Friday, October 3, 2025
Friday, October 3, 2025

ಕಣ್ಣಿಲ್ಲದಿದ್ದರೂ ಸಮುದ್ರವನ್ನು ಫೀಲ್ ಮಾಡಬಹುದು; ಅಬುಧಾಬಿಯಿಂದ ದೃಷ್ಟಿಹೀನ ಸ್ನೇಹಿ ಬೀಚ್‌

ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ಅಬುಧಾಬಿ, ಸದ್ಯ ಮತ್ತೊಮ್ಮೆ ಸುದ್ದಿಯಲ್ಲಿದೆ. ದೃಷ್ಟಿಹೀನರಿಗಾಗಿ ವಿಶೇಷ ಬೀಚ್ ಒಂದನ್ನು ಇಲ್ಲಿ ಸಿದ್ಧಪಡಿಸಲಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹುಟ್ಟಿನಿಂದಲೂ ದೃಷ್ಟಿಹೀನರಾಗಿರುವವರು ಜಗತ್ತನ್ನು ತಿಳಿಯಬಹುದೇ ಹೊರತು ಕಾಣುವುದು ಸಾಧ್ಯವಿಲ್ಲ. ತಮ್ಮ ಕಲ್ಪನೆಗೆ ಅನುಗುಣವಾಗಿ ಜಗತ್ತನ್ನು ಕಟ್ಟಿಕೊಳ್ಳುವ ಅವರು ಎಲ್ಲರೊಂದಿಗೆ ಬೆರೆಯುವುದಾಗಲೀ, ಎಲ್ಲರಂತೆ ಸಂಭ್ರಮಿಸುವುದಾಗಲೀ ಕಷ್ಟ ಸಾಧ್ಯ. ಸಮುದ್ರ ಹೇಗಿರುತ್ತದೆ ? ಅಲೆಗಳು ಹೇಗೆ ಅಪ್ಪಳಿಸುತ್ತವೆ ? ಇಂತಹ ಪ್ರಶ್ನೆಗಳನ್ನು ಹುಟಿಕೊಂಡರೂ ಪುಸ್ತಕಗಳಿಂದ ಓದಿ ತಿಳಿದುಕೊಳ್ಳುತ್ತಾರೆ ವಿನಃ, ಅದನ್ನು ಅನುಭವಿಸಲು ಅನೇಕ ಬಾರಿ ವಿಫಲರಾಗುತ್ತಾರೆ.

ಆದ್ರೆ ಇನ್ನುಮುಂದೆ ದೃಷ್ಟಿಹೀನರು ಯಾವುದೇ ಹಿಂಜರಿಗೆ ಇಲ್ಲದೆ ಬೀಚ್ ನಲ್ಲಿ ವಿಶ್ರಾಂತಿ ಪಡೆಯಬಹುದು. ಸಮುದ್ರದ ಕಿನಾರೆಯಲ್ಲಿ ಆಟವಾಡಬಹುದು. ಅಬುಧಾಬಿ ಇದಕ್ಕೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ದೃಷ್ಟಿಹೀನರು ಸಮುದ್ರದ ಕಿನಾರೆಯಲ್ಲಿ ಮಿಂದೇಳಲು, ಅದರ ನೈಜ ಅನುಭವ ಪಡೆಯಲು ಹೊಸ ಯೋಜನೆ ಶುರು ಮಾಡಿದೆ.

