Saturday, March 28, 2026
Saturday, March 28, 2026

ಸಿಲ್ವರ್‌ ಓಕ್‌ ರೆಸಾರ್ಟ್‌

ಬೆಂಗಳೂರಿನ ಸಮೀಪದಲ್ಲೇ ಇದ್ದು ಬೆಂಗಳೂರಿನ ಬದುಕಿನಿಂದ ಹೊರಗಿರುವ ಅನುಭವ ಪಡೆದು, ಈಜುಕೊಳ, ಹಸಿರಿನ ನಡುವೆ ವಿಹಾರ, ಆಟ, ತಿಂಡಿ, ಬಾರ್‌, ಕಾಫಿ ಮಜಾ ಪಡೆದು ಬ್ರೇಕ್‌ ಪಡೆಯಬೇಕು ಎಂದುಕೊಳ್ಳುವ ಜೀವಗಳು ಸಿಲ್ವರ್‌ ಓಕ್‌ ರೆಸಾರ್ಟ್‌ಗೆ ಭೇಟಿ ನೀಡಬಹುದು.

ಬೆಂಗಳೂರಿನ ಸದ್ದು ಗದ್ದಲ, ಕಂಪನಿಯಲ್ಲಿ ಡೆಡ್‌ಲೈನ್‌ ತಲೆಬಿಸಿ ಎಲ್ಲವನ್ನೂ ಮರೆತು ಯಾವುದಾದರೊಂದು ರೆಸಾರ್ಟ್‌ಗೆ ಹೋಗಿ ಗೆಳೆಯರು, ಫ್ಯಾಮಿಲಿ ಜತೆಗೋ ಹೋಗಿ ಆರಾಮಾಗಿ ಕಾಲ ಕಳೆಯಬೇಕು ಎಂದು ಅನೇಕರು ಅಂದುಕೊಂಡಿರುತ್ತಾರೆ. ಹಾಗಂತ ಬೆಂಗಳೂರಿನಿಂದ ತುಂಬಾ ದೂರ ಪ್ರಯಾಣ ಮಾಡಲು ಇಷ್ಟವಿರುವುದಿಲ್ಲ. ಅಂಥವರು ಬೆಂಗಳೂರಿನ ಸುತ್ತಮುತ್ತ ಇರುವ ರೆಸಾರ್ಟ್‌ ಹುಡುಕುತ್ತಿರುತ್ತಾರೆ. ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆಯ ದೊಡ್ಡಬಳ್ಳಾಪುರ ರಸ್ತೆಯಲ್ಲಿ ನೆಲೆಗೊಂಡಿರುವ ಪ್ರಶಾಂತವಾದ ವಿರಾಮ ತಾಣ ಈ ಸಿಲ್ವರ್‌ ಓಕ್‌ ರೆಸಾರ್ಟ್‌.

ಜೆಎಲ್‌ಆರ್‌ನವರ ಆನೆಝರಿ ನೇಚರ್‌ ಕ್ಯಾಂಪ್‌

ಹಸಿರಿನಿಂದ ಸುತ್ತುವರೆದಿರುವ ಮತ್ತು ನಗರದ ಗದ್ದಲದಿಂದ ದೂರವಿರುವ ಈ ರೆಸಾರ್ಟ್, ಆಧುನಿಕ ಸೌಕರ್ಯಗಳೊಂದಿಗೆ ನೈಸರ್ಗಿಕ ಪರಿಸರವನ್ನು ಹೊಂದಿದ್ದು, ಇಲ್ಲಿಗೆ ಬಂದವರಿಗೆ ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸುತ್ತದೆ. ಬೆಂಗಳೂರು ನಗರ ಕೇಂದ್ರದಿಂದ ಸುಮಾರು 26-30 ಕಿಲೋಮೀಟರ್ ದೂರದಲ್ಲಿರುವ ಈ ರೆಸಾರ್ಟ್‌ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಸ್ಥಳೀಯ ಜನರಿಗೆ ಹಾಗೂ ಇತರ ನಗರಗಳಿಂದ ಬರುವ ಪ್ರಯಾಣಿಕರಿಗೆ ಸುಲಭವಾಗಿ ತಲುಪಲು ಅನುಕೂಲಕರವಾದ ಸ್ಥಳದಲ್ಲಿದೆ. ಅತಿಥಿಗಳು ಆಧುನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು ಪಡೆಯುತ್ತಲೇ ಪ್ರಕೃತಿಯನ್ನು ಆನಂದಿಸಲು, ವಿಶ್ರಾಂತಿ ಪಡೆಯಲು ಮತ್ತು ಪುನಶ್ಚೇತನಗೊಳ್ಳುವಂತೆ ಈ ರೆಸಾರ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಹಸಿರಿನ ನಡುವೆ

