ಬಿಗ್ ಬ್ಯಾನಿಯನ್ ರಾಂಚ್... ವೈನ್ & ಡೈನ್ ಹಾಟ್ ಸ್ಪಾಟ್!!
ಸೊ ಈ ರೀತಿನೂ ಒಂದ್ ಜಾಗ ಇದ್ರೆ ಹೇಳಿ ಬ್ರದರ್ ಅಂತ ಯಾರಾದ್ರೂ ಸಜೆಶನ್ ಕೇಳಿದ್ರೆ ಖಂಡಿತವಾಗಿ ನಾನು ಸಜೆಸ್ಟ್ ಮಾಡೋ ಜಾಗ ಅಂದ್ರೆ ಅದು ಬಿಗ್ ಬ್ಯಾನಿಯನ್ ರಾಂಚ್ ರೆಸಾರ್ಟ್. ಬೆಂಗಳೂರು ದೊಡ್ಡಾಲದ ಮರದ ಸಮೀಪ ಇರುವ ಬಿಗ್ ಬ್ಯಾನಿಯನ್ ರಾಂಚ್, ಬೆಂಗಳೂರಿನಿಂದ ಒಂದು ಸಣ್ಣ ಬ್ರೇಕ್ ಬೇಕು, ಜತೆಗೆ ಬೆಂಗಳೂರಿನ ಹತ್ತಿರಾನೇ ಒಳ್ಳೆ ನೇಚರ್ ಜತೆ ಫೈನ್ ಡೈನ್ ವಿಥ್ ವೈನ್ ಬೇಕು ಅಂತ ಹುಡುಕೋರಿಗೆ ಇದು ಪರ್ಫೆಕ್ಟ್ ಸ್ಪಾಟ್.
- ಅಕ್ಷಯ್ ಆತ್ರೆಯಾ
ವಾರ ಪೂರ್ತಿ ಆಫೀಸ್, ಟ್ರಾಫಿಕ್ ಮತ್ತು ಪೊಲ್ಲ್ಯೂಷನ್‌ನಲ್ಲಿ ಬೆರೆತು ಬೆಂಡಾಗಿರೋ ಬೆಂಗಳೂರಿನ ಜನಸಾಗರಕ್ಕೆ ವೀಕೆಂಡ್ ಅಲ್ಲಿ ಒಂದಷ್ಟು ರೆಸ್ಟ್ ಮಾಡೋದಕ್ಕೆ ಒಳ್ಳೆ ಸ್ಪಾಟ್ ಬೇಕು ಅನ್ಸೋದು ತಪ್ಪಿಲ್ಲ ಬಿಡಿ. ಅಂದಹಾಗೆ ವೀಕೆಂಡ್ ಅಲ್ಲಿ ನಾವು ಹೋಗೋ ಸ್ಪಾಟ್ ಹೇಗಿರಬೇಕು? ಒಳ್ಳೆ ಗ್ರೀನರಿ, ತಂಪಾದ ವಾತಾವರಣ, ಒಳ್ಳೆ ಊಟ ಜತೆಗೆ ಸ್ವಲ್ಪ ಕಿಕ್ ಬೇಕು ಅನ್ನೋ ಕೆಲ ಪಡ್ಡೆ ಹುಡುಗರಿಗೆ ಒಳ್ಳೆ ವೈನ್. ಇದೆಲ್ಲದರ ಜತೆಗೆ ಫನ್ ಮಾಡ್ತಾ ನಕ್ಕು ನಕ್ಕು ಸಾಕಾಯಿತಪ್ಪ ಅಂತ ಹೇಳೋದಕ್ಕೆ ಒಂದು ಗ್ಯಾಂಗ್ ಇದ್ರೆ ಆಹಾ!! ಅದರ ಮಜಾನೇ ಬೇರೆ.
ಇದೆಲ್ಲಿದೆ ಗೊತ್ತಾ?
