ರೆಸಾರ್ಟ್ ಅಥವಾ ವಿಲ್ಲಾ! ಹೇಗೆ ಕರೆದರೂ ಬೇಸರವಿಲ್ಲಾ!
ವೀಕೆಂಡ್‌ನಲ್ಲಿ ಬೆಂಗಳೂರು ಬೇಸರವೆನಿಸಿದೆಯಾ? ತೀರಾ ದೂರವಲ್ಲದೇ ಹೋದರೂ ಬೆಂಗಳೂರಿನಿಂದ ಒಂದೆರಡು ಗಂಟೆಗಳ ಆಸುಪಾಸಿನಲ್ಲಿ ವಿಲ್ಲಾದ ಅನುಭವ ನೀಡುವ ರೆಸಾರ್ಟ್ಗಳ ಹುಡುಕಾಟದಲ್ಲಿ ನೀವಿದ್ದರೆ ಕಾಯ್ ಹ್ಯಾಪಿ ರೀಟ್ರೀಟ್ಸ್ಗೆ ಒಮ್ಮೆಯಾದರೂ ವಿಸಿಟ್ ಮಾಡಲೇಬೇಕು. ನೀವು ಈವರೆಗೂ ಭೇಟಿ ನೀಡಿರುವ ತಾಣಗಳಲ್ಲಿ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡಬಲ್ಲ ರೆಸಾರ್ಟ್ ಇದೆನಿಸುವುದರಲ್ಲಿ ಸಂದೇಹವಿಲ್ಲ.
ಕಾಯ್ ಹ್ಯಾಪಿ ರೀಟ್ರೀಟ್ಸ್. ಇದು ಸದ್ಯ ಚಿಕ್ಕಬಳ್ಳಾಪುರ ಆಸುಪಾಸಿನಲ್ಲಿ ಟ್ರೆಂಡ್‌ನಲ್ಲಿರುವ ಹೆಸರು. ವಿಲ್ಲಾ ಥೀಮ್ ರೆಸಾರ್ಟ್ ಆಗಿ ಗುರುತಿಸಿಕೊಂಡಿರುವ ಕಾಯ್ ಹ್ಯಾಪಿ ರೀಟ್ರೀಟ್ಸ್, ಬೆಂಗಳೂರಿನಿಂದ ಒಂದು ಗಂಟೆಯ ಅಂತರದಲ್ಲೇ ಇದೆ. ವಾರಾಂತ್ಯಗಳನ್ನು ಕುಟುಂಬ, ಸ್ನೇಹಿತರ ಬಳಗದೊಂದಿಗೆ ಕಳೆಯಬೇಕು, ಕಂಪನಿಯವರ ಜತೆಗೆ ಕಾರ್ಪೊರೇಟ್ ಟೀಂನೊಂದಿಗೆ ಎಂಜಾಯ್ ಮಾಡಬೇಕೆಂದುಕೊಳ್ಳುವವರು ಈ ಲೊಕೇಶನ್ ಹುಡುಕಲೇ ಬೇಕು.
ಗ್ರೀನರಿ ವಿತ್ ಸ್ಟೇಕೇಷನ್
ಇಲ್ಲಿ ಎತ್ತ ನೋಡಿದರೂ ಬರೀ ಹಸಿರೇ ಕಾಣಸಿಗುತ್ತದೆ. ಗಿಡ, ಮರ, ಬಳ್ಳಿಗಳ ನಡುವೆ ಕಾಣಸಿಗುವ ಯುನೀಕ್ ವಿಲ್ಲಾಗಳ ಲೋಕವಿದು. ಇಲ್ಲಿ ಅಬ್ಬರವಲ್ಲದ ಸಿಂಪಲ್ ಎನಿಸುವ ನಾಲ್ಕು ವಿಲ್ಲಾಗಳಿವೆ. ಒಂದೊಂದು ವಿಲ್ಲಾ ಕೂಡ ಸುಮಾರು 20 ಜನರಿಗೆ ಹೊಂದುವಂತಿದೆ. ವಿಶೇಷವೆಂದರೆ ಪ್ರತಿ ವಿಲ್ಲಾಗಳ ಜತೆ ಪ್ರೈವೇಟ್ ಪೂಲ್‌ಗಳೂ ಇಲ್ಲಿವೆ. ಎಲ್ಲರಿಗೂ ಸೇರಿ ಒಂದೇ ಸ್ವಿಮ್ಮಿಂಗ್ ಪೂಲ್ ಎನ್ನುವ ರೆಸಾರ್ಟ್‌ಗಳ ನಡುವೆ ಇದು ವಿಭಿನ್ನ ಪ್ರಯತ್ನವೆನಿಸಿಕೊಂಡಿದೆ.

