Friday, July 4, 2025
Friday, July 4, 2025

ಈ ಆದಿವಾಸಿ ಜನಾಂಗದಲ್ಲಿ ಹೆಣ್ಣು ಮಕ್ಕಳ ತುಟಿಯನ್ನೇ ಕತ್ತರಿಸುತ್ತಾರಂತೆ! ಇದೇನಿದು ವಿಚಿತ್ರ ಸಂಪ್ರದಾಯ?

ಇಥಿಯೋಪಿಯಾದ ಓಮೋ ಕಣಿವೆಯಲ್ಲಿರುವ ಮುರ್ಸಿ ಬುಡಕಟ್ಟು(Mursi Tribe) ಜನಾಂಗದವರು ಹುಡುಗಿಯರ ಕೆಳ ತುಟಿಗಳನ್ನು ಕತ್ತರಿಸಿ ಮಣ್ಣಿನ ತಟ್ಟೆಗಳನ್ನು ಸೇರಿಸುತ್ತಾರೆ. ಇದು ಸೌಂದರ್ಯ ಮತ್ತು ಸ್ಥಾನಮಾನವನ್ನು ಸಂಕೇತಿಸುತ್ತದೆ. ಅವರು ಇಂದಿಗೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.

  • ಪವಿತ್ರ

ಆಡಿಸ್ ಅಬಾಬ: ಭಾರತದಲ್ಲಿ ಅನೇಕ ಬುಡಕಟ್ಟು ಜನಾಂಗದವರು ವಾಸವಾಗಿದ್ದಾರೆ. ಅವರಲ್ಲಿ ಕೆಲವು ವಿಚಿತ್ರವಾದ ಪದ್ಧತಿಗಳು ಆಚರಣೆಯಲ್ಲಿವೆ. ಅದರಲ್ಲಿ ಇಥಿಯೋಪಿಯಾದ(Ethiopia) ಓಮೋ ಕಣಿವೆಯಲ್ಲಿರುವ ಮುರ್ಸಿ ಬುಡಕಟ್ಟು(Mursi Tribe) ಜನಾಂಗದವರ ಒಂದು ವಿಚಿತ್ರ ಸಂಪ್ರದಾಯ ತುಂಬಾ ಭಯಾನಕವಾಗಿದೆ. ವಿಶಿಷ್ಟ ಪದ್ಧತಿಗಳಿಗೆ ಹೆಸರುವಾಸಿಯಾದ ಮುರ್ಸಿಗಳು, ಹುಡುಗಿಯರು ಪ್ರೌಢಾವಸ್ಥೆಗೆ ಬಂದ ತಕ್ಷಣ ಅವರ ಕೆಳ ತುಟಿಗಳನ್ನು ಕತ್ತರಿಸಿ ಮಣ್ಣಿನ ತಟ್ಟೆಗಳನ್ನು ಸೇರಿಸುವ ಆಚರಣೆಯನ್ನು ಆಚರಿಸುತ್ತಾರೆ. ಪ್ರಾಚೀನ ಕಾಲದಿಂದಲೂ ಬಂದ ಈ ಆಚರಣೆ, ಇಂದಿಗೂ ಜೀವಂತವಾಗಿದೆ.

ಮುರ್ಸಿ ಜನರ ಜೀವನಾಧಾರ

ಮುರ್ಸಿ ಬುಡಕಟ್ಟು ದಕ್ಷಿಣ ಇಥಿಯೋಪಿಯಾದ ದೂರದ ಪ್ರದೇಶದಲ್ಲಿ, ಓಮೋ ಕಣಿವೆಯ ಭೂಪ್ರದೇಶಗಳಲ್ಲಿ ವಾಸಿಸುತ್ತಿದೆ. ಸುಮಾರು 10,000 ಜನರಿರುವ ಮುರ್ಸಿ ಜನರು ಮುಖ್ಯವಾಗಿ ಕೃಷಿ ಮತ್ತು ಜಾನುವಾರ ಸಾಕಾಣೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ಇವರ ಪಾಲಿಗೆ ಹಸುಗಳು ಕೇವಲ ಜಾನುವಾರುಗಳಲ್ಲ, ಅವು ಅವರ ಸಂಪತ್ತು, ಸ್ಥಾನಮಾನ ಮತ್ತು ಆಧ್ಯಾತ್ಮಿಕ ಮೌಲ್ಯದ ಸಂಕೇತಗಳಾಗಿವೆ.

