Friday, October 3, 2025
Friday, October 3, 2025

ಬೈ ಬೈ ಹೇಳಲು ಮನಸ್ಸಾಗದ ದುಬೈ

ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ - ಅಬುಧಾಬಿ ರಾಜ್ಯಗಳನ್ನು ಜೀವನದಲ್ಲಿ ಒಂದು ಸಲವಾದರೂ ನೋಡಲೇಬೇಕು. ಇಲ್ಲಿನ ಕ್ರೂಸ್ ಡಿನ್ನರ್, ದುಬೈ ಸಿಟಿ ಟೂರ್, ಗ್ಲೋಬಲ್ ವಿಲೇಜ್, ಸೀ ವರ್ಲ್ಡ್, ದುಬೈ ಮಾಲ್, ಬುರ್ಜ್ ಖಲೀಫಾ, ಡೆಸರ್ಟ್ ಸಫಾರಿಗೆ ಮನಸೋಲದವರಿಲ್ಲ.. - ಸುಪ್ರೀತಾ ವೆಂಕಟ್

ದುಬೈ ಒಂದು ಮಾಯಾನಗರಿ, ಈ ಹೆಸರು ಕೇಳಿದಾಕ್ಷಣ ಅವೆಷ್ಟೋ ಅದ್ಭುತ ಕಟ್ಟಡಗಳು, ರಸ್ತೆಗಳು ಕಣ್ಣ ಮುಂದೆ ಬರುವುದು. ಇನ್ಸ್ತಾ ಇನ್ಷ್ಟಾಗ್ರಾಂ ರೀಲ್ಸ್'ಗಳು, ಯುಟ್ಯೂಬ್ ವೀಡಿಯೊಗಳು, ಪ್ರವಾಸ ಹೋಗಿ ಬಂದವರ ಫೋಟೋಗಳನ್ನು ನೋಡಿರುತ್ತೀರ. ಅದ್ಭುತ ಲೋಕವೇ ಕಂಡಂತೆ ಭಾಸವಾಗುತ್ತದೆ. ಮೊಬೈಲ್ ಅಲ್ಲಿ ನೋಡಿ ನಿಜವಾಗಿಯೂ ಕಣ್ಣೆದುರು ನೋಡುವುದಕ್ಕೂ ಅದೊಂದು ವಿಸ್ಮಯವೇ ಸರಿ. ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ - ಅಬುಧಾಬಿ ರಾಜ್ಯಗಳನ್ನು ಒಂದು ಸಲ ನೋಡಲೇಬೇಕು. ಈಗಂತೂ ಟೂರಿಸ್ಟ್ ಪ್ಯಾಕೆಜ್ ಮಾಡಿಕೊಡುವವರು ಬೇಕಾದಷ್ಟು ಕಂಪೆನಿಗಳು ಇವೆ. ನಮಗೆ ಬೇಕಾದ ಜಾಗಗಳನ್ನು ನೋಡಲು ಪಟ್ಟಿ ಸಿದ್ಧ ಮಾಡಿಕೊಡುತ್ತಾರೆ. ಕ್ರೂಸ್ ಡಿನ್ನರ್, ದುಬೈ ಸಿಟಿ ಟೂರ್, ಗ್ಲೋಬಲ್ ವಿಲೇಜ್, ಸೀ ವರ್ಲ್ಡ್, ದುಬೈ ಮಾಲ್, ಬುರ್ಜ್ ಖಲೀಫಾ, ಡೆಸರ್ಟ್ ಸಫಾರಿ ಹೀಗೆ ನೋಡಲು, ನೋಡಿ ಕಳೆದುಹೋಗಲು ಜಾಗಗಳು ಸುಮಾರು ಇವೆ.

ಕ್ರೂಸ್ ಡಿನ್ನರ್

ದುಬೈ ನೋಡುತ್ತಾ ಕಳೆದು ಹೋಗಬೇಕಾದರೆ, ಸಂಜೆಯಾಗುತ್ತಿದ್ದಂತೆ ಪೂರ್ತಿ ಕತ್ತಲಾಗಲು ಬಿಡದೆ, ಪ್ರತೀ ಕಟ್ಟಡಕ್ಕೂ ಜಗಮಗ ಲೈಟ್ಸ್ ಹಾಕೋದನ್ನು ಕ್ರೂಸ್ ಅಲ್ಲಿ ಊಟ ಮಾಡುತ್ತಾ ನೋಡಬೇಕು. ದುಬೈ ಡೌನ್ಟೌನ್ ಗೆ ಸುತ್ತು ಹಾಕುತ್ತಾ, ಆ ಹಿತಕರವಾದ ರಾತ್ರಿಯ ಗಾಳಿಯನ್ನು ಅನುಭವಿಸುತ್ತಾ, ದುಬೈ ನೋಡುವುದೇ ಸುಮಧುರ ಅನುಭವ. ಕ್ರೂಸ್ ಅಲ್ಲಿ ಸಸ್ಯಾಹಾರ/ಮಾಂಸಾಹಾರಗಳ ವಿವಿಧ ತಿನಿಸುಗಳು ಲಭ್ಯವಿರುವುದು. ಕೆಲವೊಂದು ಕ್ರೂಸ್ ಗಳಲ್ಲಿ ಅರಬ್ ನೃತ್ಯಶೈಲಿಯಾದ ಟನೋರ ನೃತ್ಯ ರೂಪಕ ಪ್ರದರ್ಶನವಿದೆ. ಇದೊಂದು ವಿಭಿನ್ನ ನೃತ್ಯಶೈಲಿಯಾಗಿದೆ.

