Monday, August 18, 2025
Monday, August 18, 2025

ಹೊಸ ವಾಯುಮಾರ್ಗಗಳಿಗೆ ಭಾರತದ ಹುಡುಕಾಟ

ಭಾರತದ ವಿಮಾನ ನಾವಿಗೇಶನ್‌ ಹಾಗೂ ಏರ್ಲೈನ್‌ ಅಧಿಕಾರಿಗಳು ತುರ್ತು ಸಭೆಗಳಲ್ಲಿ ತೊಡಗಿದ್ದು, ಹೊಸ ಮಾರ್ಗ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ (Pakistan) ತನ್ನ ಏರ್‌ಸ್ಪೇಸ್‌ಗೆ (Airspace) ತಡೆಯೊಡ್ಡಿದ ಪರಿಣಾಮ ಭಾರತೀಯ (Indian) ವಿಮಾನಯಾನ ಸಂಸ್ಥೆಗಳ (AIrlines) ಹಾರಾಟಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು; ಹೊಸ ವಿಮಾನ ಮಾರ್ಗಗಳನ್ನು ಬಳಸುವುದರ ಬಗ್ಗೆ ಯೋಚಿಸುತ್ತಿದೆ. ಪಹಲ್ಗಾಮ್ ದಾಳಿ ನಂತರ ಭಾರತ–ಪಾಕಿಸ್ತಾನ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿ, ಎರಡೂ ರಾಷ್ಟ್ರಗಳು ಪರಸ್ಪರ ಏರ್‌ಸ್ಪೇಸ್‌ಗಳನ್ನು ನಿರ್ಬಂಧಿಸಿದ್ದು, ಈ ಬಿಕ್ಕಟ್ಟಿಗೆ ಕಾರಣವಾಗಿದೆ.

ಈ ಬೆಳವಣಿಗೆಯ ಮಧ್ಯೆ, ಭಾರತದ ವಿಮಾನ ನಾವಿಗೇಶನ್‌ ಹಾಗೂ ಏರ್ಲೈನ್‌ ಅಧಿಕಾರಿಗಳು ತುರ್ತು ಸಭೆಗಳಲ್ಲಿ ತೊಡಗಿದ್ದು, ಹೊಸ ಮಾರ್ಗ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ತನ್ನ ಏರ್‌ಸ್ಪೇಸ್ ಅನ್ನು ಮುಚ್ಚಿದ ಹಿನ್ನೆಲೆಯಲ್ಲಿ, ಭಾರತ ಐಸಿಎಒ (ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ) ಯನ್ನು ಸಂಪರ್ಕಿಸಿ ಈ ನಿರ್ಬಂಧವನ್ನು ಪ್ರಶ್ನಿಸಲು ಯೋಚನೆ ಮಾಡುತ್ತಿದೆ. ಭಾರತದ ವಾದದ ಪ್ರಕಾರ, ಈ ನಿರ್ಬಂಧ 1944ರ ನಾಗರಿಕ ವಿಮಾನಯಾನ ಒಪ್ಪಂದದ ವಿರುದ್ಧವಾಗಿದೆ.

ಈ ನಿರ್ಬಂಧದಿಂದಾಗಿ ಏರ್ ಇಂಡಿಯಾ ಹಾಗೂ ಇಂಡಿಗೋ ಸೇರಿದಂತೆ ಹಲವು ಭಾರತೀಯ ಏರ್ಲೈನ್ಸ್‌ಗಳು ತಮ್ಮ ಮಾರ್ಗಗಳನ್ನು ಬದಲಾಯಿಸಬೇಕಾಗಿ ಬಂದಿದೆ, ಇದರಿಂದ ಇಂಧನ ವೆಚ್ಚ ಹೆಚ್ಚಾಗುವುದರ ಜೊತೆಗೆ ಪ್ರಯಾಣದ ಸಮಯವೂ ಹೆಚ್ಚುತ್ತದೆ.

ಪ್ರಸ್ತುತ ಸರ್ಕಾರ ಮತ್ತು ಏರ್ಲೈನ್ ಅಧಿಕಾರಿಗಳು ಹೊಸ ಮಾರ್ಗದ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಮಾರ್ಗದ ಪ್ರಕಾರ, ವಿಮಾನಗಳು ದೆಹಲಿಯಿಂದ ಲೇಹ್‌ನ ಉತ್ತರಕ್ಕೆ ಹಾರಾಟ ಮಾಡುತ್ತಾ ಹಿಂದುಕುಶ ದಾಟಿ ಕಿರ್ಗಿಸ್ಥಾನ್, ತಜಿಕಿಸ್ತಾನ್ ಮಾರ್ಗವಾಗಿ ಯುರೋಪ್ ಅಥವಾ ಉತ್ತರ ಅಮೆರಿಕದತ್ತ ಹೋಗಬಹುದು.

ಈ ರೀತಿ ಮಾಡಿದರೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಬಿಡಬಹುದು. ಆದರೆ ಈ ಮಾರ್ಗದಲ್ಲಿ ಚೀನಾದ ಏರ್ ಸ್ಪೇಸ್ ಪ್ರದೇಶ ಪ್ರವೇಶಿಸುವ ಅಗತ್ಯವಿದೆ, ಇದರ ಅನುಮತಿಗಾಗಿ ಚೀನಾವನ್ನು ಸಂಪರ್ಕಿಸುವ ಬಗ್ಗೆ ಭಾರತ ಯೋಚಿಸುತ್ತಿದೆ.

ಉತ್ತರ ಭಾರತದ ವಿಮಾನಗಳು ಈಗ ಅಹಮದಾಬಾದ್ ಹತ್ತಿರ ದಕ್ಷಿಣದತ್ತ ತಿರುಗಿ, ಅರಬ್ಬೀ ಸಮುದ್ರದ ಮೂಲಕ ಮುಸ್ಕಟ್ ಹಾದಿಯಾಗಿ ತಲುಪುತ್ತಿವೆ.

ಈ ಹೊಸ ಮಾರ್ಗದಲ್ಲಿ ವಿಮಾನಗಳು ಹೆಚ್ಚಿನ ಎತ್ತರದಲ್ಲಿ ಹಾರಾಟ ಮಾಡಬೇಕಾಗುತ್ತಿದ್ದು, ಇದಕ್ಕಾಗಿ ಸಿಬ್ಬಂದಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಜೊತೆಗೆ, ವಿಮಾನದಲ್ಲಿ ಕನಿಷ್ಠ 22 ನಿಮಿಷಗಳ ಆಕ್ಸಿಜನ್ ಲಭ್ಯವಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!