ಡೆಸ್ಟಿನೇಷನ್ ವೆಡ್ಡಿಂಗ್ ಸ್ಪಾಟ್
ಸಾಮಾನ್ಯವಾಗಿ ಫ್ಯಾಮಿಲಿ ಗೆಟ್ ಟುಗೆದರ್, ಕಾರ್ಪೊರೇಟ್ ರಿಟ್ರೀಟ್ಸ್ ಹಾಗೂ ಡೆಸ್ಟಿನೇಷನ್ ವೆಡ್ಡಿಂಗ್ ಮಾಡುವುದಕ್ಕೆ ಯಾವ ಜಾಗ ಸೂಕ್ತ ಅಂತ ಹುಡುಕುವ ಮಂದಿಗಿದು ಬೆಸ್ಟ್ ಆಪ್ಶನ್. ಯಾಕೆಂದರೆ ನಂದಿ ಹಿಲ್ಸ್ ಹಾಗೂ ಸ್ಕಂದಗಿರಿಗೆ ಸಮೀಪದಲ್ಲೇ ಇರುವ ಈ ಪ್ರಾಪರ್ಟಿ ಸೀನಿಕ್ ವ್ಯೂ ನೀಡುತ್ತದೆ. ಅಲ್ಲದೆ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಇಲ್ಲಿ ಫ್ಲೋಟಿಂಗ್ ಮಂಟಪವನ್ನೇ ತಯಾರಿಸುತ್ತಾರೆ. ನೀರಿನ ನಡುವೆ ಮಂಟಪದಲ್ಲಿ ಕುಳಿತು ಹಾರ ಬದಲಾಯಿಸಿಕೊಳ್ಳಲು ಬಯಸುವ ನವ ಜೋಡಿಗಳಿಗೇನೂ ಕಮ್ಮಿಇಲ್ಲ.
ಜಬರ್ದಸ್ತ್ ಫುಡ್
ಸ್ಟೇಕೇಷನ್ ಅಂದ ಮೇಲೆ ಹೊತ್ತು ಹೊತ್ತಿಗೆ ರುಚಿಕರವಾದ ಆಹಾರವಿಲ್ಲದಿದ್ದರೆ ಹೇಗೆ? ಇಲ್ಲಿ ಬುಕಿಂಗ್ ವೇಳೆಯೇ ಮಾಹಿತಿ ನೀಡಿದರೆ ಅತಿಥಿಗಳ ಬೇಡಿಕೆಗೆ ಅನುಗುಣವಾಗಿ ರುಚಿಕರವಾದ ಆಹಾರವನ್ನು ಸಿದ್ಧಪಡಿಸುತ್ತಾರೆ. ಇಂಡೋರ್ ಬೇಡವೆನ್ನುವವರಿಗಾಗಿ ಹೊರಾಂಗಣದಲ್ಲಿ ಓಪನ್ ಡೈನಿಂಗ್ ಏರಿಯಾವಿದ್ದು, ಗುಂಪಿನಲ್ಲೇ ಸದ್ದು ಗದ್ದಲದೊಂದಿಗೆ ಆಹಾರವನ್ನು ಎಂಜಾಯ್ ಮಾಡಬಹುದು.

ಆಲ್ ಫಾರ್ ಫನ್
ವಾಸ್ತವ್ಯ, ಆಹಾರದ ಬಗೆಗೆ ಹೇಳಿದ ಮೇಲೆ ಫನ್ ಆಕ್ಟಿವಿಟೀಸ್‌ಗಳ ಮಾಹಿತಿ ಹೇಳಲೇಬೇಕು ಅಲ್ವಾ? ಬಂದ ಅತಿಥಿಗಳಿಗಾಗಿ ಇಲ್ಲಿ ಸಾಕಷ್ಟು ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್ ಹಾಗೂ ಫನ್ ಆಕ್ಟಿವಿಟೀಸ್‌ಗಳಿವೆ. ಫ್ಯಾಮಿಲಿ ಜತೆಗೆ ಬಂದಾಗ ಮಕ್ಕಳನ್ನು ಸಂಭಾಳಿಸುವುದು ಹೇಗೆ ಅಂತ ಚಿಂತಿಸುವವರಿಗಾಗಿ ಕಿಡ್ಸ್ ಫನ್ ಏರಿಯಾವನ್ನೂ ಪ್ರತ್ಯೇಕವಾಗಿ ನೀಡಲಾಗಿದೆ. ಒಟ್ಟಿನಲ್ಲಿ ಆಲ್ ಇನ್ ಒನ್ ಎಂಬ ಕಾನ್ಸೆಪ್ಟ್‌ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಕಾಯ್ ಹ್ಯಾಪಿ ರೀಟ್ರೀಟ್ಸ್ಗೆ ವಿಸಿಟ್ ಮಾಡಲು ಮರೆಯಬೇಡಿ.

ಪ್ಲಸ್ ಪಾಯಿಂಟ್…
ಪ್ರೈವೇಟ್ ಸ್ವಿಮ್ಮಿಂಗ್ ಪೂಲ್ಸ್
ಗ್ರೀಕ್ ಮಾದರಿಯಲ್ಲಿ ಸ್ನಾನ ಗೃಹ
ಇಂಡೋರ್ ರೆಸ್ಟೋರೆಂಟ್
ಓಪನ್ ಡೈನಿಂಗ್ ಏರಿಯಾ
ಇಂಡೋರ್ ಆಂಡ್ ಔಟ್ ಡೋರ್ ಗೇಮ್ಸ್
ಕಿಡ್ಸ್ ಪ್ಲೇ ಏರಿಯಾ
ಬಾನ್ ಫೈರ್
ಅನ್ ಲಿಮಿಡೆಟ್ ಬ್ರೇಕ್ ಫಾಸ್ಟ್
ಕಾಯ್ ಹ್ಯಾಪಿ ರೀಟ್ರೀಟ್ಸ್
ಅಗಲಗುರ್ಕಿ, ಚಿಕ್ಕಬಳ್ಳಾಪುರ ಸಮೀಪ, ಬೆಂಗಳೂರು, ಕರ್ನಾಟಕ- 562103
ಮೊ: 84484 46690