Monday, August 18, 2025
Monday, August 18, 2025

ಈ ಎರಡು ಕೋಟೆಗಳಂತೂ ಫುಲ್‌ ಫೇಮಸ್!

ಜೋಧ್‌ಪುರದಲ್ಲಿ ಅತ್ಯದ್ಭುತವಾದ ಕೋಟೆಗಳಿವೆ. ಅಲ್ಲಿರುವ ಪ್ರಮುಖ ಎರಡು ಕೋಟೆಗಳಿಗೆ ರೋಚಕವಾದ ಐತಿಹಾಸಿಕ ಹಿನ್ನೆಲೆಯಿದೆ.

ರಾಜಸ್ಥಾನ ರಾಜ್ಯದ ಎರಡನೇ ದೊಡ್ಡ ನಗರವೆಂದರೆ ಅದು ಜೋಧ್‌ಪುರ. ಆ ನಗರವು ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಇದನ್ನು ‘ಬ್ಲೂ ಸಿಟಿ’ ಎಂದೂ ಕರೆಯಲಾಗುತ್ತದೆ. ಇಲ್ಲಿ ಐತಿಹಾಸಿಕ ಕೋಟೆಗಳು, ಅರಮನೆಗಳು, ದೇವಾಲಯಗಳು, ಹವೇಲಿಗಳು ಪ್ರವಾಸಿಗರ ಆಸಕ್ತಿಗೆ ಇಂಬು ನೀಡುತ್ತವೆ. ಇಲ್ಲಿನ ಕೋಟೆಗಳು ಕಡಿದಾದ ಪರ್ವತದ ಮೇಲೆ ನಿರ್ಮಾಣಗೊಂಡಿರುವುದು ಅಚ್ಚರಿ ಮತ್ತು ವಿಶೇಷ. ಜೋಧಪುರದಲ್ಲಿ ಮಾತ್ರ ಕಂಡುಬರುವ ಅಪರೂಪದ ಪ್ರವಾಸಿ ಆಕರ್ಷಣೆಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೇಬೇಕು. ಅಂತಹ ಅಪರೂಪದ ಎರಡು ಕೋಟೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಖೇಜರ್ಲಾ ಕೋಟೆ

ಜೋಧ್‌ಪುರದಲ್ಲಿರುವ ಅತ್ಯದ್ಭುತವಾದ ಕೋಟೆ ಎಂದರೆ ಅದು ಖೇಜರ್ಲಾ ಕೋಟೆಯಾಗಿದೆ. ಸುಮಾರು 400 ವರ್ಷಗಳಷ್ಟು ಹಳೆಯದಾದ ಈ ಕೋಟೆಯು, ಜೋಧ್‌ಪುರದಿಂದ ಸುಮಾರು 85 ಕಿಲೋಮೀಟರ್ ದೂರದಲ್ಲಿದೆ. ರಜಪೂತ ವಾಸ್ತುಶಿಲ್ಪವನ್ನು ಸುಂದರವಾದ ಕೆಂಪು ಮರಳುಗಲ್ಲಿನ ರಚನೆಯಲ್ಲಿ ಕಾಣಬಹುದು. ಈ ಸುಂದರವಾದ ಕೋಟೆಯು ತನ್ನ ರಮಣೀಯ ಸೆಟ್ಟಿಂಗ್‌ಗಳು, ಲ್ಯಾಟಿಸ್‌ವರ್ಕ್ ಫ್ರೈಜ್‌ಗಳು ಮತ್ತು ಅಲಂಕೃತವಾದ ಜಾರೋಕಾಸ್‌ಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

Khejarla fort


ಮೆಹ್ರಾನ್ಗಡ್‌ ಕೋಟೆ

ಜೋಧ್‌ಪುರದಲ್ಲಿರುವ ಮೆಹ್ರಾನ್ಗಡ್ ಕೋಟೆ ಅತ್ಯಂತ ಪ್ರಾಚೀನ ಮತ್ತು ಶಕ್ತಿಶಾಲಿ ಕೋಟೆಗಳಲ್ಲಿ ಒಂದಾಗಿದೆ. ಇದು ಸ್ಕೈಲೈನ್‌ನಿಂದ ಸುಮಾರು 125 ಮೀಟರ್ ಎತ್ತರದಿಂದ ಮೆಹ್ರಾನ್‌ಗಡ್ ಕೋಟೆ ಲಂಬವಾಗಿ ನಿಂತಿದೆ. ಈ ಹಳೆಯ ಕೋಟೆಯು ಭಾರತದ ಅತ್ಯಂತ ಪ್ರಸಿದ್ಧವಾದ ಕೋಟೆಯಾಗಿದೆ. ಶ್ರೀಮಂತ ಇತಿಹಾಸ ಹೊಂದಿರುವ ಮೋತಿ ಮಹಲ್, ಫೂಲ್ ಮಹಲ್ ಮತ್ತು ಶೀಶ್ ಮಹಲ್ ತನ್ನ ಅದ್ಭುತ ಕೆತ್ತನೆಯಿಂದ ಜನಪ್ರಿಯವಾಗಿವೆ.

mehragand fort


ಜೋಧ್‌ಪುರ ತಲುಪುವುದು ಹೇಗೆ?

ಜೋಧಪುರ್ ನಗರ ಕೇಂದ್ರದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿ ವಿಮಾನ ನಿಲ್ದಾಣವಿದೆ. ದೆಹಲಿ, ಮುಂಬೈ, ಉದಯಪುರ ಮತ್ತು ಜೈಪುರ ಸೇರಿದಂತೆ ಇತರ ಪ್ರಮುಖ ನಗರಗಳು ಈ ವಿಮಾನ ನಿಲ್ದಾಣದ ಮೂಲಕ ಉತ್ತಮ ಸಂಪರ್ಕ ಹೊಂದಿವೆ.
ರೈಲು ಮಾರ್ಗದ ಮೂಲಕ: ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಂತಹ ಭಾರತೀಯ ನಗರಗಳು ಜೋಧ್‌ಪುರಕ್ಕೆ ಉತ್ತಮ ರೈಲು ಸಂಪರ್ಕವನ್ನು ಹೊಂದಿವೆ.

ರಸ್ತೆ ಮಾರ್ಗದ ಮೂಲಕ: ದೆಹಲಿಯಿಂದ ಜೋಧಪುರಕ್ಕೆ ಖಾಸಗಿ ಬಸ್‌ಗಳು, ವೋಲ್ವೋ ಬಸ್ಸುಗಳ ಮೂಲಕ ತಲುಪಬಹುದು.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!