ಅಡಿಗಾಸ್ ನಿಂದ ಪಿತೃ ಪಕ್ಷದ ವಿಶೇಷ ಯಾತ್ರೆ
ಯಾತ್ರಾ ಕ್ಷೇತ್ರದಲ್ಲಿ ಮೂರು ದಶಕಗಳ ಸಮಗ್ರ ಅನುಭವ ಹೊಂದಿರುವ ಅಡಿಗಾಸ್ ಸಂಸ್ಥೆ ಸೆಪ್ಟೆಂಬರ್ 7 ರಿಂದ ಆರಂಭವಾಗಿ 21ರ ವರೆಗಿನ ಪಿತೃ ಪಕ್ಷಕ್ಕೆ ವಿಶೇಷ ಯಾತ್ರಾ ದಿನಾಂಕಗಳನ್ನು ಘೋಷಿಸಿದೆ.
ಬೆಂಗಳೂರು: ಕರ್ಮಭೂಮಿ ಭಾರತದ ಸನಾತನ ಧರ್ಮಾಚರಣೆಗಳಲ್ಲಿ ಋಣ ಸಂದಾಯಕ್ಕೆ ಅತ್ಯಂತ ಪವಿತ್ರ ಹಾಗೂ ಶ್ರೇಯಸ್ಕರ ಕಾಲವೇ ಪಿತೃಪಕ್ಷ. ನಮ್ಮ ಜನ್ಮಕ್ಕೆ ಕಾರಣರಾಗಿ, ಲಾಲಿಸಿ- ಪಾಲಿಸಿ, ನಮ್ಮ ಉದ್ಧಾರಕ್ಕೆ ಶ್ರಮಿಸಿ ನಮ್ಮನ್ನಗಲಿದ ತಂದೆ - ತಾಯಿ, ಗುರು ಹಿರಿಯರನ್ನು ಸ್ಮರಿಸಿ ಅವರಿಗೆ ತರ್ಪಣದ ಮೂಲಕ ಕೃತಜ್ಞತೆಯನ್ನು ಸಲ್ಲಿಸುವ ಪವಿತ್ರ ವಿಧಿಯೇ ಶ್ರಾದ್ಧ ಕಾರ್ಯ. ಅಂತಹ ಪವಿತ್ರ ಪಕ್ಷದಲ್ಲಿ ಕಾಶಿ, ಗಯಾ, ಪ್ರಯಾಗಗಳಲ್ಲಿ ಈ ಕಾರ್ಯವನ್ನು ಮಾಡಿ ತನ್ಮೂಲಕ ಋಣ ಸಂದಾಯ ಮಾಡುವುದು ಪ್ರತಿಯೊಬ್ಬರ ಆಸ್ತಿಕನ ಕರ್ತವ್ಯ ಹಾಗೂ ಅಭಿಲಾಷೆಯಾಗಿದೆ.
ಯಾತ್ರಾ ಹೇಗೆ ಮತ್ತು ಯಾವಾಗ?
ಯಾತ್ರಾ ಕ್ಷೇತ್ರದಲ್ಲಿ ಮೂರು ದಶಕಗಳ ಸಮಗ್ರ ಅನುಭವ ಹೊಂದಿರುವ ಅಡಿಗಾಸ್ ಸಂಸ್ಥೆ ಸೆಪ್ಟೆಂಬರ್ 7 ರಿಂದ ಆರಂಭವಾಗಿ 21ರ ವರೆಗಿನ ಪಿತೃ ಪಕ್ಷಕ್ಕೆ ವಿಶೇಷ ಯಾತ್ರಾ ದಿನಾಂಕಗಳನ್ನು ಘೋಷಿಸಿದೆ. ಈ ಯಾತ್ರೆಯಲ್ಲಿ 2 ಆಯ್ಕೆಗಳಿದ್ದು, ಮೊದಲನೆಯದು 9 ದಿನಗಳ ಕಾಶಿ, ಗಯಾ, ಪ್ರಯಾಗ, ಅಯೋಧ್ಯಾ, ಚಿತ್ರಕೂಟ ಹಾಗೂ ನೈಮಿಷಾರಣ್ಯಗಳನ್ನು ಒಳಗೊಂಡಿದೆ. 2 ನೇಯದ್ದು ಕಾಶಿ, ಗಯಾ, ಪ್ರಯಾಗ ಹಾಗೂ ಅಯೋಧ್ಯಾಗಳ 6 ದಿನಗಳ ಕಾಲದ್ದಾಗಿದೆ.

