Saturday, November 22, 2025
Saturday, November 22, 2025

ಓಯಸಿಸ್ ಬ್ರೆವರಿ

ಬೆಂಗಳೂರೆಂದರೆ ಐಟಿ ಹಬ್‌, ಗಾರ್ಡನ್‌ ಸಿಟಿ, ಸಿಲಿಕಾನ್‌ ಸಿಟಿ ಎಂದಷ್ಟೇ ಫೇಮಸ್‌ ಅಲ್ಲ, ಬದಲಾಗಿ ಹೊಟೇಲ್‌, ರೆಸ್ಟೋರೆಟ್‌, ಪಬ್‌, ಬಾರ್‌ ಆಂಡ್‌ ಬ್ರೆವರಿಗಳಿಗೂ ಹೆಸರು ಮಾಡಿದೆ ಎಂದರೆ ಅಚ್ಚರಿಪಡಬೇಕಿಲ್ಲ. ವಿಭಿನ್ನ ಯೋಜನೆಗಳು, ಅತ್ಯಾಕರ್ಷಕ ಇಂಟೀರಿಯರ್ಸ್‌, ಗ್ಲೋಬಲ್‌ ವೆರೈಟೀಸ್‌ ಆಫ್‌ ಫುಡ್‌ ಹೀಗೆ ವಿಶೇಷತೆಗಳ ಮೂಲಕವೇ ಗ್ರಾಹಕರನ್ನು ಸೆಳೆಯುವ ಮಹಾನಗರಿಯ ಆಹಾರೋದ್ಯಮಕ್ಕೆ ಮತ್ತೊಂದು ಸೇರ್ಪಡೆಯೇ ಓಯಸಿಸ್ ಬ್ರೆವರಿ.

ವರ್ಲ್ಡ್‌ ಲಾರ್ಜೆಸ್ಟ್‌ ಮೈಕ್ರೋ ಬ್ರೆವರಿ ಎಂದೇ ಗುರುತಿಸಿಕೊಂಡಿರುವ ಓಯಸಿಸ್ ಬ್ರೆವರಿ ಪ್ರಾರಂಭವಾಗಿರುವುದು ಬೆಂಗಳೂರಿನ ವೈಟ್‌ ಫೀಲ್ಡ್ ನಲ್ಲಿ. 1,50,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿ ನಿಂತಿರುವ ಈ ಬ್ರೆವರಿಯಲ್ಲಿ ಇಂಡೋರ್‌ ಹಾಗೂ ಔಟ್‌ ಡೋರ್‌ ಸೇರಿ ಸುಮಾರು 1800ಕ್ಕೂ ಹೆಚ್ಚು ಸೀಟಿಂಗ್‌ ವ್ಯವಸ್ಥೆ ಇದ್ದು, ಅತಿಥಿಗಳ ಆಯ್ಕೆಗೆ ತಕ್ಕಂತೆ ಸೀಟಿಂಗ್‌ ಅವಕಾಶವನ್ನು ಕಲ್ಪಿಸಲಾಗಿದೆ. ಹಚ್ಚಹಸಿರ ವಾತಾವರಣ, ಲಕ್ಸೂರಿಯಸ್‌ ಇಂಟೀರಿಯರ್‌, ಚಿಂತೆಯನ್ನು ಮರೆಸುವ ವಾಟರ್‌ ಬಾಡಿ ನೋಡಿದರೆ ನೀವು ಬ್ರೆವರಿಯಲ್ಲಿ ಇದ್ದೀರೆಂಬುದನ್ನೇ ಮರೆತುಬಿಡುತ್ತೀರಿ.

ವಿಶಿಷ್ಟವಾದ ಆಂಬಿಯನ್ಸ್‌ ಮಾತ್ರವಲ್ಲದೆ ಈವರೆಗೂ ಹೆಸರೇ ಕೇಳಿರದಂಥ ವಿಭಿನ್ನವಾದ ಬಗೆಯ ಆಹಾರ ಪದಾರ್ಥಗಳನ್ನು ನೀವಿಲ್ಲಿ ಸವಿಯುವ ಅವಕಾಶವಿದೆ. ಕುಟುಂಬದ ಜತೆಗೆ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲು, ಕಾರ್ಪೊರೆಟ್ ಕೂಟಗಳು, ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೂ ಇದು ಸೂಕ್ತ ಸ್ಥಳವಾಗಿದೆ. ಅಸಾಧಾರಣ ಆತಿಥ್ಯದ ಜತೆಗೆ ಜಾಗತಿಕ ಪಾಕಶಾಲೆಯ ಕರಕುಶಲತೆಯಿಂದಲೇ ಹೆಸರು ಮಾಡಿರುವ ಓಯಸಿಸ್ ಬ್ರೆವರಿ, ಬೆಂಗಳೂರಿನಲ್ಲಿ ಐಷಾರಾಮಿ ಮೈಕ್ರೋ ಬ್ರೆವರಿಯ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸಿದೆ.

