ಧಾರ್ಮಿಕ ಪ್ರವಾಸೋದ್ಯಮದತ್ತ ಮಧ್ಯಪ್ರದೇಶ ಚಿತ್ತ...
ಮಧ್ಯಪ್ರದೇಶ ಸರ್ಕಾರವು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವ ಮೂಲಕ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ಮಹತ್ವದ ಹೆಜ್ಜೆಗಳನ್ನಿರಿಸಿದೆ. ಆರೋಗ್ಯ, ಆಯುರ್ವೇದ, ಯೋಗ ಮತ್ತು ಪರಿಹಾರಸಾಧನಗಳಂಥ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮುಖೇನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವತ್ತ ದಾಪುಗಾಲನ್ನಿಟ್ಟಿದೆ.
ʼಭಾರತದ ಹೃದಯʼವೆಂದೇ ಹೆಸರುವಾಸಿಯಾದ ಮಧ್ಯಪ್ರದೇಶ ರಾಜ್ಯ ಇದೀಗ ಧಾರ್ಮಿಕ ಪ್ರವಾಸೋದ್ಯಮದ ಹೃದಯವಾಗಿಯೂ ಹೊರಹೊಮ್ಮುತ್ತಿರುವುದು ವಿಶೇಷ. 2024ರಲ್ಲಿ ರಾಜ್ಯದ ಪವಿತ್ರ ಕ್ಷೇತ್ರಗಳಿಗೆ 107 ಮಿಲಿಯನ್‌ಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ಹಿಂದಿನವರ್ಷಕ್ಕೆ ಹೋಲಿಸಿದರೆ ಇದು ಸುಮಾರು 21.9% ಹೆಚ್ಚಳವಾಗಿದೆ. ಅದರಲ್ಲೂ ಉಜ್ಜಯಿನಿ ಮತ್ತು ಚಿತ್ರಕೂಟಕ್ಕೆ ಅತಿ ಹೆಚ್ಚು ಭಕ್ತರು ಭೇಟಿ ನೀಡಿರುವ ಸಂಗತಿ ಈ ತಾಣಗಳ ವೈಶಿಷ್ಟ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಮತ್ತು ಸಿಂಹಾಸ್ಥ ಕುಂಭಮೇಳ ಭಕ್ತರ ಪ್ರಮುಖ ಆಕರ್ಷಣೆಗಳಲ್ಲಿ ಮುಂಚೂಣಿಯಲ್ಲಿವೆ. ವಾರದ ಎಲ್ಲ ದಿನಗಳಲ್ಲಿಯೂ ಸಾವಿರಾರು ಭಕ್ತರು ಇಲ್ಲಿ ಶುಭಕಾಲ, ಭಸ್ಮ ಆರತಿ ಮುಂತಾದ ವಿಧಿಗಳನ್ನು ವೀಕ್ಷಿಸಲು ಬರುತ್ತಾರೆ. ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಏರ್ಪಡಿಸಿದ್ದ ʼSpiritual & Wellness Summitʼ ಎಂಬ ಶೃಂಗಸಭೆ ಹಲವರ ಗಮನ ಸೆಳೆದಿದ್ದು, ಪ್ರವಾಸಿಗರ ಭೇಟಿಯಲ್ಲಿನ ಹೆಚ್ಚಳಕ್ಕೂ ಕಾರಣವಾಗಿದೆ.

ಚಿತ್ರಕೂಟ ತನ್ನ ಪೌರಾಣಿಕ ಹಿನ್ನಲೆ ಮತ್ತು ನೈಸರ್ಗಿಕ ತಾಣಗಳಿಂದ ಪ್ರವಾಸಿಗರ ಮನಸೂರೆಗೊಳಿಸುತ್ತದೆ. ಈ ಪವಿತ್ರ ಸ್ಥಳವನ್ನು ಈಗ ಪ್ರಮುಖ ತಾಣವಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಯೋಜನೆಗಳು ಮುಂದುವರೆದಿವೆ. ಪ್ರವಾಸೋದ್ಯಮ-ಆಧಾರಿತ ಅಭಿವೃದ್ಧಿ ಯೋಜನೆಗಳ ಮೂಲಕ ಚಿತ್ರಕೂಟ್ಟ ತನ್ನ ಅಸಂಖ್ಯ ಭಕ್ತರನ್ನು, ಸಂಶೋಧಕ ಮತ್ತು ಸಾಂಸ್ಕೃತಿಕ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಜಾರಿಯಲ್ಲಿದೆ.
ಮಧ್ಯಪ್ರದೇಶ ಸರ್ಕಾರವು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವ ಮೂಲಕ ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಹಲವಾರು ಮಹತ್ವದ ಹೆಜ್ಜೆಗಳನ್ನಿರಿಸಿದೆ. ಆರೋಗ್ಯ, ಆಯುರ್ವೇದ, ಯೋಗ ಮತ್ತು ಪರಿಹಾರ ಸಾಧನಗಳಂಥ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವತ್ತ ದಾಪುಗಾಲನ್ನಿಟ್ಟಿದೆ. ಇತ್ತೀಚೆಗೆ ಉಜ್ಜಯಿನಿಯಲ್ಲಿ ನಡೆದ ವೆಲ್‌ನೆಸ್ ಸಮಿಟ್ ಇದಕ್ಕೆ ಜ್ವಲಂತ ಸಾಕ್ಷಿ.