Friday, October 3, 2025
Friday, October 3, 2025

ಶಾಂತ ಕಣಿವೆಗಳ ಸ್ವರ್ಗವಿದು

ಭೂತಾನ್ ನ ಅತ್ಯಂತ ಶಾಂತಿಯುತ ಪಟ್ಟಣ ಅಂದ್ರೆ ಅದು ಪಾರೋ. ಪಾರೋವನ್ನು ಹುಲಿಗಳ ಗೂಡು ಅಂತಲೂ ಕರೆಯುತ್ತಾರೆ. ಪುನಾಖ 1955ರವರೆಗೆ ಭೂತಾನ್ ನ ಬ್ರ್ಯಾಂಡ್ ಎಂಬಂತಿತ್ತು. ಫೋ ಚು ಎಂಬ ತಂದೆ ನದಿ ಹಾಗೂ ಮೊ ಚು ಎಂಬ ತಾಯಿ ನದಿಯ ಸಂಗಮ ಪುನಾಖದಲ್ಲಿ ಆಗುತ್ತದೆ.

- ಅಕ್ಷತಾ

ಶಿಖರಗಳು ಮತ್ತು ಪ್ರಶಾಂತವಾದ ನದಿಗಳ ದೇಶ ಭೂತಾನ್. ಪ್ರವಾಸಿಗರ ಪಾಲಿಗೆ ಭೂತಾನ್ ಅಕ್ಷರಶಃ ಸ್ವರ್ಗ. ವರ್ಷಕ್ಕೆ ಲಕ್ಷಾಂತರ ಮಂದಿ ಭೂತಾನ್ ಪ್ರವಾಸಕ್ಕೆ ತೆರಳುತ್ತಾರೆ. ಇಂಥ ಸುಂದರ ಭೂತಾನ್ ದೇಶ ಶೇ. 72ರಷ್ಟು ಅರಣ್ಯಗಳಿಂದ ಆವೃತವಾಗಿದೆ. ಅಂತಾರಾಷ್ಟ್ರೀಯ ಪ್ರವಾಸ ಮಾಡಬೇಕು ಎಂದು ಬಯಸುವ ಸಾಕಷ್ಟು ಭಾರತೀಯರ ಪ್ರವಾಸದ ಪಟ್ಟಿಯಲ್ಲಿ ಭೂತಾನ್ ಇದ್ದೇ ಇರುತ್ತದೆ. ಕಾರಣ, ಕಡಿಮೆ ಬಜೆಟ್‌ನಲ್ಲಿ ಹೋಗಬಹುದಾದಂಥ ದೇಶಗಳಲ್ಲಿ ಭೂತಾನ್ ಕೂಡಾ ಒಂದು. ಚೀನಾ ಮತ್ತು ಭಾರತದ ನಡುವೆ ದಕ್ಷಿಣ ಏಷ್ಯಾದಲ್ಲಿರುವ ಭೂತಾನ್ ಪ್ರಾಕೃತಿಕವಾಗಿ ಸೊಬಗಿನ ದೇಶ. ಇಲ್ಲಿನ ನೈಸರ್ಗಿಕ ಸೌಂದರ್ಯ ಎಲ್ಲರನ್ನೂ ಸೆಳೆಯದೇ ಇರದು. ಪ್ರವಾಸಿಗರಿಗೆ ಖುಷಿ ಕೊಡುವಂಥ ಸಾಕಷ್ಟು ತಾಣಗಳು ಇಲ್ಲಿವೆ.

ನಿಮ್ಮ ವಿದೇಶ ಪ್ರವಾಸದ ಪಟ್ಟಿಯಲ್ಲಿ ಭೂತಾನ್ ಇದ್ದರೆ ಅಲ್ಲಿನ ಈ ಸುಂದರ ತಾಣಗಳನ್ನು ಮಿಸ್ ಮಾಡಬೇಡಿ.

