Friday, October 3, 2025
Friday, October 3, 2025

ವಿಯೆಟ್ನಾಂನಿಂದ 10 ವರ್ಷಗಳ ಗೋಲ್ಡನ್ ವೀಸಾ; ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಯೋಜನೆ

ವಿಯೆಟ್ನಾಂ ಡಿಜಿಟಲ್ ಸ್ನೇಹಿ ಪ್ರಕ್ರಿಯೆಯನ್ನು ಪರಿಚಯಿಸುವ ಮೂಲಕ ಪ್ರವಾಸೋದ್ಯಮ ಮತ್ತು ಅಲ್ಪಾವಧಿಯ ವ್ಯಾಪಾರ ಪ್ರಯಾಣಕ್ಕಾಗಿ ತನ್ನ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸತನದ ಕ್ರಾಂತಿಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ವಿಯೆಟ್ನಾಂ 10 ವರ್ಷಗಳ ಗೋಲ್ಡನ್ ವೀಸಾ ಕಾರ್ಯಕ್ರಮವನ್ನು ತಂದಿದೆ. ದೀರ್ಘಾವಧಿಯ ಪ್ರವಾಸಿಗರು ಮತ್ತು ವಿದೇಶಿಗರನ್ನು ಆಕರ್ಷಿಸುವುದರ ಮೂಲಕ ಆಗ್ನೇಯ ಏಷ್ಯಾದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶವನ್ನು ಮುನ್ನೆಲೆಗೆ ತರುವ ಉದ್ದೇಶ ಹೊಂದಿದೆ.

vietnam 1

ವಿಯೆಟ್ನಾಂ, ವಿಶೇಷವಾಗಿ ಭಾರತೀಯರಿಂದ ಹೆಚ್ಚು ಸಂಶೋಧನೆಗೆ ಒಳಗಾದ ತಾಣಗಳಲ್ಲಿ ಒಂದಾಗಿದೆ. 2023 ರಲ್ಲಿ, ವಿಯೆಟ್ನಾಂ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಾಧಿಕಾರವು, 2019 ಕ್ಕೆ ಹೋಲಿಸಿದರೆ ಭಾರತದಿಂದ ಬರುವ ಸಂದರ್ಶಕರಲ್ಲಿ 231% ಹೆಚ್ಚಳವಾಗಿರುವುದಾಗಿ ವರದಿ ಮಾಡಿದೆ. ವಿಯೆಟ್ನಾಂನಷ್ಟು ಅಲ್ಲ, ಆದರೂ ಇತರ ಆಗ್ನೇಯ ಏಷ್ಯಾದ ದೇಶಗಳಾದ ಥೈಲ್ಯಾಂಡ್, ಸಿಂಗಾಪುರ ಮತ್ತು ಇಂಡೋನೇಷ್ಯಾಗಳು ಸಹ ಇದೇ ರೀತಿಯಲ್ಲಿ ಸಂದರ್ಶಕರ ಭೇಟಿಯಲ್ಲಿ ಏರಿಕೆ ಕಂಡಿದೆ.

vietnam

ಪ್ರವಾಸೋದ್ಯಮ ಮತ್ತು ಅಲ್ಪಾವಧಿಯ ವ್ಯಾಪಾರ ಪ್ರಯಾಣಕ್ಕಾಗಿ ವಿಯೆಟ್ನಾಂ ವೀಸಾ ಕಾರ್ಯವಿಧಾನಗಳಲ್ಲಿ ಡಿಜಿಟಲ್ ಸ್ನೇಹಿ ಪ್ರಕ್ರಿಯೆಯನ್ನು ಪರಿಚಯಿಸಿದ್ದು, ಸುಗಮ ವ್ಯವಸ್ಥೆಗೆ ಅನುವುಮಾಡಿದೆ. ಅಂದರೆ, ಈಗ ರಾಯಭಾರ ಕಚೇರಿಗೆ ಭೇಟಿ ನೀಡಲೇಬೇಕೆಂದಿಲ್ಲ. ವಿಯೆಟ್ನಾಂ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 7 ಮಿಲಿಯನ್‌ಗಿಂತಲೂ ಹೆಚ್ಚು ವಿದೇಶಿ ಸಂದರ್ಶಕರು ವಿಯೆಟ್ನಾಂಗೆ ಆಗಮಿಸಿದ್ದು, ಇದು ವರ್ಷದಿಂದ ವರ್ಷಕ್ಕೆ 23.8% ಹೆಚ್ಚಳವಾಗಿದೆ.

ಈ ಏರಿಕೆಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಭಾರತದ ಪ್ರಮುಖ ನಗರಗಳಿಂದ ವಿಮಾನ ಸಂಪರ್ಕದಲ್ಲಿನ ಸುಧಾರಣೆಯೇ ಕಾರಣವೆಂದು ಹೇಳಲಾಗಿದೆ.

Large-Vietnam2024_BrandShoot-034-e1718707274522

ವಿಯೆಟ್ನಾಂ ಎಲ್ಲರ ನೆಚ್ಚಿನ ತಾಣವಾಗಲು ಕಾರಣವೇನು?

ಎಲ್ಲ ರೀತಿಯ ಪ್ರವಾಸಿರಿಗೂ ನೆಚ್ಚಿನ ತಾಣ ವಿಯೆಟ್ನಾಂ. ಇಲ್ಲಿನ ವಿಶೇಷವಾದ ನಗರಗಳು, ಸುಂದರವಾದ ಪ್ರವಾಸಿ ತಾಣಗಳು ಮತ್ತು ಶ್ರೀಮಂತ ಸಂಸ್ಕೃತಿಯೊಂದಿಗೆ, ವಿಯೆಟ್ನಾಂ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರನ್ನು ಹೆಚ್ಚಿಗೆ ಆಕರ್ಷಿಸುತ್ತಿದೆ. ಹನೋಯ್ ಮತ್ತು ಹೋ ಚಿ ಮಿನ್ಹ್‌ನ ರೋಮಾಂಚಕ ನಗರಗಳಿಂದ ಹಿಡಿದು ಹ್ಯಾಲೊಂಗ್ ಕೊಲ್ಲಿ, ಡಾ ನಾಂಗ್, ಡಾ ಲಾಟ್ ಮತ್ತು ಹೋಯಿ ಆನ್‌ನ ಸುಂದರವಾದ ಕರಾವಳಿಗಳು ಎಲ್ಲರನ್ನೂ ಮೋಡಿ ಮಾಡುತ್ತವೆ. ವಸಾಹತುಶಾಹಿ ವಾಸ್ತುಶಿಲ್ಪ, ಆಹಾರಪದ್ಧತಿ ಮತ್ತು ಗ್ರಾಮೀಣ ಸೌಂದರ್ಯವಂತೂ ಎಲ್ಲರ ಮನಸೂರೆಗೈಯುತ್ತವೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!