ಸಿಲ್ವರ್ ಐರಿಸ್ ರೆಸಾರ್ಟ್
ರೆಸಾರ್ಟ್‌ಗಳೆಂದರೆ ಹೊಸತೇನಿರುತ್ತೆ? ಅದೇ ನಾಲ್ಕು ಗೋಡೆಯೊಳಗಿನ ರೂಮುಗಳು, ಅತಿಥಿಗಳನ್ನು ರಂಜಿಸುವುದಕ್ಕಾಗಿ ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್, ವೆರೈಟಿ ಫುಡ್‌ಗಳು, ರೇನ್ ಡ್ಯಾನ್ಸ್, ಸ್ವಿಮ್ಮಿಂಗ್ ಪೂಲ್ ಇದಷ್ಟೇ ಅಲ್ವಾ? ಎಲ್ಲ ರೆಸಾರ್ಟ್‌ಗಳಲ್ಲೂ ಇರುವುದು ಹೀಗೆಯೇ. ಅದರಲ್ಲೇನಿದೆ ವಿಶೇಷ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಯಾಕೆಂದರೆ ಈ ರೆಸಾರ್ಟ್ ಮೈಸೂರಿನಲ್ಲೇ ಇದ್ದರೂ ನಿಮಗೆ ಮಡಿಕೇರಿ ಇಲ್ಲವೇ ಊಟಿಯ ವಾತಾವರಣವನ್ನು ನೀಡುತ್ತದೆ. ಆಫ್ರಿಕಾದಲ್ಲಿ ನೆಲೆಸಿದ್ದೇವೆಂಬ ಅನುಭವವನ್ನು ಕೊಡುವುದಲ್ಲದೆ ನೆಕ್ಸ್ಟ್ ಜನರೇಷನ್ ಗೆ ಬೇಕಾಗಿರುವಂತೆ ಸಿದ್ಧವಾಗಿದೆ.
ಮೈಸೂರು- ಬಂಡೀಪುರ ಹೆದ್ದಾರಿಯಲ್ಲಿ ಹಾದುಹೋಗುವವರು ನೀವಾದರೆ ನಂಜನಗೂಡಿನಿಂದ ಸುಮಾರು 3ಕಿಮೀ ದೂರದಲ್ಲಿರುವ ಕಾಳಿಹುಂಡಿ ಗ್ರಾಮದತ್ತ ಒಮ್ಮೆಯಾದರೂ ತಿರುಗಿ ನೋಡಲೇಬೇಕು. ಯಾಕೆಂದರೆ ಈ ಗ್ರಾಮ ಈಗ ಪ್ರವಾಸಿಗರಿಗೆ ಅಥವಾ ರೆಸಾರ್ಟ್ ಪ್ರಿಯರಿಗೆ ಆಫ್ರಿಕಾದ ಅನುಭವವನ್ನು ನೀಡುವ ತಾಣವಾಗಿ ಗುರುತಿಸಿಕೊಂಡಿದೆ. ಅದ್ಹೇಗೆ ಅಂತೀರಾ ? ಇಲ್ಲಿ ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಉದ್ಘಾಟನೆಗೊಂಡ ʻಸಿಲ್ವರ್ ಐರಿಸ್ ರೆಸಾರ್ಟ್ʼ ವಿಭಿನ್ನವಾದ ಆಫ್ರಿಕನ್ ಡೂಮ್ ರೂಮುಗಳನ್ನು ಅತಿಥಿಗಳಿಗೆ ಒದಗಿಸುವ ಮೂಲಕ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದೆ. 2.5ಎಕರೆ ಜಮೀನಿನಲ್ಲಿ ಬೃಹತ್ತಾಗಿಯೇ ನಿರ್ಮಾಣಗೊಂಡಿರುವ ಈ ರೆಸಾರ್ಟ್ ಬಗ್ಗೆ ಪೂರ್ಣ ಮಾಹಿತಿ ತಿಳಿದರೆ ನೀವು ಬೆರಗಾಗಿ ಬಿಡುತ್ತೀರಿ.