ಸೊ ಈ ರೀತಿನೂ ಒಂದ್ ಜಾಗ ಇದ್ರೆ ಹೇಳಿ ಬ್ರದರ್ ಅಂತ ಯಾರಾದ್ರೂ ಸಜೆಶನ್ ಕೇಳಿದ್ರೆ ಖಂಡಿತವಾಗಿ ನಾನು ಸಜೆಸ್ಟ್ ಮಾಡೋ ಜಾಗ ಅಂದ್ರೆ ಅದು ಬಿಗ್ ಬ್ಯಾನಿಯನ್ ರಾಂಚ್ ರೆಸಾರ್ಟ್. ಬೆಂಗಳೂರು ದೊಡ್ಡಾಲದ ಮರದ ಸಮೀಪ ಇರುವ ಬಿಗ್ ಬ್ಯಾನಿಯನ್ ರಾಂಚ್, ಬೆಂಗಳೂರಿನಿಂದ ಒಂದು ಸಣ್ಣ ಬ್ರೇಕ್ ಬೇಕು, ಜತೆಗೆ ಬೆಂಗಳೂರಿನ ಹತ್ತಿರಾನೇ ಒಳ್ಳೆ ನೇಚರ್ ಜತೆ ಫೈನ್ ಡೈನ್ ವಿಥ್ ವೈನ್ ಬೇಕು ಅಂತ ಹುಡುಕೋರಿಗೆ ಇದು ಪರ್ಫೆಕ್ಟ್ ಸ್ಪಾಟ್. ಇಲ್ಲಿಗೆ ಬಿಗ್ ಬ್ಯಾನಿಯನ್ ಅಂತ ಹೆಸರು ಬರೋಕೆ ಐತಿಹಾಸಿಕ ದೊಡ್ಡಾಲದ ಮರಾನೇ ಕಾರಣ. ದೊಡ್ಡಾಲದ ಮರದಿಂದ ಕೇವಲ 4.5 ಕಿಮೀ ದೂರ ಇರೋ ಕಾರಣಕ್ಕೆ ಇದನ್ನು ಬಿಗ್ ಬ್ಯಾನಿಯನ್ ರಾಂಚ್ ರೆಸಾರ್ಟ್ ಅಂಡ್ ವೈನ್ ಯಾರ್ಡ್ ಅಂತ ಹೆಸರಿಸಲಾಗಿದೆ.

ದ್ರಾಕ್ಷೀ ತೋಟದ ಮಧ್ಯೆ ಒಂದು ಸ್ವರ್ಗ!
20 ಎಕರೆಗಳಷ್ಟು ಹಚ್ಚ ಹಸಿರಿನ ಮತ್ತು ದ್ರಾಕ್ಷಿತೋಟಗಳ ಮಧ್ಯದಲ್ಲಿ ಲೊಕೇಟ್ ಆಗಿರೋ ಈ ಸ್ಥಳವು, ಆಲದ ಮರವಾದ ದೊಡ್ಡ ಅಲದ ಮರದಿಂದ ಕೆಲವೇ ನಿಮಿಷಗಳ ದೂರದಲ್ಲಿದೆ. ನಿಮ್ಮ ವೀಕೆಂಡ್ ವಿಹಾರಕ್ಕೆ, ಫ್ರೆಂಡ್ಸ್ ಜತೆ ಪಾರ್ಟಿಗೆ ಒಟ್ನಲ್ಲಿ ನಗರ ಜೀವನದಿಂದ ಸಣ್ಣ ಬ್ರೇಕ್ ಬಯಸೋರಿಗೆ ಬಿಗ್ ಬ್ಯಾನಿಯನ್ ರಾಂಚ್ ಕೈ ಬೀಸಿ ಕರೀತಾಯಿದೆ. ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ಲಕ್ಸುರಿ ವಿಲ್ಲಾಗಳು, ಹೈಟೆಕ್ ಸ್ವಿಮ್ಮಿಂಗ್ ಪೂಲ್, ಬೆರಗುಗೊಳಿಸುವ ಗ್ರೀನರಿ ಮತ್ತು ಇದೆಲ್ಲದರ ಜತೆಗೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕೂತು, ಹರಟೆ ಹೊಡಿತಾ ರುಚಿಯಾದ ಆಹಾರ ತಿನ್ನೋಕೆ ದಿ ಬೆಸ್ಟ್ ಡೈನಿಂಗ್ ಸ್ಪೇಸ್.
