Tuesday, January 13, 2026
Tuesday, January 13, 2026

ಗ್ಲೋಬಲ್ ಟೂರಿಸಂಗೆ ಭಾರತೀಯರೇ ಹಾಟ್ ಫೇವರಿಟ್!

ಸಿಂಗಾಪುರವೂ ಭಾರತೀಯ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಪ್ರವಾಸೋದದ್ಯಮ ಪ್ರಚಾರವನ್ನು ರೂಪಿಸುತ್ತಿದೆ. ಸಿಂಗಾಪುರ ಟೂರಿಸಂ ಬೋರ್ಡ್‌ ಈ ಪ್ರಚಾರ ಕಾರ್ಯಕ್ಕಾಗಿ ಬಾಲಿವುಡ್‌ ಮತ್ತು ಕಂಟೆಂಟ್‌ ಕ್ರಿಯೇಟರ್‌ಗಳನ್ನೂ ಬಳಸಿಕೊಳ್ಳಲು ಮುಂದಾಗಿರುವುದು ಭಾರತೀಯ ಪ್ರವಾಸಿಗರ ಮೇಲೆ ಕೇಂದ್ರೀಕೃತ ಪ್ರಚಾರ ಆರಂಭಿಸಲು ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಈಗ ಭಾರತದತ್ತ ತಿರುಗಿ ನೋಡುತ್ತಿದೆ. ಪ್ರತಿ ದೇಶದ ಪ್ರವಾಸೋದ್ಯಮ ವಲಯಗಳು ಭಾರತೀಯರನ್ನು ಆಕರ್ಷಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ. 2026ರ ಹೊತ್ತಿಗೆ ಜಪಾನ್‌, ದಕ್ಷಿಣ ಕೊರಿಯಾ, ಸಿಂಗಾಪುರ, ಥೈಲ್ಯಾಂಡ್‌, ಆಸ್ಟ್ರೇಲಿಯಾಗಳತ್ತ ಭಾರತೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ.

ದಕ್ಷಿಣ ಕೊರಿಯಾದಲ್ಲಿ ಹೆಚ್ಚಾದ ಭಾರತೀಯ ಪ್ರವಾಸಿಗರ ಸಂಖ್ಯೆ

toor

ಕಳೆದ ವರ್ಷ ಅಂದರೆ 2025 ಅಂತ್ಯದ ಹೊತ್ತಿದೆ ದಕ್ಷಿಣ ಕೊರಿಯಾ ದೇಶಕ್ಕೆ ಭೇಟಿ ನೀಡಿರುವ ಭಾರತೀಯರ ಸಂಖ್ಯೆ 1.87 ಲಕ್ಷ. ಈ ಕುರಿತು ಕೊರಿಯಾ ಟೂರಿಸಂ ಆರ್ಗನೈಸೇಷನ್‌ನ ಸ್ಥಳೀಯ ನಿರ್ದೇಶಕ ಮ್ಯೂಂಗ್‌ ಕಿಲ್‌- ಯುನ್‌ ಮಾಹಿತಿ ನೀಡಿದ್ದು, 2025ರ ವೇಳೆಗೆ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆ 2 ಲಕ್ಷ ತಲುಪಿದೆ. 2026ರಲ್ಲಿ ಈ ಸಂಖ್ಯೆಯನ್ನು ಎರಡೂವರೆ ಲಕ್ಷಕ್ಕೇರಿಸಲು ಗುರಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.

ಜಪಾನ್‌ನಲ್ಲಿ ಇನ್ಮುಂದೆ ಗಾಲ್ಫ್ ಪ್ರವಾಸೋದ್ಯಮ

ಜಪಾನ್ ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು ಜಪಾನ್‌ನ ಮರೆಯಲ್ಲಿನ ಪ್ರವಾಸಿ ತಾಣಗಳಾದ ಸೆಂಡೈ, ನಿಕ್ಕೊ, ಮಾಟ್ಸುಮೊಟೊ ಮತ್ತು ಕನಜಾಗಳನ್ನು ಭಾರತೀಯರಿಗೆ ಪರಿಚಯಿಸಲು ಚಿಂತನೆ ನಡೆಸಿದೆ. ಇವು ಸ್ನೋಫಾಲ್‌ ಜತೆಗೆ ಗಾಲ್ಫ್ ಪ್ರವಾಸೋದ್ಯಮಕ್ಕೂ ಅವಕಾಶ ನೀಡಲಿವೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಂಗಾಪುರ ಪ್ರಚಾರಕ್ಕೆ ಬಾಲಿವುಡ್‌ ಶಾಮೀಲು

ಟೂರ್_

ಸಿಂಗಾಪುರವೂ ಭಾರತೀಯ ಪ್ರವಾಸಿಗರ ಅಭಿರುಚಿಗೆ ತಕ್ಕಂತೆ ಪ್ರವಾಸೋದದ್ಯಮ ಪ್ರಚಾರವನ್ನು ರೂಪಿಸುತ್ತಿದೆ. ಸಿಂಗಪೂರ ಟೂರಿಸಂ ಬೋರ್ಡ್‌ ಈ ಪ್ರಚಾರ ಕಾರ್ಯಕ್ಕಾಗಿ ಬಾಲಿವುಡ್‌ ಮತ್ತು ಕಂಟೆಂಟ್‌ ಕ್ರಿಯೇಟರ್‌ಗಳನ್ನೂ ಬಳಸಿಕೊಳ್ಳಲು ಮುಂದಾಗಿರುವುದು ಭಾರತೀಯ ಪ್ರವಾಸಿಗರ ಮೇಲೆ ಕೇಂದ್ರೀಕೃತ ಪ್ರಚಾರ ಆರಂಭಿಸಲು ನಿರ್ಧರಿಸಿದೆ.

ಈಗಾಗಲೇ ಆಸ್ಟ್ರೇಲಿಯಾ ಪ್ರವಾಸೋದ್ಯಮ ಸಚಿವಾಲಯ ಈ ವರ್ಷದಲ್ಲಿ 5 ಲಕ್ಷ ಭಾರತೀಯರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ವಿದೇಶಿ ಪ್ರವಾಸಿಗರಿಗೆ ಹೊಸದಾಗಿ ಪ್ರವೇಶ ಶುಲ್ಕ ಹೇರಲು ನಿರ್ಧರಿಸಿರುವ ಥೈಲ್ಯಾಂಡ್ ಕೂಡ ಅಂದಾಜು 2 ಲಕ್ಷ ಭಾರತೀಯ ಪ್ರವಾಸಿಗರ ಆಗಮನದ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಭಾರತೀಯರನ್ನು ಆಕರ್ಷಿಸಲು Indian cuisine ರೆಸ್ಟೋರೆಂಟ್ ಪ್ರಾರಂಭಿಸಲು ತೀರ್ಮಾನಿಸಿದೆ ಎಂಬುದು ಆತಿಥ್ಯ ಕ್ಷೇತ್ರದ ಮಾತಾಗಿದೆ. ಕೆಲ ದೇಶಗಳಂತೂ ವೀಸಾ ಪ್ರಕ್ರಿಯೆಯನ್ನು ಸಡಿಲಗೊಳಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧವಾಗಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...