Friday, October 3, 2025
Friday, October 3, 2025

ಮನಾಲಿಯಲ್ಲಿ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದೀರಾ ?

ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಮಾಡಿಸಿಕೊಳ್ಳದ ಜೋಡಿ ಬಲು ವಿರಳ. ಆದರೆ ಹೇಗೆ, ಎಲ್ಲಿ ಮಾಡಿಸಿಕೊಳ್ಳಬೇಕು ? ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕೆಂದು ಯೋಚಿಸುವ ಜೋಡಿ ಈ ಮಾಹಿತಿಯನ್ನು ತಪ್ಪದೇ ಓದಿಕೊಳ್ಳಿ.

ವಿವಾಹ ಎಂಬುದು ಒಂದು ಸುಂದರ ಪಯಣದ ಪ್ರಾರಂಭ..ಪ್ರೀತಿ ಮತ್ತು ನಿರೀಕ್ಷೆಯನ್ನು ತುಂಬಿ, ಭವಿಷ್ಯ ಕನಸುಗಳನ್ನು ಹೊತ್ತು ನಡೆಯುವ ಸುಂದರ ಪಯಣ.. ವಿವಾಹದ ದಿನ ಪೋಟೋ ಆಲ್ಬಂ ಮಾಡಿಕೊಳ್ಳೋದು, ಸುಂದರ ಕ್ಷಣಗಳನ್ನು ರೂಪುಸುವುದು ಸಾಮಾನ್ಯ ಸಂಗತಿ..ಆದರೆ ಈಗಂತೂ ವಿವಾಹಿತರಾಗುವ ಮುನ್ನವೇ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಎಂಬ ಪರಿಕಲ್ಪನೆಯೊಂದು ಭಾರೀ ಸದ್ದು ಮಾಡುತ್ತಿದೆ. ಪ್ರೀ ವೆಡ್ಡಿಂಗ್‌ ಫೋಟೋಗಳನ್ನು ಇಲ್ಲಿ ಸೆರೆ ಹಿಡಿಯಬೇಕು, ಹೇಗೆಲ್ಲಾ ತಯಾರಿ ನಡೆಸಬೇಕು ಎಂಬ ಯೋಚನೆ ವಿವಾಹಕ್ಕೆ ಮುನ್ನವೇ ಪ್ರಾರಂಭವಾಗಿಬಿಡುತ್ತದೆ..

ನೀವು ನಿಮ್ಮ ಪ್ರೀ ವೆಡ್ಡಿಂಗ್‌ ಫೋಟೋಗಳನ್ನು ಸೆರೆಹಿಡಿಯಲು ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲದಲ್ಲಿದ್ದೀರಾ? ಹಾಗಾದರೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಮನಾಲಿ ಎಂಬ ಸುಂದರ ಪಟ್ಟಣಕ್ಕೆ ನೀವು ತೆರಳಲೇಬೇಕು. ಹಿಮದಿಂದ ಆವೃತವಾದ ಪರ್ವತಗಳಿಂದ ಹಚ್ಚ ಹಸಿರಿನ ಕಣಿವೆಗಳವರೆಗೆ, ಈ ಸ್ಥಳಗಳು ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಶ್ವತ ನೆನಪುಗಳನ್ನು ಸೃಷ್ಟಿಸಲು ಸೂಕ್ತವಾದ ಸನ್ನಿವೇಶಗಳನ್ನು ಒದಗಿಸುತ್ತವೆ.

ಸೋಲಂಗ್‌ ಕಣಿವೆ

ಹಿಮಾಲಯದಲ್ಲಿ ನೆಲೆಗೊಂಡಿರುವ ಸೋಲಾಂಗ್ ಕಣಿವೆಯು ಹಿಮದಿಂದ ಆವೃತವಾದ ಶಿಖರಗಳು ಮತ್ತು ಹಚ್ಚ ಹಸಿರಿನ ಹುಲ್ಲುಗಾವಲುಗಳಿಂದ ಕೂಡಿದ ಸುಂದರ ನೋಟವನ್ನು ಹೊಂದಿದೆ. ಎತ್ತರದ ಪರ್ವತಗಳು ಮತ್ತು ರೋಮಾಂಚಕ ಕಾಡು ಹೂವುಗಳ ಹಿನ್ನೆಲೆಯೊಂದಿಗೆ ರೋಮ್ಯಾಂಟಿಕ್ ಫೋಟೋಶೂಟ್‌ಗಳಿಗೆ ಸೂಕ್ತವಾಗಿದೆ.

solang

ರೋಹ್ಟಾಂಗ್ ಪಾಸ್

ಹಿಮಾಚಲ ಪ್ರದೇಶದ ಮನಾಲಿಯಿಂದ 51 ಕಿಮೀ ದೂರದಲ್ಲಿರುವ ರೋಹ್ಟಾಂಗ್ ಪಾಸ್, ಕುಲು ಕಣಿವೆಯನ್ನು ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ. ಅತಿ ಎತ್ತರದ ಪರ್ವತ ಮಾರ್ಗವನ್ನು ಹೊಂದಿರುವ ಈ ಪರಿಸರವು ವಿವಾಹ ಪೂರ್ವ ಫೊಟೋಶೂಟ್‌ ಗೆ ಹೇಳಿಮಾಡಿಸಿದಂತಹ ಪರಿಸರ ಹೊಂದಿದೆ.

