Friday, October 3, 2025
Friday, October 3, 2025

ಮಸ್ಸೂರಿ ಸ್ಕೈ ಕಾರ್ ನಿಂದ ಹೊಸ ಯೋಜನೆ ; ಡೆಹ್ರಾಡೂನ್ ಮತ್ತು ಮಸ್ಸೂರಿ ನಡುವೆ ಭಾರತದ ಅತಿ ಉದ್ದದ ಪ್ಯಾಸೆಂಜರ್ ರೋಪ್‌ವೇ ಆರಂಭ

ದಕ್ಷಿಣ ಏಷ್ಯಾದ ಅತಿ ಉದ್ದದ ಪ್ರಯಾಣಿಕ ರೋಪ್‌ವೇ ಎಂಬ ಹೆಗ್ಗಳಿಕೆಗೆ ಮಸ್ಸೂರಿ ಸ್ಕೈ ಕಾರ್ ಪಾತ್ರವಾಗಲಿದೆ. ಈ 5.2 ಕಿಮೀ ಉದ್ದದ ಮೊನೊ-ಕೇಬಲ್ ಡಿಟ್ಯಾಚೇಬಲ್ ಗೊಂಡೊಲಾ ವ್ಯವಸ್ಥೆಯು ಪೂರ್ಣಗೊಂಡ ನಂತರ, ಕೇವಲ 20 ನಿಮಿಷಗಳಲ್ಲಿ ಡೆಹ್ರಾಡೂನ್ ಮತ್ತು ಮಸ್ಸೂರಿ ಪ್ರಯಾಣದ ಸಾಧ್ಯವಾಗಲಿದೆ.

ಈಗೆಲ್ಲಾ ಹೈಸ್ಪೀಡ್‌ ದುನಿಯಾ. ಹೆಚ್ಚು ಸಮಯ ವ್ಯಯಿಸುವುದಕ್ಕೆ ಯಾರೂ ಸಿದ್ಧರಿರುವುದಿಲ್ಲ. ಜನರ ಬೇಡಿಕೆಗಳಿಗೆ ಅನುಗುಣವಾಗಿ ಸದ್ಯ ತಂತ್ರಜ್ಞಾನವೂ ಅಭಿವೃದ್ಧಿಗೊಳ್ಳುತ್ತಲೇ ಇದೆ. ಇದಕ್ಕೆ ದಿಟ್ಟ ನಿದರ್ಶನವೆಂದರೆ ಕೇಬಲ್‌ ಕಾರ್‌ ವ್ಯವಸ್ಥೆ. ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವುದಕ್ಕಾಗಿ, ಹಾಗೂ ವಾಹನಗಳು ತಲುಪಲು ಕಷ್ಟವೆನ್ನುವ ಸ್ಥಳಗಳನ್ನು ತಲುಪುವ ಉದ್ದೇಶದೊಂದಿಗೆ ದೇಶದ ಅನೇಕ ಕಡೆಗಳಲ್ಲಿ ಕೇಬಲ್‌ ಕಾರ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು ಸದ್ಯ, ಉತ್ತರ ಭಾರತದ ಎರಡು ಜನಪ್ರಿಯ ಗಿರಿಧಾಮಗಳಲ್ಲಿ ಶೀಘ್ರದಲ್ಲೇ ಕೇಬಲ್ ಕಾರ್ ಮೂಲಕ ಸಂಪರ್ಕಿಸಲು ಸಜ್ಜಾಗುತ್ತಿದೆ.

cable car

ಹೌದು, ದಕ್ಷಿಣ ಏಷ್ಯಾದ ಅತಿ ಉದ್ದದ ಪ್ರಯಾಣಿಕರ ರೋಪ್‌ವೇ ಎಂಬ ಹೆಗ್ಗಳಿಕೆಗೆ ಮಸ್ಸೂರಿ ಸ್ಕೈ ಕಾರ್ ಪಾತ್ರರಾಗುವ ನಿರೀಕ್ಷೆಯಿದ್ದು, ಡೆಹ್ರಾಡೂನ್‌ನಿಂದ ಮಸ್ಸೂರಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಒಮ್ಮೆ ಈ ಸಂಪರ್ಕ ವ್ಯವಸ್ಥೆ ಪೂರ್ಣಗೊಂಡ ನಂತರ, ಈ 5.2 ಕಿಮೀ ಮೊನೊ-ಕೇಬಲ್ ಡಿಟ್ಯಾಚೇಬಲ್ ಗೊಂಡೊಲಾ ವ್ಯವಸ್ಥೆಯು ಉತ್ತರಾಖಂಡದ ಈ ಎರಡು ಜನಪ್ರಿಯ ಪರ್ವತ ತಾಣಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 20 ನಿಮಿಷಗಳಿಗೆ ಇಳಿಸಲಿದೆ.

