್ಟ್ಸ್‌ನಂಥ ನೀರಿನ ಚಟುವಟಿಕೆಗಳು ಹೆಚ್ಚುವರಿ ವೆಚ್ಚದಲ್ಲಿ.

5:00 pm - 6:00 pm

ನದೀಮುಖದಲ್ಲಿ ದೋಣಿ ವಿಹಾರ. (ಹವಾಮಾನವನ್ನು ಅವಲಂಬಿಸಿ ಡಾಲ್ಫಿನ್ ವೀಕ್ಷಣೆ ಅಥವಾ ಕಾಳಿಕಾ ಮಾತಾ ದ್ವೀಪ ಭೇಟಿಗಾಗಿ ಸಮುದ್ರದ ಕಡೆಗೆ ದೋಣಿ ವಿಹಾರ).

6:00 pm

ಸದಾಶಿವಗಡ ಕೋಟೆ ರೆಸಾರ್ಟ್‌ಗೆ ಹಿಂತಿರುಗಿ.

ಸಂಜೆ 7:00 - ರಾತ್ರಿ 8:30

ಸದಾಶಿವಗಡ ಕೋಟೆ ರೆಸಾರ್ಟ್‌ನಲ್ಲಿ ಬೆಟ್ಟದ ತುದಿಯಲ್ಲಿ ಶಿಬಿರ ಫೈರ್‌ಕ್ಯಾಂಪ್‌ ಬಳಿ ಕುಳಿತು ಬಾರ್ಬೆಕ್ಯೂ. ಸವಿಯಿರಿ (ಗುಂಡೂ ಸಿಗುತ್ತೆ).

ಸದಾಶಿವಗಡದ ಡೈನಿಂಗ್ ಹಾಲ್‌ನಲ್ಲಿ ಬಫೆ ಊಟ ಮಾಡಿ

ದಿನ 2

ಬೆಳಗ್ಗೆ 7:00 - ಬೆಳಿಗ್ಗೆ 7:30

ಡೈನಿಂಗ್ ಹಾಲ್‌ನಲ್ಲಿ ಚಹಾ/ಕಾಫಿ ಮತ್ತು ಬಿಸ್ಕತ್ತು.

ಬೆಳಗ್ಗೆ 8:30 - ಬೆಳಿಗ್ಗೆ 9:30

ಡೈನಿಂಗ್ ಹಾಲ್‌ನಲ್ಲಿ ಉಪಾಹಾರ.

ಬೆಳಗ್ಗೆ 9:15 - 10:00

ದೇವಬಾಗ್ ಬೀಚ್ ರೆಸಾರ್ಟ್‌ನಲ್ಲಿ ಡಾಲ್ಫಿನ್ ವೀಕ್ಷಣೆ

ಬೆಳಗ್ಗೆ 10:30

ಚೆಕ್ಔಟ್.

ಪ್ಯಾಕೇಜ್‌

ಹಿಲ್ ಟಾಪ್ ಪ್ಯಾಕೇಜ್

ಪ್ಯಾಕೇಜ್‌ನಲ್ಲಿ: ಆಯ್ಕೆಮಾಡಿದ ವಸತಿ ಸ್ಥಳ, ಸ್ವಾಗತ ಪಾನೀಯ, ವಾಸ್ತವ್ಯ, ಊಟ, ಭೋಜನ, ಉಪಾಹಾರ, ಕ್ಯಾಂಪ್ ಫೈರ್‌ನೊಂದಿಗೆ ಸಂಜೆ ಬಾರ್ಬೆಕ್ಯೂ, ಡಾಲ್ಫಿನ್ ವೀಕ್ಷಣೆ ಬೆಳಗ್ಗೆ ಮತ್ತು ಸಂಜೆ ಚಹಾ / ಕಾಫಿ, ನೇಚರ್‌ ವಾಕ್‌

