Saturday, January 17, 2026
Saturday, January 17, 2026

ಸುಡುಬುತ್ತಿ ಮಿಸ್ ಮಾಡಂಗಿಲ್ಲ!

ಸಾಮಾನ್ಯವಾಗಿ ರೆಸಾರ್ಟ್‌ಗಳ ಹುಡುಕಾಟವೆಂದರೆ ಲೊಕೇಷನ್‌ ಹಾಕಿ ಫೈವ್‌ ಸ್ಟಾರ್‌ ಅಥವಾ ಥ್ರೀ ಸ್ಟಾರ್‌ ರೆಸಾರ್ಟ್‌ಗಳಿಗಾಗಿಯೇ ಹುಡುಕಾಡುವವರು ನಾವು-ನೀವೆಲ್ಲರೂ. ಆದರೆ ರೇಟಿಂಗ್‌ನ ಹೊರತಾಗಿ ಪ್ರಕೃತಿಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯಲು ಬಯಸುವವರು ನೀವಾದರೆ ಚಿಕ್ಕಮಗಳೂರಿನ ಮೂಡಿಗೆರೆಯ ಈ ರೆಸಾರ್ಟ್‌ ಬಗ್ಗೆ ತಿಳಿಯಲೇಬೇಕು.

ಸುತ್ತಲೂ ಹಚ್ಚ ಹಸಿರಿನ ವನಸಿರಿ, ಹರಿಯುವ ಪುಟ್ಟದಾದ ತೊರೆ, ಇದರ ನಡುವೆ ಮಲೆನಾಡಿನ ಅನುಭವವನ್ನು ನೀಡುವ ವಿಭಿನ್ನ ಮಾದರಿಯ ಮಡ್‌ ಕಾಟೇಜಸ್.‌ ಇಷ್ಟಕ್ಕೇ ಮುಗಿದಿಲ್ಲ, ಮಲೆನಾಡ ಶೈಲಿಯ ರುಚಿಕರ ಖಾದ್ಯಗಳ ಸವಿಯೂಟ. ಹೀಗೆ ನಿಸರ್ಗದ ಜತೆಗೆ ನಮ್ಮನ್ನು ಬೆಸೆಯುವ ವಿಶೇಷವಾದ ರೆಸಾರ್ಟ್‌ ಒಂದು ವರ್ಷದ ಹಿಂದಷ್ಟೇ ಪಶ್ಚಿಮ ಘಟ್ಟಗಳ ನಡುವೆ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ಅದುವೇ ʻತನ್ಮಾತ್ರಾʼ.

ಯಾಕಾಗಿ ʻತನ್ಮಾತ್ರಾʼ ?

ಚಿಕ್ಕಮಗಳೂರಿನಲ್ಲಿಅದೆಷ್ಟೋ ರೆಸಾರ್ಟ್‌ಗಳಿರುವಾಗ, ವಿಶ್ರಾಂತಿಗಾಗಿ, ವಿರಾಮದ ಸಮಯವನ್ನು ಕಳೆಯುವುದಕ್ಕಾಗಿ ʻತನ್ಮಾತ್ರಾʼವನ್ನೇ ಯಾಕಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಅನೇಕರು ಪ್ರಶ್ನೆ ಮಾಡಬಹುದು. ಗಮನವಿಟ್ಟು ಕೇಳಿಸಿಕೊಳ್ಳಿ; ʻತನ್ಮಾತ್ರಾʼ ಎಂಬ ರೆಸಾರ್ಟ್ ವಿಶೇಷತೆಗಳ ಬೀಡು. ಬೇರೆಲ್ಲೂ ಸಿಗದ ಅನೇಕ ಅವಕಾಶಗಳು ಅತಿಥಿಗಳಿಗೆ ಇಲ್ಲಿ ಲಭ್ಯವಾಗುತ್ತದೆ.

