Monday, November 17, 2025
Monday, November 17, 2025

ನಿಮ್ಮ ಲವ್‌ ಸಕ್ಸಸ್‌ ಆಗುತ್ತಾ ಇಲ್ವಾ? ಜಪಾನ್‌ನ ಈ ಜಾಗ ಹೇಳುತ್ತೆ ನಿಖರ ಭವಿಷ್ಯ!

ಜಪಾನ್‌ ದೇಶದಲ್ಲಿ ಹಲವಾರು ಸ್ವಾರಸ್ಯಕರ ತಾಣಗಳಿವೆ. ಅಲ್ಲಿನ ಜನ ಜೀವನದಲ್ಲೂ ವಿಶೇಷತೆಯಿದೆ. ಪ್ರತಿ ಆಚರಣೆಯೂ ತೀರಾ ಭಿನ್ನ-ವಿಭಿನ್ನ. ಜಪಾನ್‌ನ ಕ್ಯೋಟೊ ನಗರದ ಒಂದು ತಾಣವು ನಾವು ಪ್ರೇಮದಲ್ಲಿ ಗೆಲ್ಲತ್ತೇವೆಯೇ? ಇಲ್ಲವೇ? ಎಂಬುದರ ಕುರಿತು ನಿಖರವಾದ ಭವಿಷ್ಯವನ್ನು ಹೇಳುತ್ತದೆ.

ಜಪಾನ್‌ ದೇಶದಲ್ಲಿ ಹಲವಾರು ಸ್ವಾರಸ್ಯಕರ ತಾಣಗಳಿವೆ. ಅಲ್ಲಿನ ಜನ ಜೀವನದಲ್ಲೂ ವಿಶೇಷತೆಯಿದೆ. ಪ್ರತಿ ಆಚರಣೆಯೂ ತೀರಾ ಭಿನ್ನ-ವಿಭಿನ್ನ. ಅದರಲ್ಲೂ ಜಪಾನ್‌ನ ಕ್ಯೋಟೊ ನಗರದ ಒಂದು ತಾಣವು ನಾವು ಪ್ರೇಮದಲ್ಲಿ ಗೆಲ್ಲತ್ತೇವೆಯೇ? ಇಲ್ಲವೇ? ಎಂಬುದರ ಕುರಿತು ನಿಖರವಾದ ಭವಿಷ್ಯವನ್ನು ಹೇಳುತ್ತದೆ. ಆ ಜಾಗದ ಕುರಿತಾದ ಆಸಕ್ತಿಕರ ಮಾಹಿತಿ ಇಲ್ಲಿದೆ.

ಜಪಾನ್‌ನಲ್ಲಿ ಕಿಯೋಮಿಜು ಎಂಬ ಡೇರಾವಿದೆ. ಅದು ಪರಿಶುದ್ಧವಾದ ನೀರಿನ ದೇಗುಲ. ಸಂಪೂರ್ಣ ಮರದಿಂದಲೇ ನಿರ್ಮಿಸಿರುವ ಈ ಮಂದಿರವು ಕ್ಯೋಟೊ ನಗರದ ಹೊರವಲಯದಲ್ಲಿಇರುವ ಒಟ್ಟಾವಾ ಬೆಟ್ಟದ ಮಧ್ಯಭಾಗದಲ್ಲಿದೆ. ಹಳದಿ, ಕಿತ್ತಳೆ ಬಣ್ಣದ ಈ ಮಂದಿರ ದೂರದಿಂದಲೇ ಬಹುವಾಗಿ ಆಕರ್ಷಿಸುತ್ತದೆ. ಮಂದಿರದ ಸುತ್ತಮುತ್ತ ಸಾಕಷ್ಟು ಚೆರ್ರಿ ಮರಗಳಿವೆ. ಈ ಮಂದಿರದಲ್ಲಿ ಕಾನ್ನೊನ್‌ ಎಂಬ ದೇವತೆಯನ್ನು ಪೂಜಿಸಲಾಗುತ್ತದೆ. ನಮಸ್ಕಾರ ಮಾಡುವ ಭಂಗಿಯಲ್ಲಿ ನಿಂತಿರುವ ದೇವತೆಯು ಎರಡು ಕೈಗಳನ್ನು ಜೋಡಿಸಿದ್ದು, ಇನ್ನೆರಡು ಕೈಗಳು ಬುದ್ಧನ ಭಂಗಿಯಲ್ಲಿವೆ. ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.

