ಗುಂ-ಟೂರ್ ಮಸಾಲಾ !...ಟೂರ್ ಸ್ಲೀಪಿಸಂ!
ಮನುಷ್ಯ ನಿದ್ದೆಗಾಗಿ ಎಷ್ಟು ಹಪಹಪಿಸುತ್ತಿದ್ದಾನೆ ಅಂದ್ರೆ ಅದಕ್ಕಾಗಿ ಆತ ಖರ್ಚುಮಾಡಿಕೊಂಡು ವಿದೇಶಕ್ಕೆ ಹೋಗಲೂ ಸಿದ್ಧ. ಯಾರೋ ಚುಕ್ಕುತಟ್ಟಿ ನಿದ್ದೆ ಮಾಡಿಸುತ್ತೇನೆ ಅಂದರೆ ಆತ ಏಳು ಸಮುದ್ರ ದಾಟಿಯೂ ಹೋಗುತ್ತಾನೆ. ಇಂದಿನ ಒತ್ತಡದ ಬದುಕಿನಲ್ಲಿ ನಿದ್ದೆಗಾಗಿ ಪ್ರವಾಸ ಎಂಬ ಕಾನ್ಸೆಪ್ಟೂ ಬಂದಾಯ್ತು. ಸ್ಲೀಪ್ ಟೂರಿಸಂ ಹೆಸರಿನಲ್ಲಿ ಇದೀಗ, ಇಲ್ಲಿ ಬಂದು ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಕೆಲವು ಪ್ರವಾಸಿ ತಾಣಗಳು ಜಾಹೀರಾತು ನೀಡುತ್ತಿವೆ.
ಇತ್ತೀಚೆಗೆ ಕರ್ನಾಟಕ ಪ್ರವಾಸೋದ್ಯಮ ನೀತಿ ಕೈಪಿಡಿ ಓದುತ್ತಿದ್ದಾಗ ಎಷ್ಟು ಥರದ ಪ್ರವಾಸೋದ್ಯಮಗಳಿವೆ ಅಂತ ನೋಡಿ ಬಹಳ ತಮಾಷೆ ಎನಿಸಿತು. ಯಾವುದನ್ನು ಬೇಕಾದರೂ ಪ್ರವಾಸೋದ್ಯಮವನ್ನಾಗಿ ಪರಿವರ್ತಿಸಬಹುದು ಎಂಬ ಆಯಾಮವನ್ನು ಆ ಪುಸ್ತಕ ನೀಡುತ್ತಿತ್ತು. ಇದೇನು ಕರ್ನಾಟಕ ಪ್ರವಾಸೋದ್ಯಮದ ಮೂಲ ಪರಿಕಲ್ಪನೆ ಏನಲ್ಲ. ಜಾಗತಿಕ ಪ್ರವಾಸೋದ್ಯಮ ಯೋಚಿಸುತ್ತಿರುವ ಬಗೆ ಇದು.
ನಮ್ಮಲ್ಲಿರೋ ಯಾವ ವಿಶೇಷ ಅಂಶವನ್ನಾದರೂ ಪ್ರವಾಸಿ ಅಂಶವನ್ನಾಗಿಸಬಹುದು. ಪ್ರಕೃತಿ, ಋತು, ವ್ಯವಹಾರ, ಚಟುವಟಿಕೆ, ಊಟ ನಿದ್ದೆ ಎಲ್ಲವನ್ನೂ ಪ್ರವಾಸವನ್ನಾಗಿ ಸೆಲ್ ಮಾಡಬಹುದು. ಚಿಕ್ಕಮಗಳೂರು ಕಾಫೀ ಟೂರಿಸಂ ಮಾಡಬಹುದು, ಮಂಡ್ಯದವರು ಆಲೆಮನೆ ಟೂರಿಸಂ ಮಾಡಬಹುದು, ಟೊಮೆಟೋ ಟೂರಿಸಂ ಎಂದು ವಿದೇಶೀಯರು ಮಾಡಬಹುದಾದರೆ, ಪ್ರತಿ ಹಣ್ಣು ತರಕಾರಿಗೊಂದು ಟೂರಿಸಂ ನಾವ್ಯಾಕೆ ಮಾಡಬಾರದು? ಸೈನ್ಸ್, ಎಜುಕೇಶನ್, ಹೆಲ್ತ್, ವಿವಾಹ,ಕ್ರೀಡೆ, ಸಿನಿಮಾ, ಆಧ್ಯಾತ್ಮ, ಕೃಷಿ, ಮೈನಿಂಗ್, ಹಳ್ಳಿಜೀವನ, ಸಮುದ್ರ, ಸಾಹಿತ್ಯ, ಪರಂಪರೆ, ಗಾಲ್ಫ್ ಹೀಗೆ ಎಲ್ಲವೂ ಟೂರಿಸಮ್ಮಾಗಬಹುದಾಗಿದೆ.