Untitled design (27)

ಪ್ರಮುಖವಾಗಿ ಇಲ್ಲಿರುವ 8 ಮಣ್ಣಿನ ಕುಟೀರಗಳು, ಮೌಂಟೇನ್‌ ವ್ಯೂ ಕಾಟೇಜ್‌ಗಳು ಎಲ್ಲ ಕಾಲಕ್ಕೂ ನಿಮಗೆ ತಂಪಾದ ವಾತಾವರಣವನ್ನು ಸೃಷ್ಟಿಸಿಕೊಡುತ್ತದೆ. ಕುಟೀರಗಳ ಮುಂಭಾಗದಲ್ಲಿರುವ ಮರದ ಕಂಬಗಳು, ಪೀಠೋಪಕರಣಗಳೆಲ್ಲವೂ ಮರದಿಂದಲೇ ತಯಾರಿಸಲಾಗಿದ್ದು ಸಾಂಪ್ರದಾಯಿಕ ಮಲೆನಾಡಿನ ಮನೆಗಳಲ್ಲಿಯೇ ಇದ್ದೇವೇನೋ ಎಂಬಂತೆ ಮಾಡುತ್ತದೆ. ಅಲ್ಲದೆ 50-100 ವರ್ಷಗಳ ಹಿಂದಿನ ಮಲೆನಾಡಿಗೊಮ್ಮೆ ಭೇಟಿ ನೀಡಿದ್ದೇವೆಂಬ ಅನುಭವವನ್ನೂ ನೀಡುತ್ತದೆ.

ಮಲೆನಾಡಿನ ಸವಿರುಚಿ

ಚಿಕ್ಕಮಗಳೂರಿಗೆ ಬಂದು ಅಲ್ಲಿನ ಸ್ಥಳೀಯ ಆಹಾರವನ್ನು ಸವಿಯದೆ ಪನೀರ್‌, ಬೇಬಿಕಾರ್ನ್‌ ಫುಡ್‌ ಐಟಂಗಳಿಗಾಗಿ ಹುಡುಕಾಡುವುದಕ್ಕಿಂತ ಮಲೆನಾಡಿನ ಆಹಾರವನ್ನೂ ಸವಿಯುವುದೇ ಖುಷಿ. ಈ ನಿಟ್ಟಿನಲ್ಲಿʻ ತನ್ಮಾತ್ರಾʼ ಕಾರ್ಯಪ್ರವೃತ್ತವಾಗಿದ್ದು, ಬಂದಿರುವ ಅತಿಥಿಗಳಿಗಾಗಿ ವಿಶೇಷವಾದ ಮಲೆನಾಡಿನ ಬುತ್ತಿಯನ್ನೇ ಉಣಬಡಿಸುತ್ತದೆ. ಬಾಳೆ ಎಲೆಯ ನಡುವೆ ಇರುವ ನಾನ್‌ ವೆಜ್‌ ಡಿಶ್‌ಗಳನ್ನು ಬೆಂಕಿಯಲ್ಲಿ ಬೇಯಿಸಿ ತಯಾರಿಸುವ ʻಸುಡುಬುತ್ತಿʼ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಇಲ್ಲಿ ಸೌದೆ ಒಲೆಯಲ್ಲೇ ಆಹಾರ ಸಿದ್ಧವಾಗುವುದರಿಂದ ರುಚಿ ಇನ್ನೂ ಹೆಚ್ಚೇ. ಮೊಸರು, ಮಜ್ಜಿಗೆ, ಬೆಣ್ಣೆ-ತುಪ್ಪದಿಂದ ತೊಡಗಿ ಎಲ್ಲವೂ ಇಲ್ಲಿ ಹೋಮ್‌ ಮೇಡ್.‌ ಕೋಲ್ಡ್‌ ಪ್ರೆಸ್ಡ್‌ ಆಯಿಲ್‌, ಆರ್ಗಾನಿಕ್‌ ಬೆಲ್ಲ, ಮಾತ್ರವಲ್ಲದೆ ರಾಜಮುಡಿ ಅಕ್ಕಿಯನ್ನೇ ಇಲ್ಲಿ ಬಳಕೆ ಮಾಡುತ್ತಾರೆ. ಅದಷ್ಟೇ ಅಲ್ಲದೆ ರಾಸಾಯನಿಕ ಮುಕ್ತ ಹಣ್ಣು-ತರಕಾರಿಗಳನ್ನು ತಾವೇ ಬೆಳೆಯುವುದರಿಂದ 100% ತಾಜಾ ಆಹಾರವನ್ನು ಟೇಸ್ಟ್‌ ಮಾಡಬಹುದು.

