Friday, October 3, 2025
Friday, October 3, 2025

ಫಾಟೊ ಪ್ರವಾಸಿ ವಲಯದಲ್ಲಿ ಜಂಗಲ್ ಸಫಾರಿ: ಅರಣ್ಯ ಪ್ರವಾಸ ಆನಂದಿಸಿದ ನಟ ಸುನಿಲ್‌ ಶೆಟ್ಟಿ

ಪಹಲ್ಗಾಮ್ನಲ್ಲಿ ಉಗ್ರ ದಾಳಿ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ನಟ, ಭಾರತೀಯರು ಕಾಶ್ಮೀರವನ್ನು ಬಿಟ್ಟುಕೊಡಬಾರದು. ಅದು ನಮ್ಮದೆನ್ನುವುದನ್ನು ತೋರಿಸಿಕೊಡುವುದಕ್ಕಾಗಿ ನಮ್ಮ ಮುಂದಿನ ಪ್ರವಾಸವನ್ನು ಕಾಶ್ಮೀರಕ್ಕೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ರಾಮನಗರ(ಉತ್ತರಾಖಂಡ): ಬಾಲಿವಡ್‌ನ ಬಹುಬೇಡಿಕೆಯ ನಟ, ಖಡಕ್‌ ಖಳನಾಯಕಾನಿಯೂ ಮಿಂಚಿರುವ ಆ್ಯಕ್ಷನ್​​ ಸ್ಟಾರ್ ಸುನೀಲ್ ಶೆಟ್ಟಿ, ಕೆಲವು ದಿನಗಳ ಹಿಂದಷ್ಟೇ ಉತ್ತರಾಖಂಡದ ರಾಮನಗರದಲ್ಲಿರುವ ಫಾಟೊ ಪ್ರವಾಸಿ ವಲಯದಲ್ಲಿ ಜಂಗಲ್ ಸಫಾರಿಯನ್ನು ಕೈಗೊಂಡಿದ್ದರು. ಕಾಡಿನ ಸೌಂದರ್ಯ ಮತ್ತು ಜೀವವೈವಿಧ್ಯತೆಯನ್ನು ಬಹಳ ಹತ್ತಿರದಿಂದ ಕಣ್ತುಂಬಿಕೊಂಡು ಕಾಲ ಕಳೆದರು.

images

ಪ್ರಕೃತಿಯ ಮಡಿಲಲ್ಲಿ ನಟ ಸುನಿಲ್‌ ಶೆಟ್ಟಿ:

ಕಾಶಿಪುರಕ್ಕೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಸುನೀಲ್ ಶೆಟ್ಟಿ ಅಲ್ಲಿಂದ ಫಾಟೊ ಪ್ರವಾಸಿ ವಲಯಕ್ಕೆ ಆಗಮಿಸಿದ್ದರು. ಜೊತೆಗೆ ಜಂಗಲ್ ಸಫಾರಿಯಲ್ಲಿದ್ದ ಮಾರ್ಗದರ್ಶಕರು, ಚಾಲಕರು ಮತ್ತು ಪ್ರವಾಸಿಗರ ಜೊತೆ ಒಂದಷ್ಟು ಕಾಲ ಕಳೆದರು. ಸಫಾರಿಯ ಸಮಯದಲ್ಲಿ, ನಟ ಅನೇಕ ಪ್ರಾಣಿಗಳು ಮತ್ತು ಅಪರೂಪದ ಜಾತಿಯ ಪಕ್ಷಿಗಳನ್ನು ಕಣ್ತುಂಬಿಕೊಂಡರೆಂದು ಡಿಎಫ್‌ಒ ಪ್ರಕಾಶ್ ಆರ್ಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಅಭಿಮಾನಿಗಳ ಬೇಡಿಕೆಯಂತೆ ಫೋಟೋ, ಸೆಲ್ಪೀ ತೆಗೆಸಿಕೊಂಡು ಎಲ್ಲರ ಖುಷಿಗೆ ಕಾರಣರಾದರು.

1200-675-24053349-thumbnail-16x9-newsss

ಮುಂದಿನ ಪ್ರವಾಸ ಕಾಶ್ಮೀರಕ್ಕೆ ಎಂದಿದ್ದ ಆ್ಯಕ್ಷನ್​​ ಸ್ಟಾರ್ :

ಪಹಲ್ಗಾಮ್​​ನಲ್ಲಿ ದಾಳಿ ಕುರಿತು ಇತ್ತೀಚೆಗಷ್ಟೇ ಪ್ರತಿಕ್ರಿಯೆ ನೀಡಿದ್ದ ಸುನಿಲ್‌ ಶೆಟ್ಟಿ, ಕಾಶ್ಮೀರ ನಮ್ಮದು, ಎಂದಿಗೂ ನಮ್ಮದೇ ಆಗಿರುತ್ತದೆ. ಅಲ್ಲಿನ ಪ್ರವಾಸೋದ್ಯಮವನ್ನು ನಾವೇ ಉತ್ತೇಜಿಸಬೇಕು. ಅಲ್ಲದೇ ಉಗ್ರರಿಗೆ ಹೆದರುವವರು ನಾವಲ್ಲ ಎಂಬುದನ್ನು ತೋರಿಸಿಕೊಡುವ ಸಲುವಾಗಿ ನಮ್ಮ ಮುಂದಿನ ಪ್ರವಾಸವನ್ನು ಕಣಿವೆ ನಾಡು ಕಾಶ್ಮೀರಕ್ಕೇ ಕೈಗೊಳ್ಳಬೇಕೆಂದು ಭಾರತೀಯರಲ್ಲಿ ಮನವಿ ಮಾಡಿದ್ದರು. ಅಲ್ಲದೆ ತನ್ನ ಮುಂದಿನ ಪ್ರವಾಸವು ಕಾಶ್ಮೀರದಲ್ಲಿ ಎಂಬುದಾಗಿ ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಉತ್ತರಾಖಂಡದ ರಾಮನಗರದಲ್ಲಿರುವ ಫಾಟೊ ಪ್ರವಾಸಿ ವಲಯದಲ್ಲಿ ಜಂಗಲ್ ಸಫಾರಿಯಲ್ಲಿ ಸುನಿಲ್‌ ಶೆಟ್ಟಿ ಕಾಣಿಸಿಕೊಂಡಿದ್ದು, ಎಲ್ಲರಲ್ಲಿ ಪ್ರಶ್ನೆ ಮೂಡಿಸುವಂತೆ ಮಾಡಿತ್ತು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಉತ್ತರ ಕರ್ನಾಟಕದ ರಂಗನತಿಟ್ಟು...

Read Next

ಉತ್ತರ ಕರ್ನಾಟಕದ ರಂಗನತಿಟ್ಟು...