Untitled design (29)

175ಕ್ಕೂ ಬಗೆಯ ಆಹಾರ

ಏಷ್ಯನ್‌, ಮಾಡರ್ನ್‌ ಇಂಡಿಯನ್‌, ಸೌತ್‌ ಇಂಡಿಯನ್‌, ಬರ್ಗರ್‌, ಬಿವೆರೇಜಸ್‌, ಸಲಾಡ್ಸ್‌, ಮೆಕ್ಸಿಕನ್‌ ಡಿಶ್‌ಗಳು, ಅಥೆಂಟಿಕ್‌ ಫ್ಲೇವರ್ಸ್‌ ನ ಪಿಜ್ಜಾಗಳೆಲ್ಲವೂ ಒಂದೇ ಸೂರಿನಡಿ ಸಿಗುವಂತಿರಬೇಕು ಎನ್ನುವ ಆಹಾರ ಪ್ರಿಯರಿಗೆ ಓಯಸಿಸ್ ಬ್ರೆವರಿ ಬೆಸ್ಟ್‌ ಆಯ್ಕೆ. ಇಲ್ಲಿ ಕ್ಲಾಸಿಕ್‌ ಟೋಫು ಟಾಡ್‌, ಅಕಸಕಾ ಪ್ರಾನ್ಸ್, ಓಯಸಿಸ್ ಪೆಪ್ಪರ್‌ ಮಶ್ರೂಮ್‌, ಮುರಿಂಗಾ ಚಿಕನ್‌, ಹಿಮಾಚಲಿ ಮುರ್ಗ್‌ ಟ್ರಿಯೋ ಚಟ್ನಿ, ಆರ್ಕೋಟ್‌ ಮಟನ್‌ ಚಾಪ್ಸ್‌, ಲ್ಯಾಂಬ್‌ ಕಿಬ್ಬೆ, ಪುಳಿಯೊಗರೆ ಚಿಕನ್‌ ಕಬಾಬ್‌ ತಂದೂರಿ ಲಾಲಿ ಪಾಪ್‌, ಚಾರ್‌ ಕೋಲ್‌ ಮೋಮೋಸ್‌ ಮೈಂಡನ್ನೇ ಶೇಕ್‌ ಮಾಡಬಲ್ಲ ಶೇಕ್‌ ಕಬಾಬ್‌, ಯುನೀಕ್‌ ಆಗಿರುವ ಪ್ರಾನ್ಸ್ ಸ್ಟಾರ್ಟರ್ಸ್‌ ಆಹಾರಪ್ರಿಯರಿಗೆ ಲಭ್ಯವಿದೆ. ಮೇನ್‌ ಕೋರ್ಸ್‌ನಲ್ಲಿ ಹಸೀನಾ ಸಾಗ್‌ ಪನೀರ್‌ ಬುರ್ರಾಟ, ಕೈಮಾ ಪಟ್ಟಾನಿ ಗೊಜ್ಜು ವಿದ್‌ ಮುರಿಂಗಾ ಪೂರಿ, ಮುನಕ್ಕಾಯ ಕೊಡಿ ಹೀಗೆ ಹೆಸರಿನಿಂದಲೇ ಮೋಡಿ ಮಾಡುವ ಖಾದ್ಯಗಳಿದ್ದು ಲೈಫ್‌ನಲ್ಲಿ ಒಮ್ಮೆಯಾದರೂ ಟ್ರೈ ಮಾಡಲೇ ಬೇಕು. ಡೆಸರ್ಟ್‌ ಪ್ರಿಯರಿಗಾಗಿ ನ್ಯೂಯಾರ್ಕ್‌ ಬ್ಲೂಬೆರಿ ಚೀಸ್‌ ಕೇಕ್‌, ಪಟ್ಟಾಯ ಬನಾನ ಪ್ಯಾನ್‌ ಕೇಕ್ ಗಳು ಇಲ್ಲಿನ ಹೈಲೈಟ್ಸ್.‌