Untitled design (28)

ಇನ್ನು ಆಹಾರ ತಯಾರಿಸುವುದಕ್ಕೆ, ಉಣಬಡಿಸುವುದಕ್ಕೆ ಇಲ್ಲಿ ಕಂಚಿನ ಪಾತ್ರೆ, ತಟ್ಟೆಗಳನ್ನು ಬಳಕೆ ಮಾಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾಗಿರುವುದರಿಂದ ಅತಿಥಿಗಳ ಆರೋಗ್ಯಕ್ಕೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ.

ಮಸ್ತಾಗಿದೆ ಆಫ್‌ ರೋಡ್‌ ಡ್ರೈವ್‌

ಊಟದ ನಂತರ ಏನ್‌ ಮಾಡೋದು ಅಂತ ಯೋಚಿಸುವಾಗಲೇ ಹಿಡನ್‌ ಜೆಮ್‌ ದೇವರಮನೆ ಬೆಟ್ಟಕ್ಕೆ ಆಫ್‌ ರೋಡ್‌ ಡ್ರೈವ್‌ ಕರೆದುಕೊಂಡು ಹೋಗುತ್ತಾರೆ. ಜೀಪ್‌ನಲ್ಲಿ ಕುಳಿತು ಮಡ್‌ ಡ್ರೈವ್‌ ಅನುಭವ ಬಣ್ಣಿಸುವುದಕ್ಕೆ ಪದಗಳೇ ಸಿಗಲಾರದು. ಇದಷ್ಟೇ ಅಲ್ಲದೆ ಸಮೀಪದಲ್ಲಿರುವ ಜಲಪಾತಗಳಿಗೂ ಕರೆದೊಯ್ಯುತ್ತಾರೆ. ಡ್ರೈವ್‌ ಮುಗಿಸಿ ಸಂಜೆ ಮರಳುತ್ತಲೇ ಮತ್ತದೇ ಕಂಚಿನಲೋಟದಲ್ಲಿ ಬಿಸಿಬಿಸಿಯಾದ ಸ್ಟ್ರಾಂಗ್‌ ಕಾಫಿ ನಿಮ್ಮ ಮುಂದಿರುತ್ತದೆ. ಕತ್ತಲಾಗುತ್ತಲೇ ಬೆಚ್ಚನೆಯ ಅನುಭವ ನೀಡಲು ಫೈರ್‌ ಕ್ಯಾಂಪ್‌, ರಾತ್ರಿಗೆ ಮಲೆನಾಡಿನ ಶೈಲಿಯ ರುಚಿಕರವಾದ ಊಟ. ಹೀಗೆ ರಾತ್ರಿ ಕಳೆದೇ ಬಿಟ್ಟಿರುತ್ತದೆ.

ಬೆಳಗಾಗುತ್ತಲೇ ಹ್ಯಾಂಡ್‌ ಮೇಡ್‌ ಸೋಪ್‌, ಸೀಗೇಕಾಯಿ ಪುಡಿ ಹಾಗೂ ಬೇವಿನ ಪೌಡರ್‌ ಜತೆಗೆ ಬ್ಯಾಂಬೂ ಬ್ರಶ್‌ ನಿಮ್ಮ ಮುಂದಿರುತ್ತದೆ. ಫ್ರೆಶ್‌ ಆಗಿ ನೇಚರ್‌ ವಾಕ್‌, ಪಕ್ಕದಲ್ಲೇ ಹರಿಯುವ ಸಣ್ಣ ತೊರೆಯಲ್ಲಿ ಸ್ವಲ್ಪ ಹೊತ್ತು ಆಟವಾಡಿ ಬಂದರೆ ರೆಸಾರ್ಟ್‌ ಡೈನಿಂಗ್‌ ಏರಿಯಾದಲ್ಲಿ ಸ್ವಾದಿಷ್ಟಕರವಾದ ಮಲೆನಾಡಿನ ಉಪಹಾರ ಸಿಗುತ್ತದೆ. ಹೀಗೆ ವಾರಾಂತ್ಯವನ್ನು ಹಿತಕರವಾಗಿ ಕಳೆಯಲು ಬಯಸುವವರಿಗೆ ಸೂಕ್ತ ಆಯ್ಕೆ.

