Monday, August 18, 2025
Monday, August 18, 2025

ಹೈದರಾಬಾದ್ ನಲ್ಲಿ ಲೀಲಾ!

ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ 2.5 ಎಕರೆ ವಿಸ್ತೀರ್ಣದಲ್ಲಿ ಲೀಲಾ ಹೊಟೇಲ್ ಶುರುವಾಗಿದೆ.

ಈಗ ಹೈದರಾಬಾದ್ (Hyderabad) ಎಗ್ಗಿಲ್ಲದೆ ಬೆಳೆಯುತ್ತಿದೆ, ಅದರ ಜೊತೆಗೆ ಹಲವಾರು ಕಂಪನಿಗಳು, ನವೋದ್ಯಮಗಳೂ ಈಗ ಹೈದರಾಬಾದ್ ನಲ್ಲಿ ತಲೆಯೆತ್ತುತ್ತಿದೆ . ಈಗ ಇಂಥದ ನಗರದಲ್ಲಿ ಸ್ಟಾರ್ ಅಥವಾ ಲಕ್ಷುರಿ ಹೊಟೇಲ್ ಗಳು ಬಿಡುತ್ತವೆಯೇ? ಈಗ ಹೈದರಾಬಾದ್ ನ ಬಂಜಾರ ಹಿಲ್ಸ್ (Banjara Hills) ನಲ್ಲಿ ಲೀಲಾ ಹೊಸ್ಪಿಟಾಲಿಟಿ (Leela Hospitality) ಯಿಂದ 156 ರೂಮ್ ಗಳ ಹೊಸದೊಂದು ಹೊಟೇಲ್ ಶುರುವಾಗಿದೆ. ಇದು 2.5 ಎಕರೆ ಜಾಗದಲ್ಲಿ ಕಟ್ಟಲ್ಪಟ್ಟಿದ್ದು, ಈ ಹೊಟೇಲ್ ವ್ಯವಹಾರಿಕ ಮತ್ತು ಬಿಡುವು ಕಳೆಯುವ ರೀತಿಯಲ್ಲೇ ಸಿದ್ಧವಾಗಿದೆ. ಈ ಲೀಲಾ ಹೊಟೇಲ್(Leela Hotel) ನಲ್ಲಿ ಭಾರತೀಯ ಸಂಸ್ಕೃತಿಯ ಜತೆಗೆ ಆಧುನಿಕ ಐಷಾರಾಮಿ ಜೀವನಕ್ಕು ಬೇಕಾದ ಎಲ್ಲ ಸವಲತ್ತುಗಳನ್ನು ಒಳಗೊಂಡಿದೆ. 930 ಸ್ಕ್ವೇರ್ ಮೀಟರ್ನ ಕಾರ್ಯಕ್ರಮಗಳಿಗಾಗಿ ಸ್ಥಳದ ಜೊತೆಗೆ ತಾರಸಿಯಲ್ಲಿ ಸುಂದರವಾದ ಆವರಣಗಳು ಕಾರ್ಪೊರೇಟ್ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೂ ಅನುಕೂಲವಾಗುವಂತೆ ಕಟ್ಟಲಾಗಿದೆ.

ಲೀಲಾ ಪಾಲೇಸ್ ನ ಸಿಇಒ ಅನುರಾಗ್ ಭಟ್ನಾಗರ್ ಪ್ರಕಾರ , ಹೈದರಾಬಾದ್ ನ ಸಾಂಸ್ಕೃತಿಕ ವೈವಿಧ್ಯತೆ, ಅಂತಾರಾಷ್ಟ್ರೀಯ ಮಾನ್ಯತೆಯ ಸಂಶೋಧನೆಗಳೆಲ್ಲವು ನಮ್ಮ ಉದ್ದಿಮೆಯನ್ನು ಇಲ್ಲಿಯವರೆಗೆ ತರಲು ಪ್ರೇರೇಪಿಸಿದವು ಎಂದು ಹೇಳಿದರು.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!