Friday, October 3, 2025
Friday, October 3, 2025

ಇದು ಜಗತ್ತಿನ ಅತ್ಯಂತ ದುಬಾರಿ ವಿಮಾನ ನಿಲ್ದಾಣ!

ವಿಶ್ವದ ಅತ್ಯಂತ ದುಬಾರಿ ವಿಮಾನ ನಿಲ್ದಾಣ ಯಾವುದೆಂದು ನಿಮಗೆ ಗೊತ್ತಾ..? ಈ ವಿಮಾನ ನಿಲ್ದಾಣದಲ್ಲಿ ಒಂದು ಬಾಳೆಹಣ್ಣನ್ನು ಕೊಂಡುಕೊಳ್ಳಬೇಕಾದರೂ ನೀವು 500 ರೂಪಾಯಿಯನ್ನು ತೆರಬೇಕಾಗುತ್ತದೆ. ಇನ್ನು ಫಾಸ್ಟ್ ಫುಡ್‌ ಬೇಕೆನ್ನುವವರ ಸ್ಥಿತಿ ನೀವೇ ಒಮ್ಮೆ ಯೋಚಿಸಿ ನೋಡಿ..

ವಿಮಾನದಲ್ಲಿ ಪ್ರಯಾಣಿಸಿದವರಿಗೆಲ್ಲರಿಗೂ ತಿಳಿದಿರುವ ವಿಚಾರವೆಂದರೆ ಹೊರಗಡೆ ನಾವು ಕೊಂಡು ಕೊಳ್ಳುವ ವಸ್ತುಗಳ ಬೆಲೆಗಿಂತ ದುಬಾರಿ ಬೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ನಾವು ಶಾಪಿಂಗ್‌ ಮಾಡಬೇಕಾಗುತ್ತದೆ. ಪ್ರಯಾಣದಿಂದ ಸುಸ್ತಾಗಿ ಸ್ವಲ್ಪ ಚಹಾ ಇಲ್ಲವೇ ಕಾಫಿ ಕುಡಿಯುತ್ತೇನೆಂದರೂ ಇಲ್ಲಿ ಸ್ವಲ್ಪ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ನೀರಿನ ಬಾಟಲಿಗಳ ಬೆಲೆಯಂತೂ ಎರಡು ಪಟ್ಟು ದುಬಾರಿಯಾಗಿರುತ್ತವೆ..ಆದರೆ ವಿಶ್ವದ ಅತ್ಯಂತ ದುಬಾರಿ ವಿಮಾನ ನಿಲ್ದಾಣ ಎಲ್ಲಿದೆ ಎಂಬುದು ನಿಮಗೆ ಗೊತ್ತಾ?

105839113-1554737451132aaaa2018-12-20-0005

ಅತ್ಯಂತ ದುಬಾರಿ ವಿಮಾನ ನಿಲ್ದಾಣವಿದು

ಯುರೋಪ್ ಮತ್ತು ಏಷ್ಯಾದ ನಡುವೆ ಇರುವ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಸ್ತಾನ್‌ಬುಲ್‌ ವಿಮಾನ ನಿಲ್ದಾಣದ ಮೂಲಕ ಪ್ರತಿದಿನ 220,000 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅಲ್ಲದೆ ಪ್ರತಿ ವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ ಆದರೆ "ವಿಶ್ವದ ಅತ್ಯಂತ ದುಬಾರಿ" ವಿಮಾನ ನಿಲ್ದಾಣ ಎಂಬ ಕುಖ್ಯಾತಿಗೆ ಇದು ಒಳಗಾಗಿರುವುದಾಗಿ ಮಿರರ್ ವರದಿ ಮಾಡಿದೆ.

images (5)

ಬಾಳೆಹಣ್ಣಿನ ಬೆಲೆ 565 ರೂ

ದೇಶ ಸುತ್ತುವುದಕ್ಕಾಗಿ ಇಲ್ಲವೇ ವೃತ್ತಿ, ವ್ಯಾಪಾರದ ನಿಮಿತ್ತ ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ ಮಂದಿಗೆ ವಿಮಾನ ನಿಲ್ದಾಣದಲ್ಲಿ ಅಗತ್ಯ ವಸ್ತುಗಳ ಖರೀದಿ ಬಲು ದುಬಾರಿಯೆನ್ನಿಸಿಕೊಂಡಿದೆ. ಹೆಚ್ಚೇಕೆ ? ಇಲ್ಲಿ ಬಾಳೆಹಣ್ಣನ್ನು 565 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಫಾಸ್ಟ್ ಫುಡ್‌ನಂತಹ ಆಹಾರ ಪದಾರ್ಥಗಳ ಬೆಲೆಯಂತೂ ಬಲು ದುಬಾರಿಯಾಗಿದೆ.

ಇಷ್ಟೇ ಅಲ್ಲ, ಇಟಾಲಿಯನ್ ಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ (Corriere della Sera) ʼಆಹಾರ ಮತ್ತು ಪಾನೀಯಗಳನ್ನು ಕೊಂಡುಕೊಳ್ಳುವರಿಗೆ ಯುರೋಪಿನ ಅತ್ಯಂತ ದುಬಾರಿ ವಿಮಾನ ನಿಲ್ದಾಣವಿದುʼ ಎಂದು ಕರೆದಿದೆ. ಆದರೆ, ಆಹಾರದ ಗುಣಮಟ್ಟ ದುಬಾರಿ ಬೆಲೆಗೆ ತಕ್ಕಂತಿದ್ದರೆ ಕಷ್ಟವಾದರೂ ಇಷ್ಟಪಟ್ಟು ಹೊಂದುಕೊಳ್ಳುತ್ತಿದ್ದರೇನೋ..

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!