New Project (53)

ಬೆಂಗಳೂರಿನವರಿಗೆ ಸಾಮಾನ್ಯವಾಗಿ ವಾರಾಂತ್ಯದ ಪ್ರವಾಸ ಎಂಬುದು ಖಚಿತವಾಗಿ ಬೇಕಾಗುತ್ತದೆ. ಅವರು ಇಲ್ಲಿ ಬಂದು ಯಾವುದೇ ಜಂಜಾಟಗಳಿಲ್ಲದೆ ಕಾಲ ಕಳೆಯಬಹುದು. ತನ್ನ ವಿಶಾಲವಾದ ವಿನ್ಯಾಸ ಮತ್ತು ಪ್ರಶಾಂತ ವಾತಾವರಣದಲ್ಲಿ ನಗರದ ಚಿಂತೆಗಳನ್ನು ಕೆಲ ಕಾಲ ಪಕ್ಕಕ್ಕೆ ಇಡಬಹುದು. ನಗರದ ಬಿಡುವಿಲ್ಲದ ಜೀವನಶೈಲಿಯಿಂದ ಒಂದು ಉಲ್ಲಾಸದಾಯಕ ಬಿಡುವು ನೀಡುತ್ತದೆ ಈ ರೆಸಾರ್ಟ್. ಶಾಂತ ನೈಸರ್ಗಿಕ ಪರಿಸರ ಮತ್ತು ಆರಾಮದಾಯಕ ಸೌಲಭ್ಯಗಳು ಇರುವುದರಿಂದ ಕಾರ್ಪೊರೇಟ್ ಔಟಿಂಗ್‌ಗಳು, ಕೌಟುಂಬಿಕ ರಜೆಗಳು ಮತ್ತು ಸಾಮಾಜಿಕ ಕೂಟಗಳಿಗಾಗಿ ಕೂಡ ಈ ತಾಣವನ್ನು ಆರಿಸಿಕೊಳ್ಳಬಹುದು. ಇಲ್ಲಿಗೆ ಭೇಟಿ ಕೊಟ್ಟ ಅನೇಕ ಅತಿಥಿಗಳು ಇಲ್ಲಿನ ಅನುಭವವನ್ನು ಹಿತಕರ ಮತ್ತು ಪುನಶ್ಚೇತನಕಾರಿ ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಇಲ್ಲಿನ ನಿಶ್ಶಬ್ದ ಪರಿಸರ ಮತ್ತು ಒಪನ್‌ ಸ್ಪೇಸ್‌ ಕಾರಣದಿಂದಾಗಿ ಹೆಚ್ಚು ಆಕರ್ಷಕವಾಗಿದೆ.

ಮನೆಯಂಥ ವಸತಿ

ಪರಮಾತ್ಮ ಸಿನಿಮಾ ನೋಡಿ ಹೋಮ್‌ಸ್ಟೇ ಕಟ್ಟಿದ MYಸೂರು ಯುವಕ

New Project (56)