ತಂಪು ತಂಪು ಈ ಥಿಂಪು

ಭೂತಾನಿನ ಶ್ರೀಮಂತ ಪರಂಪರೆಯ ಆಳವಾದ ಪರಿಚಯ ನೀಡುವ ಥಿಂಪು ಈ ದೇಶದ ರಾಜಧಾನಿಯೂ ಹೌದು. ನೀವು ಇಲ್ಲಿ ಮಠಗಳು, ದೇವಾಲಯಗಳು ಮತ್ತು ಅರಮನೆಗಳನ್ನು ನೋಡಲು ಭೇಟಿ ನೀಡಬಹುದು.

thimphu

ಥಿಂಪುವಿನಲ್ಲಿ ನೀವು ನೋಡಲೇಬೇಕಾದ ಸ್ಥಳಗಳು

ತಾಶಿಚೋ ಝೋಂಗ್: ರಾಜನ ಸಿಂಹಾಸನ ಕೊಠಡಿ ಮತ್ತು ಕಚೇರಿಗಳನ್ನು ಹೊಂದಿರುವ ಭವ್ಯ ಕೋಟೆ.

ಬುದ್ಧ ಡೋರ್ಡೆನ್ಮಾ: ಥಿಂಫು ಕಣಿವೆಯ ಮೇಲಿರುವ ಬುದ್ಧ ಶಕ್ಯಮುನಿಯ ಬೃಹತ್ ಪ್ರತಿಮೆ.

ಚೋರ್ಟೆನ್ ಸ್ಮಾರಕ: ಭೂತಾನ್‌ನ ಮೂರನೇ ರಾಜ ಜಿಗ್ಮೆ ಡೋರ್ಜಿ ವಾಂಗ್‌ಚುಕ್‌ಗೆ ಸಮರ್ಪಿತವಾದ ಸ್ತೂಪ

ಭೂತಾನ್‌ನ ರಾಷ್ಟ್ರೀಯ ಗ್ರಂಥಾಲಯ: ಪ್ರಾಚೀನ ಗ್ರಂಥಗಳು ಮತ್ತು ಧಾರ್ಮಿಕ ಗ್ರಂಥಗಳನ್ನು ಒಳಗೊಂಡಂತೆ ಬೌದ್ಧ ಸಾಹಿತ್ಯ ಮತ್ತು ಹಸ್ತಪ್ರತಿಗಳ ವ್ಯಾಪಕ ಸಂಗ್ರಹ

ಚಂಗಂಗ್‌ಖಾ ಲಖಾಂಗ್: ಬೆಟ್ಟದ ತುದಿಯಲ್ಲಿರುವ ಪುರಾತನ ದೇವಾಲಯ

ಜಾನಪದ ಪರಂಪರೆ ವಸ್ತುಸಂಗ್ರಹಾಲಯ: ಭೂತಾನ್ ನ ಗ್ರಾಮೀಣ ಜನಜೀವನ ಪ್ರದರ್ಶಿಸುವ ಕಲಾಕೃತಿಗಳು, ಉಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳು.

ಮೋತಿಥಾಂಗ್ ಟಕಿನ್ ಸಂರಕ್ಷಣೆ: ಭೂತಾನ್‌ನ ರಾಷ್ಟ್ರೀಯ ಪ್ರಾಣಿ, ಹಿಮಾಲಯದಲ್ಲಿ ಕಂಡುಬರುವ ವಿಶಿಷ್ಟ ಮತ್ತು ಅಪರೂಪದ ಸಸ್ತನಿ ಟಕಿನ್ ನೆಲೆ.

ಥಿಂಪುವಿಗೆ ತಲುಪುದು ಹೇಗೆ?

ನೀವು ಥಿಂಪುವಿಗೆ ದೆಹಲಿ, ಕೋಲ್ಕತ್ತಾ ಮತ್ತು ಬ್ಯಾಂಕಾಕ್ ನಿಂದಲೂ ಪ್ರಯಾಣಿಸಬಹುದು. ದೆಹಲಿಯಿಂದ ನಿಮಗೆ ಪ್ರಯಾಣಿಸಲು 20,000 INR- 30,000 INR ತಗಲುತ್ತದೆ. ಮತ್ತೊಂದು ಆಯ್ಕೆಯೆಂದರೆ ಭಾರತದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ಭೂತಾನ್‌ನ ಗಡಿ ಪಟ್ಟಣವಾದ ಫ್ಯೂಂಟ್‌ಶೋಲಿಂಗ್ ಮೂಲಕ ಥಿಂಫುಗೆ ಸಂಚರಿಸಬಹುದು. ಫ್ಯೂಂಟ್‌ಶೋಲಿಂಗ್‌ನಿಂದ ಥಿಂಫುಗೆ ಸುಮಾರು 6 ರಿಂದ 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಟ್ಯಾಕ್ಸಿ ದರ ಸುಮಾರು 3,000 INR-ನಿಂದ 4,000 INR ವರೆಗೆ ಇರುತ್ತದೆ.

