Monday, August 18, 2025
Monday, August 18, 2025

ಪಾಕಿಸ್ತಾನ ಬೆಂಬಲ: ಟರ್ಕಿ, ಅಜರ್ಬೈಜಾನ್ ಪ್ರವಾಸಕ್ಕೆ ಭಾರತೀಯರ ಗುಡ್ ಬೈ!

ಟರ್ಕಿಗೆ ಬುಕ್ಕಿಂಗ್‌ಗಳಲ್ಲಿ 22% ರದ್ದಾಗಿದ್ದು, ಅಜರ್ಬೈಜಾನ್‌ ಬುಕ್ಕಿಂಗ್ ಗಳಲ್ಲಿ 30% ರದ್ದಾಗಿದೆ.

ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ (India pakistan conflict) ನಡುವೆಯೇ, ಟರ್ಕಿ ಮತ್ತು ಅಜರ್ಬೈಜಾನ್ (Turkey Azerbaijan) ದೇಶಗಳ ಪಾಕಿಸ್ತಾನ ಬೆಂಬಲದ ಸುದ್ದಿಗಳ ನಂತರ, ಭಾರತೀಯ ಪ್ರವಾಸಿಗರು (Indian Travellers) ಈ ದೇಶಗಳ ಪ್ರವಾಸಕ್ಕಾಗಿ ಮಾಡಿದ್ದ ಹೊಟೇಲ್ ಮತ್ತು ವಿಮಾನ ಬುಕಿಂಗ್ ಅನ್ನು ರದ್ದುಪಡಿಸುತ್ತಿದ್ದಾರೆ.

2024 ರಲ್ಲಿ, ಟರ್ಕಿ 2,74,000 ಭಾರತೀಯ ಪ್ರವಾಸಿಗರನ್ನು ಸೆಳೆದಿತ್ತು, 20.7% ಏರಿಕೆಯಿಂದ, ವಿಮಾನ ಸಂಪರ್ಕ ಮತ್ತು ಭಾರತೀಯರ ಡೆಸ್ಟಿನೇಷನ್ ವೆಡ್ಡಿಂಗ್, MICE ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ. ಅಜರ್ಬೈಜಾನ್‌ನಲ್ಲೂ 2,43,589 ಭಾರತೀಯರು ಭೇಟಿ ನೀಡಿ, ಇದು ಅಜರ್ಬೈಜಾನ್‌ನ ಮೂರನೇ ದೊಡ್ಡ ಪ್ರವಾಸಿಗರ ಮೂಲವಾಗಿತ್ತು. ಆದರೆ ಮೇ ತಿಂಗಳ ಮೊದಲ ವಾರದಿಂದ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಪಡಿಸುತ್ತಿದ್ದಾರೆ.

ಟೂರಿಸಂ ಸಂಸ್ಥೆಗಳ ಅಂದಾಜಿನ ಪ್ರಕಾರ, ಟರ್ಕಿಗೆ ಬುಕ್ಕಿಂಗ್‌ಗಳಲ್ಲಿ 22% ರದ್ದಾಗಿದ್ದು, ಅಜರ್ಬೈಜಾನ್‌ ಬುಕ್ಕಿಂಗ್ ಗಳಲ್ಲಿ 30% ರದ್ದಾಗಿದೆ, ಜನರು ಗ್ರೀಸ್, ಜಾರ್ಜಿಯಾ, ಸರ್ಬಿಯಾ, ಥೈಲ್ಯಾಂಡ್, ವಿಯೆಟ್ನಾಮ್ ಮುಂತಾದ ಸ್ಥಳಗಳನ್ನು ಈಗ ಆಯ್ಕೆಮಾಡುತ್ತಿದ್ದಾರೆ.

MakeMyTrip ಪ್ರಕಾರ; ಟರ್ಕಿ ಮತ್ತು ಅಜರ್ಬೈಜಾನ್ ಗೆ ಬುಕ್ಕಿಂಗ್ 60% ಇಳಿಕೆಯಾಗಿದೆ ಮತ್ತು 250% ರಷ್ಟು ರದ್ದಾಗುತ್ತಿದೆ, ಹಾಗೆ ಆ ದೇಶಗಳ ಪ್ರವಾಸಕ್ಕೆ ಮಾಡುತ್ತಿರುವ ಪ್ರಚಾರಗಳನ್ನೂ ನಿಲ್ಲಿಸಲಾಗಿದೆ.

ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಟ್ರಾವೆಲ್ ಏಜೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಟರ್ಕಿ, ಅಜರ್ಬೈಜಾನ್ ಪ್ಯಾಕೇಜ್‌ಗಳನ್ನು ಮುಂದಿನ ಯಾವುದೇ ಮಾರಾಟ ಮತ್ತು ಪ್ರಚಾರ ನಿಲ್ಲಿಸುವ ಬಗ್ಗೆ ಘೋಷಿಸಿದ್ದಾರೆ.

ಪ್ರವಾಸ ರದ್ದು ಮಾಡುವುದರಿಂದ ಆರ್ಥಿಕ ನಷ್ಟ ಕೂಡ ಗಂಭೀರವಾಗಿದ್ದು, 6-7 ದಿನಗಳ ಟರ್ಕಿ ಪ್ರವಾಸಕ್ಕೆ ಒಂದು ದಂಪತಿಗೆ ₹3-4 ಲಕ್ಷ ಖರ್ಚಾಗುತ್ತಿದ್ದು, ಹೆಚ್ಚಿನ ಬುಕಿಂಗ್ ರದ್ದತಿಗಳಿಂದ ಎರಡೂ ದೇಶಗಳಿಗೆ ನೂರಾರು ಕೋಟಿ ರುಪಾಯಿನಷ್ಟು ನಷ್ಟ ಎದುರಾಗಿವೆ.

ಆದರೆ, ಭಾರತದಲ್ಲಿಯೂ ಪ್ರವಾಸ 60% ಇಳಿಕೆಯಾಗಿದೆ. ಭಾರತೀಯ ಪ್ರವಾಸಿಗರು ಈಗ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ದಕ್ಷಿಣ ಭಾರತ ಹಾಗೂ ತಾಯ್ಲ್ಯಾಂಡ್, ವಿಯೆಟ್ನಾಮ್, ಸಿಂಗಪುರ ಮುಂತಾದ ದಕ್ಷಿಣ-ಪೂರ್ವ ಏಷ್ಯಾ ದೇಶಗಳನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿದ್ದಾರೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!