ದಿ ನೆಸ್ಟ್ ಹೋಮ್ ಸ್ಟೇ ... ದಿ ಬೆಸ್ಟ್ ಹೋಮ್ ಸ್ಟೇ!
ಕೂಡು ಕುಟುಂಬದಲ್ಲಿ ಬೆಳೆದ ಶ್ರೀನಾಥ್ ಹೇಳುವ ಪ್ರಕಾರ ತಮ್ಮ ಮನೆಗೆ ಬಂದವರಿಗೆ ಪ್ರೀತಿಯಿಂದ ಸತ್ಕರಿಸುವುದು ಅವರ ಬದುಕಿನ ಭಾಗವಾಗಿತ್ತು. ಹಾಗೆಯೇ ಅತ್ಯಂತ ತೃಪ್ತಿ ನೀಡುವ ಸಂಗತಿಯೂ ಆಗಿತ್ತು. ಹಾಗಾಗಿ ಕೃಷಿ ಜೊತೆಗೆ ಇನ್ನೂ ಖುಷಿ ಕೊಡುವ ಕೆಲಸ ಮಾಡಬೇಕೆಂದು ನಿರ್ಧರಿಸಿದಾಗ ಅವರಿಗೆ ಹೊಳೆದದ್ದೇ ಹೋಮ್ ಸ್ಟೇ ಮಾಡುವ ಕನಸು.
- ಟಿ.ಜಿ.ನಂದೀಶ್, ತೀರ್ಥಹಳ್ಳಿ
ಮಲೆನಾಡು ಭೂಮಿ ಮೇಲಿನ ಸ್ವರ್ಗ ಅಂತಲೇ ಜನಜನಿತ. ಅದೇ ಕೋನದಲ್ಲಿ ನೋಡಿದಾಗ ಆ ಸ್ವರ್ಗದ ರಾಜಧಾನಿ ತೀರ್ಥಹಳ್ಳಿ ಎಂದರೆ ತಪ್ಪಾಗದು. ತುಂಗೆ ಹರಿವ ನಾಡು ಹತ್ತು ಹಲವು ಕಾರಣಕ್ಕೆ ಹೆಸರುವಾಸಿ. ಇದು ರಾಷ್ಟ್ರಕವಿ ಕುವೆಂಪು ತವರು. ಎಲ್ಲಿ ನೋಡಿದರೂ ಹಸಿರು. ಇಂಥ ಸುಂದರ ಪ್ರಕೃತಿಯಲ್ಲಿ ಶಾಂತಿ ಹುಡುಕಲು ಬರುವ ಪ್ರವಾಸಿಗರ ಮನ ಸೆಳೆಯುತ್ತಿದೆ 'ದಿ ನೆಸ್ಟ್ ಹೋಮ್ ಸ್ಟೇ'.
ಎಂಟು ವರ್ಷದ ಹಿಂದೆ ಶುರುವಾದ ಈ ನೇಚರ್ ಫ್ರೆಂಡ್ಲಿ ಹೋಮ್ ಸ್ಟೇ ಸಾವಿರಾರು ಪ್ರವಾಸಿಗರಿಗೆ ಮರೆಯಲಾಗದ ಅತಿಥ್ಯ ನೀಡಿದೆ.

ದರಲಗೋಡು ಜೋಯಿಸ್ ಕುಟುಂಬದ ಡಿ.ಎನ್.ಶ್ರೀನಾಥ್ ಜೋಯಿಸ್ ಅವರ ಕನಸೇ 'ದಿ ನೆಸ್ಟ್ ಹೋಮ್ ಸ್ಟೇ'. ಕೂಡು ಕುಟುಂಬದಲ್ಲಿ ಬೆಳೆದ ಶ್ರೀನಾಥ್ ಹೇಳುವ ಪ್ರಕಾರ ತಮ್ಮ ಮನೆಗೆ ಬಂದವರಿಗೆ ಪ್ರೀತಿಯಿಂದ ಸತ್ಕರಿಸುವುದು ಅವರ ಬದುಕಿನ ಭಾಗವಾಗಿತ್ತು. ಹಾಗೆಯೇ ಅತ್ಯಂತ ತೃಪ್ತಿ ನೀಡುವ ಸಂಗತಿಯೂ ಆಗಿತ್ತು. ಹಾಗಾಗಿ ಕೃಷಿ ಜೊತೆಗೆ ಇನ್ನೂ ಖುಷಿ ಕೊಡುವ ಕೆಲಸ ಮಾಡಬೇಕೆಂದು ನಿರ್ಧರಿಸಿದಾಗ ಅವರಿಗೆ ಹೊಳೆದದ್ದೇ ಹೋಮ್ ಸ್ಟೇ ಮಾಡುವ ಕನಸು. ತಮ್ಮ 15 ಎಕರೆ ಪ್ರಾಪರ್ಟಿಯಲ್ಲಿ ಸರಿಸುಮಾರು 2 ಎಕರೆ ವಿಸ್ತೀರ್ಣದಲ್ಲಿ ಅತ್ಯಂತ ನವನವೀನತೆಯಿಂದ ಕೂಡಿದ ಪರಿಸರಸ್ನೇಹಿ ಹೋಮ್ ಸ್ಟೇ ಮಾಡಿದರು. ಇದೀಗ ಕಳೆದ 8 ವರ್ಷದಲ್ಲಿ ತೀರ್ಥಹಳ್ಳಿಗೆ ಬರುವ ಪ್ರವಾಸಿಗರ ಮೊದಲ ಆಯ್ಕೆ 'ದಿ ನೆಸ್ಟ್ ಹೋಮ್ ಸ್ಟೇ' ಎಂಬ ಮಟ್ಟಿಗೆ ಖ್ಯಾತಿ ಗಳಿಸಿದೆ. ಇಲ್ಲಿ ನೇಚರ್ ವಾಕ್, ಬರ್ಡ್ ವಾಚಿಂಗ್, ಫೈರ್ ಕ್ಯಾಂಪ್, ಕರೋಕೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳಿದೆ. ಕ್ಲೋರೆಡ್ ರಹಿತ ಸ್ವಿಮ್ಮಿಂಗ್ ಪೂಲ್ ಇಲ್ಲಿದ್ದು ಪ್ರತಿ ವಾರವು ಪೂಲ್ ಕ್ಲೀನ್ ಮಾಡಿ ಫ್ರೆಶ್ ವಾಟರ್ ಬಿಡಲಾಗುತ್ತದೆ. ಡೆಸ್ಟಿನೇಷನ್ ಇವೆಂಟ್ ಮಾಡಲು ಸಹ ಇದು ಸೂಕ್ತ ಸ್ಥಳವಾಗಿದೆ. ಮದುವೆ, ನಿಶ್ಚಿತಾರ್ಥ, ನಾಮಕರಣ, ಟೀಮ್ ಇವೆಂಟ್ ಮಾಡಲು ಸಹ ಅಗತ್ಯವಾದ ಅನುಕೂಲತೆಗಳಿದೆ. ಚಾರಣಪ್ರಿಯರಿಗೆ ಹತ್ತಿರದಲ್ಲೇ ಸೊಗಸಾದ ತಾಣಗಳಿದೆ. ಟೆಂಪಲ್ ಟೂರ್, ನೇಚರ್ ಟೂರ್ ಮೂಲಕ ಖ್ಯಾತಿ ಗಳಿಸಿದ ದಿ ನೆಸ್ಟ್ ಹೋಮ್ ಸ್ಟೇ ತೀರ್ಥಹಳ್ಳಿಯಿಂದ ಕೇವಲ 9 km ದೂರದಲ್ಲಿದೆ.

ತಲುಪುವುದು ಹೇಗೆ ?
ಶಿವಮೊಗ್ಗದ ತನಕ ಬಸ್, ಟ್ರೇನ್ ಲಭ್ಯವಿದೆ. ನೇರವಾಗಿ ತೀರ್ಥಹಳ್ಳಿಗೆ ಐರಾವತ, ರಾಜಹಂಸ ಸೇರಿದಂತೆ ಖಾಸಗಿ ಸ್ಲೀಪರ್ ಬಸ್ ಮೂಲಕವು ಬರಬಹುದು. ವೆಹಿಕಲ್ ಮೂಲಕ ಬರುವವರು ನೇರವಾಗಿ ಹೋಮ್ ಸ್ಟೇ ತಲುಪಬಹುದು. ಯಾವುದೇ ಮಾಹಿತಿಗೆ ದಿ ನೆಸ್ಟ್ ಸಿಬ್ಬಂದಿ ಸದಾ ಪೋನ್ ಮೂಲಕ ಲಭ್ಯವಿರುತ್ತಾರೆ.
ಏನೆಲ್ಲಾ ನೋಡಬಹುದು?
ಕವಲೇದುರ್ಗ ಕೋಟೆ, ನಗರ ಪೋರ್ಟ್, ಸಾವೆಹಕ್ಲು ಡ್ಯಾಂ, ರಾಮೇಶ್ವರ ದೇವಸ್ಥಾನ, ಸಿಗಂದೂರು, ಹುಂಚ, ಹೊರನಾಡು, ಶೃಂಗೇರಿ, ತಾವರೆಕೊಪ್ಪ ಸಿಂಹಧಾಮ, ಸಕ್ರೆಬೈಲ್ ಎಲಿಫೆಂಟ್, ಅಚ್ಚಕನ್ಯೆ ಫಾಲ್ಸ್, ಶರಾವತಿ ಮೂಲ ಅಂಬುತೀರ್ಥ, ರಾಮಚಂದ್ರಾಪುರ ಮಠ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು.