bhutan thimphu

ಹೇ.. ಹೇ ಪಾರೋ

ಭೂತಾನ್ ನ ಅತ್ಯಂತ ಶಾಂತಿಯುತ ಪಟ್ಟಣ ಅಂದ್ರೆ ಅದು ಪಾರೋ. ಪಾರೋವನ್ನು ಹುಲಿಗಳ ಗೂಡು ಅಂತಲೂ ಕರೆಯುತ್ತಾರೆ. ಪಾರೋ ತಕ್ತ್ಸಂಗ್ ಮಠಕ್ಕೆ ಹೆಸರುವಾಸಿಯಾಗಿದೆ. ಭೂತಾನ್ ನಲ್ಲಿ ಅತ್ಯಂತ ಬೇಡಿಕೆ ಪ್ರವಾಸಿ ಸ್ಥಳ ಅಂದ್ರೆ ಅದು ಪಾರೋ . ಪಾರೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೂತಾನ್ ಗೆ ಪ್ರವೇಶದ್ವಾರ. ಪಾರೋದಲ್ಲಿಯೂ ನೀವು ನೋಡಬೇಕಾದ ಹಲವು ಸ್ಥಳಗಳಿವೆ.

ಪಾರೋ ತಕ್ತ್ಸಂಗ್ (ಹುಲಿಯ ಗೂಡು)

ರಿನ್‌ಪುಂಗ್ ಡ್ಜಾಂಗ್ (ಕೋಟೆ-ಮಠ)

ಡ್ರುಕ್ಗ್ಯೆಲ್ ಡ್ಜಾಂಗ್ (ಐತಿಹಾಸಿಕ ಕೋಟೆ)

ಶಾನಾ ಗ್ರಾಮ ( ಚಾರಣಕ್ಕೆ ಪ್ರಸಿದ್ಧಿ)

ಗುಂಟಿಸಾವಾ ಗ್ರಾಮ (ಸುಂದರವಾದ ಕಾಲೋನಿ)

ಭೂತಾನ್ ರಾಷ್ಟ್ರೀಯ ವಸ್ತುಸಂಗ್ರಹಾಲಯ

ಕ್ಯಿಚು ಲಖಾಂಗ್ ( ಅತ್ಯಂತ ಹಳೆಯ ದೇವಾಲಯ)

ಜೊಂಗ್‌ಡ್ರಾಖಾ ದೇವಾಲಯ (ಮಿನಿ-ಟೈಗರ್ಸ್ ನೆಸ್ಟ್)

ಪಾರೋ ವಾರಾಂತ್ಯದ ಮಾರುಕಟ್ಟೆ

ಪಾರೋ ವಿಮಾನ ನಿಲ್ದಾಣದ ವ್ಯ ಪಾಯಿಂಟ್

ವಸತಿ ಆಯ್ಕೆಗಳು ಮತ್ತು ಬಜೆಟ್‌ಗಳು

ಹೋಂಸ್ಟೇಗಳು: ಪ್ರತಿ ರಾತ್ರಿಗೆ 2,000 INR ಪ್ರಾರಂಭವಾಗುತ್ತವೆ.

ಅತಿಥಿಗೃಹಗಳು: ಪ್ರತಿ ರಾತ್ರಿಗೆ 3,000 INR ರಿಂದ ಪ್ರಾರಂಭವಾಗುತ್ತವೆ.

ಐಷಾರಾಮಿ ಡೇರೆಗಳು: ಪ್ರತಿ ರಾತ್ರಿಗೆ 8,000 INR ಪ್ರಾರಂಭವಾಗುತ್ತವೆ.

