Monday, August 18, 2025
Monday, August 18, 2025

ಮಹಾರಾಷ್ಟ್ರದ ಈ ಜಾಗಗಳಲ್ಲಿ ರೋಪ್‌ವೇ ಅಭಿವೃದ್ಧಿ!

ಮಹಾರಾಷ್ಟ್ರ ರಾಜ್ಯವು ರಾಯಗಡ್ ಕೋಟೆ ಮತ್ತು ಮಾಥೆರಾನ್‌ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸರಿ ಸುಮಾರು 45 ರೋಪ್‌ವೇಗಳನ್ನು ಅಭಿವೃದ್ಧಿಪಡಿಸಲು ಸಿದ್ಧವಾಗಿದೆ.

ಬಹುತೇಕರಿಗೆ ತಿಳಿದಂತೆ ರೋಪ್‌ವೇಗಳು ಸುಲಭವಾಗಿ ತಲುಪಲು ಸಾಧ್ಯವಾಗದ ಕಷ್ಟಕರವಾದ ಪ್ರವಾಸಿ ಸ್ಥಳಗಳಿಗೆ ಹೋಗಲು ಅನುವು ಮಾಡಿಕೊಡುತ್ತದೆ. ರೋಪ್‌ವೇ ಪ್ರಯಾಣವು ಪ್ರಯಾಣಿಕರಿಗೆ ಒಳ್ಳೆಯ ಅನುಭವವನ್ನು ಕೊಡುತ್ತದೆ. ಅದರಲ್ಲಿ ಪ್ರಯಾಣಿಸುವುದೇ ರೋಮಾಂಚನಕಾರಿ ಮತ್ತು ಆರಾಮದಾಯಕ. ಇತ್ತೀಚೆಗೆ ಭಾರತದ ಅನೇಕ ರಾಜ್ಯಗಳಲ್ಲಿ ರೋಪ್‌ವೇ ಅಭಿವೃದ್ಧಿಯಾಗುತ್ತಿದೆ. ಈ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತಿದೆ. ಇದೀಗ ಮಹಾರಾಷ್ಟ್ರ ರಾಜ್ಯವು ತನ್ನ ಪ್ರಸಿದ್ಧವಾದ ಸ್ಥಳಗಳಲ್ಲಿ ಒಟ್ಟು 45 ರೋಪ್‌ವೇಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ವರದಿಯೊಂದರ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್ ನಿಂದ ರೋಪ್‌ವೇಗಾಗಿ ಅನುಮೋದನೆ ಪಡೆಯಲಾಗಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಬಹುದು. ಮಹಾರಾಷ್ಟ್ರ ರಾಜ್ಯದ ಮೂಲಸೌಕರ್ಯಗಳನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಅನುಮೋದನೆ ನೀಡುವ ಮೂಲಕ ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ.

ಎಲ್ಲೆಲ್ಲಿ ರೋಪ್‌ವೇ?
ಅಧಿಕೃತವಾಗಿ ದೊರೆತಿರುವ ಮಾಹಿತಿಯ ಪ್ರಕಾರ, ರಾಯಗಢ ಕೋಟೆ, ಮಾಥೆರಾನ್, ಅಲಿಬಾಗ್ ಕೋಟೆ, ಎಲಿಫೆಂಟಾ ಗುಹೆಗಳಂತಹ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ರೋಪ್‌ವೇಗಳನ್ನು ಅಳವಡಿಸಲು ಯೋಜಿಸಲಾಗಿದೆ. ರೋಪ್‌ವೇ ಅಳವಡಿಕೆಯಿಂದಾಗಿ ಮಹಾರಾಷ್ಟ್ರದ ಪ್ರವಾಸಿ ಆಕರ್ಷಣೆಯ ತಾಣಗಳನ್ನು ವೀಕ್ಷಿಸಲು ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ರೋಪ್‌ವೇ

ರಾಯಗಢ ಕೋಟೆ: ಛತ್ರಪತಿ ಶಿವಾಜಿ ಮಹಾರಾಜರಿಗೆ ಸಂಬಂಧಿಸಿದ ಐತಿಹಾಸಿಕ ತಾಣಗಳಲ್ಲಿ ರಾಯಗಢ ಕೋಟೆ ಕೂಡ ಒಂದು ಎನ್ನಲಾಗಿದೆ. ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದ್ದು, ಪ್ರವಾಸಿಗರು ಚಾರಣದ ಮೂಲಕವೇ ಇಲ್ಲಿಗೆ ತಲುಪಬೇಕು.

ಮಾಥೆರಾನ್: ಮಹಾರಾಷ್ಟ್ರದ ಮಾಥೆರಾನ್‌ ಗಿರಿಧಾಮವು ಭಾರತದ ಅತೀ ಚಿಕ್ಕ ಗಿರಿಧಾಮಗಳಲ್ಲಿ ಒಂದಾಗಿದೆ. ರೋಪ್‌ವೇ ಮೂಲಕ ಇನ್ನು ಮುಂದೆ ಈ ತಾಣಕ್ಕೆ ಸುಲಭವಾಗಿ ತಲುಪಬಹುದಾಗಿದೆ.

ಎಲಿಫೆಂಟಾ ಗುಹೆಗಳು: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಎಲಿಫೆಂಟಾ ಗುಹೆಗಳಿಗೂ ಕೂಡ ರೋಪ್‌ವೇ ಅಳವಡಿಸಲಾಗುತ್ತಿದೆ. ಈ ಯೋಜನೆಯನ್ನು ಕಳೆದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಕೈಗೆತ್ತಿಕೊಳ್ಳಲಾಗಿದೆ.

ಇನ್ನು ಮಾಹಿತಿಯ ಪ್ರಕಾರ ಕುಂಕೇಶ್ವರ ದೇವಾಲಯ, ಅಲಿಬಾಗ್, ಪುಣೆಯ ಸಿಂಹಗಡ ಕೋಟೆ, ಮಹಾಬಲೇಶ್ವರ, ಸತಾರಾ, ಜೆಜುರಿ ಇನ್ನು ಪ್ರಮುಖ ಸ್ಥಳಗಳಲ್ಲಿ ರೋಪ್‌ವೇ ಅಭಿವೃದ್ಧಿಪಡಿಸಲಾಗುವುದು.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!