ಹಸುರಿನ ಬನಸಿರಿಯ ನಡುವೆ ʻಹಸಿರು ಭೂಮಿʼ ರೆಸಾರ್ಟ್
ದೇಶ- ವಿದೇಶಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಡಗರ ಸಂಭ್ರಮ ಶುರುವಾಗಿದೆ. ಜತೆಗೆ ನ್ಯೂ ಇಯರ್ ಸೆಲೆಬ್ರೇಷನ್‌ಗೂ ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಉಳಿದಿವೆ. ಹಬ್ಬದ ಆಚರಣೆಗಾಗಿ ಮಕ್ಕಳಿಗಂತೂ ಕ್ರಿಸ್‌ಮಸ್ ಹಾಲಿಡೇಸ್ ಇದ್ದೇ ಇರುತ್ತದೆ. ಮಕ್ಕಳ ಜತೆಗೆ ಈ ರಜಾದಿನಗಳನ್ನು ವಿಶೇಷವಾಗಿ ಕಳೆಯಬೇಕೆಂದುಕೊಂಡಿದ್ದೀರಾ? ಹಾಗಾದರೆ ಬೆಂಗಳೂರಿನ ಸುತ್ತಮುತ್ತಲು ನಿಮಗಾಗಿ ಅನೇಕ ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಮಕ್ಕಳಿಗಾಗಿಯೇ ವಿಶೇಷ ಆಫರ್‌ಗಳನ್ನು ನೀಡುತ್ತಿರುವ ಹಸಿರು ಭೂಮಿ ರೆಸಾರ್ಟ್ ಬಗ್ಗೆ ನೀವು ತಿಳಿಯಲೇಬೇಕು.
ಬೆಂಗಳೂರಿನ ನಗರದಿಂದ ಕೂಗಳತೆಯ ದೂರದಲ್ಲೇ ಇರುವ ʼಹಸಿರು ಭೂಮಿ-ಗ್ರೀನ್ ಅರ್ತ್ ನೇಚರ್ ಇಕೋ ಫ್ರೆಂಡ್ಲೀʼ ರೆಸಾರ್ಟ್ ಹೆಸರೇ ಹೇಳುವಂತೆ ನಗರದೊಳಗೇ ಇದ್ದು, ನಗರವಾಸಿಗಳಿಗೆ ಹಚ್ಚ ಹಸಿರಿನ ವಾತಾವರಣವನ್ನು ಒದಗಿಸುತ್ತದೆ. ಏಕಕಾಲಕ್ಕೇ ಹಿಲ್ ಸ್ಟೇಷನ್ ಅನುಭವಗಳನ್ನು ಕೊಡುತ್ತದೆ. ಸ್ಟೇ, ಪ್ಲೇ ಆಂಡ್ ಎಕ್ಸ್‌ಪ್ಲೋರ್ ಎಂಬ ಟ್ಯಾಗ್ ಲೈನ್ ಮೂಲಕವೇ ಫೇಮಸ್ ಆಗಿರುವ ಈ ರೆಸಾರ್ಟ್, ಬೆಂಗಳೂರಿನ ಯಲಹಂಕದಿಂದ ಸುಮಾರು 20 ಕಿಮೀ ದೂರದಲ್ಲಿರುವ ಗೌಡಹಳ್ಳಿಯಲ್ಲಿದೆ. ಅಲ್ಲದೆ ಈಗಾಗಲೇ ಬೆಂಗಳೂರಿಗರ ಅಚ್ಚುಮೆಚ್ಚಿನ ರೆಸಾರ್ಟ್ ಎಂಬ ಕೀರ್ತಿಗೂ ಪಾತ್ರವಾಗಿದೆ.

