Friday, October 3, 2025
Friday, October 3, 2025

ವಿಮಾನ ಪ್ರಯಾಣದ ವೇಳೆ ಎಚ್ಚರ; ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರೆ ನೋ ಫ್ಲೈ ಲಿಸ್ಟ್‌ಗೆ ಸೇರಿಸಲಾಗುತ್ತೆ. ಹುಷಾರ್!

ಇತ್ತೀಚಿನ ದಿನಗಳಲ್ಲಿ ವಿಮಾನ ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಹೆಚ್ಚುತ್ತಿರುವ ಅನುಚಿತ ವರ್ತನೆಯ ಮೇಲೆ ನಿಗಾ ಇಡಲು ಭಾರತ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ತನ್ನ ನೋ ಫ್ಲೈ ಲಿಸ್ಟ್‌ ನಿಯಮಗಳನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ.

ಸಾರಿಗೆ ವ್ಯವಸ್ಥೆಯಲ್ಲಿ ವಿಮಾನಯಾನ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ದೂರದ ಪ್ರಯಾಣ, ಆರಾಮದಾಯಕ ಪ್ರಯಾಣ ಹಾಗೂ ಯಾವುದೇ ಸ್ಥಳವನ್ನು ಕಡಿಮೆ ಸಮಯದಲ್ಲಿ ತಲುಪಬೇಕಾದರೆ, ವಿಮಾನ ಯಾನವನ್ನು ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಈ ಕಾರಣದಿಂದಾಗಿ ವಿಮಾನ ನಿಲ್ದಾಣ ಮತ್ತು ವಿಮಾನದೊಳಗಿನ ಸೇವಾ ಸಿಬ್ಬಂದಿಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ, ಭಾರತ ಸರ್ಕಾರವು ಈಗಾಗಲೇ ಅಸ್ತಿತ್ವದಲ್ಲಿರುವ ನೋ ಫ್ಲೈ ಲಿಸ್ಟ್‌ ಪಟ್ಟಿಯನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವ ಪ್ರಯಾಣಿಕರನ್ನು ನೋ ಫ್ಲೈ ಲಿಸ್ಟ್‌ ಗೆ ಒಳಪಡಿಸಲಾಗವುದು. ವಿಮಾನ ವಿಳಂಬ ಮತ್ತು ರದ್ದತಿ ಸಮಯದಲ್ಲಿ ನಿಲ್ದಾಣದಲ್ಲಿರುವ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುತ್ತಾರೆ ಎಂಬ ದೂರುಗಳು ನಿರಂತರವಾಗಿ ಬಂದ ಹಿನ್ನೆಲೆಯಲ್ಲಿ ಈ ಚಿಂತನೆಗೆ ಸರ್ಕಾರ ಮುಂದಾಗಿದೆಯಂತೆ.

GettyImages-1401029747

ನಿಯಮ ಈಗ ಏನು ಹೇಳುತ್ತದೆ?

ಪ್ರಸ್ತುತ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಗಳಲ್ಲಿ ಅನುಚಿತವಾಗಿ ವರ್ತಿಸುವ ಪ್ರಯಾಣಿಕರನ್ನು 'ಪ್ರಯಾಣ ನಿಷೇಧ' ಪಟ್ಟಿಯಲ್ಲಿ ಸೇರಿಸಲು ಅನೇಕ ನಿಯಮಗಳನ್ನು ತಂದಿದೆ. ಮೂರು ಹಂತಗಳಾಗಿ ಈ ನಿಯಮಗಳನ್ನು ವಿಂಗಡಿಸಲಾಗಿದೆ.

- ದೈಹಿಕ ಸನ್ನೆಗಳು ಮತ್ತು ಮೌಖಿಕ ಕಿರುಕುಳ

- ದೈಹಿಕವಾಗಿ ನಿಂದನೀಯ ನಡವಳಿಕೆ

- ಜೀವಕ್ಕೆ ಸಂಚಕಾರ ತರಬಲ್ಲ ಅಪಾಯಕಾರಿ
ಚಟುವಟಿಕೆ

ಶಿಕ್ಷೆ ಏನು ?

ವಿಮಾನದಲ್ಲಿ ಪ್ರಯಾಣಿಸುವ ಯಾವುದೇ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುವುದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಅಲ್ಲದೆ ಅವರ ಹೆಸರನ್ನು ನೋ ಫ್ಲೈ ಲಿಸ್ಟ್‌ನಲ್ಲಿ ಸೇರಿಸಲಾಗುವುದು. ಇದರರ್ಥ ಆ ವ್ಯಕ್ತಿ ಅನೇಕ ವರ್ಷಗಳ ಕಾಲ ದೇಶ, ಪ್ರಪಂಚವನ್ನು ಸುತ್ತಲು ಸಾಧ್ಯವಾಗುವುದಿಲ್ಲ.

staff abuse

ಸದ್ಯ ಈ ನಿಯಮಗಳ ಜೊತೆ ಇನ್ನಷ್ಟು ಸೇರ್ಪಡೆ

ಈವರೆಗೂ ಹಾರಾಟ ನಿಷೇಧ ನಿಯಮದ ಪ್ರಕಾರ, ವಿಮಾನಗಳಲ್ಲಿ ಸಿಬ್ಬಂದಿ, ಸದಸ್ಯರ ಸುರಕ್ಷತೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ನಿಯಮದ ವಿಸ್ತರಣೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಅನುಚಿತ ವರ್ತನೆಗಳಿಗೂ ಕಡಿವಾಣ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಸದ್ಯದಲ್ಲೇ ಈ ನಿಯಮ ಜಾರಿಗೆ ಬರಲಿದೆ.

ಪ್ರವಾಸಿಗರೇ ಜಾಗರೂಕರಾಗಿರಿ

ಹಾರಾಟ ನಿಷೇಧ ನಿಯಮವನ್ನು ವಿಸ್ತರಿಸಿ ಅದನ್ನು ಜಾರಿಗೊಳಿಸಿದರೆ, ಪ್ರಯಾಣಿಕರು ವಿಮಾನದಲ್ಲಿ ಮಾತ್ರವಲ್ಲದೆ ವಿಮಾನ ನಿಲ್ದಾಣದಲ್ಲಿಯೂ ತಮ್ಮ ನಡವಳಿಕೆಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ವಿಮಾನ ನಿಲ್ದಾಣದ ಸಿಬ್ಬಂದಿಯ ಕಡೆಗೆ ನಿಂದನೀಯ ವರ್ತನೆಯನ್ನು ಮಾಡಿದರೆ, ಅಂತಹ ಪ್ರಯಾಣಿಕರ ಹೆಸರುಗಳನ್ನು ನೋ ಎಂಟ್ರಿ ಲಿಸ್ಟ್‌ ನಲ್ಲಿ ಸೇರಿಸಲಾಗುತ್ತದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!