Tuesday, November 18, 2025
Tuesday, November 18, 2025

ಸ್ಕೈಟ್ರಾಕ್ಸ್ ಪಟ್ಟಿ 2025 : 13ನೇ ಬಾರಿಗೆ ʻವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣʼ ಕಿರೀಟ ಹೊತ್ತ ಸಿಂಗಾಪುರದ ಚಾಂಗಿ ಏರ್‌ ಪೋರ್ಟ್

ವಿಮಾನ ನಿಲ್ದಾಣದಲ್ಲಿ ಸಮಯ ಕಳೆಯುವುದೆಂದರೆ ಅನೇಕರಿಗೆ ಬಲು ಕಷ್ಟದ ಕೆಲಸ. ಆದರೆ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ನೀಡಿರುವ ಸೌಕರ್ಯ-ಸೌಲಭ್ಯಗಳಿಂದಾಗಿಯೇ ವಿಶ್ವದ ಬೆಸ್ಟ್‌ ವಿಮಾನ ನಿಲ್ದಾಣ ಎನ್ನಿಸಿಕೊಂಡಿದೆ.

ದೇಶದ ಪ್ರಮುಖ ತಾಣಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಅನೇಕ ದೇಶೀಯ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಮಾತ್ರವಲ್ಲದೆ ಸರಕು ಸಾಗಣಿಕೆಗೂ ಇದು ಸಹಕಾರಿಯಾಗಿದೆ.

ಆದರೆ ಪ್ರಯಾಣಿಕರಿಗೆ ಇಲ್ಲಿ ಲಭ್ಯವಾಗುವ ಸವಲತ್ತು, ಹೊಟೋಲ್‌ ಸೇವೆಗಳು ಇಂತಹ ಅನೇಕ ವಿಭಾಗಗಳನ್ನು ಗುರುತಿಸಿಕೊಂಡರೂ ಈ ವಿಮಾನ ನಿಲ್ದಾಣಗಳ ಪೈಕಿ ಯಾವುದು ಬೆಸ್ಟ್‌, ಯಾವ ವಿಮಾನ ನಿಲ್ದಾಣಕ್ಕೆ ಉತ್ತಮ ರೇಟಿಂಗ್‌ ಇದೆ ಅನ್ನುವ ವಿಚಾರ ನಿಮಗೆ ಗೊತ್ತಾ?

ವಾಯು ಸಾರಿಗೆ ರೇಟಿಂಗ್ ಸಂಸ್ಥೆ ಸ್ಕೈಟ್ರಾಕ್ಸ್‌ (skytrax) ನೀಡಿರುವ ವರದಿಯ ಪ್ರಕಾರ, ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ ಸತತ 13 ನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಕಿರೀಟವನ್ನು ಪಡೆದಿದೆ. ಇಲ್ಲಿ ವಿಶೇಷತೆಯೆಂದರೆ ಪ್ರಯಾಣಿಕರು ತಮ್ಮ ವಿಮಾನ ಹೊರಡುವ 48 ಗಂಟೆಗಳ ಮೊದಲು ತಮ್ಮ ಬ್ಯಾಗ್‌ಗಳ ಜೊತೆ ಚೆಕ್‌ ಇನ್‌ ಮಾಡುವ ಅವಕಾಶವಿದ್ದು, ಇದರಿಂದಾಗಿ ಪ್ರಯಾನೀಕರು ತಮ್ಮ ಉಳಿದ ಸಮಯವನ್ನು ಏರ್‌ ಪೋರ್ಟ್‌ ನಲ್ಲಿ ಆರಾದಾಯಕವಾಗಿ ಕಳೆಯಬಹುದು.

1R7mu7O08bFpB70me3kwXGXU1dR8gJYNEcITd2J6

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಏನಿದೆ ವಿಶೇಷ ?

ಚಾಂಗಿ ವಿಮಾನ ನಿಲ್ದಾಣದಲ್ಲಿ ಬೃಹತ್ 10 ಅಂತಸ್ತಿನ ಜ್ಯುವೆಲ್ ಶಾಪಿಂಗ್ ಮಾಲ್‌ ಇದ್ದು, 2024 ರಲ್ಲಿ ಸುಮಾರು 80 ಮಿಲಿಯನ್ ಜನರು ಇಲ್ಲಿಗೆ ಭೇಟಿ ನೀಡಿರುವುದು ತಿಳಿದುಬಂದಿದೆ. ಒಳಾಂಗಣ ಉದ್ಯಾನ, ಚಿಟ್ಟೆ ಉದ್ಯಾನ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ಒಳಾಂಗಣ ಜಲಪಾತವಾದ 40 ಮೀಟರ್ ಎತ್ತರ ಹಾಗೂ ಸುಮಾರು 130 ಅಡಿ ರೇನ್ ವೋರ್ಟೆಕ್ಸ್ ಇಲ್ಲಿದೆ.