Untitled design (29)

ಚಿಕ್ಕಮಗಳೂರಿನಿಂದ ಕೇವಲ ಒಂದೂವರೆ ಗಂಟೆ ದೂರದಲ್ಲಿ, ಬೆಂಗಳೂರಿನಿಂದ 5 ಗಂಟೆಯ ಪ್ರಯಾಣದಲ್ಲೇ ಸಿಗುವ ಈ ರೆಸಾರ್ಟ್‌ ಅನುಭವವನ್ನು ಪಡೆಯುವುದಕ್ಕೆ ಚಳಿಗಾಲವೇ ಸೂಕ್ತ ಸಮಯ. ಸೀಸನ್‌ನಲ್ಲಿ ದರದಲ್ಲಿ ಸ್ವಲ್ಪ ಬದಲಾವಣೆಗಳು ಬರುತ್ತದೆಯಾದರೂ ಇಂಥ ಅದ್ಭುತ ಅನುಭವ ಬೇರೆಲ್ಲೂ ಸಿಗಲಾರದು.

--

ಕೋವಿಡ್‌ ಬಂದ ನಂತರ ಜೀವನವನ್ನು ಕಟ್ಟಿಕೊಳ್ಳುವುದಕ್ಕಾಗಿ ಕಷ್ಟವೆನಿಸಿತು. ಆಗ ನಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಸ್ವಂತ ಉದ್ಯೋಗ ಮಾಡಬೇಕೆಂಬ ಹುಡುಕಾಟದೊಂದಿಗೆ ಪ್ರಾರಂಭಿಸಿದ್ದೇ ʻತನ್ಮಾತ್ರಾʼ ಎಂಬ ವಿಭಿನ್ನ ರೆಸಾರ್ಟ್‌ ಕಾನ್ಸೆಪ್ಟ್.‌ ಇಕೋ ಸ್ಟೇ ಎಂದು ಹೇಳಿ ಕಾಂಕ್ರೀಟಿನ ರೂಮುಗಳನ್ನು ಕಟ್ಟಿ ಅತಿಥಿಗಳನ್ನು ನಂಬಿಸುವ ರೆಸಾರ್ಟ್‌ಗಳ ನಡುವೆ ನಮ್ಮ ರೆಸಾರ್ಟ್‌ ಮಣ್ಣು, ಇಟ್ಟಿಗೆಯಿಂದ ತಯಾರಿಸಿ ವಿಶೇಷ ಅನುಭವವನ್ನೇ ನೀಡುತ್ತದೆ. 2022 ರಲ್ಲಿ ಈ ರೆಸಾರ್ಟ್‌ ನಿರ್ಮಾಣ ಶುರುಮಾಡಿ, 2024ರಲ್ಲಿ ಪೂರ್ಣವಾಗಿತ್ತು. ಇತ್ತೀಚೆಗೆ ವರ್ಷದ ಹಿಂದಷ್ಟೇ ಗ್ರಾಹಕರಿಗಿದು ಮುಕ್ತವಾಗಿದೆ.
- ಪ್ರಶಾಂತ್‌, ಮಾಲಿಕರು, ತನ್ಮಾತ್ರಾ ರೆಸಾರ್ಟ್‌

ವಿಶೇಷತೆಗಳೇನು ?

ಸಸ್ಟೇನೆಬಲ್‌ ಪ್ರಾಪರ್ಟಿ

ಮಲೆನಾಡು ಸ್ಟೇ- ಫುಡ್

ಮಡ್‌ ಡ್ರೈವ್‌ /‌ ಆಫ್‌ ರೋಡ್‌ ಡ್ರೈವ್‌

ಫಾಲ್ಸ್‌ ವಿಸಿಟ್‌

100% ಸೋಲಾರ್‌ಪವರ್‌

ನ್ಯಾಚುರಲ್‌ ಪ್ರಾಡಕ್ಟ್ಸ್‌

ಪ್ಲಾಸ್ಟಿಕ್‌ ಫ್ರೀ ನೇಚರ್‌

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