ಈ ನಡುವೆ ವಿಶೇಷವಾಗಿ ಕಂಡದ್ದು ಸ್ಲೀಪ್ ಟೂರಿಸಂ. ಮನುಷ್ಯ ನಿದ್ದೆಗಾಗಿ ಎಷ್ಟು ಹಪಹಪಿಸುತ್ತಿದ್ದಾನೆ ಅಂದ್ರೆ ಅದಕ್ಕಾಗಿ ಆತ ಖರ್ಚುಮಾಡಿಕೊಂಡು ವಿದೇಶಕ್ಕೆ ಹೋಗಲೂ ಸಿದ್ಧ. ಯಾರೋ ಚುಕ್ಕುತಟ್ಟಿ ನಿದ್ದೆ ಮಾಡಿಸುತ್ತೇನೆ ಅಂದರೆ ಆತ ಏಳು ಸಮುದ್ರ ದಾಟಿಯೂ ಹೋಗುತ್ತಾನೆ. ಇಂದಿನ ಒತ್ತಡದ ಬದುಕಿನಲ್ಲಿ ನಿದ್ದೆಗಾಗಿ ಪ್ರವಾಸ ಎಂಬ ಕಾನ್ಸೆಪ್ಟೂ ಬಂದಾಯ್ತು. ಸ್ಲೀಪ್ ಟೂರಿಸಂ ಹೆಸರಿನಲ್ಲಿ ಇದೀಗ, ಇಲ್ಲಿ ಬಂದು ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಕೆಲವು ಪ್ರವಾಸಿ ತಾಣಗಳು ಜಾಹೀರಾತು ನೀಡುತ್ತಿವೆ.
ಶಬ್ದವೇ ಬಾರದ ಕೋಣೆಗಳು, ನಿದ್ದೆ ಮೂಡನ್ನು ಉದ್ದೀಪನಗೊಳಿಸುವ ಸಂಗೀತ, ಎಣ್ಣೆ ಮಸಾಜ್, ನಿದ್ದೆ ಬರಿಸುವ ದಿಂಬು, ಹಾಸಿಗೆ, ತೂಕಡಿಕೆ ತರಿಸುವ ಮದ್ಯರಹಿತ ಪಾನೀಯ, ಮೂಡ್ ಬರಿಸದೆ ಮುದ್ದುಮಾಡುವಿಕೆ, ಬೋರಾಗುವಂತೆ ಮಾತನಾಡಿ ನಿದ್ದೆ ಬರಿಸುವುದು, ಪುಸ್ತಕ ಕೊಟ್ಟು ನಿದ್ರೆ ಮಾಡಿಸುವುದು ಇಂಥ ಹಲವಾರು ಟೆಕ್ನಿಕ್ ಬಳಕೆಯಾಗುತ್ತಿದೆಯಂತೆ. ಇದಕ್ಕಾಗಿ ಕೆಲವು ಪ್ರವಾಸಿ ತಾಣಗಳು ಖ್ಯಾತವಾಗುತ್ತಿವೆಯಂತೆ. ಆದರೆ ಕುಂಭಕರ್ಣ ಸಂಜಾತರಿಗೆ ಮಾತ್ರ ಇದು ಅಚ್ಚರಿ ಅನಿಸುತ್ತಿದೆ. ಸ್ಲೀಪ್ ಟೂರಿಸಂ ಕಾನ್ಸೆಪ್ಟ್ ಕೇಳಿ ಪಕಪಕನೆ ನಗುತ್ತಿದ್ದಾರೆ.
ಕೆಲವರು ಹಾಗೇ ಬಿಡಿ. ಅವ್ರು ಸಂತೆಯಲ್ಲೂ ನಿದ್ರಿಸಬಲ್ಲರು. ಅವರದ್ದು ಟೂರ್ ಸ್ಲೀಪಿಸಂ. ಬಸ್ ಹತ್ತಿದ ಕೂಡಲೇ ನಿದ್ದೆಗೆ ಜಾರುತ್ತಾರೆ. ವಿಮಾನ ಏರಿದಕೂಡಲೆ ನಿದ್ದೆಗೆ ಇಳಿಯುತ್ತಾರೆ. ಪ್ರವಾಸಿ ತಾಣದಲ್ಲೂ ಅವರನ್ನು ಆಕರ್ಷಿಸುವುದು ರೂಮಿನ ಬೆಡ್ ಮಾತ್ರ. ಎಲ್ಲರೂ ಸುತ್ತಲೆಂದ್ ಹೋದರೆ ಇವರು ಮೊಬೈಲ್ ಅಥವಾ ಪುಸ್ತಕ ಹಿಡಿದು ಮಲಗಿಬಿಡುತ್ತಾರೆ. ಪ್ರಯಾಣದ ಸುಖ ಪ್ರವಾಸದ ಸುಖ ಎರಡನ್ನೂ ಕಳೆದುಕೊಂಡು ನಿದ್ದೆಯಲ್ಲಿ ಸುಖ ಕಾಣುವ ಟೂರ್ ಸ್ಲೀಪರ್ಸ್ ಪ್ರತಿ ಗುಂಪಿನಲ್ಲೂ ಒಬ್ಬರಿದ್ದೇ ಇರ್ತಾರೆ ಅಲ್ಲ