ಇವಿಷ್ಟೇ ಅಲ್ಲದೆ ಸ್ಪಾಗಳು, ಹೋಟೆಲ್‌ಗಳು, ಕಲಾ ಪ್ರದರ್ಶನಗಳು, ವಸ್ತುಸಂಗ್ರಹಾಲಯ, ಸಿನಿಮಾ ಥಿಯೇಟರ್ಸ್‌ ಕೂಡ ಇಲ್ಲಿದ್ದು, ಡೈನೋಸಾರ್ ಥೀಮ್ ಪಾರ್ಕ್ ಕೂಡ ಎಲ್ಲರ ಅತ್ಯಾಕರ್ಷಣೆಯ ಕೇಂದ್ರವಾಗಿದೆ.

ಸ್ಕೈಟ್ರಾಕ್ಸ್ ಸಂಸ್ಥೆಯು ಚಾಂಗಿ ವಿಮಾನ ನಿಲ್ದಾಣವನ್ನು ಗ್ಯಾಸ್ಟ್ರೊನೊಮಿಕ್ ವಂಡರ್‌ಲ್ಯಾಂಡ್ (gastronomic wonderland) ಎಂದು ಗುರುತಿಸಿದೆ. ಅಲ್ಲದೆ ಮ್ಯಾಡ್ರಿಡ್‌ನಲ್ಲಿ ನಡೆದ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್‌ನಲ್ಲಿ ವರ್ಲ್ಡ್ಸ್‌ ಬೆಸ್ಟ್‌ ಏರ್‌ ಫೋರ್ಟ್‌ ಡೈನಿಂಗ್‌, ವರ್ಲ್ಡ್ಸ್‌ ಬೆಸ್ಟ್‌ ಏರ್‌ ಪೋರ್ಟ್‌ ವಾಶ್‌ ರೂಂ, ಏಷ್ಯಾದಲ್ಲಿ ಬೆಸ್ಟ್‌ ಏರ್‌ ಪೋರ್ಟ್‌ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

-1x-1

ಅಭಿವೃದ್ಧಿ ಕಾರ್ಯಕ್ಕಾಗಿ $2 ಬಿಲಿಯನ್‌ ಹೂಡಿಕೆ:

ಚಾಂಗಿ ವಿಮಾನ ನಿಲ್ದಾಣದಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಮತ್ತು ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುವ ನಿಟ್ಟಿನಲ್ಲಿ ಮುಂದಿನ ಆರು ವರ್ಷಗಳಲ್ಲಿ $2 ಬಿಲಿಯನ್‌ಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈಗಾಗಲೇ ಇರುವ 4 ಟರ್ಮಿನಲ್‌ ಜೊತೆಗೆ 5ನೇ ಟರ್ಮಿನಲ್‌ ನಿರ್ಮಾಣ ಕಾರ್ಯವೂ ನಡೆಯುತ್ತಿದ್ದು, 2030ರ ವೇಳೆಗೆ ಚಾಂಗಿ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಇನ್ನಷ್ಟು ಆಪ್ತವಾಗಲಿದೆ.

ಏಷ್ಯಾ ಮುಂಚೂಣಿಯಲ್ಲಿದೆ:

