Monday, August 18, 2025
Monday, August 18, 2025

ಮೇ 4ರವರೆಗೂ ದೆಹಲಿಯಲ್ಲಿ 200ಕ್ಕೂ ಹೆಚ್ಚು ವಿಮಾನಗಳು ವಿಳಂಬ!

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಒಂದು ರನ್‌ವೇ ದುರಸ್ತಿಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳು ವಿಳಂಬವಾಗುತ್ತಿವೆ.

ನವ ದೆಹಲಿ: ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಒಂದು ರನ್‌ವೇ ದುರಸ್ತಿಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಾದ ವಿಮಾನಗಳು ವಿಳಂಬವಾಗುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಿಂದ 200ಕ್ಕೂ ಹೆಚ್ಚು ವಿಮಾನಗಳ ಆಗಮನ ಮತ್ತು ಟೇಕಾಫ್‌ ಗಳಲ್ಲಿ ವಿಳಂಬವಾಗುತ್ತಿದ್ದು, ಇದು ಮೇ 4ರವರೆಗೆ ಮುಂದುವರೆಯಲಾಗಿದೆ ಎನ್ನಲಾಗಿದೆ.

ವರದಿಯೊಂದರ ಪ್ರಕಾರ ಏಪ್ರಿಲ್ 20 ರಂದು 384 ವಿಮಾನಗಳ ಆಗಮನ ಮತ್ತು 501 ವಿಮಾನಗಳ ನಿರ್ಗಮನದಲ್ಲಿ ವಿಳಂಬವಾಗಿದೆ. ಅಷ್ಟೇ ಅಲ್ಲದೆ ಏಪ್ರಿಲ್ 12 ರಂದು ದೆಹಲಿ ಪ್ರದೇಶದಲ್ಲಿ ಗುಡುಗು ಸಹಿತ ಮಳೆ ಸುರಿದ ಕಾರಣ 498 ವಿಮಾನಗಳು ವಿಳಂಬವಾಗಿದ್ದು, ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಫ್ಲೈಟ್‌ರಾಡರ್ 24 ರ ವಿಮಾನವು ಮೂವತ್ತು ನಿಮಿಷ ತಡವಾಗಿ ತಲುಪಿದೆ ಎಂಬ ಮಾಹಿತಿಯಿದೆ. ಮೇ 4 ರವರೆಗೆ ಈ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಅಧಿಕೃತ ಮಾಹಿತಿ ಮೂಲಕ ತಿಳಿದು ಬಂದಿದೆ.
ವಿಮಾನ ವಿಳಂಬಕ್ಕೆ ಕಾರಣವೇನು?

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಪರೀತ ಗಾಳಿ ಮಳೆಯಿಂದ ವಿಳಂಬವಾಯಿತು. ಇನ್ನು ನಾಲ್ಕನೇ ರನ್‌ವೇಯ ದುರಸ್ತಿ ಹಾಗೂ ಪೂರ್ವದಿಂದ ಬೀಸುತ್ತಿರುವ ಗಾಳಿಯಿಂದಾಗಿ ದಿನವಿಡೀ 200 ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬವಾಗುತ್ತಿದೆ.

ಪ್ರತಿಕೂಲ ಹವಾಮಾನದಿಂದಾಗಿ ಸ್ಪೈಸ್‌ಜೆಟ್, ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳ ಟೇಕಾಫ್‌ನಲ್ಲಿ ವಿಳಂಬವಾಗುತ್ತಿವೆ. ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಗಳು ಆಗಮನ ವಿಮಾನಗಳಿಗೆ ಸರಾಸರಿ ಆರು ನಿಮಿಷ ಮತ್ತು ನಿರ್ಗಮನ ವಿಮಾನಗಳಿಗೆ ಸುಮಾರು 47 ನಿಮಿಷಗಳ ವಿಳಂಬವನ್ನು ವರದಿ ಮಾಡಿದ್ದಾರೆ. ಸ್ಪೈಸ್‌ಜೆಟ್ ಅಮೃತಸರ ಮತ್ತು ಗುವಾಹಟಿಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದರೆ, ಇಂಡಿಗೋ ದೆಹಲಿ, ಅಮೃತಸರ, ಲಕ್ನೋ ಮತ್ತು ಬೆಂಗಳೂರು ಮಾರ್ಗಗಳಿಗೆ ಪ್ರಯಾಣ ಸಲಹೆಗಳನ್ನು ನೀಡಲಾಗಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!