ಸಿಲ್ವರ್ ಓಕ್ ರೆಸಾರ್ಟ್ ಅತಿಥಿಗಳು ತಮ್ಮ ಮನೆಯಲ್ಲಿರುವಂತೆ ಅನುಭವ ಪಡೆಯಬಹುದು. ಅಂಥ ವಸತಿ ಆಯ್ಕೆಗಳು ಇಲ್ಲಿವೆ. ರೆಸಾರ್ಟ್‌ನಲ್ಲಿ ಸುಮಾರು 50-60 ಕೊಠಡಿಗಳಿದ್ದು, ಅವು ಸುಸಜ್ಜಿತವಾಗಿವೆ ಮತ್ತು ಎಸಿ ಇರುವಂಥ ಕೊಠಡಿಗಳು. ಖಾಸಗಿ ಸ್ನಾನಗೃಹಗಳು ಮತ್ತು ಆಧುನಿಕ ಒಳಾಂಗಣ ವಿನ್ಯಾಸದಂಥ ಅಗತ್ಯ ಸೌಲಭ್ಯಗಳು ಇಲ್ಲಿವೆ. ರಾತ್ರಿ ತಂಗುವ ಅತಿಥಿಗಳಿಗೆ ಮನಸ್ಸಿಗೆ ಹಿತವೆನಿಸುವಂಥ ವಾತಾವರಣವನ್ನು ಒದಗಿಸಲು ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅತಿಥಿಗಳು ರೂಮ್ ಸರ್ವಿಸ್ ಮತ್ತು ಇತರ ಆತಿಥ್ಯ ಸೇವೆಗಳನ್ನು ಪಡೆಯಬಹುದು. ಕೊಠಡಿಗಳು ಸೌಕರ್ಯ ಮತ್ತು ಕಂಫರ್ಟ್‌ ಎರಡೂ ಒಂದೇ ಸಮನಾಗಿರುವುದರಿಂದ ಅಲ್ಪಾವಧಿ ಮತ್ತು ದೀರ್ಘಾವಧಿ- ವಾಸ್ತವ್ಯಕ್ಕೆ ಸೂಕ್ತ.

ಆಕರ್ಷಕ ಸ್ಥಳ

New Project (52)

ಈ ರೆಸಾರ್ಟ್‌ನ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿನ ವಿರಾಮ ಮತ್ತು ಮನರಂಜನಾ ಸೌಲಭ್ಯಗಳು. ಅತಿಥಿಗಳು ಈಜುಕೊಳ, ಲೌಂಜ್ ಏರಿಯಾಗಳು ಮತ್ತು ಒಪನ್‌ ಸ್ಪೇಸ್‌ಗಳನ್ನು ಆನಂದಿಸಬಹುದು. ಈಜುಕೊಳದಲ್ಲಿ ಸ್ಲೈಡರ್‌ ಕೂಡ ಇರುವುದರಿಂದ ಜಾರಿ ಬಂದು ನೀರಿನಲ್ಲಿ ಬೀಳುವ ಮಜಾ ಕೂಡ ಪಡೆಯಬಹುದು. ನೇಸರದ ನಡುವೆ ಹೊರಾಂಗಣವನ್ನು ಚಟುವಟಿಕೆಗಳು ಮಾಡಲು ಮತ್ತು ವಿಶ್ರಾಂತಿಯನ್ನು ಪಡೆಯಲು ಹೆಚ್ಚು ಸೂಕ್ತವಾಗುವಂತೆ ಮಾಡಲಾಗಿದೆ. ಸಂದರ್ಶಕರು ಈಜುವುದು, ಹಸಿರು ಪರಿಸರದಲ್ಲಿ ನಡೆಯುವುದು ಅಥವಾ ಕೇವಲ ಪ್ರಶಾಂತತೆಯನ್ನು ಆನಂದಿಸುವ ಮೂಲಕ ತಮ್ಮ ಸಮಯವನ್ನು ಕಳೆಯಬಹುದು. ಆಟದ ಮೈದಾನ, ಜಿಮ್‌, ಸ್ಪೋರ್ಟ್ಸ್‌ ಕೋರ್ಟ್ ಕೂಡ ಇಲ್ಲಿರುವುದರಿಂದ ಒಂದು ಚಟುವಟಿಕೆಯಿಂದ ಬೇಸರ ಬಂದರೆ ಇನ್ನೊಂದು ಚಟುವಟಿಕೆ ಮಾಡಿ ಕಾಲ ಕಳೆಯಬಹುದು. ಬೆಳಗ್ಗೆ ಬೇಗ ಎದ್ದು ಜಾಗ್‌ ಮಾಡುವ ಅಭ್ಯಾಸ ಇರುವವರಿಗೆ ಜಾಗಿಂಗ್‌ ಟ್ರೇಲ್‌ ಇದೆ. ಟೇಬಲ್‌ ಟೆನ್ನಿಸ್‌ ಹಾಗೂ ಬಿಲಲಿಯರ್ಡ್ಸ್‌ ಆಡುವವರಿಗೆ ಕೂಡ ಇಲ್ಲಿ ಅವಕಾಶವಿದೆ.

