Monday, August 18, 2025
Monday, August 18, 2025

ಡ್ರ್ಯಾಗನ್ ಪಾಸ್ ಜೊತೆ ಒಪ್ಪಂದ ಕಡೆದುಕೊಂಡ ಅದಾನಿ ಏರಪೋರ್ಟ್ ಹೋಲ್ಡಿಂಗ್ಸ್

ವಿಮಾನ ನಿಲ್ದಾಣದ ಲೌಂಜ್ ಪ್ರವೇಶ ಮತ್ತು ಪ್ರಯಾಣ ಸೌಲಭ್ಯಗಳನ್ನು ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿದ್ದ ಡ್ರ್ಯಾಗನ್ ಪಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದ ಅದಾನಿ ಸಂಸ್ಥೆ ಈಗ ಅದನ್ನು ಕೈಬಿಟ್ಟಿದೆ. ಇದಕ್ಕೆಲ್ಲ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಕಾರಣ.

ಚೀನಾದ (China) ಪ್ರಯಾಣ ಸೇವಾ ಸಂಸ್ಥೆ ಡ್ರಾಗನ್‌ಪಾಸ್ (DragonPass) ಹಾಗೂ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ (Adani Airports Holdings) ನಡುವಿನ ಹೊಸದಾಗಿ ಆರಂಭವಾಗಿದ್ದ ಸಹಭಾಗಿತ್ವ ಕೇವಲ ಒಂದು ವಾರದೊಳಗೆ ಮುಕ್ತಾಯಗೊಂಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯು ಘೋಷಿಸಿದೆ.

ಡ್ರಾಗನ್‌ಪಾಸ್‌ ಖಾತೆದಾರರಿಗೆ ಲೌಂಜ್ ಪ್ರವೇಶ ಇಲ್ಲ:
“ಡ್ರಾಗನ್‌ಪಾಸ್ ಗ್ರಾಹಕರು ಇನ್ನು ಮುಂದೆ ಅದಾನಿ ನಿರ್ವಹಣೆಯ ಏರ್‌ಪೋರ್ಟ್‌ಗಳ ಲೌಂಜ್‌ಗಳಿಗೆ ಪ್ರವೇಶ ಪಡೆಯಲಾಗದು” ಎಂಬುದಾಗಿ ಕಂಪನಿಯು ಹೇಳಿದ್ದು, ಸಾಮಾನ್ಯ ಪ್ರಯಾಣಿಕರ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದು ಎಂದು ಭರವಸೆ ನೀಡಿದೆ.

ಏಕೆ ಈ ನಿರ್ಧಾರ?

ಪಹಲ್ಗಾಂನಲ್ಲಿ ಸಾಮಾನ್ಯ ಜನರನ್ನು ಕೊಂದು ದುಷ್ಕೃತ್ಯ ಮೆರೆದ ಉಗ್ರರು ಮತ್ತು ಪಾಕಿಸ್ತಾನದೊಂದಿಗೆ ಉಂಟಾದ ಗಡಿ ಉದ್ವಿಗ್ನತೆ, ಭಾರತವನ್ನು ವಿಮಾನಯಾನ ಸೇರಿದಂತೆ ಅತೀ ಸೂಕ್ಷ್ಮ ಕ್ಷೇತ್ರಗಳಲ್ಲಿ ಚೀನಾ ಮತ್ತು ಟರ್ಕಿ ಮೂಲದ ಕಂಪನಿಗಳ ಮೇಲಿನ ನಿಗಾವನ್ನು ತೀವ್ರಗೊಳಿಸಲು ಪ್ರೇರೇಪಿಸಿವೆ. ಈ ಹಿನ್ನೆಲೆಯಲ್ಲಿ ಚೀನಾ ಮೂಲದ ಡ್ರಾಗನ್‌ಪಾಸ್ ವಿರುದ್ಧವೂ ನಿಗಾ ಇಡಲೇಬೇಕಾದ ಅನಿವಾರ್ಯ ಉಂಟುಮಾಡಿತು.

