ದೆಹಲಿ ಏರ್ ಪೋರ್ಟ್: T2 ತಾತ್ಕಾಲಿಕ ಬಂದ್, T1 ನಲ್ಲಿ ಜನದಟ್ಟಣೆ ಹೆಚ್ಚಳ
ಟರ್ಮಿನಲ್ 1ಕ್ಕೆ ಸ್ಥಳಾಂತರಿಸುವುದರೊಂದಿಗೆ ಟರ್ಮಿನಲ್ 1 ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಆದರೆ T1 ನಲ್ಲಿ ಬ್ಯಾಗೇಜ್ ಚೆಕ್-ಇನ್ ವ್ಯವಸ್ಥೆಯಲ್ಲಿನ ಮಧ್ಯಂತರ ಸಮಸ್ಯೆಗಳಿಂದಾಗಿ ಪ್ರಯಾಣಿಕರು ವಿಳಂಬವನ್ನು ಎದುರಿಸುವಂತಾಯಿತು.
ದೆಹಲಿ: ಏಪ್ರಿಲ್ 15 ರಂದು ದೆಹಲಿ ವಿಮಾನ ನಿಲ್ದಾಣ (Dehli Airport) ದ ಟರ್ಮಿನಲ್ 2 (Terminal 2)ನಿಂದ ಎಲ್ಲ ವಿಮಾನಗಳನ್ನು ಟರ್ಮಿನಲ್ 1 (Terminal 1)ಕ್ಕೆ ಸ್ಥಳಾಂತರಿಸುವುದರೊಂದಿಗೆ ಟರ್ಮಿನಲ್ 1 ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಆದರೆ T1 ನಲ್ಲಿ ಬ್ಯಾಗೇಜ್ ಚೆಕ್-ಇನ್ ವ್ಯವಸ್ಥೆಯಲ್ಲಿನ ಮಧ್ಯಂತರ ಸಮಸ್ಯೆಗಳಿಂದಾಗಿ ಪ್ರಯಾಣಿಕರು ವಿಳಂಬವನ್ನು ಎದುರಿಸುವಂತಾಯಿತು. ನಿರ್ವಹಣಾ ಕಾರ್ಯಗಳಿಗಾಗಿ T2 ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದರಿಂದ, ಇಂಡಿಗೋ ಸಂಸ್ಥೆಯ 125 ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ಸ್ಥಳಾಂತರಿಸಲಾಗಿತ್ತು ಮತ್ತು ಆಕಾಶ ಏರ್ ಸಹ ತನ್ನ ವಿಮಾನಗಳನ್ನು T2 ನಿಂದ T1 ಗೆ ಸ್ಥಳಾಂತರಿಸಿತ್ತು.
T1 ನಲ್ಲಿ ಬ್ಯಾಗೇಜ್ ಚೆಕ್-ಇನ್‌ನಲ್ಲಿ ನಾವು ತಾಂತ್ರಿಕ ಸಮಸ್ಯೆ (Technical Issues)ಯನ್ನು ಅನುಭವಿಸಿದ್ದೇವೆ. ಅದು ಸ್ವಲ್ಪ ಸಮಯದವರೆಗೆ ಬ್ಯಾಗೇಜ್ ಚೆಕ್-ಇನ್ ಅನ್ನು ನಿಧಾನಗೊಳಿಸಿತು. ಇದರಿಂದಾಗಿ ವಿಮಾನ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕೆಲ ಕಾರ್ಯಾಚರಣೆಗಳು ನಡೆದ ನಂತರ ಈಗ ಸಾಮಾನ್ಯ ಸ್ಥಿತಿಗೆ ಬಂದಿವೆ. ಉಂಟಾದ ಅಲ್ಪಾವಧಿಯ ಅನಾನುಕೂಲತೆಗೆ ಕ್ಷಮೆಯಾಚಿಸುತ್ತೇವೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) X ಪೋಸ್ಟ್‌ನಲ್ಲಿ ತಿಳಿಸಿದೆ.
X ನಲ್ಲಿನ ಪೋಸ್ಟ್‌ನಲ್ಲಿ, ಒಬ್ಬ ಬಳಕೆದಾರರು ದೆಹಲಿಯಿಂದ ಅಗರ್ತಲಾಕ್ಕೆ ಬರುವ ಅನೇಕ ಪ್ರಯಾಣಿಕರ ಲಗೇಜ್‌ಗಳು ಆಗಮನದ ಸಮಯದಲ್ಲಿ ಕಾಣೆಯಾಗಿವೆ ಎಂದು ಉಲ್ಲೇಖಿಸಿದ್ದಾರೆ.
ದೇಶದ ಅತ್ಯಂತ ಜನನಿಬಿಡ ಮತ್ತು ವಿಶ್ವದ ಒಂಭತ್ತನೇ ಜನನಿಬಿಡ ವಿಮಾನ ನಿಲ್ದಾಣವಾದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IGIA) ದಲ್ಲಿ ಎರಡು ಟರ್ಮಿನಲ್‌ಗಳಷ್ಟೇ ಕಾರ್ಯಾಚರಣೆ ನಡೆಸಿದ್ದು, ಮೂರು ರನ್ ವೇಗಳಲ್ಲಿ ಎರಡಷ್ಟೇ ಕಾರ್ಯನಿರ್ವಹಿಸುತ್ತಿವೆ. ಟರ್ಮಿನಲ್ 2 ರಿಂದ ಟರ್ಮಿನಲ್ 1 ಸದ್ಯ 125 ಕ್ಕೂ ಹೆಚ್ಚು ದೈನಂದಿನ ವಿಮಾನಗಳನ್ನು ಸ್ಥಳಾಂತರಿಸಿದೆ ಎಂದು IGIA ಹೇಳಿಕೊಂಡಿದೆ. ಇದರಿಂದಾಗಿ T1 ರಿಂದ ದಿನಕ್ಕೆ ಒಟ್ಟು ನಿರ್ಗಮನಗಳ ಸಂಖ್ಯೆ 200 ಕ್ಕಿಂತ ಹೆಚ್ಚಾಗಿದೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಸ್ಥಳಾಂತರದ ಸಮಯಕ್ಕೆ T1 ನಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಒಮ್ಮೆಲೇ 15,000 ರಿಂದ 40,000 ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಟರ್ಮಿನಲ್ 2 ರಲ್ಲಿ ರಾತ್ರಿ ನಿಲುಗಡೆ ಹೊಂದಿದ್ದ ಒಟ್ಟು 26 ವಿಮಾನಗಳನ್ನು ಸರಾಗವಾಗಿ ಟರ್ಮಿನಲ್ 1 ಗೆ ವರ್ಗಾಯಿಸಲಾಗಿದೆ ಎಂದು ಅದು ಹೇಳಿದೆ.