Friday, October 3, 2025
Friday, October 3, 2025

ಅಂತಾರಾಷ್ಟ್ರೀಯ ಪ್ರಯಾಣದ ವೇಳೆ ಈ 5 ದಾಖಲೆಗಳನ್ನು ತಪ್ಪದೆ ಜೊತೆಗಿಟ್ಟುಕೊಳ್ಳಿ

ಅಂತಾರಾಷ್ಟ್ರೀಯ ಪ್ರಯಾಣ, ವಿದೇಶಿ ಪ್ರವಾಸವನ್ನು ಕೈಗೊಳ್ಳುವ ಬಗ್ಗೆ ಯೋಚಿಸುತ್ತೀರಾ? ಹಾಗಾದರೆ ಪ್ರಯಾಣದ ವೇಳೆ ಈ ದಾಖಲೆಗಳನ್ನು ನಿಮ್ಮ ಜೊತೆಗಿರಿಸಿಕೊಳ್ಳಲು ಮರೆಯಬೇಡಿ.

ನೀವು ಸದ್ಯದಲ್ಲೇ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಸಜ್ಜಾಗುತ್ತಿದ್ದೀರಾ? ಪ್ರವಾಸದ ಸಿದ್ಧತೆಗಾಗಿ ನಿಮ್ಮ ಮನಸ್ಸು ತಯಾರಾಗುತ್ತಿರಬಹುದು. ಹಲವಾರು ಕೆಲಸಗಳಿಗಾಗಿ ನೀವು ಓಡಾಡುತ್ತಿರಬಹುದು. ಹೋಟೆಲ್ ಬುಕಿಂಗ್‌, ರೆಸ್ಟೋರೆಂಟ್ ಕಾಯ್ದಿರಿಸುವಿಕೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಅಂತಿಮಗೊಳಿಸುವುದು ಸೇರಿದಂತೆ ಪೂರ್ತಿಗೊಳಿಸಬೇಕಿರುವ ಕೆಲಸಗಳ ಪಟ್ಟಿ ದೊಡ್ಡದಿರಬಹುದು.

ಆದರೆ ಇವೆಲ್ಲದ ನಡುವೆ ನೀವು ಗಮನಿಸಬೇಕಿರುವ ವಿಚಾರವೆಂದರೆ, ಪ್ರಯಾಣದ ವೇಳೆ ಯಾವುದೇ ಸಂದರ್ಭದಲ್ಲೂ ಬೇಕಾಗುವ ಅಗತ್ಯ ದಾಖಲೆಗಳನ್ನು ನಿಮ್ಮ ಬಳಿ ಇರಿಸಿಕೊಂಡಿದ್ದೀರಾ ಎಂಬುದು. ಇಲ್ಲವಾದರೆ ನಿಮ್ಮ ಪ್ರಯಾಣ ಸುಗಮ, ಸುಖಕರವಾಗಿರದೆ ಸಮಸ್ಯೆಗಳನ್ನು ಎದುರಿಸಬೇಕಾದೀತು.

ಅಂತಾರಾಷ್ಟ್ರೀಯ ಪ್ರಯಾಣದ ವೇಳೆ ನಿಮ್ಮ ಬಳಿ ಇರಬೇಕಾದ 5 ದಾಖಲೆಗಳ ಮಾಹಿತಿ ಇಲ್ಲಿವೆ:

ಪಾಸ್‌ಪೋರ್ಟ್ ಜೊತೆಗಿರಲಿ

ವಿದೇಶಕ್ಕೆ ಪ್ರಯಾಣಿಸುವಾಗ, ನಿಮ್ಮ ಪಾಸ್‌ಪೋರ್ಟ್ ಇರುವುದು ಅತೀ ಮುಖ್ಯ. ಬಹುತೇಕ ಎಲ್ಲಾ ದೇಶಗಳು ಪ್ರವೇಶ ಮತ್ತು ನಿರ್ಗಮನದ ವೇಳೆ ಅದನ್ನು ಕಡ್ಡಾಯಗೊಳಿಸುತ್ತವೆ. ಪಾಸ್‌ಪೋರ್ಟ್ ಇಲ್ಲದೆ, ಅಂತಾರಾಷ್ಟ್ರೀಯ ಪ್ರಯಾಣ ಅಸಾಧ್ಯ. ನೀವು ರಿಟರ್ನ್ ಬರುವ ದಿನಾಂಕದ ನಂತರ ಕನಿಷ್ಠ ಆರು ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್ ವ್ಯಾಲಿಡ್‌ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ನಿಮ್ಮ ಪ್ರಯಾಣವನ್ನು ಸಮಸ್ಯೆಗಳಿಂದ ಮುಕ್ತವಾಗಿಸಲಿದೆ.

closeup-us-passport-with-immigration-visa-citizenship-travel-paperwork-wooden-tabl_871349-187

