ಮಲೇಷಿಯಾದಲ್ಲಿ ಆಕರ್ಷಕ ಪುಷ್ಪವನ ನಿರ್ಮಾಣ!
ಮಲೇಷಿಯಾದಲ್ಲಿ ಲೆಗೊ ಇಟ್ಟಿಗೆಗಳನ್ನು ಬಳಸಿ ಅತ್ಯದ್ಭುತವಾದ ಪುಷ್ಪವನವನ್ನು ನಿರ್ಮಿಸಲಾಗಿದೆ. 4,100 ಚದರ ಅಡಿ ವಿಸ್ತೀರ್ಣದ ಲೆಗೋ ಉದ್ಯಾನವನ್ನು 7,92,000 ಕ್ಕೂ ಹೆಚ್ಚು ಲೆಗೋ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ ಎಂಬ ಮಾಹಿತಿಯಿದೆ.
ಮಲೇಷಿಯಾದಲ್ಲಿ ಲೆಗೊ ಇಟ್ಟಿಗೆಗಳನ್ನು ಬಳಸಿ ಅತ್ಯದ್ಭುತವಾದ ಪುಷ್ಪವನವನ್ನು ನಿರ್ಮಿಸಲಾಗಿದೆ. 4,100 ಚದರ ಅಡಿ ವಿಸ್ತೀರ್ಣದ ಲೆಗೋ ಉದ್ಯಾನವನ್ನು 7,92,000 ಕ್ಕೂ ಹೆಚ್ಚು ಲೆಗೋ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ ಎಂಬ ಮಾಹಿತಿಯಿದೆ.
ಮಲೇಷ್ಯಾದ ಪ್ರಸಿದ್ದ ಲೆಗೋಲ್ಯಾಂಡ್ ರೆಸಾರ್ಟ್‌ನಲ್ಲಿ ವಿಶ್ವದ ಮೊದಲ ಲೆಗೋ ಹೂವಿನ ಉದ್ಯಾನವನವನ್ನು ತೆರೆಯಲಾಗಿದೆ. "ದಿ ಫ್ಲವರ್ ಗಾರ್ಡನ್ ಮಿನಿಲ್ಯಾಂಡ್" ಎಂಬುದು ಅದ್ಭುತವಾದ ಉದ್ಯಾನವಾಗಿದ್ದು, ಇದು ಜನಪ್ರಿಯ ಲೆಗೋ ಬೊಟಾನಿಕಲ್ಸ್ ಸಂಗ್ರಹದಿಂದ 58 ವಿಧದ ಲೆಗೋ ಹೂವುಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಇದರಲ್ಲಿ ಸೂರ್ಯಕಾಂತಿಗಳು, ಆರ್ಕಿಡ್‌ಗಳು, ಚೆರ್ರಿ ಹೂವುಗಳು, ಬೋನ್ಸೈ ಮರಗಳು ಸೇರಿದಂತೆ ಹತ್ತಾರು ವಿವಿಧ ಜಾತಿಯ ಹೂವು ಮತ್ತು ಗಿಡಗಳಿವೆ. ಇಡೀ ಉದ್ಯಾನವನವು ಕಂಗೊಳಿಸುತ್ತಿದೆ.
ಲೆಗೋಲ್ಯಾಂಡ್ ರೆಸಾರ್ಟ್ ಮಲೇಷ್ಯಾದ ಜೋಹೋರ್‌ನಲ್ಲಿರುವ ಇಸ್ಕಂದರ್ ಪುಟೇರಿಯಲ್ಲಿದೆ. ಇದು ಸಿಂಗಾಪುರ್ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (SIN) ಕೆಲವೇ ಕಿ.ಮೀ ದೂರದಲ್ಲಿದ್ದು, 55 ನಿಮಿಷಗಳ ಪ್ರಯಾಣ. ಜೋಹೋರ್‌ನ ಸೆನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (JHB) ಸ್ವಲ್ಪ ದೂರದಲ್ಲಿದೆ.
ಪ್ರವಾಸಿಗರು ಉದ್ಯಾವನದಲ್ಲಿ ಬಣ್ಣದ ಚಿಟ್ಟೆಗಳು ,ಪಕ್ಷಿಗಳು, ನರಿಗಳು ಮತ್ತು ಬೆಕ್ಕುಗಳಂತಹ ಲೆಗೋ ವನ್ಯಜೀವಿಗಳನ್ನು ಸಹ ನೋಡಬಹುದು. ನೀರಿನ ಲಿಲ್ಲಿಗಳಿಂದ ಅಲಂಕರಿಸಲ್ಪಟ್ಟ ಲೆಗೋ ಕಪ್ಪೆಗಳು ಮತ್ತು ಕೋಯಿ ಮೀನುಗಳನ್ನು ಹೊಂದಿರುವ ನೀರಿನ ಕಾರಂಜಿ ಕೊಳವೂ ಇದೆ.