ಇಲ್ಲಿ ಎಲ್ಲವೂ ಅಡ್ವೆಂಚರ್
ರೆಸಾರ್ಟ್ ಅಂದಮೇಲೆ ಅಡ್ವೆಂಚರ್ ಗೇಮ್ಸ್ ಇಲ್ಲವೆಂದರೆ ಹೇಗೆ! ಅದರಲ್ಲಿ ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್ ಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಟೇಬಲ್ ಟೆನಿಸ್, ಕ್ರಿಕೆಟ್, ಶಟಲ್ ಬಾಡ್ಮಿಂಟನ್, ವಾಲಿಬಾಲ್, ಸೇರಿದಂತೆ ಬಗೆ ಬಗೆಯ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಗಳನ್ನಾಡುತ್ತಾ ನಿಮ್ಮ ಸ್ಟೇ ಎಂಜಾಯ್ ಮಾಡಬಹುದು. ಸ್ನೂಕರ್, ಚೆಸ್, ಕೇರಂ ಹೀಗೆ ಕ್ರೀಡಾ ಪ್ರೇಮಿಗಳ ಆಯ್ಕೆಗೆ ತಕ್ಕಂತೆ ಇಲ್ಲಿ ಎಲ್ಲವೂ ಲಭ್ಯವಿದೆ. ರೋಪ್ ಆಂಡ್ ಟೈರ್ ಆಕ್ಟಿವಿಟೀಸ್‌ಗೂ ಅವಕಾಶವಿದೆ. ಇದಿಷ್ಟೇ ಅಲ್ಲದೆ ರೆಸಾರ್ಟ್ ಗಳಲ್ಲಿ ಜಿಮ್ ಗಳಿರುವುದಿಲ್ಲ. ಆದರೆ ಇಲ್ಲಿ ಮಲ್ಟಿ ಜಿಮ್ ವ್ಯವಸ್ಥೆಯಿದ್ದು, ಜಿಮ್ ಪ್ರಿಯರ ಮನಗೆದ್ದಿದೆ.
ಪೆಟ್ಸ್ ಫೀಲಿಂಗ್ ಟಚ್
ಪಕ್ಷಿ, ಪ್ರಾಣಿಗಳನ್ನು ಮೆಚ್ಚಿಕೊಳ್ಳುವವರು ನೀವಾದರೆ ಇದು ನಿಮ್ಮ ಬೆಸ್ಟ್ ಆಯ್ಕೆ. ಯಾಕೆಂದರೆ ಇಲ್ಲಿ ಪಕ್ಷಿಗಳನ್ನು ನೋಡುವುದಷ್ಟೇ ಅಲ್ಲ ಅವುಗಳ ಜತೆ ಕಾಲ ಕಳೆಯುವುದಕ್ಕೂ ಅವಕಾಶವಿದೆ. ಪೆಟ್ಸ್ ಫೀಲಿಂಗ್ ಟಚ್ ಕೂಡ ಲಭ್ಯವಾಗಲಿದ್ದು ವಿದೇಶಿ ಹಕ್ಕಿಗಳ ಕಲರವ ಕೇಳುತ್ತಾ ಟೈಮ್ ಕಳೆಯಬಹುದು. ಗಿನಿಯಾ ಪಿಗ್, ಅಮೆರಿಕನ್ ಪಿಗ್ಮೀ ಗೋಟ್, ಅಂಗೋರಾ ರಾಬಿಟ್, ಬಾತುಕೋಳಿಗಳನ್ನೂ ಇಲ್ಲಿ ಸಾಕಲಾಗಿದ್ದು, ಬಂದವರಿಗೆ ಇವುಗಳ ಬಗೆಗೆ ಮಾಹಿತಿಯನ್ನೂ ನೀಡಲಾಗುತ್ತದೆ.
