Monday, August 18, 2025
Monday, August 18, 2025

ಗಾಂಧೀಜಿಯವರು 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೊಗಳಿದ್ದ ಈ ಪ್ರವಾಸಿ ತಾಣವನ್ನು ಬೇಸಿಗೆಕಾಲ ಮುಗಿಯುವ ಮುನ್ನ ಭೇಟಿ ಮಾಡಿ..

ಭಾರತದ ಮಿನಿ ಸ್ವಿಟ್ಜರ್ಲೆಂಡ್, ಕೌಸಾನಿ, ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಈ ಸಣ್ಣ ಹಳ್ಳಿ, ಗಾಂಧೀಜಿಯವರ ನೆಚ್ಚಿನ ಸ್ಥಳವಾಗಿತ್ತು.ಚಾರಣ ಪ್ರಿಯರಿಗೆ, ಸಾಹಸವನ್ನು ಮೆಚ್ಚಿಕೊಳ್ಳುವವರಿಗೆ ಮಾತ್ರವಲ್ಲದೆ ಧಾರ್ಮಿಕ ತಾಣವನ್ನು ನೋಡಬಯಸುವವರಿಗೂ ಇಲ್ಲಿದೆ ಸಾಕಷ್ಟು ಅವಕಾಶ.

ಎಲ್ಲವನ್ನೂ ಬಿಟ್ಟು ಪ್ರಕೃತಿಯ ಸೌಂದರ್ಯದಲ್ಲಿ ಕಳೆದುಹೋಗಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಈ ಸಣ್ಣ ಹಳ್ಳಿ ಕೌಸಾನಿಗೆ ಭೇಟಿ ಒಮ್ಮೆ ನೀಡಿ. ಇಲ್ಲಿನ ಗಿರಿಧಾಮಗಳ ಸೌಂದರ್ಯ ಎಲ್ಲರನ್ನೂ ಬೆರಗು ಮೂಡಿಸುವಂತಿದ್ದು, ಹಿಮಾಲಯದ ವಿಹಂಗಮ ನೋಟಗಳಿಂದ ಪ್ರವಾಸಿಗರಿಗೆ ನೀಡುತ್ತಿದೆ.

Kausani1

"ಭಾರತದ ಮಿನಿ ಸ್ವಿಟ್ಜರ್ಲೆಂಡ್" ಎಂದು ಹೊಗಳಿದ್ದರು ಗಾಂಧೀಜಿ:

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ಕೌಸಾನಿಗೆ ಭೇಟಿ ನೀಡಿ, ಒಂದಷ್ಟು ಸಮಯವನ್ನು ಕಳೆದ್ದರಂತೆ. ಈ ಸ್ಥಳದ ಬಗ್ಗೆ ತುಂಬಾ ಆಕರ್ಷಿತರಾಗಿ ಇದನ್ನು "ಭಾರತದ ಮಿನಿ ಸ್ವಿಟ್ಜರ್ಲೆಂಡ್" ಎಂಬುದಾಗಿ ಕರೆದಿದ್ದರಂತೆ. ಗಾಂಧೀಜಿಯವರು ಬಂದು ಹೋದ ನಂತರ ಅವರಿಗೆ ಗೌರವ ಸೂಚಿಸುವ ಸಲುವಾಗಿ, ಅವರ ತತ್ವಗಳ ವಿಷಯದ ಮೇಲೆ ಇಲ್ಲಿ ಒಂದು ಆಶ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಅನಸಕ್ತಿ ಆಶ್ರಮ ಎಂದು ಕರೆಯಲ್ಪಡುವ ಈ ಆಶ್ರಮ, ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

ಕೌಸಾನಿ ಸಮುದ್ರ ಮಟ್ಟದಿಂದ ಸುಮಾರು 6,200 ಅಡಿ ಎತ್ತರದಲ್ಲಿದ್ದು, ನಂದಾ ದೇವಿ, ತ್ರಿಶೂಲ್ ಮತ್ತು ಪಂಚಚೂಲಿಯಂತಹ ಭವ್ಯ ಶಿಖರಗಳು ಇಲ್ಲಿವೆ. ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಕೌಸಾನಿಯು ಹಿಮದಿಂದ ಆವೃತವಾದ ಹಿಮಾಲಯದ ಮೇಲೆ ಅತ್ಯಂತ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟಗಳಿಗೆ ಸಾಕ್ಷಿಯಾಗುತ್ತವೆ.

Places_To_Visit_In_Kausani1_e38a87d17d

ಚಾರಣ ಪ್ರಿಯರ ನೆಚ್ಚಿನ ತಾಣ:

ಕೌಸಾನಿಯ ಹಳ್ಳಿಯಲ್ಲಿ ನೋಡಲೇಬೇಕಾದ ಇನ್ನೂ ಅನೇಕ ತಾಣಗಳಿದ್ದು, ಅವುಗಳಲ್ಲಿ ಪ್ರಮುಖವಾದುದು ಕೌಸಾನಿ ಕಾಡು. ಇಲ್ಲಿ ಜೀವವೈವಿಧ್ಯವನ್ನು ಕಾಣುವುದಷ್ಟೇ ಅಲ್ಲದೆ ಮೌಂಟೇನ್ ಬೈಕಿಂಗ್, ರಾಪ್ಪೆಲಿಂಗ್, ಚಾರಣ ಸೇರಿದಂತೆ ಅನೇಕ ಸಾಹಸ ಚಟುವಟಿಕೆಗಳನ್ನು ಮಾಡಬಹುದು.

ಸಾಹಸ ಪ್ರಿಯರಿಗಷ್ಟೇ ಅಲ್ಲದೆ ಧಾರ್ಮಿಕ ಸ್ಥಳಗಳ ಭೇಟಿಯನ್ನು ಮೆಚ್ಚಿಕೊಳ್ಳುವವರಿಗಾಗಿ ಕೌಸಾನಿಯಲ್ಲಿ 12 ನೇ ಶತಮಾನದಷ್ಟು ಹಿಂದಿನ ಪ್ರಾಚೀನವಾದ ಬೈಜ್ನಾಥ್ ದೇವಾಲಯವಿದೆ. ಶಿವನಿಗೆ ಸರ್ಪಿತವಾದ ಈ ದೇವಾಲಯವು ಕೌಸಾನಿಯಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿದೆ.

ಒಟ್ಟಿನಲ್ಲಿ ಬೇಸಿಗೆ ಕಾಲದಲ್ಲಿ ತಣ್ಣನೆಯ ಪರಿಸರದ ನಡುವೆ ಖುಷಿಯಿಂದ ಕಾಲ ಕಳೆಯಬೇಕೆಂದು ನೀವಂದುಕೊಂಡರೆ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಕೌಸಾನಿಗೆ ಎಂಬ ಈ ಪುಟ್ಟ ಹಳ್ಳಿಗೆ ಭೇಟಿ ನೀಡಲು ಮರೆಯದಿರಿ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!