Monday, December 8, 2025
Monday, December 8, 2025

ಟೈನಿ ಟೌನ್‌ಶಿಪ್‌ ರೆಸಾರ್ಟ್ ಎಂಬ ಫೊಟೋಶೂಟ್ ಸ್ಪಾಟ್

ಜೀವನದ ಪ್ರತಿಯೊಂದು ಕ್ಷಣವನ್ನೂ ಸೆರೆಹಿಡಿದುಕೊಳ್ಳಬೇಕು, ಬೇಕೆನ್ನಿಸುವಾಗಲೆಲ್ಲಾ ಪುಟ ತಿರುವಿ ಹಾಕುತ್ತಾ ಆ ನೆನಪುಗಳನ್ನು ಮತ್ತೆ ಬೆಸೆದುಕೊಳ್ಳಬೇಕು ಎಂಬುದು ಇಂದು ಎಲ್ಲರಿಗೂ ಇರುವ ಮಹದಾಸೆ. ಇದೇ ಕಾರಣಕ್ಕೆ ಸದ್ಯ ಫೊಟೋಶೂಟ್ ಕಾನ್ಸೆಪ್ಟ್ ಬಲು ಬೇಡಿಕೆಯನ್ನು ಪಡೆದುಕೊಂಡಿದೆ. ಈ ಬೇಡಿಕೆಗೆ ತಕ್ಕಂತೆ ಫೊಟೋಶೂಟ್ಗಾಗಿಯೇ ಅನೇಕ ರೆಸಾರ್ಟ್ಗಳೂ ಕಾರ್ಯಪ್ರವೃತ್ತವಾಗಿವೆ. ಅಂಥ ರೆಸಾರ್ಟ್ಗಳ ಪೈಕಿ ಹೈ ಡಿಮ್ಯಾಂಡ್ ಹೊಂದಿರುವುದೇ ʻಟೈನಿ ಟೌನ್ಶಿಪ್ ರೆಸಾರ್ಟ್ʼ.

ಕೆಲವು ವರ್ಷಗಳಿಂದೀಚೆಗೆ ಮದುವೆಗೂ ಹೆಚ್ಚಾಗಿ ಪ್ರೀ ವೆಡ್ಡಿಂಗ್‌ ಫೊಟೋಶೂಟ್‌ ಮಾಡಿಸಿಕೊಳ್ಳುವುದೇ ಟ್ರೆಂಡ್‌ ಆಗಿಬಿಟ್ಟಿದೆ. ವಿವಾಹಿತರಾಗಲಿರುವ ಜೋಡಿ ಕಾಡು, ಕಡಲ ತೀರ, ಗದ್ದೆ, ಗೋಪುರಗಳಂಥ ತಮ್ಮಿಷ್ಟದ ಜಾಗಗಳನ್ನು ಹುಡುಕಾಡಿ, ವಿವಾಹಪೂರ್ವ ಫೊಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಮಾಡಿಸಿಕೊಳ್ಳುತ್ತಾರೆ. ಆ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಮದುವೆಯ ದಿನಾಂಕವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ. ಜನರ ಈ ಬಗೆಯ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿರುವ ಫೊಟೋಗ್ರಾಫರ್ಸ್‌ ಅವರಿಗೊಪ್ಪುವಂಥ ಪ್ರದೇಶಗಳನ್ನು ಸುತ್ತಿಸಿ ಅತ್ಯಾಕರ್ಷಕ ಫೊಟೋಗಳನ್ನು ಸೆರೆಹಿಡಿದುಕೊಡುತ್ತಾರೆ.

ಆದರೆ ಈಗ ಕಾಲ ಇನ್ನೂ ಬದಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಪ್ರವಾಸಿ ತಾಣಗಳಲ್ಲಿ, ರೆಸಾರ್ಟ್, ಹೋಮ್‌ ಸ್ಟೇಗಳಂಥ ಕಡೆಗಳಲ್ಲೂ ಫೊಟೋಶೂಟ್‌ಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಒಂದು ರೆಸಾರ್ಟ್‌ ಬರಿಯ ಫೊಟೋಶೂಟ್‌ಗಾಗಿಯೇ ಜಾಗವನ್ನು ಕಾಯ್ದಿರಿಸಲು ಅವಕಾಶ ನೀಡುತ್ತಿದೆ ಎಂದರೆ ನೀವು ನಂಬುತ್ತೀರಾ..? ಶಿವಮೊಗ್ಗದ ʻಟೈನಿ ಟೌನ್‌ಶಿಪ್‌ ರೆಸಾರ್ಟ್ʼ ಈ ದಿಸೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.