ಗುವಾಂಗ್‌ಝೌದಲ್ಲಿರುವ ಡ್ರಾಗನ್‌ಪಾಸ್ ಕಂಪನಿಯು ವಿಶ್ವಾದ್ಯಂತ ವಿಮಾನ ನಿಲ್ದಾಣದ ಲೌಂಜ್ ಪ್ರವೇಶ ಮತ್ತು ಪ್ರಯಾಣ ಸೌಲಭ್ಯಗಳನ್ನು ಕ್ರೆಡಿಟ್ ಕಾರ್ಡ್‌ಗಳು ಮತ್ತು ಕಂಪನಿಯ ಬ್ಲಾಕ್‌ಡೀಲ್ ಮೂಲಕ ನೀಡುತ್ತಿತ್ತು. ಭಾರತದಲ್ಲಿ ಮುಂಬೈ, ಅಹಮದಾಬಾದ್, ಲಖನೌ, ಜಯಪುರ, ಗುವಾಹಟಿ ಸೇರಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಡ್ರ್ಯಾಗನ್ಪಾಸ್ ನ ಪ್ರಭಾವ ಬೆಳೆಯುತ್ತಿತ್ತು.

ಡ್ರಾಗನ್‌ಪಾಸ್ನ ಮುಖ್ಯಸ್ಥರು ಯಾರು?

ಕಂಪನಿಯ ಮುಖ್ಯಸ್ಥರಾಗಿರುವವರು ಬ್ರಿಟಿಷ್ ರಾಷ್ಟ್ರೀಯರಾದ ಮಾರ್ಕ್ ಐಯನ್ ಕೊಚ್. ಅವರು ಡ್ರಾಗನ್‌ಪಾಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಎಂಬ ಯುಕೆ ಆಧಾರಿತ ಶಾಖೆಯನ್ನೂ ನಡೆಸುತ್ತಾರೆ. ಆದರೂ ಸಂಸ್ಥೆಯ ಚೀನಾ ಸಂಪರ್ಕ ಮತ್ತು ಡಿಜಿಟಲ್ ಇನ್‌ಫ್ರಾಸ್ಟ್ರಕ್ಚರ್‌ ಮೇಲಿನ ಹಿಡಿತ ಭಾರತಕ್ಕೆ ಹೆದರಿಕೆ ಮೂಡಿಸಿದೆ.

ಇದೇ ಮೊದಲ ಬಾರಿಯೇನಲ್ಲ:

ಈ ಘಟನೆ ಮೋಡಲನೆಯದ್ದಲ್ಲ. ಭಾರತೀಯ ಸರಕಾರ ಇತ್ತೀಚೆಗೆ ಟರ್ಕಿಯ Celebi Airport Services ಕಂಪನಿಯ ಭದ್ರತಾ ಅನುಮತಿಯನ್ನು ವಾಪಸ್ ಪಡೆದಿದ್ದು, ಅದು ಹಲವು ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್ ನಡೆಸುತ್ತಿತ್ತು.

ಪ್ರಯಾಣಿಕರ ಮೇಲೆ ಪರಿಣಾಮವೇನು?

ಡ್ರೀಮ್‌ಫೋಕ್ಸ್ (DreamFolks) ಭಾರತದಲ್ಲಿ ಈಗಲೂ ಪ್ರಮುಖ ಲೌಂಜ್ ಅಗ್ರಿಗೇಟರ್ ಆಗಿದೆ. ಜಾಗತಿಕ ಮಟ್ಟದಲ್ಲಿ ಪ್ರಾಥಮಿಕವಾಗಿ ಬಳಕೆಯಾಗುವ ಪ್ರೈಯಾರಿಟಿ ಪಾಸ್ ಕೂಡ ಭಾರತದ ಪ್ರಮುಖ ಬ್ಯಾಂಕುಗಳೊಂದಿಗೆ ಸಹಯೋಗದ ಮೂಲಕ ಲಭ್ಯವಿದೆ.

ಅತ್ಯುತ್ತಮ ಭಾರತೀಯ ಕ್ರೆಡಿಟ್ ಕಾರ್ಡ್‌ಗಳು ನೇರ ಲೌಂಜ್ ಪ್ರವೇಶ ಸೌಲಭ್ಯ ನೀಡುತ್ತಿವೆ. ಡ್ರಾಗನ್‌ಪಾಸ್ ಬಿಟ್ಟರೂ, ಪ್ರಯಾಣಿಕರಿಗೆ ಹಲವಾರು ಪರ್ಯಾಯ ಮಾರ್ಗಗಳಿದ್ದಾವೆ. ಕೆಲವೊಂದು ಕಾರ್ಡ್‌ಗಳ ಪರಿಗಣನೆಯ ಸಂಖ್ಯೆಯಲ್ಲಿ ಕಡಿತವಾದರೂ, ಪ್ರಯಾಣಿಕರು ಯಾವುದೇ ತೊಂದರೆ ಅನುಭವಿಸುವ ಸಾಧ್ಯತೆ ಕಡಿಮೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!