Friday, October 3, 2025
Friday, October 3, 2025

ಪ್ರವಾಸ ಕೈಗೊಳ್ಳಲಿದ್ದಾರಾ? ಅಪ್ಪಿತಪ್ಪಿಯೂ ಈ ಬಣ್ಣದ ಸೂಟ್‌ಕೇಸ್‌ ಕೊಂಡೊಯ್ಯಬೇಡಿ

ಪ್ರವಾಸವಿರಲಿ, ಪ್ರಯಾಣವಿರಲಿ..ನೀವು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಲು, ಅಗತ್ಯ ವಸ್ತುಗಳನ್ನು ಜೊತೆಗೆ ಕೊಂಡೊಯ್ಯಲು ಸೂಟ್ಕೇಸ್ ಅತೀ ಅಗತ್ಯ. ಆದರೆ ನೀವು ಯಾವ ಬಣ್ಣದ ಸೂಟ್ಕೇಸ್ ಬಳಕೆ ಮಾಡುತ್ತೀರೆಂಬುದರ ಮೇಲೆ ನಿಮ್ಮ ಪ್ರಯಾಣ ಹೇಗಿರುತ್ತದೆ ಎಂಬುದು ನಿರ್ಧಾರವಾಗಲಿದೆ ಎಂದರೆ ನಂಬಲೇಬೇಕು.

ಸದ್ಯದಲ್ಲೇ ಪ್ರವಾಸಕ್ಕೆ ತೆರಳಬೇಕು ಅಂದುಕೊಂಡಿದ್ದೀರಾ? ಪ್ರವಾಸಕ್ಕೆ ತೆರಳುವ ಮೊದಲು ಅಗತ್ಯ ವಸ್ತುಗಳನ್ನು ತುಂಬಿಸಿಕೊಳ್ಳುವುದಕ್ಕಾಗಿ ಹೊಸ ಸೂಟ್‌ಕೇಸ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಯಾವ ಬಣ್ಣದ ಸೂಟ್‌ಕೇಸ್ ಕೊಂಡುಕೊಳ್ಳಬೇಕೆಂಬುದರ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ. ಯಾಕೆಂದರೆ, ಎಮಿನೆಂಟ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಜಾಗತಿಕವಾಗಿ ಪ್ರಯಾಣಿಕರು ಕೊಂಡುಕೊಳ್ಳುವ ಸೂಟ್‌ಕೇಸ್‌ಗಳಲ್ಲಿ 40% ಕ್ಕಿಂತ ಹೆಚ್ಚು ಕಪ್ಪು ಬಣ್ಣದ್ದಾಗಿದ್ದು, ಬ್ಯಾಗೇಜ್ ಕ್ಯಾರೋಸೆಲ್‌ಗಳಲ್ಲಿ ಅವುಗಳನ್ನು ಗುರುತಿಸುವುದು ಕಷ್ಟಕರವಾಗಿದೆಯಂತೆ.

ಈ ಸಂಬಂಧ, ಯುಎಸ್ ಬೇಸಿಗೆ ಶಿಬಿರ ವೈಲ್ಡ್ ಪ್ಯಾಕ್ಸ್‌ನ ಪ್ರಯಾಣ ತಜ್ಞ ಜೇಮೀ ಫ್ರೇಜರ್ ಮಾಹಿತಿ ನೀಡಿದ್ದು, ಕಪ್ಪು ಲಗೇಜ್ ಯಾರಿಗೂ ಉತ್ತಮ ಆಯ್ಕೆಯಲ್ಲ. ಅಲ್ಲದೆ ಕಪ್ಪು ಸೂಟ್‌ಕೇಸ್‌ಗಳನ್ನು ಎಲ್ಲರೂ ಬಳಸುತ್ತಿದ್ದು, ಅವುಗಳನ್ನು ಗುರುತಿಸುವುದು ಕಷ್ಟಕರವಾಗಲಿದೆ. ಬಲು ಬೇಗನೆ ಕಾಣೆಯಾಗುವ ಸಾಧ್ಯತೆಯೂ ಇದೆ ಎಂದಿದ್ದಾರೆ.

black suitcase

ಸೂಟ್‌ಕೇಸ್‌ ಕೊಳ್ಳುವ ಮುನ್ನ

ಸೂಟ್‌ಕೇಸ್‌ ಕೊಂಡುಕೊಳ್ಳುವಾಗ ಸಾಮಾನ್ಯವಾಗಿ ಮೊದಲ ಆಯ್ಕೆ ಕಪ್ಪು ಬಣ್ಣವಾಗಿರುತ್ತದೆ. ಆದರೆ ನಿಮಗೆ ಗೊತ್ತಾ, ಕಪ್ಪು ಬಣ್ಣದ ಸೂಟ್‌ಕೇಸನ್ನು ಆಯ್ಕೆ ಮಾಡುವುದು ಒಳ್ಳೆಯದಲ್ಲ. ಕಪ್ಪು ಬಣ್ಣಕ್ಕೆ ಬದಲಾಗಿ ಎದ್ದು ಕಾಣುವಂತಹ ಇತರೇ ಬಣ್ಣಗಳ ಸೂಟ್‌ಕೇಸ್‌ ಗಳನ್ನು ಆಯ್ಕೆ ಮಾಡಿಕೊಳ್ಳಿ. ಜನದಟ್ಟಣೆಯಿರುವ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಕ್ಯಾರೋಸೆಲ್‌ಗಳಲ್ಲಿರುವ ಹಲವಾರು ಕಪ್ಪು ಸೂಟ್‌ಕೇಸ್‌ ಗಳ ಪೈಕಿ ನಿಮ್ಮ ಸೂಟ್‌ಕೇಸ್‌ ಗುರುತಿಸುವುದು ಸುಲಭ ಸಾಧ್ಯವಾಗುತ್ತದೆ.

