Friday, October 3, 2025
Friday, October 3, 2025

ಕೇದಾರನಾಥ ಯಾತ್ರೆ ಮತ್ತಷ್ಟು ಸುಲಭ: ಸೋನ್‌ ಪ್ರಯಾಗದಿಂದ ಹೆಲಿಕಾಫ್ಟರ್‌ ಸೇವೆ

ಮೇ 1 ರಿಂದ ಕೇದಾರನಾಥ ಯಾತ್ರೆ ಪ್ರಾರಂಭವಾಗಿದೆ. ಈ ಮಧ್ಯೆ ಯಾತ್ರೆಯನ್ನು ಮತ್ತಷ್ಟು ಸರಾಗಗೊಳಿಸಲು ಸೋನ್‌ ಪ್ರಯಾಗದಿಂದ ಹೆಲಿಕಾಫ್ಟರ್‌ ಸೇವೆಯನ್ನು ಒದಗಿಸಲಾಗಿದೆ.

ಮೇ 1 ರಿಂದ ಕೇದಾರನಾಥ ಯಾತ್ರೆ ಪ್ರಾರಂಭವಾಗಿದೆ. ಈ ಮಧ್ಯೆ ಯಾತ್ರೆಯನ್ನು ಮತ್ತಷ್ಟು ಸರಾಗಗೊಳಿಸಲು ಸೋನ್‌ ಪ್ರಯಾಗದಿಂದ ಹೆಲಿಕಾಫ್ಟರ್‌ ಸೇವೆಯನ್ನು ಒದಗಿಸಲಾಗಿದೆ. ಮೇ 1 ರಿಂದ ಭಕ್ತಾದಿಗಳು ಕೇದಾರನಾಥನ ದರ್ಶನ ಪಡೆಯುತ್ತಿದ್ದು,ವರದಿಯೊಂದರ ಪ್ರಕಾರ ಪ್ರತಿದಿನ ಸುಮಾರು 20 ರಿಂದ 30 ಶಟಲ್ ವಿಮಾನಗಳು ನಿಗದಿಯಾಗಿವೆ.

ಈ ವರ್ಷ
ಶ್ರೀ ಕೇದಾರನಾಥ ಧಾಮ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈಗ ಉತ್ತರಾಖಂಡದ ಸೋನ್‌ಪ್ರಯಾಗದಿಂದ ಹೊರಡುವ ಹೆಲಿಕಾಪ್ಟರ್ ಸೇವೆಗಳನ್ನು ಪಡೆಯಬಹುದು. ಈ ಹೊಸ ಸೌಲಭ್ಯವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅನುಕೂಲವಾಗಲಿದೆ. ಕಳೆದ ನಾಲ್ಕೈದು ದಿನಗಳಲ್ಲಿ ಕೇದಾರನಾಥ ದೇವಾಲಯಕ್ಕೆ ಸಾವಿರಾರು ಭಕ್ತರು ಹೋಗುತ್ತಿದ್ದಾರೆ.

ಇನ್ನು ಹೆಲಿಕಾಪ್ಟರ್ ಸೇವೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು. ಅಧಿಕೃತ ಮಾಹಿತಿಯ ಪ್ರಕಾರ ಪ್ರತಿದಿನ ಸುಮಾರು 20 ರಿಂದ 30 ಶಟಲ್ ವಿಮಾನಗಳನ್ನು ನಿಗದಿಪಡಿಸಲಾಗಿದ್ದು, 150 ಕ್ಕೂ ಹೆಚ್ಚು ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅಧಿಕೃತ IRCTC ಹೆಲಿ ಯಾತ್ರಾ ಪೋರ್ಟಲ್ ಮೂಲಕ ಆನ್‌ಲೈನ್ ಬುಕಿಂಗ್‌ಗಳು ಲಭ್ಯವಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಸೆಕ್ಟರ್ ಮ್ಯಾಜಿಸ್ಟ್ರೇಟ್ ಕಚೇರಿಗಳ ಮೂಲಕ ಆಫ್‌ಲೈನ್ ಕಾಯ್ದಿರಿಸುವಿಕೆಯನ್ನು ಮಾಡಬಹುದು. ವಿಮಾನ ಕಾರ್ಯಾಚರಣೆಗಳು ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತವೆ, ಸುರಕ್ಷತೆಯು ಮೊದಲ ಆದ್ಯತೆಯಾಗಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!