Monday, August 18, 2025
Monday, August 18, 2025

ಅಬುಧಾಬಿಯಲ್ಲಿ ಹೊಸ ಥೀಮ್ ಪಾರ್ಕ್!

ಅಬುಧಾಬಿ ಪ್ರವಾಸೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಇದೀಗ ವಾಲ್ಟ್ ಡಿಸ್ನಿಯು ಮಧ್ಯಪ್ರಾಚ್ಯದಲ್ಲಿ ಮೊದಲ ಡಿಸ್ನಿ ಥೀಮ್ ಪಾರ್ಕ್ ಮತ್ತು ರೆಸಾರ್ಟ್ ನಿರ್ಮಾಣವಾಗುತ್ತಿದೆ.

ಅಬುಧಾಬಿ ಪ್ರವಾಸೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ದೇಶವು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಇದೀಗ ವಾಲ್ಟ್ ಡಿಸ್ನಿಯು ಮಧ್ಯಪ್ರಾಚ್ಯದಲ್ಲಿ ಮೊದಲ ಡಿಸ್ನಿ ಥೀಮ್ ಪಾರ್ಕ್ ಮತ್ತು ರೆಸಾರ್ಟ್ ನಿರ್ಮಾಣವಾಗುತ್ತಿದೆ. ಫೆರಾರಿ ವರ್ಲ್ಡ್ ಮತ್ತು ವಾರ್ನರ್ ಬ್ರದರ್ಸ್ ವರ್ಲ್ಡ್‌ನಂತಹ ವಿಶಿಷ್ಟ ಆಕರ್ಷಣೆಗಳಿಗೆ ನೆಲೆಯಾಗಿರುವ ಯಾಸ್ ದ್ವೀಪದಲ್ಲಿ ಹೊಸ ಡಿಸ್ನಿ ತಾಣವು ರೂಪುಗೊಳ್ಳಲಿದೆ. ಅಬುಧಾಬಿಯಲ್ಲಿ ಇದೀಗ ಮತ್ತೊಂದು ಅದ್ಭುತ ಆಕರ್ಷಣೆಯ ತಾಣ ಸಜ್ಜಾಗುತ್ತಿದೆ.

ಇದು ಡಿಸ್ನಿಯ ಏಳನೇ ಥೀಮ್ ಪಾರ್ಕ್ ರೆಸಾರ್ಟ್ ಆಗಿದ್ದು ಜಾಗತಿಕಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ. ಮನರಂಜಗೆ ಒತ್ತು ನೀಡುವ ಸಂಸ್ಥೆಯು ಈ ಯೋಜನೆಯಲ್ಲಿ ನೇರವಾಗಿ ಬಂಡವಾಳ ಹೂಡುವುದಿಲ್ಲವಾದರೂ, ಅದರ ಇಮ್ಯಾಜಿನಿಯರ್ಸ್ ತಂಡವು ಸೃಜನಶೀಲ ವಿನ್ಯಾಸವನ್ನು ಮುನ್ನಡೆಸುತ್ತದೆ ಎನ್ನಲಾಗಿದೆ. ಯಾಸ್ ದ್ವೀಪದ ರೂಪಾಂತರದ ಹಿಂದಿನ ಶಕ್ತಿಕೇಂದ್ರವಾದ ಮಿರಾಲ್, "ತಂತ್ರಜ್ಞಾನ-ಕೇಂದ್ರಿತ" ಉದ್ಯಾನವು ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ ಎಂಬ ಮಾಹಿತಿಯಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!