ಊಟಕ್ಕೇನು?

ಅಡ್ಡಾ ಅಂದ್ರೆ ಸಡ್ಡಾ!

New Project (57)

ಊಟೋಪಚಾರವು ಸಿಲ್ವರ್ ಓಕ್ ರೆಸಾರ್ಟ್‌ನ ಅನುಭವದ ಮತ್ತೊಂದು ಪ್ರಮುಖ ಭಾಗವಾಗಿದೆ. ರೆಸಾರ್ಟ್ ವಿವಿಧ ಅಭಿರುಚಿಗಳಿಗೆ ತಕ್ಕಂತೆ ವೈವಿಧ್ಯಮಯ ಖಾದ್ಯಗಳನ್ನು ಒಳಗೊಂಡ ಆಹಾರ ಮತ್ತು ಪಾನೀಯ ಸೇವೆಗಳನ್ನು ಒದಗಿಸುತ್ತದೆ. ಅತಿಥಿಗಳು ಡೈನಿಂಗ್ ಏರಿಯಾದಲ್ಲಿ ಭೋಜನವನ್ನು ಆನಂದಿಸಬಹುದು ಅಥವಾ ರೂಮ್ ಸರ್ವಿಸ್ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು. ಮೆನು ಸಾಮಾನ್ಯವಾಗಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಖಾದ್ಯಗಳ ಮಿಶ್ರಣವನ್ನು ಒಳಗೊಂಡಿರುತ್ತದೆ. ಉತ್ತಮ ಆಹಾರ ಮತ್ತು ಆರಾಮದಾಯಕ ಪರಿಸರವು ರೆಸಾರ್ಟ್‌ನಲ್ಲಿನ ವಾಸ್ತವ್ಯದ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತದೆ. ಟೆರೆಸ್‌ನಂಥ ರೆಸ್ಟಾರೆಂಟ್‌ ಅಲ್ಲಿ ಸುತ್ತ ಹಸಿರು ಇರುವ ಗಾರ್ಡನ್‌ ನೋಡುತ್ತ ಊಟ ಮಾಡುವಾಗ ರುಚಿ ಇನ್ನಷ್ಟು ಹೆಚ್ಚುತ್ತದೆ. ಮದ್ಯಪ್ರಿಯರಿಗೆ ಬಾರ್‌ ಹಾಗೂ 24 ಗಂಟೆ ತೆರೆದಿರುವ ಕಾಫಿ ಶಾಪ್‌ ವ್ಯವಸ್ಥೆ ಕೂಡ ಇಲ್ಲಿದೆ. ಉಚಿತವಾದ ಪಾರ್ಕಿಂಗ್‌ ವ್ಯವಸ್ಥೆ ಹಾಗೂ ಬ್ರೆಕ್‌ಫಾಸ್ಟ್‌ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಸಿಲ್ವರ್ ಓಕ್ ರೆಸಾರ್ಟ್ ಪ್ರಕೃತಿ, ಸೌಕರ್ಯ ಮತ್ತು ಆತಿಥ್ಯವನ್ನು ಸಂಯೋಜಿಸುವ ಒಂದು ಆಹ್ಲಾದಕರ ತಾಣ. ಬೆಂಗಳೂರಿನ ಸಮೀಪವಿರುವ ಈ ಸ್ಥಳ, ಆರಾಮದಾಯಕ ವಸತಿ, ಮನರಂಜನಾ ಸೌಲಭ್ಯಗಳು ಮತ್ತು ಈವೆಂಟ್ ಸ್ಪೇಸ್‌ಗಳು ಇದನ್ನು ಪ್ರವಾಸಿಗರಿಗೆ ಮತ್ತು ಕಾರ್ಯಕ್ರಮ ಸಂಘಟಕರಿಗೆ ಒಂದು ಬಹುಮುಖ್ಯ ಸ್ಥಳ. ಯಾರಾದರೂ ವಾರಾಂತ್ಯದ ವಿಶ್ರಾಂತಿಯನ್ನು ಬಯಸಲಿ, ಕಾರ್ಪೊರೇಟ್ ಇವೆಂಟ್ ನಡೆಸಲು ಇಚ್ಛಿಸಲಿ ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯಲು ಬಯಸಲಿ, ಈ ರೆಸಾರ್ಟ್ ನೆನಪಿಸಿಕೊಳ್ಳಬಹುದು.