ಕಾಕ್‌ಟೇಲ್‌ ಲೋಕ

ಆಹಾರದ ರುಚಿ ಹೆಚ್ಚಿಸಲು, ಕಿಕ್‌ ನೀಡಲು ಕಾಕ್‌ಟೇಕ್‌ ಇಲ್ಲವಾದರೆ ಹೇಗೆ ? ಕಾಕ್‌ಟೇಲ್‌ ಪ್ರಿಯರಿಗಾಗಿ ಓಯಸಿಸ್ ಬ್ರೆವರಿ ವಿಶೇಷ ಆಯ್ಕೆಗಳನ್ನೇ ನೀಡಿದೆ. ಟೈಮ್‌ ಲೆಸ್‌ ಕ್ಲಾಸಿಕ್‌ ನಿಂದ ಇನ್ವೆಂಟೆಡ್‌ ಸಿಗ್ನೇಚರ್‌ ತನಕ ಇಲ್ಲಿರುವ ಎಲ್ಲ ಕಾಕ್‌ಟೇಲ್‌ಗಳೂ ಸಹ ಕ್ರಾಫ್ಟ್‌, ಕ್ರಿಯೇಟಿವಿಟಿಯ ಮಾಂತ್ರಿಕ ಮಿಶ್ರಣದಂತೆ ಕಾರ್ಯನಿರ್ವಹಿಸುತ್ತದೆ. ಪೆನಿಸಿಲಿನ್‌, ಮೇರಿಪಿಕ್‌ಫೋರ್ಡ್‌, ಫ್ಲೋರಾಡೋರಾ, ಕಾಸ್ಮೋಪೊಲಿಟನ್‌, ಆಪಲ್‌ಟಿನಿ ಸೇರಿದಂತೆ ಹಲವು ಕ್ಲಾಸಿಕ್‌ ಕಾಕ್‌ಟೇಲ್‌ಗಳ ಆಯ್ಕೆ ಇಲ್ಲಿ ಲಭ್ಯವಿದೆ.

ಸಿಗ್ನೇಚರ್‌ ಕಾಕ್‌ಟೇಲ್‌ಗಳಲ್ಲಿ ಗೋಲ್ಡನ್‌ ಮಿರೇಜ್‌, ಡ್ರಾಜನ್‌ ರೋಸ್‌, ಚೇಸ್‌ ಆಂಡ್‌ ಸ್ಟಾಟಸ್‌, ಕ್ರಿಮ್ಸನ್‌ ಮಾರ್ಟಿನಿ, ಟ್ರಾಪಿಕಲ್‌ ವಿಸ್ಪರ್‌ ಹೀಗೆ ಅನೇಕ ಬಗೆಯವು ಇವೆ. ಮಾರ್ಗರಿಟಾ ಕಾಕ್‌ಟೇಲ್‌ ಪ್ರಿಯರು ನೀವಾದರೆ ಮಾರ್ಗರಿಟಾ, ಪ್ಯಾಶನ್‌ ಫ್ರೂಟ್‌ ಚಿಲಿ ಮಾರ್ಗರಿಟಾ, ಟ್ಯಾಮರಿಂಡ್‌ ಮಾರ್ಗರಿಟಾ, ರ್ಯಾಸ್‌ರಿಟ ಟ್ರೈ ಮಾಡಿನೋಡಬಹುದು. ವೋಡ್ಕಾ, ರಮ್‌, ಜಿನ್‌, ಟಕೀಲಾ, ಬಿಯರ್‌, ಶೂಟರ್‌ಗಳಲ್ಲೂ ನಿಮ್ಮ ಆಸಕ್ತಿಗಳಿಗೆ ಅನುಗುಣವಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು.

Untitled design (30)

ಏನಿದೆ ಸ್ಪೆಷಲ್ ?
ಗ್ಲೋಬಲ್‌ ಫ್ಲೇವರ್‌
ಕಾಕ್‌ ಟೇಲ್ಸ್‌
ಡೆಲಿಶಿಯಸ್‌ ಡೆಸರ್ಟ್ಸ್
ಗ್ರೇಟ್‌ ಮ್ಯೂಸಿಕ್‌
ಸೂಪರ್‌ ಫ್ರೆಂಡ್ಲೀ ಸ್ಟಾಫ್

ಇರುವುದೆಲ್ಲಿ ?

ವೈಟ್‌ ಫೀಲ್ಡ್‌ ಹತ್ತಿರ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣದಿಂದ 100ಮೀಟರ್‌ ದೂರದಲ್ಲೇ ಓಯಾಸಿಸ್‌ ಬ್ರೆವರಿ ಕಾಣಸಿಗುತ್ತದೆ.

  • ಮೊ :+91 93848 06101
  • ವೆಬ್‌ ಸೈಟ್: www.prodebbrewery.com
  • ವಿಳಾಸ : ಯಸ್‌ವೈ ನಂ.26, ಪ್ಲಾಟ್‌ ನಂ 1ಎ, 1ಬಿ & 2ಬಿ, ದೇವಸಂದ್ರ ಇಂಡಸ್ಟ್ರಿಯಲ್‌ ಏರಿಯಾ, ವೈಟ್‌ಫೀಲ್ಡ್‌ ಮುಖ್ಯ ರಸ್ತೆ, ಬೆಂಗಳೂರು
Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