Clearview-large-function-boat-hire-Sydney-fd480c86

ದುಬೈ ಸಿಟಿ ಟೂರ್

ದುಬೈ ಸಿಟಿ ಟೂರ್ ಅಲ್ಲಿ ದುಬೈಯ ವಿವಿಧ ರೀತಿಯ ಪ್ರವಾಸೀ ತಾಣಗಳನ್ನು ತೋರಿಸುತ್ತಾರೆ. ಮಸಾಲೆ ಪದಾರ್ಥಗಳನ್ನು ಮಾರುವ ಅಂಗಡಿಗಳು, ದುಬೈ ರಾಜರ ಅರಮನೆ, ಚಿನ್ನ ಖರೀದಿಗೆ ಪ್ರಸಿದ್ಧಿ ಪಡೆದ ಗೋಲ್ಡ್ ಸೂಕ್, ಆಕರ್ಷಕ ಹೋಟೆಲ್ಗಳು, ಪಾಮ್ ಜುಮೆರ, ಅಲ್ಲಿಯ ಬೀಚ್ ಹೀಗೆ. ಇಲ್ಲಿಯ ಒಂದೊಂದು ತಾಣವೂ ಅಮೋಘ. ನಾವೆಲ್ಲಾ ಊಹಿಸಲೂ ಆಗದ ರೀತಿಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಬಹುತೇಕ ಮಾನವ ನಿರ್ಮಿತವಾದ ಪ್ರದೇಶಗಳಾಗಿವೆ.

caption

ದುಬೈ ಮಾಲ್ ಮತ್ತು ಬುರ್ಜ್ ಖಲೀಫಾ

ಬುರ್ಜ್ ಖಲೀಫಾ ಹೆಸರನ್ನು ಕೇಳದವರು ಇದ್ದಾರೆಯೇ! ದುಬೈಯ ಅತ್ಯಂತ ಆಕರ್ಷಕ ಕಟ್ಟಡ ಇದು. ಪ್ರವಾಸಿಗರಿಗೆ ಸಾಮಾನ್ಯವಾಗಿ ಇಲ್ಲಿನ 124ನೇ ಮಹಡಿ ತನಕ ಕರೆದುಕೊಂಡು ಹೋಗುತ್ತಾರೆ. ರಾತ್ರಿಯ ವೇಳೆಗೆ ಈ ಮಹಡಿಯ ಒಳಗಿನಿಂದ ಸುತ್ತಲಿನ ಸಿಟಿ ನೋಡಲು ಬಲು ಸುಂದರ. ದುಬೈ ಮಾಲ್ ಮೂಲಕ ಬುರ್ಜ್ ಖಲೀಫಾಗೆ ಪ್ರವೇಶ. ಬುರ್ಜ್ ಖಲೀಫಾದ ಒಳಗೆ ಹೋಗಲು ಬೇರೆ ಟಿಕೆಟ್ ಖರೀದಿಸಬೇಕು. ಹಗಲಾದರೂ ಸರಿಯೇ, ರಾತ್ರಿಯಾದರೂ ಸರಿಯೇ, ದುಬೈಯ ಡೌನ್ಟೌನ್ ಅಲ್ಲಿ ಎಲ್ಲೇ ಹೋಗಿ, ಬುರ್ಜ್ ಖಲೀಫಾ ಕಾಣದೇ ಇರದು. ಹಗಲು ಸೂರ್ಯನ ಬೆಳಕಿಗೆ ಮತ್ತು ರಾತ್ರಿ ತನ್ನದೇ ಲೈಟ್ಸ್ ಹೊತ್ತು 24 ಗಂಟೆಯೂ ಜಗಮಗಿಸುತ್ತಾ ಇರುವುದು. ದುಬೈ ಮಾಲ್ ಅಲ್ಲಿ ಬುರ್ಜ್ ಖಲೀಫಾ ಹೊರತಾಗಿ ಇನ್ನೂ ಹಲವಾರು ಆಕರ್ಷಕ ಹೋಟೆಲ್ಗಳು, ಫೌಂಟನ್, ಅಕ್ವೇರಿಯಂ ಮುಂತಾದ ಆಕರ್ಷಣೆಗಳಿವೆ.

