Wednesday, October 8, 2025
Wednesday, October 8, 2025

ವೈಲ್ಡ್‌ ಲೈಫ್ ವೀಕ್:‌ ಕವನ ಬರೆದು ಬಹುಮಾನ ಗೆಲ್ಲಿ!

ವೈಲ್ಡ್‌ಲೈಫ್ ವೀಕ್‌ ನಿಮಿತ್ತ ನಾಲ್ಕರಿಂದ ಹತ್ತು ಸಾಲುಗಳಲ್ಲಿ ವೈಲ್ಡ್‌ಲೈಫ್ ಅಥವಾ ಬನ್ನೇರುಘಟ್ಟ ಉದ್ಯಾನವನದ ಬಗ್ಗೆ ಕವನ ಬರೆದು ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ನ ಕಮೆಂಟ್‌ ಬಾಕ್ಸ್‌ಗೆ ಹಾಕಬಹುದು ಇಲ್ಲವೇ ಬನ್ನೇರುಘಟ್ಟ ಪೇಜ್‌ಗೆ DM ಮಾಡಬಹುದೆಂದು ಕನ್ನಡದ ಖ್ಯಾತ ನಿರೂಪಕಿ, ನಟಿ ಶೀತಲ್‌ ಶೆಟ್ಟಿ ತಿಳಿಸಿದ್ದಾರೆ. ಅತ್ಯುತ್ತಮವಾಗಿ ಕವನ ಬರೆದು ಕಳುಹಿಸಿದವರಿಗೆ ಆಕರ್ಷಕ ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಕವನವನ್ನು ಅವರ ವಿಡಿಯೋ ಪೋಸ್ಟ್‌ ಆದ 48 ಗಂಟೆಗಳಲ್ಲಿ ಕಳುಹಿಸಬೇಕೆಂಬ ಶರತ್ತನ್ನು ವಿಧಿಸಿದ್ದಾರೆ.

“ಪರ್ಫೆಕ್ಟ್‌ ಪಿಕ್‌ನಿಕ್‌ ಸ್ಪಾಟ್‌ ಇದೆ ನಮ್ಮ ಬೆಂಗಳೂರಲ್ಲಿ, ನಾಡಲ್ಲಿ ಕಾಡನ್ನು ನೋಡಿರಿ ನಮ್ಮ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ, ಮೋಜು ಮಸ್ತಿ ಭರ್ಜರಿ ವೆನ್‌ ಯು ಗೋ ಆನ್‌ ಅ ಸಫಾರಿ; ಆನೆ, ಸಿಂಹ, ಚಿರತೆ, ಹುಲಿ ನೋಡೋಕೆ ನೀವೀಗ್ಲೇ ಹೊರಡಿ” ಎಂದು ಹೇಳುತ್ತಾ ಕನ್ನಡ ಕವಿ ಮನಸ್ಸುಗಳಿಗೆ ವೈಲ್ಡ್‌ಲೈಫ್ ಬಗ್ಗೆ ಕವನ ಬರೆದು ಆಕರ್ಷಕ ಬಹುಮಾನ ಗೆಲ್ಲುವ ಚಾಲೆಂಜ್ ನೀಡಿದ್ದಾರೆ ಕನ್ನಡದ ಖ್ಯಾತ ನಿರೂಪಕಿ, ನಟಿ ಶೀತಲ್‌ ಶೆಟ್ಟಿ.

Sheetal Shetty

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಈ ಬಾರಿ ವೈಲ್ಡ್‌ಲೈಫ್ ವೀಕ್‌ ವಿಶೇಷವಾಗಿ ಆಚರಿಸುತ್ತಿದೆ. ಇದರ ಅಂಗವಾಗಿ ನಾಲ್ಕರಿಂದ ಹತ್ತು ಸಾಲುಗಳಲ್ಲಿ ವೈಲ್ಡ್‌ಲೈಫ್ ಅಥವಾ ಬನ್ನೇರುಘಟ್ಟ ಉದ್ಯಾನವನದ ಬಗ್ಗೆ ಕವನ ಬರೆದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಇನ್ಸ್ಟಾಗ್ರಾಮ್‌ ಖಾತೆಯ ಸಹಭಾಗಿತ್ವದಲ್ಲಿ ನಟಿ ಶೀತಲ್‌ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವಿಡಿಯೋ ಮೂಲಕ ಈ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಕವನ ಬರೆದು ತಮ್ಮ ಇನ್ಸ್ಟಾಗ್ರಾಮ್‌ ಅಕೌಂಟ್‌ನ ಕಮೆಂಟ್‌ ಬಾಕ್ಸ್‌ಗೆ ಹಾಕುವುದು ಇಲ್ಲವೇ ಬನ್ನೇರುಘಟ್ಟ ಪೇಜ್‌ಗೆ DM ಮಾಡಬಹುದಾಗಿಯೂ ತಿಳಿಸಿದ್ದಾರೆ.

ಅತ್ಯುತ್ತಮವಾಗಿ ಕವನ ಬರೆದು ಕಳುಹಿಸಿದವರಿಗೆ ಆಕರ್ಷಕ ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ. ಆದರೆ, ಕವನವನ್ನು ಅವರ ವೀಡಿಯೋ ಪೋಸ್ಟ್‌ ಆದ 48 ಗಂಟೆಗಳಲ್ಲಿ ಕಳುಹಿಸಬೇಕೆಂಬ ಶರತ್ತನ್ನು ವಿಧಿಸಿದ್ದಾರೆ. ನೀವೂ ಕೂಡ ಈ ಚಾಲಂಜ್‌ನಲ್ಲಿ ಭಾಗವಹಿಸಿ ಆಕರ್ಷಕ ಬಹುಮಾನ ಗೆಲ್ಲಬಹುದು. ತಡಮಾಡಬೇಡಿ, ಆದಷ್ಟು ಬೇಗ ಕವನ ಬರೆದು ಕಳುಹಿಸಿ.

Soumya

Soumya

I am Soumya Shindhe, an engineering graduate with a strong passion for literature and journalism. I have contributed interview articles to Chittara cine magazine and possess keen interest in writing, communication, and creative expression, aspiring to grow professionally.

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..

Read Next

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..