ಕಡಿಮೆ ಬಜೆಟ್‌ನಲ್ಲಿ ಲಕ್ಸೂರಿಯಸ್ ಸ್ಟೇ
ಬೆಂಗಳೂರಿನ ಆಸುಪಾಸಿನಲ್ಲಿ ಮಕ್ಕಳ ಜತೆಗೆ ಕ್ರಿಸ್‌ಮಸ್ ಸೆಲೆಬ್ರೇಷನ್ ಹಾಗೂ ನ್ಯೂ ಇಯರ್ ಸೆಲೆಬ್ರೇಟ್ ಮಾಡುವುದಕ್ಕೆ ಬಜೆಟ್ ಫ್ರೆಂಡ್ಲೀ ಆಗಿರುವ ಸ್ಟೇ ಹುಡುಕುತ್ತಿದ್ದರೆ ʻಹಸಿರು ಭೂಮಿʼ ರೆಸಾರ್ಟ್ ದಿ ಬೆಸ್ಟ್ ಆಯ್ಕೆ. ಯಾಕೆಂದರೆ ಹಬ್ಬ, ಗೌಜು ಗದ್ದಲಗಳ ನಡುವೆ ಮಕ್ಕಳೊಂದಿಗೆ ಸಮಯ ಕಳೆಯುವುದಕ್ಕೆ ಇಲ್ಲಿ ನಿಮಗೆ ಅನೇಕ ಅವಕಾಶಗಳನ್ನು ಕಲ್ಪಿಸಲಾಗಿದೆ. ಕಪಲ್ ರೂಮ್, 20 ಮಂದಿಗೆ ಹೊಂದಿಕೆಯಾಗುವಂತಿರುವ ಡಾರ್ಮೆಟ್ರಿ, ಬ್ಯಾಚುಲರ್ ರೂಮ್ಸ್, ಫ್ಯಾಮಿಲಿ ರೂಮ್ ಮಾತ್ರವಲ್ಲದೆ ಲಕ್ಸುರಿ ಟೆಂಟ್ಸ್ ಸಹ ಲಭ್ಯವಿದ್ದು ಮಕ್ಕಳಂತೂ ಇಲ್ಲಿನ ವಾತಾವರಣವನ್ನು ಎಂಜಾಯ್ ಮಾಡಬಹುದು.
ಎಟಿವಿ ರೈಡ್ ಮಿಸ್ ಮಾಡಿಕೊಳ್ಳಬೇಡಿ
ಮಕ್ಕಳಿಗೆ ಇಲ್ಲಿ ಪ್ರತ್ಯೇಕವಾದ ಪ್ಲೇ ಏರಿಯಾ, ವಿಭಿನ್ನವಾಗಿರುವ ಗೇಮ್ಸ್ ಆಕ್ಟಿವಿಟೀಸ್‌ಗಳಿವೆ. ಮಕ್ಕಳಿಗಷ್ಟೇ ಅಲ್ಲದೆ ಎಲ್ಲ ವಯಸ್ಸಿನವರಿಗೂ ಸೂಕ್ತವಾಗುವಂಥ ಜಿಪ್‌ಲೈನ್, ಸ್ಕೈ ಸೈಕ್ಲಿಂಗ್, ಕ್ರಿಕೆಟ್, ವಾಲಿಬಾಲ್, ಚೆಸ್, ಕೇರಂ, ಅಡ್ವೆಂಚರಸ್ ರೋಪ್ ಆಕ್ಟಿವಿಟೀಸ್‌ನಂಥ ಅನೇಕ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಚಟುವಟಿಕೆಗಳು ಇಲ್ಲಿದ್ದು, ಎಟಿವಿ ರೈಡ್ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.

ಇನ್ನು ಸ್ವಚ್ಛ ಹಾಗೂ ಸುಂದರವಾಗಿರುವ ಸ್ವಿಮ್ಮಿಂಗ್ ಪೂಲ್, ಮಸ್ತ್ ಮಜಾ ಮಾಡಲು ರೇನ್ ಡ್ಯಾನ್ಸ್ ವ್ಯವಸ್ಥೆಯನ್ನು ಇಲ್ಲಿನ ಗ್ರಾಹಕರಿಗಾಗಿ ನೀಡಲಾಗುತ್ತದೆ. ಚಳಿಯಲ್ಲಿ ಕಾಲ ಕಳೆಯುವುದು ಕಷ್ಟವೆನ್ನುವ ಗ್ರಾಹಕರಿಗಾಗಿಯೇ ರಾತ್ರಿ ಫೈರ್ ಕ್ಯಾಂಪ್‌ಗೂ ಇಲ್ಲಿ ಅವಕಾಶವಿದ್ದು, ಜತೆಗೆ ಬಾರ್ಬೆಕ್ಯೂ ಎಂಜಾಯ್ ಮಾಡಬಹುದು.
