Monday, August 18, 2025
Monday, August 18, 2025

ಪಾಕಿಸ್ತಾನ್ ವಾಯುಮಾರ್ಗ ಬಂದ್: ಏರ್ ಇಂಡಿಯಾದ ಪೈಲಟ್ ಗೆ ಹೆಚ್ಚಿನ ಕೆಲಸ

ಏರ್ ಇಂಡಿಯಾದ ಅಮೆರಿಕದ ಕಡೆ ಹೋಗುವ ವಿಮಾನದ ಸೇವೆಗಳನ್ನು ನಿರ್ವಹಿಸಲು ಪೈಲೆಟ್‌ಗಳಿಗೆ ಹೆಚ್ಚುವರಿ ಕೆಲಸದ ಸಮಯ ನೀಡಲು ಭಾರತದ ವಿಮಾನಯಾನ ನಿಯಂತ್ರಣ ಸಂಸ್ಥೆ ತಾತ್ಕಾಲಿಕ ಅನುಮತಿ ನೀಡಿದೆ.

ಪಾಕಿಸ್ತಾನ (Pakistan) ತನ್ನ ವಾಯುಮಾರ್ಗವನ್ನು ಭಾರತಕ್ಕೆ ಮುಚ್ಚಿರುವ ಹಿನ್ನೆಲೆ, ಏರ್ ಇಂಡಿಯಾದ ಅಮೆರಿಕದ ಕಡೆ ಹೋಗುವ ವಿಮಾನದ ಸೇವೆಗಳನ್ನು ನಿರ್ವಹಿಸಲು ಪೈಲೆಟ್‌ಗಳಿಗೆ ಹೆಚ್ಚುವರಿ ಕೆಲಸದ ಸಮಯ (Duty Time) ನೀಡಲು ಭಾರತದ ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ತಾತ್ಕಾಲಿಕ ಅನುಮತಿ ನೀಡಿದೆ.

ಈ ವಿನಾಯಿತಿ ಏಪ್ರಿಲ್ 30ರಿಂದ ಆರಂಭವಾಗಿ ಎರಡು ವಾರಗಳ ಕಾಲ ಜಾರಿಯಲ್ಲಿರುತ್ತದೆ. ಇದು ಏರ್ ಇಂಡಿಯಾದ ಬೋಯಿಂಗ್ ಮತ್ತು ಏರ್‌ಬಸ್ ವಿಮಾನಗಳಿಗೆ ಅನ್ವಯವಾಗುತ್ತದೆ.

ಹೊಸ ನಿಯಮಗಳು ಹೇಳುವುದೇನು?

ಹಳೆಯ ನಿಯಮದ ಪ್ರಕಾರ, 12 ಗಂಟೆವರೆಗೆ ಇರುವ ವಿಮಾನಗಳಿಗೆ ಪೈಲೆಟ್‌ಗಳ ಗರಿಷ್ಠ ಡ್ಯೂಟಿ ಅವಧಿ 14 ಗಂಟೆಗಳಾಗಿದ್ದು, ಈಗ ಅದನ್ನು 16 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ 14 ಗಂಟೆಗಿಂತ ಹೆಚ್ಚು ಸಮಯದ ವಿಮಾನಗಳಿಗೆ ಡ್ಯೂಟಿ ಅವಧಿ ಈಗ 24 ಗಂಟೆಗಳಿಗೆ ವಿಸ್ತರಿಸಲಾಗಿದೆ (ಹಿಂದೆ 22 ಗಂಟೆಗಳಿತ್ತು).

ಇದೇ ವೇಳೆ, ಪೈಲೆಟ್‌ಗಳು ಮತ್ತು ಸಿಬ್ಬಂದಿಗೆ layover ಸಮಯದಲ್ಲಿ ಹೆಚ್ಚುವರಿ 4 ಗಂಟೆಗಳ ವಿಶ್ರಾಂತಿ ಹಾಗೂ ಮನೆಯಲ್ಲಿ 12 ಗಂಟೆಗಳ ಹೆಚ್ಚುವರಿ ವಿಶ್ರಾಂತಿ ನೀಡಲಾಗುತ್ತದೆ.

ಇಂಧನ ವೆಚ್ಚವೂ ಏರಿಕೆ

ಪಾಕಿಸ್ತಾನದ ವಾಯುಮಾರ್ಗ ಮುಚ್ಚಿದ ಪರಿಣಾಮ, ಭಾರತೀಯ ವಿಮಾನಗಳು ಉದ್ದದ ದಾರಿಯನ್ನೇ ಬಳಸಬೇಕಾಗಿದ್ದು, ಇದು ಪ್ರಯಾಣದ ಸಮಯ ಹೆಚ್ಚಿಸಲು ಮತ್ತು ಇಂಧನ ವೆಚ್ಚವನ್ನು ಹೆಚ್ಚಿನಮಟ್ಟಿಗೆ ಏರಿಸಲು ಕಾರಣವಾಗಿದೆ. ವರದಿಯ ಪ್ರಕಾರ, ಈ ನಿರ್ಬಂಧ ಒಂದು ವರ್ಷ ಮುಂದುವರೆದರೆ, ಏರ್ ಇಂಡಿಯಾಗೆ ಸುಮಾರು 600 ಮಿಲಿಯನ್ ಡಾಲರ್ ಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗಬಹುದು.

ಪೈಲೆಟ್‌ಗಳಲ್ಲಿ ಆತಂಕ; ಎಚ್ಚರಿಕೆ

ಈ ತಾತ್ಕಾಲಿಕ ವಿನಾಯಿತಿ ಬಗ್ಗೆ ಕೆಲವೊಂದು ಪೈಲೆಟ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನು "ತೀವ್ರವಾದ ಕ್ರಮ" ಎಂದು ಒಬ್ಬ ಪೈಲೆಟ್ ಹೇಳಿದ್ದಾರೆ. ಪೈಲೆಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಹೆಚ್ಚು ಒತ್ತಡಕ್ಕೆ ಒಳಗಾಗಬಾರದೆಂದು ವಿಮಾನಯಾನ ಇಲಾಖೆಯವರು ಎಲ್ಲ ವಿಮಾನ ಸಂಸ್ಥೆಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!