ರುಚಿ ಶುಚಿಗೆ ಹೆಚ್ಚು ಆದ್ಯತೆ
ನಮ್ಮೂರು ನೋಡಬಯಸುವ ಪ್ರವಾಸಿಗರ ಪಾಲಿಗೆ ಅವಿಸ್ಮರಣೀಯ ನೆನಪು ಕೊಡುವ ಉದ್ದೇಶದಿಂದ ಈ ಹೋಮ್ ಸ್ಟೇ ಮಾಡಿದೆ. ನಮ್ಮಲ್ಲಿ ಉಳಿಯ ಬರುವ ಅತಿಥಿಗಳಿಗೆ ಇಲ್ಲಿನ ಸಾಂಪ್ರದಾಯಿಕ ಶೈಲಿಯ ಅಡುಗೆಯ ಜೊತೆಗೆ ಅವರು ಬಯಸುವ ಎಲ್ಲಾ ಶೈಲಿಯ ಅಡುಗೆ ಮಾಡಲಾಗುತ್ತದೆ. ವೆಜ್ ಮತ್ತು ನಾನ್ ವೆಜ್ ಗಾಗಿ ಪ್ರತ್ಯೇಕ ಕಿಚನ್ ಇದ್ದು. ಶುಚಿ, ರುಚಿ, ಸೇವೆಯ ಕಾರಣದಿಂದಲೇ ನಮ್ಮ ಹೋಮ್ ಸ್ಟೇಗೆ ಪ್ರವಾಸಿಗರು ಮತ್ತೆ ಮತ್ತೆ ಬರುತ್ತಾರೆ. ನಮ್ಮಲ್ಲಿ ಡೆಡಿಕೇಟೆಡ್ ಗೈಡ್ ಇದ್ದು ತೀರ್ಥಹಳ್ಳಿಯ ಸುತ್ತ ಮುತ್ತಲ ತಾಣಗಳನ್ನು explore ಮಾಡಲು ಜೊತೆ ಇದ್ದು ಗೈಡ್ ಮಾಡ್ತೇವೆ. ಸುತ್ತ ಮುತ್ತಲ ಐತಿಹಾಸಿಕ ತಾಣ ನೋಡಬಯಸುವ ಹಿರಿಯರಿಗೆ ಟೆಂಪಲ್ ಟೂರ್ ಕಾನ್ಸೆಪ್ಟ್ ಮೂಲಕ ಸಿಗಂದೂರು, ಹೊರನಾಡು, ಶೃಂಗೇರಿ ದೇವಸ್ಥಾನಗಳಿಗೆ ಕರೆದೊಯ್ದು ದರ್ಶನ ಮಾಡಿಸುತ್ತೇವೆ. ಇನ್ನು ಗುಂಪಾಗಿ ಟೀಮ್ ಔಟಿಂಗ್ ಬರುವವರಿಗಾಗಿ ಡೇ ಔಟ್ ಕ್ಯಾಂಪ್ ಮೂಲಕ ಫನ್ ಗೇನ್, ಫೈರ್ ಕ್ಯಾಂಪ್, ಮ್ಯೂಸಿಕಲ್ ಇವನಿಂಗ್ ಆಯೋಜಿಸಿ ಎಂಗೇಜ್ ಆಗಿಡುತ್ತೇವೆ. 50 ರಿಂದ 100 ಮಂದಿ ಒಂದೇ ಬಾರಿಗೆ ಬಂದರೂ ಕೂಡ ತ್ವರಿತ ಮತ್ತು ಗುಣಮಟ್ಟದ ಸೇವೆ ನೀಡುತ್ತೇವೆ. ನಮ್ಮ ಸೇವೆಯ ದರವು ಅಫೊರ್ಡೆಬಲ್ ಆಗಿದೆ. ಒಮ್ಮೆ ಬುಕಿಂಗ್ ಮಾಡಿದರೆ ಸಾಕು. ಆ ತರುವಾಯ ಅವರು ನಮ್ಮಲ್ಲಿ ಬಂದು ತಲುಪುವ ತನಕ ಗೈಡ್ ಮಾಡುತ್ತೇವೆ. ಇಲ್ಲಿ ತಲುಪಿದ ಮೇಲೆ ಅವರ ಸಂಪೂರ್ಣ ಜವಾಬ್ದಾರಿ ನಮ್ಮದು. ಅದೆಷ್ಟೇ ಹೊತ್ತಿಗೆ ಬಂದರೂ ಬಿಸಿ ಬಿಸಿ ಉಪಾಹಾರದ ಮೂಲಕವೇ ಸ್ವಾಗತಿಸುತ್ತೇವೆ. ಇಲ್ಲಿ ಊಟದ ವಿಷಯದಲ್ಲಿ ಯಾವುದೇ ಮಿತಿ ಇಲ್ಲ. ಸೊಗಸಾದ ಅತಿಥ್ಯದ ಕಾರಣಕ್ಕೆ ದಿ ನೆಸ್ಟ್ ಹೋಮ್ ಸ್ಟೇ ಜನಪ್ರಿಯವಾಗಿದೆ.
-ಶ್ರೀನಾಥ್ ಜೋಯಿಸ್