ಸ್ಕೈಟ್ರಾಕ್ಸ್‌ನ ಗ್ರಾಹಕರ ಜಾಗತಿಕ ಸಮೀಕ್ಷೆಯ ಪ್ರಕಾರ, ಪ್ರಪಂಚದಾದ್ಯಂತದ 565 ವಿಮಾನ ನಿಲ್ದಾಣಗಳ ಪೈಕಿ ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣ ಕತಾರ್‌ನ ಹಮದ್ ಇಂಟರ್‌ನ್ಯಾಷನಲ್. ಇದು ವಿಶ್ವದ ಅತ್ಯಂತ ಐಷಾರಾಮಿ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ವಿಮಾನ ನಿಲ್ದಾಣ ಶಾಪಿಂಗ್ ಮತ್ತು ಮಧ್ಯಪ್ರಾಚ್ಯದ ಅತ್ಯುತ್ತಮ ವಿಮಾನ ನಿಲ್ದಾಣಕ್ಕಾಗಿ ಇದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಏಷ್ಯಾದ ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿ ಮೂರರಿಂದ ಆರು ಸ್ಥಾನಗಳನ್ನು ಪಡೆದುಕೊಂಡಿವೆ. ವಾಯು ಸಾರಿಗೆ ಶ್ರೇಷ್ಠತೆಯ ವಿಷಯದಲ್ಲಿ ಈ ಪ್ರದೇಶವು ಉತ್ತರ ಅಮೆರಿಕಾ ಮತ್ತು ಯುರೋಪ್ ಅನ್ನು ಬಿಟ್ಟು ಮುಂದಿನ ಹಂತಕ್ಕೆ ತಲುಪುತ್ತಿದೆ ಎಂಬುದು ಮೆಚ್ಚುಗೆಯ ವಿಚಾರ.

TOKYO-HANEDA-AIRPORT

ವಿಶ್ವದ ಅತ್ಯಂತ ಸ್ವಚ್ಛ ವಿಮಾನ ನಿಲ್ದಾಣ ಕರೆಸಿಕೊಳ್ಳುವ ಟೋಕಿಯೋ ಹನೆಡಾ ವಿಮಾನ ನಿಲ್ದಾಣ 3 ನೇ ಸ್ಥಾನದಲ್ಲಿದೆ. ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಎಂಬ ಪ್ರಶಸ್ತಿಗೆ ಪಾತ್ರವಾದ ಸಿಯೋಲ್‌ನ ಇಂಚಿಯಾನ್ ಇಂಟರ್ನ್ಯಾಷನಲ್ , ನರಿಟಾ ಇಂಟರ್ನ್ಯಾಷನಲ್ ಮತ್ತು ಹಾಂಗ್ ಕಾಂಗ್ ಇಂಟರ್ನ್ಯಾಷನಲ್ ನಂತರದ ಸ್ಥಾನಗಳನ್ನು ಪಡೆದಿವೆ.

ಒಂಬತ್ತು ಯುರೋಪಿಯನ್ ವಿಮಾನ ನಿಲ್ದಾಣಗಳು ಟಾಪ್ 20 ರಲ್ಲಿ ಸ್ಥಾನ ಪಡೆದಿವೆ. 7 ನೇ ಸ್ಥಾನದಲ್ಲಿ, ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ಸತತ ಮೂರನೇ ವರ್ಷ ಯುರೋಪಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಗುರುತಿಸಿಕೊಂಡಿದೆ. ರೋಮ್ ಫಿಯುಮಿಸಿನೊ 8 ನೇ ಸ್ಥಾನದಲ್ಲಿದೆ.

2025 ರ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳು

  1. ಸಿಂಗಾಪುರ ಚಾಂಗಿ ವಿಮಾನ ನಿಲ್ದಾಣ
  2. ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  3. ಟೋಕಿಯೋ ಹನೆಡಾ ವಿಮಾನ ನಿಲ್ದಾಣ
  4. ಇಂಚಿಯಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  5. ನರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  6. ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  7. ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣ
  8. ರೋಮ್ ಫಿಯುಮಿಸಿನೊ ವಿಮಾನ ನಿಲ್ದಾಣ
  9. ಮ್ಯೂನಿಚ್ ವಿಮಾನ ನಿಲ್ದಾಣ
  10. ಜ್ಯೂರಿಚ್ ವಿಮಾನ ನಿಲ್ದಾಣ
  11. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  12. ಹೆಲ್ಸಿಂಕಿ-ವಾಂಟಾ ವಿಮಾನ ನಿಲ್ದಾಣ
  13. ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  14. ಇಸ್ತಾನ್‌ಬುಲ್ ವಿಮಾನ ನಿಲ್ದಾಣ
  15. ವಿಯೆನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  16. ಮೆಲ್ಬೋರ್ನ್ ವಿಮಾನ ನಿಲ್ದಾಣ
  17. ಚುಬು ಸೆಂಟ್ರೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
  18. ಕೋಪನ್ ಹ್ಯಾಗನ್ ವಿಮಾನ ನಿಲ್ದಾಣ
  19. ಆಮ್ಸ್ಟರ್‌ಡ್ಯಾಮ್ ಶಿಫೋಲ್ ವಿಮಾನ ನಿಲ್ದಾಣ

20. ಬಹ್ರೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!