d3dbcd3d-f366-46f0-a5fc-6d24be13251b

ದೃಷ್ಟಿಹೀನರಿಗಾಗಿ ವಿಶೇಷ ಬೀಚ್:‌

ಜಾಯೆದ್ ಹೈಯರ್ ಆರ್ಗನೈಸೇಶನ್ ಸಹಯೋಗದೊಂದಿಗೆ ಈ ಬೀಚ್ ಪ್ರಾರಂಭಿಸಲಾಗಿದ್ದು, ದೃಷ್ಟಿ ಹೀನರು ಮತ್ತು ಅವರ ಕುಟುಂಬದವರನ್ನೇ ಗುರಿಯಾಗಿಸಿಕೊಂಡು ಯುಎಇ, ಮೊದಲ ಮೀಸಲು ಬೀಚ್ ಒಂದನ್ನು ಉದ್ಘಾಟನೆಗೊಳಸಿದೆ. ಗೇಟ್ 3 ಬಳಿಯ ಕಾರ್ನಿಚೆಯಲ್ಲಿರುವ ಈ 1,000 ಚದರ ಮೀಟರ್ ಸ್ವರ್ಗ ಹೊಸತನದ ಹೊಸ ಪ್ರಯತ್ನಕ್ಕೆ ನಾಂದಿಹಾಡಿದೆ. ಹಾಗಂತ ಇಲ್ಲಿಗೆ ದೃಷ್ಟಿಹೀನರಷ್ಟೇ ಭೇಟಿ ನೀಡುವ ಅವಕಾಶವಿರೋದಾ ಅಂದುಕೊಳ್ಳಬೇಡಿ. ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಈ ಬೀಚ್‌ ನಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಈ ಬೀಚ್ ವಿಶೇಷತೆಗಳನ್ನು ತಿಳಿಯಲೇಬೇಕು:

ಅಂಧರಿಗಾಗಿಯೇ ರೂಪುಗೊಂಡಿರುವ ಈ ಬೀಚ್ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿದೆ. ದೃಷ್ಟಿಹೀನರು ಈ ಬೀಚ್ ನಲ್ಲಿ ಆರಾಮವಾಗಿ ಸುತ್ತಾಡಬಹುದು, ವಿಶ್ರಾಂತಿ ಪಡೆಯಬಹುದು. ಅವರಿಗೆ ಅನುಕೂಲವಾಗುವಂತೆ ಈ ಬೀಚ್ ವಿನ್ಯಾಸಗೊಳಿಸಲಾಗಿದೆ.

- ಪ್ರವಾಸಿಗರಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ವಿಶೇಷವಾದ ಫೂಟ್‌ ಪಾತ್‌ ಸಹ ಇಲ್ಲಿದೆ.

- ಸುಲಭ ಮತ್ತು ಆರಾಮವಾಗಿ ಈಜಲು ಅನುಕೂಲವಾಗುವಂತೆ ಈಜು ಮಾರ್ಗಸೂಚಿ ಸೂಚನಾ ಫಲಕವಿದೆ.

- ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಮುದ್ರದ ತೀರಕ್ಕೆ ಹೋಗುವಾಗ ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿಯೇ ಹಗ್ಗ ಹಾಗೂ ಗಂಟೆ ಕಟ್ಟಿದ್ದಾರೆ.

- ತೇಲುವ ಬೀಚ್ ಕುರ್ಚಿಗಳನ್ನು ಇಲ್ಲಿ ಅಳವಡಿಸಲಾಗಿದ್ದು, ಶೌಚಾಲಯ, ಉಚಿತ ನೀರಿನ ವ್ಯವಸ್ಥೆಯೂ ಇದೆ.

- ವೃತ್ತಿಪರ ಲೈಫ್ ಗಾರ್ಡ್ಸ್ ಇಲ್ಲಿ ಕಾರ್ಯನಿರತರಾಗಿದ್ದು, ಪ್ರವಾಸಿಗರ ಮೇಲೆ ನಿಗಾ ವಹಿಸುತ್ತಿರುತ್ತಾರೆ.

images (4)

ಒಟ್ಟಿನಲ್ಲಿ ಇಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಧಾನ್ಯವನ್ನು ಕಲ್ಪಿಸಿರುವುದರಿಂದಾಗಿ ಭದ್ರತೆಯ ಜೊತೆಗೆ ವೈದ್ಯಕೀಯ ಬೆಂಬಲವನ್ನೂ ಕಲ್ಪಿಸಲಾಗಿದೆ. ಅರ್ಹ ನರ್ಸ್ ಯಾವಾಗಲೂ ಇಲ್ಲಿ ಲಭ್ಯ ಇರುತ್ತಾರೆ. ವಿಶ್ವ ಅಂಗವೈಕಲ್ಯ ಒಕ್ಕೂಟವು ಇದನ್ನು ಅಧಿಕೃತವಾಗಿ ಅಂಗವೈಕಲ್ಯ ಸ್ನೇಹಿ ಬೀಚ್ ಎಂದು ನಾಮಕರಣ ಮಾಡಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!