ಸಿಪ್ ಎ ವೈನ್ ಬಿಫೋರ್ ಡೈನ್
ಇಲ್ಲಿ ಮತ್ತೊಂದು ಇಂಟೆರೆಸ್ಟಿಂಗ್ ಪಾರ್ಟ್ ಅಂದ್ರೆ ಕರ್ನಾಟಕದ ಸುಪ್ರಸಿದ್ಧ ವೈನ್ ಬಿಗ್ ಬ್ಯಾನಿಯನ್ ಕೂಡ ಇಲ್ಲೇ ತಯಾರಾಗೋದು. ಇಲ್ಲಿಯ ವೈನ್ ಯಾರ್ಡ್‌ನಲ್ಲಿ ವೈನ್ ಖರೀದಿಗೆಂದೇ ಒಂದು ಬೋಟಿಕ್ ಇದ್ದು, ಇಲ್ಲೇ ತಯಾರಾಗುವಂತಹ ಎಲ್ಲಾ ತರಹದ ವೈನ್ ಗಳನ್ನೂ ಇಲ್ಲೇ ನಾವು ಖರೀದಿಸಬಹುದು. ಜತೆಗೆ ಕಂಪ್ಲೀಟ್ ವೈನ್ ಪ್ರೊಸೆಸಿಂಗ್ ಇಂಡೆಕ್ಸ್ ಟೂರ್ ಕೂಡ ಮಾಡಬಹುದು. ಇಲ್ಲಿ ನಿಮ್ಮನ್ನ ಒಬ್ಬ ಗೈಡ್, ಪ್ರೊಸೆಸಿಂಗ್ ಇಂಡೆಕ್ಸ್ ಒಳಗೆ ಕರೆದುಕೊಂಡು ಹೋಗಿ, ವೈನ್ ತಯಾರಿಸುವ ವಿಧಾನವನ್ನು ನಿಮಗೆ ಅರ್ಥವಾಗುವ ರೀತಿಲಿ ತಿಳಿಸೋದು ಇಲ್ಲಿಯ ವಿಶೇಷ. ಎಷ್ಟೋ ಜನಕ್ಕೆ ವೈನ್‌ಗು ಮತ್ತು ಅಲ್ಕೊಹಾಲಿಗೂ ವ್ಯತ್ಯಾಸ ಗೊತ್ತೇ ಇರಲ್ಲ. ಅಲ್ಕೊಹಾಲಿಗೂ ಮತ್ತು ವೈನ್‌ಗೂ ಇರುವ ವ್ಯತ್ಯಾಸವನ್ನು ತುಂಬಾ ಸಿಂಪಲ್ ಆಗಿ ತಿಳ್ಕೊಬೇಕು ಅಂದ್ರೆ ಬಿಗ್ ಬ್ಯಾನಿಯನ್ ವೈನ್ ಯಾರ್ಡ್‌ಗೆ ಒಮ್ಮೆ ಭೇಟಿ ಕೊಡೋದು ಒಳ್ಳೆ ನಿರ್ಧಾರ.

ವೈನ್ ನೋಡೋದು ಮಾತ್ರಾನಾ?
ಸಾಮಾನ್ಯವಾಗಿ ವೈನ್ ನೋಡ್ತಿದ್ದಂಗೆ ಒಂದ್ ಸಲ ಟೇಸ್ಟ್ ಮಾಡ್ಬೇಕಪ್ಪ ಅಂತ ಅನ್ನಿಸೋದು ಸಹಜ. ಆದ್ರೆ ಬರಿ ಟೇಸ್ಟ್ ಮಾಡೋಕೆ ಒಂದು ಬಾಟಲಿ ಖರೀದಿ ಮಾಡ್ಬೇಕಾ ಅನ್ನೋ ಬೇಜಾರು ನಿಮಗೆ ಬೇಡ. ಬಿಗ್ ಬ್ಯಾನಿಯನ್ ವೈನ್ ಯಾರ್ಡ್ ಅಲ್ಲಿ ವೈನ್ ಟೇಸ್ಟ್ ಮಾಡೋದಕ್ಕೆ ಅಂತಾನೆ ಒಂದು ಜಾಗ ಇದೆ. ಏಳು ಬಗೆಯ ವೈನ್ ಟೇಸ್ಟ್ ಮಾಡೋದಕ್ಕೆ ಇಲ್ಲಿ ಸಿಕ್ಕಿದ್ರು, ಆ ಏಳೂ ತರದ ವೈನ್ ಕುಡಿಯೋದಕ್ಕೆ ರೀತಿ ರಿವಾಜು ಇದೆ. ಬಾರ್ ಕೌಂಟರ್‌ಗೆ ಹೋಗಿ ಒಂದು ಪೆಗ್ ಏರಿಸಿ, ನಡಿ ಮನೆಕಡಿಗೆ ಅನ್ನೋ ತರ ಇಲ್ಲಿ ಕುಡಿಯೋದಲ್ಲ. ಆ ರಿವಾಜುನ ಹೇಳ್ಕೊಡೋದಕ್ಕೆ ಅಂತಾನೆ ಇಲ್ಲಿ ಒಬ್ರು ಇರ್ತಾರೆ. ಅವ್ರ ಇನ್ಸ್ಟ್ರಕ್ಷನ್ ಪಾಲಿಸಿ ಒಂದು ಸಿಪ್ ವೈನ್ ಕುಡಿದು ಒಂದು ಪೀಸ್ ಚೀಸ್ ತಿಂದ್ರೆ, ಆಹಾ! ಕುಡಿದೋರಿಗೆ ಗೊತ್ತು ಆ ಗಮ್ಮತ್ತು.