ರೆಸಾರ್ಟ್ ರೆಸ್ಟೋರೆಂಟ್
ರೆಸಾರ್ಟ್ ನಲ್ಲಿ ಉಳಿದುಕೊಳ್ಳುವವರಿಗೆ ಉತ್ತಮ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಹೊಸ ಪ್ರಯತ್ನಗಳನ್ನು ಮಾಡಿರುವ ರೆಸ್ಟೋರೆಂಟ್ ಮಾಲಿಕರು, ಕಾಂಟಿನೆಂಟಲ್ ಫುಡ್ ಮಾತ್ರವಲ್ಲದೆ ಎಲ್ಲ ಬಗೆಯ ಆಹಾರಗಳನ್ನೂ ನೀಡುತ್ತಿದ್ದಾರೆ. ರೆಗ್ಯುಲರ್ ಸ್ಟ್ಯಾಂಡರ್ಡ್ ಮೆನುವನ್ನೇ ಇಲ್ಲಿ ಸಿದ್ಧಪಡಿಸಲಾಗಿದ್ದು, ಬ್ರೇಕ್‌ಫಾಸ್ಟ್, ಲಂಚ್, ಸ್ನ್ಯಾಕ್ಸ್ ಟೈಂ ಹಾಗೂ ಡಿನ್ನರ್ ಗೆ ಅನೇಕ ಆಯ್ಕೆಗಳನ್ನೂ ನೀಡಿದ್ದಾರೆ.
ಬರಿಯ ಸ್ಟೇಗಷ್ಟೇ ಅಲ್ಲದೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಬಯಸುವವರಿಗಾಗಿ ವಿಶಾಲವಾದ ಜಾಗ ಹಾಗೂ ಸ್ಟೇಜ್ ಸಹ ಇಲ್ಲಿ ಸಿದ್ಧವಿದೆ. ವೆಂಡರ್ಸ್ ಜತೆಗೆ ಬರುವವರಿಗೆ ಅಥವಾ ಡೆಕೊರೇಷನ್, ಫುಡ್ ಹೀಗೆ ಎಲ್ಲವೂ ಬೇಕೆನ್ನುವವರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಿಕೊಡಲಾಗುತ್ತದೆ. ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಬೇಕೆನ್ನುವವರಿಗಿದು ಬೆಸ್ಟ್ ಪ್ಲೇಸ್.
ಪೂಲ್ ಪಾರ್ಟಿಗೆ ಅವಕಾಶ
ಸಾಮಾನ್ಯವಾಗಿ ಎಲ್ಲ ರೆಸಾರ್ಟ್‌ಗಳಲ್ಲೂ ಸ್ವಿಮ್ಮಿಂಗ್ ಇದ್ದೇ ಇರುತ್ತದೆ. ಆದರೆ ಇಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೂ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್ ವ್ಯವಸ್ಥೆಯಿದ್ದು ಆಯ್ಕೆ ಅವರವರಿಗೇ ಬಿಟ್ಟಿದ್ದು. ಆದರೆ ವಿಶೇಷತೆಯೇನು ಗೊತ್ತಾ? ಇಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿಯೂ ಸಹ 15 ಅಡಿ ಅಂತರದಷ್ಟು ಡಕ್ ಏರಿಯಾವನ್ನು ಬಿಡಲಾಗಿದ್ದು, ಪೂಲ್ ಪಾರ್ಟಿ, ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬಯಸುವವರಿಗೂ ಅವಕಾಶವಿದೆ. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೇ ರೇನ್ ಡ್ಯಾನ್ಸ್ ಗೂ ಸೂಕ್ತ ಜಾಗ ನಿಗದಿಪಡಿಸಿದ್ದು, ಮಿಸ್ಟ್ ಅಥವಾ ಫಾಗ್ ಡ್ಯಾನ್ಸ್ ಪ್ರೇಮಿಗಳಿಗೂ ಹೇಳಿಮಾಡಿಸಿದ ಜಾಗವಿದು.