1678207416

ಹಿಡಿಂಬಾ ದೇವಿ ದೇವಾಲಯ

ಭಾರತೀಯ ಮಹಾಕಾವ್ಯವಾದ ಮಹಾಭಾರತದಲ್ಲಿ ಭೀಮನ ಪತ್ನಿ ಹಿಡಿಂಬಿ ದೇವಿಗೆ ಅರ್ಪಿತವಾದ ಪುರಾತನ ದೇವಾಲಯವಿದು. ಸ್ಥಳೀಯವಾಗಿ ಧುಂಗಾರಿ ದೇವಾಲಯ ಎಂದು ಕರೆಯಲಾಗುವ ಈ ದೇವಾಲಯವನ್ನು ಹಿಡಿಂಬಾ ದೇವಾಲಯ ಎಂದೂ ಕರೆಯುತ್ತಾರೆ.

ದೇವದಾರು ಕಾಡುಗಳಿಂದ ಸುತ್ತುವರೆದಿರುವ ಈ ದೇವಾಲಯವು ವಿಶಿಷ್ಟವಾದ ಮರದ ವಾಸ್ತುಶಿಲ್ಪ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ. ಈ ಸ್ಥಳವು ಹಳ್ಳಿಗಾಡಿನ ಮೋಡಿಯನ್ನು ನೀಡುವಂತಿದ್ದು, ವಿಶಿಷ್ಟವಾಗಿ ಕೆತ್ತಿದ ಮರದ ಕಂಬಗಳ ನಡುವೆ ಅಥವಾ ಎತ್ತರದ ಮರಗಳ ಹಿನ್ನೆಲೆಯಲ್ಲಿ ಪೋಸ್ ನೀಡಿದರೆ ನಿಮ್ಮ ಫೋಟೋಗಳು ಅತ್ಯದ್ಭುತವಾಗಿ ಮೂಡಿಬರಲಿದೆ.

Hidimba-Devi-Temple

ಜೋಗಿನಿ ಜಲಪಾತ

ಹಚ್ಚ ಹಸಿರಿನ ಕಾಡುಗಳ ನಡುವೆ ಅಡಗಿರುವ ಜೋಗಿನಿ ಜಲಪಾತವು 150 ಅಡಿಗಳಷ್ಟು ಕೆಳಗೆ ಧುಮುಕುತ್ತದೆ. ಮೋಡಿಮಾಡುವ ಮತ್ತು ಪ್ರಶಾಂತವಾದ ಫೋಟೋಗಳಿಗೆ ಈ ಜಾಗ ಸೂಕ್ತವಾಗಿದೆ. ದಂಪತಿಗಳು ಜಲಪಾತದ ನಡುವೆ, ಪಾಚಿಯಿಂದ ಆವೃತವಾದ ಬಂಡೆಗಳ ಹಿನ್ನೆಲೆಯಲ್ಲಿ ಅಥವಾ ಹಚ್ಚ ಹಸಿರಿನ ನಡುವೆ ತಮ್ಮ ಪ್ರೀತಿಯ ಸೌಂದರ್ಯವನ್ನು ಸೆರೆಹಿಡಿಯುವ ಮೋಡಿಮಾಡುವ ಕ್ಷಣಗಳನ್ನು ಸೃಷ್ಟಿಸಬಹುದು.

b-jogini-waterfall

ಓಲ್ಡ್ ಮನಾಲಿ ವಿಲೇಜ್‌

ಕಲ್ಲುಮಣ್ಣಿನ ಬೀದಿಗಳು, ವಿಶೇಷವಾದ ಮರದ ಕುಟೀರಗಳು ಮತ್ತು ರೋಮಾಂಚಕ ಕೆಫೆಗಳೊಂದಿಗೆ, ಹಳೆಯ ಮನಾಲಿ ಗ್ರಾಮವು ಹಳ್ಳಿಗಾಡಿನ ಅನುಭವವನ್ನು ನೀಡುತ್ತವೆ. ನೀವು ಹಳ್ಳಿಯ ಬೀದಿಗಳಲ್ಲಿ ಕೈಜೋಡಿಸಿ ಅಲೆದಾಡುತ್ತಿರಲಿ ಅಥವಾ ಪ್ರಾಚೀನ ದೇವಾಲಯಗಳು ಮತ್ತು ಸೇಬು ತೋಟಗಳ ಹಿನ್ನೆಲೆಯಲ್ಲಿ ಫೋಟೋಗಳಿಗೆ ಮುಖ ಮಾಡಿದರೆ ಫೋಟೋಗಳಂತೂ ಅದ್ಧೂರಿಯಾಗಿ ಮೂಡಿಬರುತ್ತವೆ.

WhatsApp-Image-2022-04-09-at-1.52.07-PM

ಒಟ್ಟಿನಲ್ಲಿ ವಿವಾಹಕ್ಕೂ ಮುನ್ನವೇ ವಿಭಿನ್ನವಾಗಿ, ನೆನಪಿನಲ್ಲಿ ಉಳಿಯುವಂತಹ ಪ್ರೀ ವೆಡ್ಡಿಂಗ್ ಫೋಟೋಶೂಟ್‌ ಮಾಡಿಸಿಕೊಳ್ಳಬೇಕು ಎಂದುಕೊಳ್ಳುವ ಯುವ ಜೋಡಿಗಳಿಗೆ ಮನಾಲಿ ಉತ್ತಮ ಆಯ್ಕೆಯೇ ಸರಿ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!