Monday, August 18, 2025
Monday, August 18, 2025

ಮೌಂಟ್‌ ಎವರೆಸ್ಟ್‌ ಹತ್ತುವವರಿಗೆ ಇಲ್ಲಿದೆ ಹೊಸ ರೂಲ್ಸ್

ನೇಪಾಳ ದೇಶವು ಮೌಂಟ್‌ ಎವರೆಸ್ಟ್‌ ಹತ್ತುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಕಠ್ಮಂಡು: ಮೌಂಟ್‌ ಎವರೆಸ್ಟ್‌(Mount Everest) ಹತ್ತುವ ಪ್ರವಾಸಿಗರಿಗಾಗಿ ನೇಪಾಳ(Nepal) ದೇಶವು ಕಠಿಣವಾದ ಹೊಸ ನಿಯಮಗಳನ್ನು ಜಾರಿಗೊಳಿಸಲು ಸಜ್ಜಾಗಿದೆ. ಹೊಸ ನಿಯಮಗಳ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ. ಮೌಂಟ್‌ ಎವರೆಸ್ಟ್ ಪರ್ವತಾರೋಹಣ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸುವ ಮೊದಲು ಮೌಂಟ್‌ ಎವರೆಸ್ಟ್‌ ಹತ್ತಲು ಬಯಸುವವರು ನೇಪಾಳದ 7,000 ಮೀಟರ್ ಎತ್ತರದ ಶಿಖರಗಳಲ್ಲಿ ಕನಿಷ್ಠ ಒಂದನ್ನು ಯಶಸ್ವಿಯಾಗಿ ತಲುಪಿರಬೇಕು ಎಂದು ನಿಯಮ ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಉಂಟಾದ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಈ ಬದಲಾವಣೆಯನ್ನು ತರಲಾಗಿದೆ ಎಂಬ ಮಾಹಿತಿಯಿದೆ. ಎವರೆಸ್ಟ್‌ನಲ್ಲಿ ತೀರಾ ಆತಂಕಕಾರಿಯಾದ ರೀತಿಯಲ್ಲಿ ಜನದಟ್ಟಣೆ ಸೇರುತ್ತದೆ. ಮೌಂಟ್‌ ಎವರೆಸ್ಟ್‌ ಏರುವುದು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಪರ್ವತರೋಹಿಗಳ ಸುರಕ್ಷತೆ ಕಾಪಾಡುವುದು ಅತ್ಯಗತ್ಯ ಎಂದು ನೇಪಾಳ ನಿರ್ಧರಿಸಿದೆ. ಹೊಸ ಕಾನೂನನ್ನು ಜನದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮತ್ತು ಪರ್ವತಾರೋಹಿಗಳಿಗೆ ಸುರಕ್ಷತೆಯನ್ನು ಒದಗಿಸಲು ಜಾರಿಗೊಳಿಸಲಾಗಿದೆ.


ಶುಲ್ಕ ಹೆಚ್ಚಳ
ಸೆಪ್ಟೆಂಬರ್ ತಿಂಗಳಿನಿಂದ ನೇಪಾಳ ದೇಶವು ಮೌಂಟ್ ಎವರೆಸ್ಟ್ ಪರ್ವತಾರೋಹಣ ಲೈಸೆನ್ಸ್ ಶುಲ್ಕವನ್ನು ಶೇಕಡಾ 36 ರಷ್ಟು ಹೆಚ್ಚಿಸಲಿದೆ. ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಪರ್ವತಾರೋಹಿಗಳು, ಟ್ರೆಕ್ಕಿಂಗ್‌ ಏಜೆನ್ಸಿ ಮತ್ತು ನೇಪಾಳದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!