ಅಲ್ಲದೆ ನಿಮ್ಮ ಪ್ರಯಾಣವು ಲಗೇಜ್‌ ಕಡೆಗೆ ಇರದೆ, ಪ್ರಯಾಣವನ್ನು ಒತ್ತಡರಹಿತವಾಗಿ, ಖುಷಿಯಿಂದ ಅನುಭವಿಸಲು ಇದು ಸಹಕಾರಿಯಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಕಪ್ಪು ಲಗೇಜ್ ಇದ್ದರೆ, ಅವುಗಳನ್ನು ಸುಲಭವಾಗಿ ಗುರುತಿಸಲು ವರ್ಣರಂಜಿತ ಲಗೇಜ್ ಟ್ಯಾಗ್‌ಗಳು, ಸ್ಟಿಕ್ಕರ್‌ಗಳನ್ನು ಬಳಕೆ ಮಾಡಿಕೊಳ್ಳಿ.

suitcase new

ನಿಮ್ಮ ಸೂಟ್‌ಕೇಸ್ ಗಳು ಕಳೆದುಹೋಗದಂತೆ ನೋಡಿಕೊಳ್ಳಲು ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ.

ಸಮಯಕ್ಕೂ ಮುನ್ನವೇ ವಿಮಾನ ನಿಲ್ದಾಣಕ್ಕೆ ಬನ್ನಿ

ನಿಮ್ಮ ಲಗೇಜ್‌ ಗಳನ್ನ ಮುಂಚಿತವಾಗಿ ಪರಿಶೀಲಿಸುವುದರಿಂದ ವಿಮಾನಯಾನ ಸಿಬ್ಬಂದಿಗೆ ಅದನ್ನು ಸರಿಯಾಗಿ ಟ್ಯಾಗ್ ಮಾಡಲು ಮತ್ತು ಲೋಡ್ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.

ಸುರಕ್ಷಿತ ಲಗೇಜ್ ಟ್ಯಾಗ್‌ಗಳನ್ನು ಬಳಸಿ

ನಿಮ್ಮ ಹೆಸರು, ಫೋನ್ ಸಂಖ್ಯೆ ಮತ್ತು ಇಮೇಲ್‌ನೊಂದಿಗೆ ಸ್ಪಷ್ಟವಾದ, ಬಾಳಿಕೆ ಬರುವ ಟ್ಯಾಗ್ ಅನ್ನು ಲಗತ್ತಿಸಿ. ಸುರಕ್ಷತಾ ಕಾರಣಗಳಿಗಾಗಿ ನಿಮ್ಮ ಮನೆಯ ವಿಳಾಸವನ್ನು ಸೇರಿಸದಿರಿ.

Colourful_Suitcase_Blog

ನಿಮ್ಮ ಬ್ಯಾಗ್ ಅನ್ನು ವೈಯಕ್ತೀಕರಿಸಿ

ಒಂದೇ ವಿಧವಾದ ಬ್ಯಾಗ್ ಗಳನ್ನು ಅನೇಕರು ಬಳಕೆ ಮಾಡಬಹುದು. ಇದು ಅನೇಕ ಬಾರಿ ಗೊಂದಲಗಳಿಗೂ ಕಾರಣವಾಗಬಹುದು. ಆದ್ದರಿಂದ ನಿಮ್ಮ ಬ್ಯಾಗ್ ಅನ್ನು ಇತರರಿಂದ ಸುಲಭವಾಗಿ ಪ್ರತ್ಯೇಕಿಸಲು ವರ್ಣರಂಜಿತ ರಿಬ್ಬನ್‌ಗಳು ಅಥವಾ ಕಸ್ಟಮೈಸ್ಡ್‌ ಪೋಸ್ಟರ್‌ಗಳನ್ನು ಹಾಕಿಕೊಳ್ಳಿ.

ಒಟ್ಟಿನಲ್ಲಿ ಪ್ರಯಾಣದ ಸುಖವನ್ನು ಆನಂದಿಸಬೇಕು, ಪ್ರವಾಸವನ್ನು ಎಂಜಾಯ್‌ ಮಾಡಬೇಕು ಅಂದುಕೊಂಡರೆ ಸೂಟ್‌ಕೇಸ್‌ ಬಣ್ಣದ ಬಗೆಗೆ ಗಮನಹರಿಸುವುದು ಒಳ್ಳೆಯ ವಿಚಾರ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!