tribe 4

ಮುರ್ಸಿ ಜನರ ವಿಚಿತ್ರ ಸಂಪ್ರದಾಯ

ಈ ಬುಡಕಟ್ಟಿನ ಹುಡುಗಿಯರು ಪ್ರೌಢಾವಸ್ಥೆಗೆ ಬಂದಾಗ, ಒಂದು ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಇದರಲ್ಲಿ ಅವರ ಕೆಳ ತುಟಿಯನ್ನು ಕತ್ತರಿಸಿ ಅದಕ್ಕೆ ಒಂದು ಸಣ್ಣ ಮಣ್ಣಿನ ತಟ್ಟೆಯಂತಹ ವಸ್ತುವೊಂದನ್ನು ಸೇರಿಸಲಾಗುತ್ತದೆ. ಕಾಲಾನಂತರದಲ್ಲಿ, ತಟ್ಟೆಯ ಗಾತ್ರವು ಹೆಚ್ಚಾಗುತ್ತದೆ. ಅಗಲವಾದ, ಚಪ್ಪಟೆಯಾದ ತಟ್ಟೆ ನೇತಾಡುವುದರಿಂದ ಇದು ತುಟಿಯನ್ನು ಮತ್ತಷ್ಟು ಅಗಲವಾಗಿಸುತ್ತದೆ. ಕೆಲವು ಮಹಿಳೆಯರು 12 ಸೆಂ.ಮೀ ಅಥವಾ ಅದಕ್ಕಿಂತ ಹೆಚ್ಚಿನ ಅಳತೆಯ ಪ್ಲೇಟ್‌ಗಳನ್ನು ಧರಿಸುತ್ತಾರೆ.

ಈ ಪದ್ಧತಿಯು ತುಂಬಾ ನೋವಿನಿಂದ ಕೂಡಿದ್ದರೂ, ಸಮುದಾಯದಲ್ಲಿ ಇದನ್ನು ಕ್ರೂರವೆಂದು ಪರಿಗಣಿಸಲಾಗುವುದಿಲ್ಲ. ಬದಲಾಗಿ, ಇದು ಸೌಂದರ್ಯ, ಘನತೆ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತವಾಗಿದೆ. ತಟ್ಟೆ ದೊಡ್ಡದಾದಷ್ಟೂ ಮಹಿಳೆಯ ಸ್ಥಾನಮಾನ ಹೆಚ್ಚಾಗುತ್ತದೆ ಮತ್ತು ಮದುವೆಯಲ್ಲಿ ಅವಳು ಪಡೆಯಬಹುದಾದ ವರದಕ್ಷಿಣೆ ಹೆಚ್ಚಾಗುತ್ತದೆ. ಈ ವಿಧಿಗೆ ಒಳಗಾಗುವ ಹುಡುಗಿಯರನ್ನು ಗೌರವಿಸಲಾಗುತ್ತದೆ ಮತ್ತು ನೋವನ್ನು ಸಹಿಸಿಕೊಳ್ಳುವ ಅವರ ಇಚ್ಛೆಯನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

tribe 3

ವಿಚಿತ್ರ ಸಂಪ್ರದಾಯದ ಹಿಂದಿನ ಉದ್ದೇಶ

ಆದರೆ ಈ ಪದ್ಧತಿಯು ಅವರ ಸಂಪ್ರದಾಯದಂತೆ ಕಾಣುವುದಕ್ಕಿಂತ ಹೆಚ್ಚು ಗಾಢವಾಗಿವೆ. ಇತಿಹಾಸಕಾರರು ಮತ್ತು ಮಾನವಶಾಸ್ತ್ರಜ್ಞರು ಇದನ್ನು ಪೂರ್ವ ಆಫ್ರಿಕಾದಲ್ಲಿ ಗುಲಾಮಗಿರಿಯ ಯುಗದಲ್ಲಿ ನಡೆಸಿಕೊಂಡು ಬಂದಿದ್ದು ಎಂದು ಗುರುತಿಸುತ್ತಾರೆ. ಗುಲಾಮಗಿರಿ ನಡೆಸುವ ವ್ಯಾಪಾರಿಗಳು ಈ ಪ್ರದೇಶದಲ್ಲಿ ಸುತ್ತಾಡುವಾಗ, ಸುಂದರ ಮಹಿಳೆಯರನ್ನು ಸೆರೆಹಿಡಿಯುತ್ತಿದ್ದರು.ಹಾಗಾಗಿ ಇವರಿಗೆ ಸೆರೆಯಾಳಾಗುವುದನ್ನು ತಪ್ಪಿಸಿಕೊಳ್ಳಲು ಕೆಲವು ಮುರ್ಸಿ ಮಹಿಳೆಯರು ತಮ್ಮ ಮುಖಗಳನ್ನು, ವಿಶೇಷವಾಗಿ ತುಟಿಗಳನ್ನು ವಿರೂಪಗೊಳಿಸಲು ಶುರುಮಾಡಿದರು. ತಲೆಮಾರುಗಳವರೆಗೆ, ಈ ಪ್ರತಿರೋಧದ ಕ್ರಿಯೆಯು ಹೆಮ್ಮೆ ಮತ್ತು ಗುರುತಿನ ಆಚರಣೆಯಾಗಿ ರೂಪಾಂತರಗೊಂಡಿತು. ಇದು ತಾಯಿಯಿಂದ ಮಗಳಿಗೆ ರವಾನಿಸಲ್ಪಟ್ಟಿದೆ.

ಇಂದಿಗೂ ಸಹ, ಮುರ್ಸಿ ಮಹಿಳೆಯರು ಲಿಪ್ ಪ್ಲೇಟ್‌ಗಳನ್ನು ಧರಿಸುತ್ತಾರೆ. ಅವರು ನೋವಿಗೆ ಅಥವಾ ಹೊರಗಿನವರ ಪ್ರಶ್ನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ! ಅವರು ಈ ಸಂಪ್ರದಾಯವನ್ನು ಖುಷಿಯಿಂದ ಸ್ವೀಕರಿಸುತ್ತಾರೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!