bhutan 1

ಪೋ ಚು ಮತ್ತು ಮೋ ಚು ಸಂಗಮ

ಪುನಾಖ 1955ರವರೆಗೆ ಭೂತಾನ್ ನ ಬ್ರ್ಯಾಂಡ್ ಎಂಬಂತಿತ್ತು. ಫೋ ಚು ಎಂಬ ತಂದೆ ನದಿ ಹಾಗೂ ಮೊ ಚು ಎಂಬ ತಾಯಿ ನದಿಯ ಸಂಗಮ ಪುನಾಖದಲ್ಲಿ ಆಗುತ್ತದೆ. ಪುನಾಖದಲ್ಲಿ ನೀವು ಪುನಾಖಾ ಝೋಂಗ್, ಚಿಮಿ ಲಖಾಂಗ್, ಖಮ್ಸುಮ್ ಯುಲ್ಲೆ ನಮ್ಗ್ಯಾಲ್ ಚೋರ್ಟೆನ್, ಜಿಗ್ಮೆ ದೋರ್ಜಿ ರಾಷ್ಟ್ರೀಯ ಉದ್ಯಾನವನ, ಸಾಂಗ್ಚೆನ್ ದೋರ್ಜಿ ಲುವೆಂಡ್ರಪ್ ನನ್ನೇರಿ, ತಾಲೋ ಗ್ರಾಮ, ಲಿಂಬುಖಾ ಗ್ರಾಮ, ಪುನಖಾ ರಿತ್ಶಾ ಗ್ರಾಮಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಪುನಾಖ ಥಿಂಪುವಿನಿಂದ 72 ಕಿಲೋಮೀಟರ್ ದೂರವಿದೆ. ಅಲ್ಲಿ ಉಳಿಯಲು ನಿಮಗೆ ₹2,500ದಿಂದ 15,000ದವರೆಗೂ ಖರ್ಚು ತಗಲುತ್ತದೆ.

ಬುಮ್ತಾಂಗ್ ಮತ್ತು ಫೋಬ್ಜಿಖಾ ಕಣಿವೆ

ಗ್ಯಾಂಗ್ಟೆಂಗ್ ಕಣಿವೆ ಎಂದೂ ಕರೆಯಲ್ಪಡುವ ಫೋಬ್ಜಿಖಾ ಕಣಿವೆ, ತನ್ನ ನೈಸರ್ಗಿಕ ಸೌಂದರ್ಯ, ಪ್ರಶಾಂತ ಪರಿಸರದ , ಮೂಲಕ ಪ್ರವಾಸಿಗರ ಗಮನ ಸೆಳೆಯುತ್ತದೆ. ಅಳಿವಿನಂಚಿನಲ್ಲಿರುವ ಕಪ್ಪು-ಕತ್ತಿನ ಕ್ರೇನ್‌ಗಳಿಗೆ ಚಳಿಗಾಲದಲ್ಲಿ ಈ ಕಣಿವೆ ನೆಲೆಯಾಗಿದೆ. ಥಿಂಪುವಿನಿಂದ 135 ಕಿಲೋ ಮೀಟರ್ ದೂರದಲ್ಲಿದೆ. ಟ್ಯಾಕ್ಸಿ ಮೂಲಕ ನೀವು ತಲುಪಬಹುದು. ಉಳಿಯಲು ನಿಮಗೆ ₹2,500ದಿಂದ 15,000ದವರೆಗೂ ಖರ್ಚು ತಗಲುತ್ತದೆ.

ಕಣಿವೆ ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ಬುಮ್ತಾಂಗ್. ಇದನ್ನು ಭೂತಾನ್‌ನ ಆಧ್ಯಾತ್ಮಿಕ ಹೃದಯಭೂಮಿ ಅಂತಲೂ ಕರೆಯುತ್ತಾರೆ. ದೇವಾಲಯಗಳು, ಮಠಗಳು ಸೇರಿದಂತೆ ನಾಲ್ಕು ಪ್ರಮುಖ ಕಣಿವೆಗಳು ಇಲ್ಲಿ ಕಾಣಸಿಗುತ್ತೆ.

ಚೋಖೋರ್, ಟ್ಯಾಂಗ್, ಉರಾ ಮತ್ತು ಚುಮೆ ಕಣಿವೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಜಕಾರ್ ಝೋಂಗ್, ಕುರ್ಜೆಯ್ ಲಖಾಂಗ್, ತಮ್ಶಿಂಗ್ ಲಖಾಂಗ್, ಮೆಬಾರ್ ತ್ಶೋ ಬಮ್ತಾಂಗ್ ಕಣಿವೆಯಲ್ಲಿನ ಇತರ ರಮಣೀಯ ಪ್ರವಾಸಿ ಸ್ಥಳಗಳು. ಬುಮ್ತಾಂಗ್ ಕಣಿವೆ ಥಿಂಪುವಿನಿಂದ 265 ಕಿಲೋಮೀಟರ್ ದೂರವಿದೆ. 2,500 ಸಾವಿರದಿಂದ 15,000 ದವರೆಗೂ ನಿಮಗೆ ವಸತಿ ಸೌಲಭ್ಯ ಸಿಗಲಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!