ಯಾತ್ರೆಯ ವಿಶೇಷತೆ:
ಕ್ಷೇತ್ರದ ವಿಧಿವಿಧಾನಗಳ ಪ್ರಕಾರ ಶ್ರಾದ್ಧಕಾರ್ಯ ನಡೆಯಲಿದ್ದು, ಸಂಸ್ಥೆಯ ನುರಿತ ಬಾಣಸಿಗರಿಂದ ಸಾಂಪ್ರದಾಯಿಕ ಶ್ರಾದ್ಧದ ಊಟ ಮತ್ತು ಉಪಾಹಾರಗಳ ವ್ಯವಸ್ಥೆಯೂ ಇರಲಿದೆ. ಕನ್ನಡ ಬಲ್ಲ ಕ್ಷೇತ್ರ ಪುರೋಹಿತರಿಂದ ವಿಧಿ ವಿಧಾನಗಳು ನೆರವೇರಲಿದೆ. ಪ್ರಯಾಣಕ್ಕೆ ಹವಾನಿಯಂತ್ರಿತ, ಸುಖಾಸೀನ ಬಸ್ಸುಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಹವಾ ನಿಯಂತ್ರಿತ ಹೋಟೆಲ್ ಕೊಠಡಿಗಳಲ್ಲಿ ಅನುಭವಿ ವಾಸ್ತವ್ಯ. ಮ್ಯಾನೇಜರ್‌ಗಳ ಮೇಲ್ವಿಚಾರಣೆ ಹಾಗೂ ಸ್ಥಳೀಯ ಗೈಡ್ ಗಳ ನೇಮಕ. ಈ ಎಲ್ಲಾ ವ್ಯವಸ್ಥೆಗಳನ್ನು ಯಾತ್ರೆ ಒಳಗೊಂಡಿರುತ್ತದೆ. ಸೀಮಿತ ಅವಧಿಯಲ್ಲಿ ಈ ಯಾತ್ರೆಗೆ ಬೇಡಿಕೆ ಹೆಚ್ಚಿದ್ದು, ಸೀಮಿತ ಸೀಟುಗಳ ಲಭ್ಯತೆ ಇರುವುದರಿಂದ ಯಾತ್ರಿಕರು ಇಂದೇ ತಮ್ಮ ಸೀಟುಗಳನ್ನು ಕಾದಿರಿಸಲು ಈ ಮೂಲಕ ಅಡಿಗಾಸ್ ಸಂಸ್ಥೆಯ ಸಂಸ್ಥಾಪಕರಾದ ಕೆ. ನಾಗರಾಜ್ ಅಡಿಗರು ವಿನಂತಿಸಿದ್ದಾರೆ. ರಾತ್ರಿ ಟೂರ್
ಮಾಹಿತಿ ಮತ್ತು ಬುಕ್ಕಿಂಗ್
ಹೆಚ್ಚಿನ ಮಾಹಿತಿಗಾಗಿ ಅಡಿಗಾಸ್ ಸಂಸ್ಥೆಯ ಬೆಂಗಳೂರಿನ ಬಸವನಗುಡಿ, ವಿಜಯನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಹುಬ್ಬಳ್ಳಿಯ ಶಾಖೆಗಳಿಗೆ ಭೇಟಿ ಕೊಡಿ.
ದೂರವಾಣಿ: 080-26616678 / 9449478944/7022259008 / 9364104373
Email: careadigasyatra.com , Website: www.adigasyatra.com