ಮಕ್ಕಳಿಗೆ ಕಸ್ಟಮೈಸ್ಡ್ ಫುಡ್
ಇಲ್ಲಿ ವೆಜ್ ಮಾತ್ರವಲ್ಲದೆ ನಾನ್ ವೆಜ್ ಇಷ್ಟಪಡುವವರ ಆಯ್ಕೆಗೆ ತಕ್ಕಂತೆ ವಿಶೇಷವಾದ ಆಹಾರ ಕ್ರಮಗಳನ್ನು ಅನುಸರಿಸಲಾಗುತ್ತದೆ. ಶುಚಿ ರುಚಿಗೆ ಮೊದಲ ಆದ್ಯತೆ ನೀಡುವುದರಿಂದ ಉಣಬಡಿಸುವ ಆಹಾರವೆಲ್ಲವೂ ದಿ ಬೆಸ್ಟ್ ಎನ್ನುವುದರಲ್ಲಿ ಸಂದೇಹವಿಲ್ಲ. ಮಕ್ಕಳ ಜತೆಗೆ ಹೋಗುವಾಗ ಆಹಾರದ ಬಗ್ಗೆ ಚಿಂತಿಸುವವರು ನೀವಾದರೆ ಮಕ್ಕಳಿಗಾಗಿಯೇ ಇಲ್ಲಿ ಕಸ್ಟಮೈಸ್ಡ್ ಸ್ಪೆಷಲ್ ಮೆನು ಸಿದ್ಧವಿರುತ್ತದೆ.
ಡೆಸ್ಟಿನೇಷನ್ ವೆಡ್ಡಿಂಗ್ ಸೆಂಟರ್
ಬರಿಯ ಡೇ ಔಟ್, ಸ್ಟೇ ಬಯಸುವವರಿಗಷ್ಟೇ ಸೀಮಿತವಾಗಿರದ ʻಹಸಿರು ಭೂಮಿʼ ರೆಸಾರ್ಟ್, ಡೆಸ್ಟಿನೇಷನ್ ವೆಡ್ಡಿಂಗ್ ಸೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ಅಸುಪಾಸಿನಲ್ಲಿಯೇ ಕಸ್ಟಮೈಸ್ಡ್ ಥೀಮ್‌ನಲ್ಲಿ ವಿವಾಹಿತರಾಗಬೇಕು ಎಂದುಕೊಳ್ಳುವವರು ನೀವಾದರೆ ವಿಶೇಷವಾದ ಆಸನ ವ್ಯವಸ್ಥೆಗಳಿರುವ ಬೃಹತ್ ಹಾಲ್ ಇಲ್ಲಿದೆ. ಅಲ್ಲದೆ ಹೊರಾಂಗಣದಲ್ಲೂ ಅಲಂಕಾರ ಮಾಡುವ ವಿಶೇಷ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿರುವುದರಿಂದ ಆಹಾರಕ್ಕೂ ವಿಹಾರಕ್ಕೂ ಯಾವುದೇ ಸಮಸ್ಯೆ ಬರುವುದಿಲ್ಲ.
ಒಟ್ಟಿನಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ, ಕಿಡ್ಸ್ ಫ್ರೆಂಡ್ಲೀ ಎನಿಸಿಕೊಂಡಿರುವ ಹಸಿರು ಭೂಮಿ-ಗ್ರೀನ್ ಅರ್ತ್ ನೇಚರ್ ಇಕೋ ಫ್ರೆಂಡ್ಲೀ ರೆಸಾರ್ಟ್ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜತೆ ಕ್ರಿಸ್‌ಮಸ್ ಹಾಗೂ ನ್ಯೂ ಇಯರ್ ಆಚರಣೆಗೆ ಬೆಸ್ಟ್ ಲೊಕೇಶನ್ ಎನಿಸಿಕೊಂಡಿದೆ.

ಸ್ಟೇ ಬಗ್ಗೆ ಚಿಂತೆ ಬೇಕಿಲ್ಲ!
ಕಪಲ್ ರೂಮ್ಸ್
ಡಾರ್ಮೆಟ್ರಿ
ಬ್ಯಾಚುಲರ್ ರೂಮ್ಸ್
ಫ್ಯಾಮಿಲಿ ರೂಮ್ಸ್
ಲಕ್ಸುರಿ ಟೆಂಟ್ಸ್
ವಿಳಾಸ
ಹಸಿರುಭೂಮಿ, ಯಲಹಂಕ, ಗೌಡಹಳ್ಳಿ, ಬೆಂಗಳೂರು, ಕರ್ನಾಟಕ- 562163
6363578055