Tiny township shivamogga

ಫೊಟೋಶೂಟ್‌ ರೆಸಾರ್ಟ್‌

ಕಳೆದೊಂದು ವರ್ಷದಿಂದಲೂ ಶಿವಮೊಗ್ಗದಿಂದ ಸಾಗರ ರಸ್ತೆಯ ಆಯನೂರು ಸಮೀಪದಲ್ಲಿರುವ ಟೈನಿ ಟೌನ್‌ಶಿಪ್‌ ರೆಸಾರ್ಟ್‌ ಪ್ರಿ ವೆಡ್ಡಿಂಗ್‌ ಶೂಟ್‌, ಬೇಬಿ ಫೊಟೋಶೂಟ್‌, ಮೆಟರ್ನಿಟಿ ಫೊಟೋಶೂಟ್‌ ಮಾತ್ರವಲ್ಲದೆ ಶಾರ್ಟ್‌ ಫಿಲಂ, ಆಲ್ಬಂ ಸಾಂಗ್ಸ್‌ ಶೂಟ್‌ಗಾಗಿಯೂ ಸಾಕಷ್ಟು ಬೇಡಿಕೆ ಹೊಂದಿರುವ ತಾಣವಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಇಲ್ಲಿ 100ಕ್ಕೂ ಹೆಚ್ಚು ಥೀಮ್‌ಗಳನ್ನು ಸಿದ್ಧಪಡಿಸಿದ್ದು, ಹಳ್ಳಿಮನೆ ವಾತಾವರಣದಿಂದ ಲಂಡನ್‌ ಸ್ಟ್ರೀಟ್‌ ತನಕ ಅನೇಕ ಬಗೆಯ ಬ್ಯಾಕ್‌ ಡ್ರಾಪ್‌ಗಳು ಕಣ್ಣಿಗೆ ಹಬ್ಬವನ್ನೇ ಸೃಷ್ಟಿಸುತ್ತವೆ.

ಥೀಮ್‌ಗಳನ್ನು ನೋಡಿ ಅಚ್ಚರಿ ಪಡದಿರಿ

ರಾಜಸ್ಥಾನ ಥೀಮ್‌

ಲಂಡನ್‌ ಸ್ಟ್ರೀಟ್‌

ಹಳ್ಳಿ ಮನೆ

ಇಟಾಲಿಯನ್‌ ಸ್ಟ್ರೀಟ್‌

ಜೋಧ್‌ಪುರ್‌ ಥೀಮ್‌

ಬರಿಯ ಫೊಟೋಶೂಟ್‌ಗೆ ಮಾತ್ರವಲ್ಲದೆ ಇಲ್ಲಿ ಬರ್ತ್‌ ಡೇ ಪಾರ್ಟಿ, ಡೆಸ್ಟಿನೇಷನ್‌ ವೆಡ್ಡಿಂಗ್‌, ರಿಸಪ್ಶನ್‌ ಪಾರ್ಟಿಯಂಥ ಎಲ್ಲಾ ಬಗೆಯ ಇವೆಂಟ್ಸ್‌ ಹೋಸ್ಟ್‌ ಮಾಡುವುದಕ್ಕೂ ಅವಕಾಶವಿದೆ. ಇಂಡೋರ್‌ ಹಾಗೂ ಔಟ್‌ ಡೋರ್‌ ಡೈನಿಂಗ್‌ ಸಿಸ್ಟಮ್‌ ಮಾಡಲು ಸ್ಥಳವನ್ನು ಕಲ್ಪಿಸಲಾಗಿದ್ದು,

ಸದ್ಯದಲ್ಲೇ ಸ್ಟೇ ಆಪ್ಶನ್‌ ಪ್ರಾರಂಭವಾಗಲಿದೆ. ಇನ್ನು ನೈಟ್‌ ಟೈಮ್‌ ಬಾಲಿ ಥೀಮ್‌ನಲ್ಲಿ ಮೂವಿ ಸ್ಟ್ರೀಮಿಂಗ್‌ ಮಾಡಬಹುದಾಗಿದ್ದು, ಗ್ರಾಹಕರಿಗೆ ಹೊಸತನದ ಸವಲತ್ತುಗಳನ್ನು ನೀಡುತ್ತಲಿದೆ.

Tiny township

ಗುರುರಾಜ್‌, ಪುನೀತ್‌, ಗುರು, ಮಲ್ಲೇಶ್‌, ನವೀನ್‌ ಮತ್ತು ನಾನು ಆರು ಮಂದಿ ಸೇರಿ ಇಂಥದೊಂದು ಹೊಸಬಗೆಯ ಪ್ರಯತ್ನವನ್ನು ಮಾಡಿದ್ದೇವೆ. ನಮ್ಮಲ್ಲಿ ಅನೇಕರು ಫೊಟೋಗ್ರಾಫರ್‌ಗಳೇ ಆಗಿರುವುದರಿಂದ ಮಲೆನಾಡಿನ ಸುತ್ತಮುತ್ತ ಇಂಥದೊಂದು ವಿಶೇಷ ಪ್ರಯತ್ನ ಮಾಡಬೇಕೆಂದೆನಿಸಿ ವರ್ಷದ ಹಿಂದಷ್ಟೇ ಇದನ್ನು ಪ್ರಾರಂಭಿಸಿದೆವು. ಪ್ರಿ ವೆಡ್ಡಿಂಗ್‌ ಫೊಟೋಶೂಟ್‌ 10 ಸಾವಿರ ರು. ನಿಂದ ಪ್ರಾರಂಭವಾಗುತ್ತದೆ. 100ಕ್ಕೂ ಹೆಚ್ಚು ಬಗೆಯ ಥೀಮ್‌ಗಳಿರುವುದರಿಂದ ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು.
-ಸುನಿಲ್‌, ಸಂಸ್ಥಾಪಕರು, ಟೈನಿ ಟೌನ್‌ಶಿಪ್‌ ರೆಸಾರ್ಟ್

ವಿಳಾಸ:

ಟೈನಿ ಟೌನ್‌ಶಿಪ್‌ ರೆಸಾರ್ಟ್

ಎನ್‌ಹೆಚ್‌ - 206, ಆಯನೂರು ಗ್ರಾಮ, ಶಿವಮೊಗ್ಗ- 577211

ಮೊ:+919606836981 / +919008026487

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