ಆಹಾರ ಮತ್ತು ವಾಸ್ತವ್ಯ

ಪ್ಯಾಕೇಜ್‌: ವಾಸ್ತವ್ಯ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಉಪಾಹಾರ, ತಿಂಡಿಗಳು. (ಕಯಾಕಿಂಗ್, ಈಜು, ಡಾಲ್ಫಿನ್ ವೀಕ್ಷಣೆಯೊಂದಿಗೆ ದೋಣಿ ವಿಹಾರ. ಹೆಚ್ಚುವರಿ ವೆಚ್ಚದಲ್ಲಿ ಜಲ ಕ್ರೀಡೆಗಳು / ಸ್ನಾರ್ಕ್ಲಿಂಗ್)

sadashivgad resort 2

ಅತಿಥಿಗಳ ಮಾತು

ಈ ರೆಸಾರ್ಟ್‌ ಕಾಳಿ ನದಿ ಸೇತುವೆಯ ಕಾಣಿಸುವ ಹಾಗೆ ಬೆಟ್ಟದ ಮೇಲಿದೆ. ಹಾಗೇ ಅದ್ಭುತವಾಗಿದೆ. ಸಿಬ್ಬಂದಿ ತುಂಬಾ ಸಹಾಯಕರು ಮತ್ತು ಸಹಕಾರಿ. ಇದು ಬಂಡೆಯ ಮೇಲಿರುವುದರಿಂದ, ಒಳ್ಳೆಯ ನೋಟವನ್ನು ಕೊಡುತ್ತದೆ. ಎಲ್ಲ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಸಿಬ್ಬಂದಿ ಅತ್ಯುತ್ತಮ ಮತ್ತು ಉಳಿಯಲು ಆರಾಮದಾಯಕ ಸ್ಥಳವಾಗಿದೆ. ಆಹಾರ ತುಂಬಾ ಚೆನ್ನಾಗಿರುತ್ತೆ. ಅವರು ನಿಮ್ಮನ್ನು ಊಟ ಮತ್ತು ಚಟುವಟಿಕೆಗಳಿಗಾಗಿ ದೇವ್‌ಬಾಗ್ ಬೀಚ್ ರೆಸಾರ್ಟ್‌ಗೆ ಕರೆದೊಯ್ಯುತ್ತಾರೆ ಮತ್ತು ನಂತರ ಭೋಜನ, ಉಪಹಾರ ಮತ್ತು ವಿಶ್ರಾಂತಿಗಾಗಿ ಈ ರೆಸಾರ್ಟ್‌ಗೆ ಹಿಂತಿರುಗುತ್ತಾರೆ. ಆಹಾರ ರುಚಿಕರವಾಗಿದೆ, ಸಿಬ್ಬಂದಿ ಸ್ನೇಹಪರರಾಗಿದ್ದಾರೆ. ಹಣಕ್ಕೆ ಉತ್ತಮ ಮೌಲ್ಯ.

ದಾರಿ ಹೇಗೆ?

ರಸ್ತೆಯ ಮೂಲಕ ಈ ರೆಸಾರ್ಟ್ ಬೆಂಗಳೂರಿನಿಂದ ಸುಮಾರು 527 ಕಿ.ಮೀ ಮತ್ತು ಮುಂಬೈನಿಂದ 658 ಕಿ.ಮೀ ದೂರದಲ್ಲಿದೆ.

ರೈಲಿನ ಮೂಲಕ

ಮುಂಬೈ, ಪುಣೆ, ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ರೈಲುಗಳು ಕಾರವಾರಕ್ಕೆ ಸಂಪರ್ಕ ಹೊಂದಿವೆ, ಇದು ಹತ್ತಿರದ ರೈಲು ನಿಲ್ದಾಣವಾಗಿದೆ.

ವಿಮಾನದ ಮೂಲಕ

ಸಮೀಪದ ವಿಮಾನ ನಿಲ್ದಾಣವೆಂದರೆ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತದಾದ್ಯಂತ ಪ್ರಮುಖ ನಗರಗಳಿಗೆ ವಿಮಾನಗಳು ಸಂಪರ್ಕ ಹೊಂದಿವೆ.

ರೆಸಾರ್ಟ್ ಸಂಪರ್ಕ

ದುರ್ಗಾದೇವಿ ದೇವಸ್ಥಾನ ರಸ್ತೆ, ಸದಾಶಿವಗಡ ಅಂಚೆ, ಕಾರವಾರ ತಾಲ್ಲೂಕು

ಕಾರವಾರ – 581352

ವ್ಯವಸ್ಥಾಪಕರು: ಪಿ.ಆರ್.ನಾಯಕ್

ಸಂಪರ್ಕ ಸಂಖ್ಯೆ: 9449599778 / 9480885306

ಲ್ಯಾಂಡ್-ಲೈನ್: 8382-221603

ಇಮೇಲ್ ಐಡಿ: info@junglelodges.com

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