Monday, November 17, 2025
Monday, November 17, 2025

ಹಿಮಾಚಲ ಪ್ರದೇಶದ ಧೌಲಾಧರ್‌ನಲ್ಲಿ ಯುರೋಪಿಯನ್ ರೆಡ್ ಅಡ್ಮಿರಲ್ ಚಿಟ್ಟೆ!

ಹಿಮಾಚಲ ಪ್ರದೇಶದ ಧೌಲಾಧರ್‌ನಲ್ಲಿ ಯುರೂಪಿಯನ್‌ ಮೂಲದ ರೆಡ್‌ ಅಡ್ಮಿರಲ್‌ ಚಿಟ್ಟೆ ಕಾಣಿಸಿಕೊಂಡಿದೆ. ಮೊಟ್ಟ ಮೊದಲ ಬಾರಿಗೆ ಈ ಚಿಟ್ಟೆಯ ಪ್ರವೇಶವಾಗಿದ್ದು, ಇದು ತೀರಾ ಅಪರೂಪ ಮತ್ತು ವಿಶಿಷ್ಟವಾದ ಚಿಟ್ಟೆಯಾಗಿದೆ.

ಶಿಮ್ಲಾ: ಹಿಮಾಚಲ ಪ್ರದೇಶದ ಧೌಲಾಧರ್‌ನಲ್ಲಿ ಯುರೂಪಿಯನ್‌ ಮೂಲದ ರೆಡ್‌ ಅಡ್ಮಿರಲ್‌ ಚಿಟ್ಟೆ ಕಾಣಿಸಿಕೊಂಡಿದೆ. ಮೊಟ್ಟ ಮೊದಲ ಬಾರಿಗೆ ಈ ಚಿಟ್ಟೆಯ ಪ್ರವೇಶವಾಗಿದ್ದು, ಇದು ತೀರಾ ಅಪರೂಪ ಮತ್ತು ವಿಶಿಷ್ಟವಾದ ಚಿಟ್ಟೆಯಾಗಿದೆ. ಈ ಚಿಟ್ಟೆಯ ವೈಜ್ಞಾನಿಕ ಹೆಸರು ವನೆಸ್ಸಾ ಅಟಲಾಂಟಾ ಆಗಿದ್ದು ಸಂಶೋಧಕರು ಈ ವಿಭಿನ್ನ ಜಾತಿಯ ಚಿಟ್ಟೆಯನ್ನು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿಯಿದೆ.

ಈ ಸಂಶೋಧನೆಯು ಲೆಪಿಡಾಪ್ಟೆರಿಸ್ಟ್‌ಗಳು ನೈಸರ್ಗಿಕವಾಗಿ ಗಮನಾರ್ಹವಾದ ಬೆಳವಣಿಯಾಗಿದೆ. ಚಿಟ್ಟೆಯ ವಲಸೆ ಮಾದರಿ ಕುರಿತು ಕೂಡ ತಿಳಿಯುತ್ತದೆ. ವಿವಿಧ ಜಾತಿಯ ಚಿಟ್ಟೆಗಳು ಈ ವ್ಯಾಪ್ತಿಯಲ್ಲಿ ಗಣನೀಯವಾಗಿ ಕಾಣಿಸಿಕೊಳ್ಳುತ್ತವೆ.

ಏನಿದು ರೆಡ್‌ ಅಡ್ಮಿರಲ್‌ ಚಿಟ್ಟೆ?

ರೆಡ್ ಅಡ್ಮಿರಲ್ ಚಿಟ್ಟೆಯು ಬಹು ಮುಖ್ಯವಾಗಿ ಯುರೋಪ್, ಏಷ್ಯಾ ಮತ್ತು ಉತ್ತರ ಆಫ್ರಿಕಾದ ಸಮಶೀತೋಷ್ಣ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ಚಿಟ್ಟೆಗೆ ಕೆಂಪು ಮತ್ತು ಬಿಳಿ ಪಟ್ಟೆಗಳಿವೆ. ಆಕರ್ಷಕ ಕೆಂಪು ರೆಕ್ಕೆಯಿದೆ. ಹಿಮಾಚಲ ಪ್ರದೇಶದ ಧೌಲಾಧರ್ ಶ್ರೇಣಿಯಲ್ಲಿ ಇದು ದಿಢೀರ್‌ ಆಗಿ ಕಾಣಿಸಿಕೊಂಡಿದೆ. ಹವಾಮಾನ ಬದಲಾವಣೆಯ ಜೊತೆಗೆ ವಲಸೆ ಮಾದರಿಯು ಬದಲಾಗುವ ಸಾಧ್ಯತೆಯಿದೆ.

ರೆಡ್ ಅಡ್ಮಿರಲ್ ಚಿಟ್ಟೆಗಳು ಹೆಚ್ಚಾಗಿ ಉದ್ಯಾನಗಳು ಮತ್ತು ತೇವಾಂಶವುಳ್ಳ ಕಾಡುಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲಿ ಅದರ ಲಾರ್ವಾಗಳು ನೆಟಲ್ಸ್ ಸಸ್ಯಗಳನ್ನು ತಿನ್ನುತ್ತವೆ. ಕೆಲವು ಚಿಟ್ಟೆಗಳು ವಿವಿಧ ಹೂವುಗಳಿಂದ ಮಕರಂದವನ್ನು ಹೀರುತ್ತವೆ. ಈ ಚಿಟ್ಟೆಗಳು ಬಿಸಿಲಿನ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ರೆಡ್ ಅಡ್ಮಿರಲ್ ಚಿಟ್ಟೆಯ ಜೀವಿತಾವಧಿಯು ಸೀಮಿತವಾಗಿರುತ್ತದೆ. ಸಂಪೂರ್ಣವಾಗಿ ಬೆಳೆದ ನಂತರ, ರೆಡ್ ಅಡ್ಮಿರಲ್ಸ್ ಬೇಸಿಗೆಯಲ್ಲಿ ಆರು ತಿಂಗಳವರೆಗೆ ಮತ್ತು ಚಳಿಗಾಲದಲ್ಲಿ ಒಂಬತ್ತು ತಿಂಗಳವರೆಗೆ ಮಾತ್ರ ಬದುಕುತ್ತವೆ ಎಂಬ ಮಾಹಿತಿಯಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!