ಪ್ರಸ್ತುತ, ರಸ್ತೆಯ ಮೂಲಕ ಡೆಹ್ರಾಡೂನ್‌ನಿಂದ ಮಸ್ಸೂರಿಗೆ ಪ್ರಯಾಣಿಸಲು ಸರಿಸುಮಾರು 34 ಕಿಮೀ ದೂರವಿದ್ದು, ಸುಮಾರು ಒಂದೂವರೆ ಗಂಟೆ ತೆಗೆದುಕೊಳ್ಳುತ್ತದೆ. ಎರಡೂ ತಾಣಗಳ ನಡುವೆ ನೇರ ರೈಲು ಸೇವೆಯೂ ಇಲ್ಲದಿರುವುದರಿಂದ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಬಸ್ಸುಗಳೇ ಆಧಾರವಾಗಿವೆ.

ಶೀಘ್ರದಲ್ಲೇ ಸಿದ್ಧವಾಗಲಿದೆ ಮಸ್ಸೂರಿ ಸ್ಕೈ ಕಾರ್ ರೋಪ್‌ವೇ

ಮಸ್ಸೂರಿ-ಡೆಹ್ರಾಡೂನ್ ರೋಪ್‌ವೇ ಯೋಜನೆಯು ಸೆಪ್ಟೆಂಬರ್ 2026 ರ ವೇಳೆಗೆ ಸಂಪೂರ್ಣಗೊಂಡು ಪ್ರಯಾಣಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. ಪೂರ್ಣಗೊಂಡ ನಂತರ, ಇದು ದಕ್ಷಿಣ ಏಷ್ಯಾದಲ್ಲಿ ಈ ರೀತಿಯ ಅತಿ ಉದ್ದದ ರೋಪ್‌ವೇ ಆಗಲಿದ್ದು, ವಿಶ್ವದ ಅತಿ ಉದ್ದದ ರೋಪ್‌ವೇಗಳಲ್ಲಿ ಒಂದಾಗಲಿದೆ. ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಿಸಬಲ್ಲ ಮಸ್ಸೂರಿ ಸ್ಕೈ ಕಾರ್ ರೋಪ್‌ವೇ, ಗಂಟೆಗೆ ಸುಮಾರು 1,300 ಪ್ರಯಾಣಿಕರನ್ನು ಹೊತ್ತೊಯ್ಯುವ ನಿರೀಕ್ಷೆಯಿದೆ.

cable car new

ಮಸ್ಸೂರಿ ಸ್ಕೈ ಕಾರ್ ಪ್ರೈವೇಟ್ ಲಿಮಿಟೆಡ್‌ಗೆ ಯಮುನೋತ್ರಿ ರೋಪ್‌ವೇ ಯೋಜನೆಯನ್ನು ಸಹ ನೀಡಲಾಗಿದೆ. ಇದು ಉತ್ತರಾಖಂಡದ ಖರ್ಸಾಲಿ ಮತ್ತು ಯಮುನೋತ್ರಿ ನಡುವೆ 3.8 ಕಿ.ಮೀ.ಗಳ ಪ್ರಯಾಣಕ್ಕೆ ನೆರವಾಗಲಿದೆ. ಈ ರೋಪ್‌ವೇ ಹತ್ತಿರದ ಧಾರ್ಮಿಕ ಸ್ಥಳಗಳ ಭೇಟಿಗೂ ಸಹಕಾರಿಯಾಗಲಿದ್ದು, ಈ ಮೂಲಕ ಯಾತ್ರಾ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷಿಯಿದೆ.

ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ

ಮಸ್ಸೂರಿ ಸ್ಕೈ ಕಾರ್ ರೋಪ್‌ವೇ ಅಭಿವೃದ್ಧಿ ಪಡಿಸುವ ವೇಳೆ ಗುಣಮಟ್ಟದ ವಸ್ತುಗಳನ್ನು ಬಳಸುವ ಮೂಲಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರ ಘಟಕಗಳ ಹೆಚ್ಚಿನ ಭಾಗವನ್ನು ಭಾರತದಲ್ಲಿ ದೇಶೀಯವಾಗಿ ತಯಾರಿಸಲಾಗುತ್ತದೆ.ಈ ಮೂಲಕ ಸ್ಥಳೀಯ ಕೈಗಾರಿಕೆಗಳಿಗೆ ಹೆಚ್ಚಿನ ಬೆಂಬಲ ನೀಡುವ ಉದ್ದೇಶವನ್ನು ಇದು ಹೊಂದಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!