Dubai_Mall_10

ಡೆಸರ್ಟ್ ಸಫಾರಿ

ದುಬೈ ಇರೋದೇ ಮರುಭೂಮಿ ಮೇಲೆ. ನೀವು ದುಬೈಯ 20-30 ವರ್ಷಗಳ ಹಿಂದಿನ ಚಿತ್ರಗಳನ್ನು ನೋಡಿದರೆ ಆಗಿನ ದುಬೈ ಹೇಗಿತ್ತು ಎಂದು ತಿಳಿಯುವುದು. ಪೂರ್ತಿ ಮರುಭೂಮಿಯ ಮೇಲೆ ನಿರ್ಮಿತವಾದ ಬಲುಸುಂದರ ನಗರವಿದು. ಡೌನ್ಟೌನ್ ಅಲ್ಲಿ ಹೊಸ ದುಬೈ ಕಂಡರೆ, ಬುರ್ ದುಬೈ ಅಲ್ಲಿ ಹಳೆಯ ದುಬೈ ಕಾಣಬಹುದು. ಇನ್ನುಳಿದ ಖಾಲೀ ಜಾಗಗಳು, ಅವುಗಳಲ್ಲಿ ಮರುಭೂಮಿಯ ಭಾಗ ಬಹುತೇಕ. ಡೆಸರ್ಟ್ ಸಫಾರಿ ಇನ್ನೊಂದು ಆಕರ್ಷಣೆ. ನಗರದಿಂದ ಸುಮಾರು 1.5 ಗಂಟೆಗಳ ಪ್ರಯಾಣದ ನಂತರ ಮರುಭೂಮಿ ಇರುವ ಪ್ರದೇಶ ಸಿಗುವುದು. ಇಲ್ಲಿ ಮರುಭೂಮಿಯ ಅನುಭವ ಪಡೆಯಲು ಸ್ಕೂಟರ್ ರೈಡ್, ಜೀಪ್ ರೈಡ್, ಒಂಟೆಯ ಮೇಲೆ ರೈಡ್ ಹೀಗೆ ಹಲವು ಆಯ್ಕೆಗಳಿವೆ. ಸಫಾರಿಯ ಅನುಭವ ಕಳೆದುಕೊಳ್ಳಲೇಬಾರದು. ಸಫಾರಿಯ ನಂತರ ರಾತ್ರಿಯ ಊಟ ಅಲ್ಲಿಯ ಕ್ಯಾಂಪ್ಗಳಲ್ಲಿ ಲಭ್ಯವಿರುವುದು. ಬೆಲ್ಲಿ ಡ್ಯಾನ್ಸ್, ಫೈರ್ ಶೋ, ಟನೋರ ಡ್ಯಾನ್ಸ್ ಹೀಗೆ ಹಲವು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

c5e391093f86b9b3fe22bc7cc0a9897a-25198-dubai-evening-desert-safari-002

ಅಬುಧಾಬಿ

ಯುಎಇಯ ಇನ್ನೊಂದು ರಾಜ್ಯ ಅಬುಧಾಬಿ. ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಇದೂ ಏನೂ ಕಡಿಮೆ ಇಲ್ಲ. ಇಲ್ಲಿಯ ಖರ್ಜೂರದ ರುಚಿ ಬೇರೆಲ್ಲಿಯೂ ಸಿಗದು. ವೈವಿಧ್ಯಮಯವಾದ ಖರ್ಜೂರ ಸಿಗುವುದು. ಇವಕ್ಕೆಂತಲೇ ಹಲವಾರು ಮಾರ್ಕೆಟ್ಗಳಿವೆ. ಫೆರಾರಿ ವರ್ಲ್ಡ್, ವಾರ್ನರ್ ಬ್ರೋಸ್ ವರ್ಲ್ಡ್, ಮಾಲ್, ರಾಜರ ಅರಮನೆ, ಫಾಸ್ಟ್ ಅಂಡ್ ಫ್ಯೂರಿಯಸ್ ಚಿತ್ರೀಕರಿಸಿದ ಪೆಂಟಗನ್ ಕಟ್ಟಡಗಳು ಹೀಗೆ ನೋಡಲು ತುಂಬಾ ಜಾಗಗಳಿವೆ. ಇದು ಅಲ್ಲಿಯ ರಾಜಕೀಯ ಚಟುವಟಿಕೆಗಳು ನಡೆಯುವ ರಾಜ್ಯ. ಇಲ್ಲಿಯೂ ಹಲವು ಪ್ರವಾಸೀ ತಾಣಗಳಿವೆ.

Qasr Al Watan - Aerial Shot

ಅಂತೂ ಇಷ್ಟೆಲ್ಲಾ ಜಾಗಗಳನ್ನು ನೋಡಿ ವಾಪಸ್ಸಾಗಲು ಮನಸ್ಸು ಬಾರದು. ಬೈ ಬೈ ಹೇಳಲು ಮನಸ್ಸಾಗದ ದುಬೈ, ಅಬುಧಾಬಿ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!