ಎಲ್ಲವೂ ಸ್ಪೆಷಲ್ಲೇ ಗುರು !
ಡೂಮ್ ರೂಮುಗಳು
ಐಷಾರಾಮಿ ಡಾರ್ಮೆಟ್ರಿ
ಸ್ವಿಮ್ಮಿಂಗ್ ಪೂಲ್
ರೇನ್ ಡ್ಯಾನ್ಸ್
ವೆರೈಟಿ ರೆಸ್ಟೋರೆಂಟ್
ಅಡ್ವೆಂಚರ್ ಗೇಮ್ಸ್
ಬಾನ್ ಫೈರ್
ಮಲ್ಟಿ ಜಿಮ್
ಸಿಟಿ ಲೈಫ್ ಸಾಕೆನ್ನಿಸಿ ವಿಭಿನ್ನ ವಾತಾವರಣವನ್ನು ಅರಸಿ ಇಲ್ಲಿಗೆ ಬರುವ ಮಂದಿಗಾಗಿಯೇ ಈ ರೆಸ್ಟೋರೆಂಟ್ ಕಾರ್ಯನಿರ್ವಹಿಸುತ್ತಿದೆ. ಆಫ್ರಿಕನ್ ಡೂಮ್ ಶೇಪ್ ಕೊಠಡಿಗಳು, ಮಡ್ ಫೀಲಿಂಗ್ ರಸ್ತೆಗಳು, ಡೆಸ್ಟಿನೇಷನ್ ವೆಡ್ಡಿಂಗ್ ಅಥವಾ ಇನ್ಯಾವುದೇ ಶುಭ ಸಮಾರಂಭಗಳಿಗೂ ಇಲ್ಲಿ ಅವಕಾಶ ಕಲ್ಪಿಸಿದ್ದೇವೆ. ಬಾನ್ ಫೈರ್, ರೈನ್ ಡ್ಯಾನ್ಸ್, ಸ್ಪೆಷಲ್ ಫುಡ್, ಜಿಮ್, ಸ್ಪೋರ್ಟ್ಸ್ ಆಂಡ್ ಗೇಮ್ಸ್ ಆಪ್ಶನ್ ನೋಡಿದರೆ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಈ ವಿಭಿನ್ನ ಅನುಭವ ಪಡೆಯಬೇಕೆಂದರೆ ನೀವು ಸಿಲ್ವರ್ ಐರಿಸ್ ರೆಸಾರ್ಟ್‌ಗೆ ಒಮ್ಮೆ ಭೇಟಿ ಕೊಡಿ.
- ಪ್ರಭಾಕರ್
ನನ್ನ ಸ್ನೇಹಿತರು ಆಫ್ರಿಕಾದಲ್ಲಿದ್ದರು. ಅವರು ಈ ಕಾನ್ಸೆಪ್ಟನ್ನು ಮಾಡುವ ಮನಸ್ಸು ಮಾಡಿದ್ದರು. ನನಗೂ ಇದೊಂದು ವಿಶೇಷ ಯೋಜನೆಯೆನಿಸಿತು. ನಮ್ಮಲ್ಲಿ ಆಫ್ರಿಕನ್ ಡೋಮ್ ರೆಸಾರ್ಟ್ ಗಳಿಲ್ಲ. ಅದಕ್ಕಾಗಿಯೇ ಶ್ರಮ ವಹಿಸಿ ರೆಸಾರ್ಟ್ ಡಿಸೈನ್ ಸಿದ್ಧಪಡಿಸಿದೆ. ತಂದೆಯವರ ಸಹಕಾರದೊಂದಿಗೆ ಸಿದ್ಧವಾದ ಈ ರೆಸಾರ್ಟ್ ಇಂದು ಬಹು ಬೇಡಿಕೆಯನ್ನು ಹೊಂದಿರುವುದು ಖುಷಿ ತಂದಿದೆ.
- ಪೂರ್ವಿತ್ ಪ್ರಭಾಕರ್