ಸಂಸ್ಥೆಯ ಆಫ್‌ ಸೈಟ್‌ ವಿಸಿಟ್‌ ಆಗಿ ಈ ರೆಸಾರ್ಟ್‌ಗೆ ಬಂದಿದ್ದೆವು. ಮೂರು ದಿನಗಳ ಕಾಲ ಉತ್ತಮ ಸಮಯ ಕಳೆದೆವು. ಇಲ್ಲಿನ ಸಿಬ್ಬಂದಿ ವರ್ಗ ಸರಿಯಾಗಿ ಸ್ಪಂದಿಸುತ್ತಾರೆ ಹಾಗೂ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳುತ್ತಾರೆ.
- ಸುಮಿತ್‌ ಸರ್ಕಾರ್‌
ಇಲ್ಲಿನ ಆಹಾರ ಹಾಗೂ ವಾಸ್ತವ್ಯ ಅದ್ಭುತವಾಗಿತ್ತು. ಉತ್ತಮ ಸರ್ವಿಸ್‌ ನೀಡಿದರು. ಸಿಬ್ಬಂದಿ ವರ್ಗದವರು ಎಲ್ಲ ವ್ಯವಸ್ಥೆಗಳನ್ನು ಅಚ್ಚುಕ್ಟಾಗಿ ಮಾಡಿದ್ದರು.
- ವಿನೋದ್‌ ಹರಿ
ಕಡಿಮೆ ದರದಲ್ಲಿ ಸಿಗುವ ಉತ್ತಮ ರೆಸಾರ್ಟ್‌ ಇದು. ಆಹಾರದ ರುಚಿ ಕೂಡ ಚೆನ್ನಾಗಿತ್ತು. ಬಾರ್‌ ಅಲ್ಲಿ ಇನ್ನಷ್ಟು ಹೆಚ್ಚಿನ ಆಯ್ಕೆಗಳನ್ನು ಇಡಬಹುದಿತ್ತು.
- ಅಲೆಕ್ಸೆಂಡ್ರಾ ರಿನ್ಸ್‌

ದಾರಿ ಹೇಗೆ?

ಬೆಂಗಳೂರಿನಿಂದ 20-30 ಕಿಮಿ ದೂರದಲ್ಲಿರುವ ಈ ರೆಸಾರ್ಟ್‌ಗೆ ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಹೋಗಬೇಕು. ರಾಜಾನುಕುಂಟೆ ಬಳಿ ಈ ರೆಸಾರ್ಟ್‌ ಸಿಗುತ್ತದೆ.

ವಿಳಾಸ:

23 ಕಿಮಿ ಬೆಂಗಳೂರು – ದೊಡ್ಡಬಳ್ಳಾಪುರ ರಸ್ತೆ, ರಾಜನಕುಂಟೆ, ಬೆಂಗಳೂರು, ಕರ್ನಾಟಕ – 560064

ದೂರವಾಣಿ: 09845074687, 080 2676 3364 / 4405, 09902913070, 080 2846 8880 / 8070 / 8265

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