ದೇಗುಲದ ಪಕ್ಕದಲ್ಲಿಯೇ ಜಿಶು ಪುಣ್ಯ ಕ್ಷೇತ್ರವಿದ್ದು ಇದು ಪ್ರೀತಿಗೆ ಸಂಕೇತವಾಗಿ ನಿರ್ಮಿಸಲಾಗಿದೆ. ಇಲ್ಲಿ ಎರಡು ದೊಡ್ಡ ಕಲ್ಲುಬಂಡೆಗಳು ಸುಮಾರು 50 ಅಡಿ ಅಂತರದಲ್ಲಿದೆ. ಇಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ಪರೀಕ್ಷಿಸಿ ನೋಡಲು ಅವಕಾಶವಿದೆ. ಪ್ರೇಮಿಗಳು ಒಂದು ಕಲ್ಲಿನ ಮುಂದೆ ನಿಂತು ಕಣ್ಣು ಮುಚ್ಚಿಕೊಂಡು ತಾವು ಬಯಸುವ ವ್ಯಕ್ತಿಯನ್ನು ನೆನಪಿಸಿಕೊಂಡು ಇನ್ನೊಂದು ಕಲ್ಲಿನತ್ತ ನಡೆದು ಹೋಗಬೇಕು. ಹಾಗೆ ನಡೆಯುವಾಗ ಕೈ ಇನ್ನೊಂದು ಕಲ್ಲಿಗೆ ತಾಗಿದರೆ ತಮ್ಮ ಪ್ರೇಮ ಗೆಲ್ಲುತ್ತದೆ ಎಂಬ ನಂಬಿಕೆಯಿದೆ.ಜಪಾನಿನ ಸಾವಿರಾರು ಯುವಕ-ಯುವತಿಯರು ತಮ್ಮ ಪ್ರೀತಿಯನ್ನು ಇಲ್ಲಿ ಪರೀಕ್ಷಿಸುತ್ತಾರೆ.

ದೇಗುಲದ ಅನತಿ ದೂರದಲ್ಲೇ ಒಟ್ಟಾವಾ ಜಲಪಾತವಿದೆ. ಜಲಪಾತವು ಮೂರು ಝರಿಗಳಾಗಿ ಪ್ರಶಾಂತವಾಗಿ ಹರಿಯುತ್ತದೆ. ಝರಿಗಳ ನೀರು ಕುಡಿದರೆ ಕನಸುಗಳು ಈಡೇರುತ್ತವೆ ಎಂದು ನಂಬಲಾಗಿದೆ. ವಿದ್ಯಾಭ್ಯಾಸದಲ್ಲಿ ಯಶಸ್ಸು ಲಭಿಸಬೇಕಾದರೆ ಮೊದಲನೆಯ ಝರಿಯ ನೀರು, ಆಯಸ್ಸು ಹೆಚ್ಚಾಗಬೇಕಾದರೆ ಎರಡನೆಯ ಝರಿಯ ನೀರು, ವೈವಾಹಿಕ ಜೀವನ ಅಥವಾ ಪ್ರೀತಿಯ ಜೀವನ ಚೆನ್ನಾಗಿರಬೇಕಾದರೆ ಮೂರನೆಯ ಝರಿಯ ನೀರನ್ನು ಕುಡಿಯಬೇಕು ಎನ್ನುತ್ತಾರೆ ಸ್ಥಳೀಯರು.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!