ವೀಸಾ ಮರೆಯದಿರಿ

ಒಂದು ನಿರ್ದಿಷ್ಟ ಕಾರಣ ಮತ್ತು ಅವಧಿಗಾಗಿ ದೇಶವನ್ನು ಪ್ರವೇಶಿಸಲು ಅನುಮತಿ ನೀಡುವುದೇ ವೀಸಾ. ಹೆಚ್ಚಿನ ದೇಶಗಳು ಪ್ರವೇಶಕ್ಕಾಗಿ ವೀಸಾವನ್ನು ಬಯಸಿದರೆ, ಕೆಲವು ದೇಶಗಳು ಅದನ್ನು ಕೇಳುವುದಿಲ್ಲ. ನಿಮ್ಮ ಭೇಟಿ ನೀಡಬಯಸುವ ದೇಶಕ್ಕೆ ವೀಸಾ ಅಗತ್ಯವಿದೆಯೇ ಎಂಬುದನ್ನು ಮುಂಚಿತವಾಗಿ ಪರೀಕ್ಷಿಸಿಕೊಳ್ಳಿ. ಈ ಮೂಲಕ ಕೊನೆಯ ಕ್ಷಣದಲ್ಲಿ ಉಂಟಾಗುವ ಗೊಂದಲಗಳನ್ನು ತಪ್ಪಿಸಿಕೊಳ್ಳಬಹುದು. ಕೆಲವು ದೇಶಗಳಲ್ಲಿ, ನೀವು ಆಗಮನದ ನಂತರ ವೀಸಾವನ್ನು ಸಹ ಪಡೆಯಬಹುದು. ಆದ್ದರಿಂದ, ವೀಸಾ ಅವಶ್ಯಕತೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ಹೊಂದುವುದು ಅತೀ ಅಗತ್ಯ.

photo_2021-11-16_18-03-09

ಗುರುತಿನ ದಾಖಲೆಗಳು ನಿಮ್ಮೊಂದಿಗಿರಲಿ

ವಿದೇಶಕ್ಕೆ ಪ್ರಯಾಣಿಸುವಾಗ ಗುರುತಿನ ದಾಖಲೆಗಳು ಅತ್ಯಗತ್ಯ. ಅದು ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಆಗಿರಬಹುದು, ಅಥವಾ ಡ್ರೈವಿಂಗ್‌ ಲೈಸೆನ್ಸ್‌ ಇರಬಹುದು. ಪ್ರಯಾಣ ಮಾಡುವಾಗ ಉಂಟಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಕನಿಷ್ಠ ಯಾವುದಾದರೂ ಒಂದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಈ ದಾಖಲೆಗಳು ನಿಮ್ಮ ಗುರುತನ್ನು ಹೇಳುತ್ತದೆ. ಅಲ್ಲದೆ ದೇಶಗಳಿಂದ ಸುಗಮ ಪ್ರವೇಶ ಮತ್ತು ನಿರ್ಗಮನಕ್ಕೆ ಅನುವು ಮಾಡಿಕೊಡುತ್ತದೆ.

maskedaadhaar

ಎಲ್ಲ ಕಾಲಕ್ಕೂ ಬೇಕು ಪ್ರಯಾಣ ವಿಮೆ

ನಿಮ್ಮ ಜೊತೆಗಿರಬೇಕಾದ ಇನ್ನೊಂದು ಪ್ರಮುಖ ದಾಖಲೆಯೆಂದರೆ ಅದು ನಿಮ್ಮ ಪ್ರಯಾಣ ವಿಮೆ. ಇದು ಯಾಕೆ ಅಗತ್ಯವೆಂದರೆ ನೀವು ವಿದೇಶದಲ್ಲಿ ಅನಿರೀಕ್ಷಿತವಾದ ವೈದ್ಯಕೀಯ ಅಥವಾ ಪ್ರಯಾಣ ಸಂಬಂಧಿತ ವೆಚ್ಚಗಳು ಬಂದರೆ ವಿಮೆಯಿಂದ ಮಾತ್ರವೇ ನಿಮಗೆ ನೆರವಾಗಲಿದೆ.

iStock_1719394586928_1719394611838

ಬುಕಿಂಗ್‌ ಮಾಡಿರುವ ದಾಖಲೆಗಳು

ನಿಮ್ಮ ಪ್ರವಾಸ ವೇಳೆ ಪ್ರಯಾಣ ಬುಕ್ಕಿಂಗ್‌, ಹೋಟೆಲ್ ಬುಕಿಂಗ್‌ ಸೇರಿದಂತೆ ಯಾವುದೇ ಬುಕ್ಕಿಂಗ್‌ ಇದ್ದರೂ ಅದರ ದೃಢೀಕರಣಗಳ ಮುದ್ರಣ ಅಥವಾ ಡಿಜಿಟಲ್ ಪ್ರತಿಯನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳುವುದು ಒಳ್ಳೆಯದು. ಚೆಕ್-ಇನ್ ಮತ್ತು ವಲಸೆ ಸಮಯದಲ್ಲಿ ಈ ದಾಖಲೆಗಳು ಉಪಯುಕ್ತವಾಗಿದ್ದು, ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತವೆ.

ಆದ್ದರಿಂದ, ಮುಂದಿನ ಬಾರಿ ನೀವು ವಿದೇಶ ಪ್ರವಾಸವನ್ನು ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಅಗ್ತಯವಾಗಿ ಈ ದಾಖಲೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲು ಮರೆಯದಿರಿ!

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!